ಗುಡ್ ನ್ಯೂಸ್ ಕೊಟ್ಟ ಪ್ರಜ್ವಲ್ ದೇವರಾಜ್; ಹಾರ ಮತ್ತು ಕೇಕ್ ತರಬೇಡಿ ಎಂದು ಮನವಿ!

Published : Jun 24, 2023, 01:15 PM IST
ಗುಡ್ ನ್ಯೂಸ್ ಕೊಟ್ಟ ಪ್ರಜ್ವಲ್ ದೇವರಾಜ್; ಹಾರ ಮತ್ತು ಕೇಕ್ ತರಬೇಡಿ ಎಂದು ಮನವಿ!

ಸಾರಾಂಶ

ಕೊನೆಗೂ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಕೊಟ್ಟ ಪ್ರಜ್ವಲ್ ದೇವರಾಜ್. ಮನೆಗೆ ಬಂದು ಊಟ ಮಾಡಿ ಎಂದ ನಟ....  

ಕನ್ನಡ ಚಿತ್ರರಂಗದ ಜ್ಯೂನಿಯರ್ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಜುಲೈ 4ರಂದು 36ರ ವಸಂತಕ್ಕೆ ಕಾಲಿಡುತ್ತಿದ್ದಾರೆ. ಹೀಗಾಗಿ ಸೋಷಿಯಲ್ ಮೀಯಾದಲ್ಲಿ ಅಭಿಮಾನಿಗಳು ನಾನ್ ಸ್ಟಾಪ್ ಕೇಳುತ್ತಿದ್ದ ಪ್ರಶ್ನೆಗೆ ವಿಡಿಯೋ ಮೂಲಕ ಉತ್ತರ ಕೊಟ್ಟಿದ್ದಾರೆ. ಪ್ರಜ್ವಲ್ ದೇವರಾಜ್‌ ಮಾತುಗಳನ್ನು ಕೇಳಿ ಫುಲ್ ಖುಷ್ ಆಗಿರುವ ಅಭಿಮಾನಿಗಳು ತಯಾರಿ ಮಾಡಿಕೊಳ್ಳುತ್ತಿದ್ದಾರೆ. 

'ನಾನು ವಿಡಿಯೋ ಮೂಲಕ ಮಾತನಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿರುವ ಕಾರಣ ಏನೆಂದರೆ ಕಳೆದ 5 ವರ್ಷಗಳಿಂದ ನನ್ನ ಹುಟ್ಟುಹಬ್ಬದ ದಿನ ಯಾರನ್ನೂ ಭೇಟಿ ಮಾಡಿರಲಿಲ್ಲ ಅದಕ್ಕೆ ಕಾರಣ ಏನೆಂದು ಎಲ್ಲರಿಗೂ ಗೊತ್ತಿದೆ ಪರಿಸ್ಥಿತಿಗಳು ಹೇಗಿತ್ತು ಎಂದು ಎಲ್ಲರಿಗೂ ಗೊತ್ತಿದೆ. ಈ ವರ್ಷ 4ರಂದು ಎಲ್ಲರನ್ನು ಭೇಟಿ ಮಾಡುತ್ತಿರುವೆ ನನ್ನ ಮನೆ ಬಳಿ ಬನ್ನಿ ಊಟ ಮಾಡಿಕೊಂಡು ಹೋಗಿ ನಿಮ್ಮ ಜೊತೆ ಸಾಕಷ್ಟು ಸಮಯ ಕಳೆಯಬೇಕು ಅನ್ನೋ ಆಸೆ ನನಗಿದೆ. ಆದರೆ ನನ್ನ ಕಡೆಯಿಂದ ಒಂದು ಮನವಿ ದಯವಿಟ್ಟು ಕೇಕ್ ಮತ್ತು ಹಾರ ತರಬೇಡಿ ಅದಕ್ಕೆ ನೀವು ಎಷ್ಟು ಖರ್ಚು ಮಾಡುತ್ತೀರಾ ಅದನ್ನು ಶಾಲಾ ಮಕ್ಕಳಿಗೆ ಶಾಲೆಗಳಿಗೆ ಇಲ್ಲ ಅಂದ್ರೆ ಕಷ್ಟ ಇರುವ ಮಕ್ಕಳ ಫೀಸ್‌ಗೆ ಅವುದಾರೂ ಒಂದು ರೀತಿಯಲ್ಲಿ ಸಹಾಯ ಮಾಡಿ ಅದೇ ನನಗೆ ಗಿಫ್ಟ್ ಆಗುತ್ತದೆ ನಾಲ್ಕರಂದು ನಿಮ್ಮನ್ನು ಭೇಟಿ ಮಾಡವೆ ಬನ್ನಿ ಮನೆ ಹತ್ತಿರ' ಎಂದು ಪ್ರಜ್ವಲ್ ವಿಡಿಯೋದಲ್ಲಿ ಮಾತನಾಡಿದ್ದಾರೆ. 

2 ತಿಂಗಳಿನಲ್ಲಿ ಸಿಕ್ಕಾಪಟ್ಟೆ ದಪ್ಪಗಾದ 'ಅಮೃತಾಧಾರೆ' ರಾಜೇಶ್; ತಯಾರಿ ಹೀಗಿತ್ತು!

ಕೊರೋನಾ ಲಾಕ್‌ಡೌನ್‌ ಸಮಯದಲ್ಲಿ ಬರ್ತಡೇ ಆಚರಣೆ ಪಾರ್ಟಿ ಮತ್ತು ಫ್ಯಾನ್ಸ್ ಭೇಟಿ ಮಾಡುವುದಕ್ಕೆ ಹಲವು ಸೆಲೆಬ್ರಿಟಿಗಳು ಬ್ರೇಕ್ ಹಾಕಿದ್ದರು. ಅದೇ ಸಾಲಿಗೆ ಪ್ರಜ್ವಲ್ ದೇವರಾಜ್ ಕೂಡ ಸೇರಿಕೊಳ್ಳುತ್ತಾರೆ ಆದರೆ ಈ ನಡುವೆ ಅವರ ಜೀವನದಲ್ಲಿ ಮರೆಯಲಾಗದ ಘಟನೆ ನಡೆಯುತ್ತದೆ. ಅದುವೇ ಆಪ್ತ ಗೆಳೆಯ ಕುಚಿಕು ಚಿರಂಜೀವಿ ಸರ್ಜಾ ಸಾವು. ಸೂಪರ್ ಫಿಟ್ ಆಂಡ್ ಫೈನ್ ಆಗಿದ್ದ ಚಿರಂಜೀವಿ ಸರ್ಜಾ ಇದ್ದಕ್ಕಿದ್ದಂತೆ ಕೊನೆಯುಸಿರೆಳೆಯುತ್ತಾರೆ ಈ ನೋವಿನಿಂದ ಹೊರ ಬರಲು ಚಿತ್ರರಂಗವೇ ಸಾಕಷ್ಟು ಸಮಯ ತೆಗೆದುಕೊಂಡಿತ್ತು ಹೋಗಾಗಿ ಮತ್ತೊಮ್ಮೆ ಆಚರಣೆಗಳಿಗೆ ಬ್ರೇಕ್ ಹಾಕಿದರು. ಈಗ ಪ್ರತಿಯೊಂದರಿಂದ ಸುಧಾರಿಸಿಕೊಂಡಿರುವ ಕಾರಣ ಅಭಿಮಾನಿಗಳನ್ನು ಭೇಟಿ ಮಾಡಲು ಮುಂದಾಗಿದ್ದಾರೆ. 

ಕುಡಿದು ಬಾರ್‌ನಲ್ಲಿ ಕಿರಿಕ್ ಮಾಡಿದ ಯುಟ್ಯೂಬರ್; CCTV ದೃಶ್ಯ ವೈರಲ್, ಸ್ಪಷ್ಟನೆ ಕೊಟ್ಟ ಪುಂಡ!

ಡೈನಾಮಿಕ್ ಕಿಂಗ್ ದೇವರಾಜ್‌ ಅವರ ಹಿರಿಯ ಪುತ್ರ ಪ್ರಜ್ವಲ್ 2007ರಲ್ಲಿ ಸಿಕ್ಸರ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 2007ರಲ್ಲಿ ಬಿಡುಗಡೆಯಾದ ಮತ್ತೊಂದು ಸಿನಿಮಾ 'ಗೆಳೆಯಾ' ಬ್ಲಾಕ್ ಬಸ್ಟರ್ ಹಿಟ್ ಖಂಡಿತ್ತು. ಈ ನಡುವೆ ಸುಮಾರು ಸಿನಿಮಾಗಳಲ್ಲಿ ಪ್ರಜ್ವಲ್ ಮಿಂಚಿದ್ದಾರೆ ಅದರಲ್ಲಿ 2017ರ ಚೌಕಾ ಮತ್ತು 2020ರ ಜೆಂಟಲ್‌ಮ್ಯಾನ್ ಹಿಸ್ಟರಿ ಕ್ರಿಯೇಟ್ ಮಾಡಿದೆ. ಇನ್ನು ಹುಡುಗಿಯರ ಫೇವರೆಟ್ ಬಾಯ್ ಆಗಲು ಕಾರಣ 2008ರ ಬಂದ ಮೆರವಣಿಗೆ, 2009ರ ಗುಲಾಮಾ, 2011ರ ಮುರಳಿ ಮೀಟ್ಸ್ ಮೀರಾ, 2013ರ ಸೂಪರ್ ಶಾಸ್ತ್ರಿ ಹಾಗೂ 2013ರ ಮತ್ತೊಂದು ಸಿನಿಮಾ ಗಲಾಟೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Rukmini Vasanth Birthday: ಬೆಸ್ಟ್ ಫ್ರೆಂಡ್ ಹುಟ್ಟುಹಬ್ಬಕ್ಕೆ ನಟಿ Chaitra Achar ವಿಶ್ ‌ಮಾಡಿದ್ದು ಹೀಗೆ
'ಕಾಂತಾರ 1' ಚೆಲುವೆ ರುಕ್ಮಿಣಿ ವಸಂತ್ ಹುಟ್ಟುಹಬ್ಬ; ಈ 'ಬೀರಬಲ್' ನಟಿ ಬಗ್ಗೆ ಅದೆಷ್ಟೋ ಸಂಗತಿಗಳು ನಿಮಗೆ ಗೊತ್ತೇ ಇಲ್ಲ!