ಐದಾರು ಮದ್ವೆ ಬೇಕಾದ್ರೂ ಆಗ್ಬೋದೆಂದು ತಮಾಷೆ ಮಾಡಿದ್ದ ಉಪೇಂದ್ರ UI ಚಿತ್ರದ ಬಗ್ಗೆ ಅನುಶ್ರೀ ಕಿವಿಯಲ್ಲಿ ಹೇಳಿದ್ದೇನು?

By Suchethana D  |  First Published Sep 28, 2024, 1:08 PM IST

ನಟ ಉಪೇಂದ್ರ ಅವರ ಯುಐ ಚಿತ್ರದ ರಿಲೀಸ್​ ಬಗ್ಗೆ ವೀಕ್ಷಕರು ತುದಿಗಾಲಿನಲ್ಲಿ ನಿಂತಿರುವಾಗ ಆ್ಯಂಕರ್​ ಅನುಶ್ರೀ ಕಿವಿಯಲ್ಲಿ ನಟ ಹೇಳಿದ್ದೇನು?
 


ನಟ ಉಪೇಂದ್ರ ಅವರ ಬಹುನಿರೀಕ್ಷಿತ ಯುಐ (UI) ಚಿತ್ರದ ಬಿಡುಗಡೆಗೆ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಉಪೇಂದ್ರ ಮಾತ್ರ ಸಿನಿಮಾ ರಿಲೀಸ್​ ಕುರಿತು ಸಸ್ಪೆನ್ಸ್​ ಕ್ರಿಯೇಟ್​ ಮಾಡುತ್ತಲೇ ಬಂದಿದ್ದಾರೆ. ಅಕ್ಟೋಬರ್‌ನಲ್ಲಿ ಚಿತ್ರದ ಬಿಡುಗಡೆ ಎಂದು ಹೇಳಿದ್ದ ಅವರು, ಕಳೆದ ವಾರ ಹುಟ್ಟುಹಬ್ಬದ ಸಂದರ್ಭದಲ್ಲಿ  ಬೇರೆಯದ್ದೇ ಹೇಳಿದ್ದರು.  "ಉಪೇಂದ್ರ ಸದಾ ತಲೆಗೆ ಹುಳ ಬಿಡ್ತಾರೆ ಅಂತ ಪ್ರೇಕ್ಷಕರು ಹೇಳ್ತಾರೆ. ಅದರೆ ಯುಐ ಚಿತ್ರದಲ್ಲಿ ನಾನು ಜನರ ತಲೆಯಲ್ಲಿ ಇರುವ ಹುಳ ತೆಗೆಯುವಂತಹ ಕೆಲಸವನ್ನು ಮಾಡಲಿದ್ದೇನೆ. ಪ್ರೇಕ್ಷಕರು ನಮಗಿಂತ ತುಂಬಾ ಬುದ್ಧಿವಂತರಾಗಿದ್ದಾರೆ. ಟೀಸರ್​ ನೋಡಿಯೇ ಚಿತ್ರ ಹೀಗಿರುತ್ತದೆ ಎಂದು ಅಂದುಕೊಂಡುಬಿಡುತ್ತಾರೆ. ಸಿನಿಮಾ ನೋಡಬೇಕೋ, ಬೇಡವೋ ಎಂದು ಡಿಸೈಡ್​ ಮಾಡುತ್ತಾರೆ. ಅವರ ನಿರೀಕ್ಷೆ ಹೆಚ್ಚು ಇರುತ್ತದೆ. ಅದಕ್ಕೆ ತಕ್ಕ ಹಾಗೆ ಸಿನಿಮಾ ಮಾಡುವ ಜವಾಬ್ದಾರಿ ನಮ್ಮ ಮೇಲಿರುತ್ತದೆ" ಎಂದು ಉಪೇಂದ್ರ ಹೇಳಿದ್ದರು.

ಆದರೆ ಇದುವರೆಗೂ ರಿಲೀಸ್​ ಗುಟ್ಟನ್ನು ಬಹಿರಂಗಗೊಳಿಸಲಿಲ್ಲ. ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಕಾರ್ಯಕ್ರಮದಲ್ಲಿ ಉಪೇಂದ್ರ ಅವರು ಆಗಮಿಸಿದ್ದಾರೆ. ಶಿವರಾಜ್​ ಕುಮಾರ್​ ಮತ್ತು ಉಪೇಂದ್ರ ಅವರ ವಿಶೇಷ ಸಂಚಿಕೆ ಇದಾಗಿದೆ. ನಾಳೆ ಅಂದರೆ  ಭಾನುವಾರ ಸಂಜೆ 7ರಿಂದ 11 ಗಂಟೆವರೆಗೆ ಇದರ ಪ್ರಸಾರ ಆಗಲಿದೆ.  ಇದರಲ್ಲಿ ಉಪೇಂದ್ರ ಅವರು ಯುಐ ಚಿತ್ರ ಬಗ್ಗೆ ಮಾತನಾಡಿದ್ದಾರೆ. ಇದಕ್ಕೂ ಮುನ್ನ ಶಿವರಾಜ್​ ಕುಮಾರ್​,ಅವರು ಇದೇ ಚಿತ್ರದ ಕುರಿತು ಹೇಳಿಕೆ ನೀಡಿದ್ದಾರೆ.  ‘ಉಪ್ಪಿ ಸಿನಿಮಾ ಎಂದಾಗ ಯಾವಾಗಲೂ ಕಾಯುತ್ತಾ ಇರುತ್ತೇನೆ. ಸಾಮಾನ್ಯ ಸಿನಿಮಾ ನೋಡೋದಕ್ಕೂ ಉಪೇಂದ್ರ ಸಿನಿಮಾ ನೋಡೋದಕ್ಕೂ ವ್ಯತ್ಯಾಸ ಇದೆ ಎಂದಿದ್ದಾರೆ. ಅಷ್ಟಕ್ಕೂ ಯುಐ ಅಂದ್ರೆ ಯು ಎಂದರೆ ನೀನು, ಐ ಎಂದರೆ ನಾನು ಅಷ್ಟೇ ಎಂದಿದ್ದಾರೆ.

Tap to resize

Latest Videos

undefined

38 ವರ್ಷಗಳ ಬಳಿಕ 'ಆನಂದ್'​ ಚಿತ್ರದ ಟುವ್ವಿ ಟುವ್ವಿ ಹಾಡಿಗೆ ಶಿವಣ್ಣ-ಸುಧಾರಾಣಿ ರೊಮ್ಯಾಂಟಿಕ್​ ಸ್ಟೆಪ್​!

ಇದಕ್ಕೆ ಉಪೇಂದ್ರ ಅವರು ನಕ್ಕಿದ್ದಾರೆ. ನಂತರ ಸಿನಿಮಾದ ಕುರಿತು ಹೇಳಿದ ಅವರು, ಎಲ್ಲಾ ಚಿತ್ರದಂತೆ ಯುಐನಲ್ಲಿಯೂ  ಸಿಂಬಾಲಿಸಂ ಹೆಚ್ಚೇ  ಇರುತ್ತದೆ. ಡಿಕೋಡ್ ಮಾಡೋದು ಕೈಡ ಜಾಸ್ತಿನೇ ಇರತ್ತೆ. ಜನರು ತುಂಬಾ ಬುದ್ಧಿವಂತರು. ಟೀಸರ್-ಟ್ರೇಲರ್ ನೋಡಿ ಜನರು ಸಿನಿಮಾ ನೋಡೋಬೇಕೋ ಅಥವಾ ಬೇಡವೋ ಎಂಬುದನ್ನು ನಿರ್ಧಾರ ಮಾಡುತ್ತಾರೆ ಎಂದರು. ಆ್ಯಂಕರ್​ ಅನುಶ್ರೀ ಅವರು ಈ ಚಿತ್ರದ ರಿಲೀಸ್​​ ಯಾವಾಗ ಎಂದು ಕೇಳಿದಾಗ, ವೇದಿಕೆ ಮೇಲೆ ಓಡೋಡಿ ಹೋದ ಉಪೇಂದ್ರ ಅವರು, ಅನುಶ್ರೀ ಕಿವಿಯಲ್ಲಿ ಏನೋ ಉಸುರಿದರು.
 
ಎಲ್ಲರೂ ಸಿನಿಮಾ ರಿಲೀಸ್​ ಡೇಟ್​ ಹೇಳುತ್ತಿದ್ದಾರೆ ಎಂದೇ ಅಂದುಕೊಂಡರು. ಆಮೇಲೆ ಮುಖ ಸಪ್ಪೆಗೆ ಮಾಡಿಕೊಂಡು ಅನುಶ್ರೀ, ಅವ್ರು ಹೇಳಿದ್ದು,  ‘ಯಾರಿಗೂ ಹೇಳಬೇಡಿ’ ಎಂದು ಹೇಳಿ ನಕ್ಕರು. ಇದರ ಪ್ರೊಮೋ ಬಿಡುಗಡೆಯಾಗಿದೆ. ಅಷ್ಟಕ್ಕೂ ಪ್ರೇಕ್ಷಕರು ಈ ಸಿನಿಮಾದ ಪೋಸ್ಟರ್​ ನೋಡಿ  ಕಲ್ಕಿಯ ರೀತಿ ಇರಬಹುದು ಎಂದು ಊಹಿಸುತ್ತಿದ್ದಾರೆ. ಆದರೆ ಉಪೇಂದ್ರ ಈ ಹಿಂದೆ ಇದನ್ನು ಅಲ್ಲಗಳೆದಿದ್ದರು. ಯುಐ ಮೈಥಲಾಜಿಕಲ್‌ ಕಲ್ಕಿ ಅಲ್ಲ, ಬದಲಾಗಿ ಲಾಜಿಕಲ್‌ ಹಾಗೂ ಸೈಕಲಾಜಿಕಲ್‌ ಕಲ್ಕಿ. ಹಿಂದಿನ ಕಾಲಕ್ಕಿಂತಲೂ ಈಗ ಚಿತ್ರದ ಮೇಕಿಂಗ್‌ ವಿಭಿನ್ನವಾಗಿದೆ. ಕಥೆ ಹೇಳುವ ಶೈಲಿ, ಟೆಕ್ನಾಲಜಿ, ಬಿಸ್ನೆಸ್‌ ಇತ್ಯಾದಿ ದೊಡ್ಡದಾಗಿದೆ. ಹೀಗಾಗಿ ‘ಯುಐ’ ಸಿನಿಮಾ ಕೂಡ ಸ್ವಲ್ಪ ತಡವಾಗುತ್ತದೆ" ಎಂದಿದ್ದರು. ಐದಾರು ಮದುವೆ ಆಗಬೋದು, ಆದ್ರೆ ಡೈರೆಕ್ಷನ್ ಕಷ್ಟ ಎಂದೂ ತಮಾಷೆ ಮಾಡಿದ್ದರು. ಇದೀಗ ಅನುಶ್ರೀ ಅವರ ಕಿವಿಯಲ್ಲಿ ಗುಟ್ಟು ಹೇಳುವುದಾಗಿ ಹೋಗಿ ಎಲ್ಲರಿಗೂ ನಿರಾಸೆ ಮೂಡಿಸಿದ್ದಾರೆ. 

ಎಲ್ಲೆಡೆ ಮಗಳನ್ನು ಕರೆದೊಯ್ಯುವ ಐಶ್ವರ್ಯಾ: ಎಲ್ಲರ ಕಾಡ್ತಿರೋ ಪ್ರಶ್ನೆಗೆ ಮುಖ ತಿರುಗಿಸಿ ನಟಿ ಕೊಟ್ಟ ಉತ್ತರವೇನು?

click me!