ಕನ್ನಡ ಮೇಷ್ಟ್ರು ಕೈ ಹಿಡಿದ ದರ್ಶನ್!

Published : Oct 25, 2019, 08:44 AM IST
ಕನ್ನಡ ಮೇಷ್ಟ್ರು ಕೈ ಹಿಡಿದ ದರ್ಶನ್!

ಸಾರಾಂಶ

ಕವಿರಾಜ್‌ ನಿರ್ದೇಶನದ ‘ಕಾಳಿದಾಸ ಕನ್ನಡ ಮೇಷ್ಟ್ರು ’ ಚಿತ್ರದ ಟ್ರೇಲರ್‌ ಅನ್ನು ‘ಚಾಲೆಂಜಿಂಗ್‌ ಸ್ಟಾರ್‌’ ದರ್ಶನ್‌ ಇತ್ತೀಚೆಗೆ ಬಿಡುಗಡೆ ಮಾಡಿದ್ದಲ್ಲದೆ ಮೆಚ್ಚುಗೆ ಕೂಡ ಸೂಚಿಸಿದ್ದಾರೆ. ಅಚ್ಚರಿ ಎಂದರೆ ಆರಂಭದಲ್ಲಿ ಮಾತುಕತೆಯಾದಾಗ ಜಗ್ಗೇಶ್‌ಗೆ ಕವಿರಾಜ್‌ ಹೇಳಿದ ಕಥೆಯೇ ಒಂದು, ಈಗ ಸಿನಿಮಾದಲ್ಲಿ ಮೂಡಿಬಂದಿರುವ ಕಥೆಯೇ ಮತ್ತೊಂದು! ಈ ಬದಲಾವಣೆಗೆ ಕಾರಣ; ನಿರ್ಮಾಪಕರ ಸಾಮಾಜಿಕ ಕಳಕಳಿಯಂತೆ.

ಈ ಚಿತ್ರಕ್ಕೆ ಉದಯ್‌ ಕುಮಾರ್‌ ಬಂಡವಾಳ ಹೂಡಿದ್ದು, ಶಿವಪ್ರಸಾದ್‌ ಸಾಥ್‌ ನೀಡಿದ್ದಾರೆ. ಮೊದಲಿಗೆ ಒಂದು ರೋಚಕ ಮರ್ಡರ್‌ ಮಿಸ್ಟರಿ ಕಥೆಯನ್ನು ಜಗ್ಗೇಶ್‌ಗೆ ವಿವರಿಸಲಾಗಿತ್ತು. ಮುಂಗಡ ಸಂಭಾವನೆ ಕೂಡ ನೀಡಲಾಗಿತ್ತು. ಆದರೆ ಆ ಕಥೆಯ ಬದಲಿಗೆ ಒಂದು ಸಮಾಜಮುಖಿ ಆಗಿರುವ ವಿಷಯ ಆಯ್ದುಕೊಳ್ಳುವಂತೆ ನಿರ್ಮಾಪಕರು ಸಲಹೆ ನೀಡಿದರಂತೆ. ಆಗ ಶಿಕ್ಷಣ ವ್ಯವಸ್ಥೆ ಕುರಿತ ಕಥೆಯನ್ನು ಕವಿರಾಜ್‌ ಆಯ್ಕೆ ಮಾಡಿಕೊಂಡರು.

ಕನ್ನಡ ಮೇಷ್ಟ್ರು ಕಾಳಿದಾಸ ಚಿತ್ರದಲ್ಲಿ ಜಗ್ಗೇಶ್ ಜತೆಗೆ 21 ನಟಿಯರು!

ಈ ಬದಲಾವಣೆ ಜಗ್ಗೇಶ್‌ಗೆ ತಕ್ಷಣಕ್ಕೆ ಇಷ್ಟಆಗಲಿಲ್ಲವಂತೆ. ಆದರೆ ಪೂರ್ತಿ ಕಥೆ ಕೇಳಿದ ಬಳಿಕ ಖುಷಿಯಿಂದಲೇ ಒಪ್ಪಿಕೊಂಡರು. ಒಟ್ಟಾರೆ ‘ಕಾಳಿದಾಸ’ನ ಕಥಾಹಂದರ ಏನು ಎಂಬುದಕ್ಕೆ ಈಗ ಬಿಡುಗಡೆ ಆಗಿರುವ ಟ್ರೇಲರ್‌ನಲ್ಲಿ ಸುಳಿವು ಸಿಕ್ಕಿದೆ. ಇದೊಂದು ಗಂಭೀರ ವಿಚಾರವೇ ಆಗಿದ್ದರೂ ಅದನ್ನು ಹಾಸ್ಯದ ಧಾಟಿಯಲ್ಲಿ ಹೇಳಲು ನಿರ್ದೇಶಕರು ಪ್ರಯತ್ನಿಸಿದ್ದಾರಂತೆ.

‘ಈ ಸಿನಿಮಾ ಯೂನಿವರ್ಸಲ…. ಇದರಲ್ಲಿ ಇರುವುದು ಪ್ರತಿ ಮನೆಗೂ ಸಂಬಂಧಿಸಿದ ವಿಷಯ. ಮಗವಿನ ಶಿಕ್ಷಣಕ್ಕಾಗಿ ಬಡ ಮೇಷ್ಟು್ರ ಏನೆಲ್ಲ ಕಷ್ಟಪಡುತ್ತಾನೆ ಎಂಬುದು ಕಥಾಸಾರಾಂಶ. ಆ ಮೇಷ್ಟು್ರ ಪಾತ್ರದ ಮೂಲಕ ಎಲ್ಲರ ಹೃದಯಕ್ಕೆ ನಾಟುವ ಮೆಸೇಜ… ನೀಡಲಾಗಿದೆ’ ಎಂದು ವಿವರಿಸುತ್ತಾರೆ ಜಗ್ಗೇಶ್‌. ಒಂದೊಳ್ಳೆಯ ಪಾತ್ರದಲ್ಲಿ ನಟಿಸಿದ ತೃಪ್ತಿ ಮೇಘನಾ ಗಾಂವ್ಕರ್‌ ಮಾತುಗಳಲ್ಲಿ ವ್ಯಕ್ತವಾಗುತ್ತದೆ. ‘ಬೋರ್ಡಿಂಗ್‌ ಶಾಲೆಯಲ್ಲಿ ಬೆಳೆದ ನನಗೆ ಕನ್ನಡದಲ್ಲಿ ಮಾತನಾಡಿದರೆ ಅಲ್ಲಿನ ಶಿಕ್ಷಕರು ಹೊಡೆಯುತ್ತಿದ್ದರು.

10 ವರ್ಷದ ನಂತರ ಒಂದಾದ ಜಗ್ಗೇಶ್-ಗುರು; ಬರಲಿದೆ ‘ರಂಗನಾಯಕ’

ಯಾಕೆ ಹೀಗೆ ಎಂಬ ಪ್ರಶ್ನೆ ನನ್ನ ಮನದಲ್ಲಿ ಮೂಡಿತ್ತು. ನಂತರದ ದಿನಗಳಲ್ಲೂ ನನಗೆ ಭಾಷಾಪ್ರೇಮದ ಬಗ್ಗೆ ತಿಳಿವಳಿಕೆ ಇರಲಿಲ್ಲ. ಚಿತ್ರರಂಗಕ್ಕೆ ಕಾಲಿಟ್ಟಮೇಲೆ ಮಾತೃಭಾಷೆಯ ಪ್ರಾಮುಖ್ಯತೆ ಅರ್ಥವಾಯಿತು’ ಎನ್ನುತ್ತಾರೆ ಮೇಘನಾ. ಈ ಹಿಂದೆ ‘ಸರ್ವರ್‌ ಸೋಮಣ್ಣ’ ಸಿನಿಮಾ ನೋಡಿ ಜಗ್ಗೇಶ್‌ ಮೇಲೆ ಮೇಘನಾಗೆ ಕ್ರಶ್‌ ಆಗಿತ್ತಂತೆ. ಈಗ ಜತೆಯಾಗಿ ತೆರೆಹಂಚಿಕೊಂಡಿರುವುದು ಅವರಿಗೆ ಎಲ್ಲಿಲ್ಲದ ಸಂತಸ ಮೂಡಿಸಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಜೀವನದಲ್ಲಿ ಮರೆಯಲಾರದ ಫೆವರೆಟ್​ ದಿನದ ಗುಟ್ಟು ರಿವೀಲ್​ ಮಾಡಿದ Kichcha Sudeep​: ಯಾರೂ ಊಹಿಸದೇ ಇರುವ ದಿನವಿದು!
ಖ್ಯಾತ ನಟ, ಎಂಪಿ, ಕೋಟಿ ಕೋಟಿ ಇದ್ರೂ, ತಳ್ಳೋ ಗಾಡೀಲಿ ಊಟ ಸವಿದ ಜಗ್ಗೇಶ್!