ಯಶ್ ನಟನೆಯ ಟಾಕ್ಸಿಕ್ ಚಿತ್ರವನ್ನು ರಿಜೆಕ್ಟ್ ಮಾಡಿರುವ ನಟಿ ತೃಪ್ತಿ ಡಿಮ್ರಿ ಕಾರ್ತಿಕ್ ಆರ್ಯನ್ ಅವರ ಭೂಲ್ ಭುಲಯ್ಯ-3 ಒಪ್ಪಿಕೊಂಡಿರುವುದಾಗಿ ವರದಿಯಾಗಿದೆ. ಏನಿದು ವಿಷ್ಯ?
ಅನಿಮಲ್ ಚಿತ್ರದಲ್ಲಿ ಸಂಪೂರ್ಣ ಬೆತ್ತಲಾಗುವ ಮೂಲಕ ಭಾರಿ ಸಂಚಲನ ಸೃಷ್ಟಿಸಿರುವ ನಟಿ ತೃಪ್ತಿ ಡಿಮ್ರಿ. ಕಳೆದ ವರ್ಷದವರೆಗೂ ತೃಪ್ತಿ ಡಿಮ್ರಿ ಎನ್ನುವ ಬಾಲಿವುಡ್ ನಟಿ ಇದ್ದಾರೆ ಎನ್ನುವುದೇ ಎಷ್ಟೋ ಮಂದಿಗೆ ತಿಳಿದಿರಲಿಲ್ಲ. ಆದರೆ ಇದೀಗ ಗೂಗಲ್ನಲ್ಲಿ ತೃಪ್ತಿಯ ಬಗ್ಗೆ ಸಿನಿ ಪ್ರಿಯರಿಗೆ ಇಂಟರೆಸ್ಟ್ ಜಾಸ್ತಿಯಾಗುತ್ತಿದೆ. ಯಾರೀಕೆ? ಯಾವೆಲ್ಲಾ ಚಿತ್ರಗಳಲ್ಲಿ ನಟಿಸಿದ್ದಾರೆ? ಎಲ್ಲಿಯವರು ಎಂದೆಲ್ಲಾ ಸರ್ಚ್ ಶುರುವಿಟ್ಟುಕೊಂಡಿದ್ದಾರೆ. ಪಾಳುಬಿದ್ದಿದ್ದ ಈಕೆಯ ಸೋಷಿಯಲ್ ಮೀಡಿಯಾ ಖಾತೆ ಸಕ್ರಿಯಗೊಂಡಿದ್ದು, ಈಕೆಯ ಸೋಷಿಯಲ್ ಮೀಡಿಯಾ ಕೂಡ ಸರ್ಚ್ ಮಾಡಲಾಗುತ್ತಿದೆ. ದಿಢೀರನೆ ಎಲ್ಲರ ಕಣ್ಣು ಕುಕ್ಕಿದ್ದಾರೆ ಈ ಬೆಡಗಿ. ಅನಿಮಲ್ ಚಿತ್ರದಲ್ಲಿ ನಟ ರಣಬೀರ್ ಕಪೂರ್ ಜೊತೆ ಈಕೆಯ ನಗ್ನ ದೃಶ್ಯಗಳನ್ನು ನೋಡುತ್ತಿದ್ದಂತೆಯೇ ದಿಢೀರನೆ ಫ್ಯಾನ್ಸ್ ಸಂಖ್ಯೆಯನ್ನೂ ಏರಿಸಿಕೊಂಡಿದ್ದಾರೆ ತಾರೆ.
ಈ ನಟಿಯ ಬೇಡಿಕೆ ಹೆಚ್ಚುತ್ತಲೇ ಸಾಗಿದೆ. ರಾತ್ರೋರಾತ್ರಿ ನ್ಯಾಷನಲ್ ಕ್ರಷ್ ಎನ್ನುವ ಪಟ್ಟ ಗಿಟ್ಟಿಸಿಕೊಂಡ ಈ ನಟಿಗೆ ಸಿನಿಮಾ ರಂಗದಲ್ಲಿಯೂ ಬೇಡಿಕೆ ಹೆಚ್ಚುತ್ತಿದೆ. ಅಂದಹಾಗೆ ನಟಿ ತೃಪ್ತಿ ಬಗ್ಗೆ ಇದೀಗ ಇಂಟರೆಸ್ಟಿಂಗ್ ವಿಷ್ಯವೊಂದು ಹೊರಕ್ಕೆ ಬಂದಿದೆ. ಅದೇನೆಂದರೆ, ನಟ ಯಶ್ ಅಭಿನಯದ ಟಾಕ್ಸಿಕ್ ಚಿತ್ರಕ್ಕೆ ತೃಪ್ತಿಯನ್ನು ಆಯ್ಕೆ ಮಾಡಲಾಗಿತ್ತಂತೆ. ಆದರೆ ನಟಿ ಈ ಚಿತ್ರವನ್ನು ರಿಜೆಕ್ಟ್ ಮಾಡಿದ್ದಾರೆ. ಇದೇ ಸಮಯದಲ್ಲಿ ನಟ ಕಾರ್ತಿಕ್ ಆರ್ಯನ್ ಅಭಿನಯದ ಬಾಲಿವುಡ್ ಸಿನಿಮಾ ಭೂಲ್ ಭುಲಯ್ಯಾ-3 ಶೂಟಿಂಗ್ ನಡೆಯುತ್ತಿದ್ದು, ಇದರಲ್ಲಿಯೂ ತೃಪ್ತಿಗೆ ಆಫರ್ ಬಂದಿತ್ತು. ಎರಡರಲ್ಲಿ ಒಂದು ಸೆಲೆಕ್ಟ್ ಮಾಡುವ ಜವಾಬ್ದಾರಿ ತೃಪ್ತಿ ಮೇಲೆ ಇದ್ದುದರಿಂದ ಯಶ್ ಚಿತ್ರಕ್ಕೆ ನೋ ಎಂದು, ಕಾರ್ತಿಕ್ ಚಿತ್ರಕ್ಕೆ ಜೈ ಎಂದಿದ್ದಾರೆ.
'ಟಾಕ್ಸಿಕ್' ಬಿಗ್ ಟ್ವಿಸ್ಟ್: ತಂಗಿಯಾಗಿ ಕರೀನಾ, ಯಶ್ಗೆ ಜೋಡಿಯಾಗಲಿರೋ ಬಾಲಿವುಡ್ ಬೆಡಗಿ ಇವರೇ ನೋಡಿ?
ಅಂದಹಾಗೆ ಕಾರ್ತಿಕ್ ಆರ್ಯನ್ ನಟನೆಯ 'ಭೂಲ್ ಭುಲಯ್ಯಾ 2' ಸಿನಿಮಾವು 2022ರಲ್ಲಿ ತೆರೆಗೆ ಬಂದಿತ್ತು. ಅದೇ ದಿನ ಕಂಗನಾ ರಣಾವತ್ ಅವರ 'ಧಾಕಡ್' ತೆರೆಗೆ ಬಂದಿತ್ತು. ಆದರೆ ಭರ್ಜರಿ ಗೆಲುವು ಸಿಕ್ಕಿದ್ದು ಮಾತ್ರ 'ಭೂಲ್ ಭುಲಯ್ಯಾ 2' ಸಿನಿಮಾಗೆ. ಸತತ ಸೋಲು ಅನುಭವಿಸಿದ್ದ ಕಾರ್ತಿಕ್ ಅವರಿಗೆ ಯಶಸ್ಸು ತಂದುಕೊಟ್ಟ ಚಿತ್ರವಿದು. ಇದರ ಮುಂದುವರೆದ ಭಾಗವಾಗಿ 3ನೇ ಪಾರ್ಟ್ ಬರುತ್ತಿದೆ. ಇದಕ್ಕೆ ತೃಪ್ತಿ ಓಕೆ ಎಂದಿದ್ದಾರೆ ಎನ್ನಲಾಗಿದೆ. ಇನ್ನು ಯಶ್ ಅವರ ಟಾಕ್ಸಿಕ್ ಚಿತ್ರದ ಕುರಿತು ಹೇಳುವುದಾದರೆ, ನಟ ಯಶ್ ಫ್ಯಾನ್ಸ್ ಟಾಕ್ಸಿಸ್ ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ‘ಕೆಜಿಎಫ್’ ಭರ್ಜರಿ ಯಶಸ್ಸಿನ ಬಳಿಕ ಈ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲವಿದೆ. ಈ ಕುತೂಹಲ ಕೂಡ ಈಗ ತಣಿದಿದೆ. ಯಶ್ಗೆ ನಾಯಕಿಯಾಗಿ ಕಿಯಾರಾ ಅಡ್ವಾಣಿ ಕಾಣಿಸಿಕೊಳ್ಳಲಿದ್ದಾರೆ ಎಂದು ಕೇಳಿಬಂದಿದೆ. ಕರೀನಾ ಕಪೂರ್ ಖಾನ್ ಮತ್ತು ಕಿಯಾರಾ ಅಡ್ವಾಣಿ ಈಗಾಗಲೇ ಚಿತ್ರತಂಡಕ್ಕೆ ಸೇರಿಕೊಂಡಿದ್ದಾರೆ. ಚಿತ್ರದಲ್ಲಿ ಯಶ್ ಅವರ ಸಹೋದರಿಯಾಗಿ ಕರೀನಾ ನಟಿಸುತ್ತಿದ್ದಾರೆ, ಕಿಯಾರಾ ನಾಯಕಿಯಾಗಲಿದ್ದಾರೆ ಎಂದು ಸುದ್ದಿಯಾಗುತ್ತಿದ್ದರೂ, ಯಾವುದೇ ಅಧಿಕೃತ ಘೋಷಣೆ ಹೊರಬಂದಿಲ್ಲ.
ಇನ್ನು ತೃಪ್ತಿ ಡಿಮ್ರಿ ಅನಿಮಲ್ ಯಶಸ್ಸಿನ ಬಳಿಕ ಅವರ ಜೊತೆ ಡೇಟಿಂಗ್ ಮಾಡಲು ಹಲವರು ಉತ್ಸುಕರಾಗಿದ್ದಾರೆ. ಇದೀಗ ಅನಿಮಲ್ ಚಿತ್ರದಲ್ಲಿ ತೃಪ್ತಿ ಜೊತೆ ನಟಿಸಿದ ನಟ ಸಿದ್ಧಾಂತ್ ಕಾರ್ನಿಕ್ ಅವರೂ ತೃಪ್ತಿ ಡಿಮ್ರಿಯ ಜೊತೆ ಡೇಟಿಂಗ್ ಮಾಡುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಡೇಟಿಂಗ್ ಮಾಡುವುದು ತಮ್ಮ ಬಹು ದಿನಗಳ ಕನಸು ಎಂದು ಹೇಳಿದ್ದಾರೆ. ಫಿಲ್ಮಿಗ್ಯಾನ್ ಜೊತೆಗಿನ ಇತ್ತೀಚಿನ ಸಂದರ್ಶನದಲ್ಲಿ, ಸಿದ್ಧಾಂತ್, ಬಾಲಿವುಡ್ ನಟಿ ಟ್ರಿಪ್ಟಿ ಡಿಮ್ರಿ ಬಗ್ಗೆ ತಮ್ಮ ಮೆಚ್ಚುಗೆಯನ್ನು ಬಹಿರಂಗಪಡಿಸಿದರು. ಅವರೊಂದಿಗೆ ಡೇಟಿಂಗ್ ಮಾಡುವ ಆಸೆ ವ್ಯಕ್ತಪಡಿಸಿದರು. ಇದೇ ವೇಳೆ, ಈ ಉದ್ದೇಶ ಕೆಟ್ಟದ್ದು ಅಲ್ಲ, ಅಥವಾ ಯಾವುದೇ ರೀತಿಯ ವಿವಾದವನ್ನು ಹುಟ್ಟುಹಾಕಲು ಉದ್ದೇಶಿಸಿಲ್ಲ ಎಂದು ಸ್ಪಷ್ಟಪಡಿಸಿರೋ ಸಿದ್ಧಾಂತ್ ಅವರು, ತೃಪ್ತಿ ಜೊತೆ ಕಾಫಿಗೆ ಹೋಗುವುದಾಗಿ ಹೇಳಿದ್ದಾರೆ. ಒಂದು ವೇಳೆ ನಟಿ ಬಂದರೆ, ತಾವು ಸಂತೋಷದಿಂದ ಬಿಲ್ ಅನ್ನು ಪಾವತಿಸುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ಮದುವೆಯ ಬಗ್ಗೆ ಕೇಳಿದ ಪ್ರಶ್ನೆಗೆ ಸಿದ್ಧಾಂತ್, ತೃಪ್ತಿ ಹಲವು ಪ್ರತಿಭೆಗಳುಳ್ಳ ನಟಿ. ಆಕೆ ಹೆಚ್ಚು ನುರಿತ ವ್ಯಕ್ತಿ ಎಂದು ಶ್ಲಾಘಿಸುವ ಮೂಲಕ, ತಾವು ಕೂಡ ತುಂಬಾ ಒಳ್ಳೆಯ ವ್ಯಕ್ತಿ. ಒಂದು ವೇಳೆ ಆಕೆ ಒಪ್ಪುವುದಾದರೆ ಮದುವೆಗೂ ಸಿದ್ಧ. ತಮ್ಮಂಥ ಒಳ್ಳೆಯ ವ್ಯಕ್ತಿ ಆಕೆಗೂ ಸಿಗುವುದಿಲ್ಲ ಎಂದಿದ್ದಾರೆ.
ನಗ್ನ ತಾರೆ ತೃಪ್ತಿ ಡಿಮ್ರಿ ಜೊತೆ ಈ ನಟನಿಗೆ ಡೇಟಿಂಗ್ ಮಾಡೋ ಆಸೆಯಂತೆ, ಮದ್ವೆ ಕುರಿತು ಹೇಳಿದ್ದೇನು ಕೇಳಿ...