ಯಶ್-ರಾಧಿಕಾ ಭೇಟಿಯಾದ ಸಪ್ತಮಿ ಗೌಡ; ಕಾಂತಾರ ಚೆಲುವೆ ಹೇಳಿದ್ದೇನು, ರಾಕಿಂಗ್ ಸ್ಟಾರ್ ಮಾಡಿದ್ದೇನು?

Published : Apr 04, 2024, 01:15 PM ISTUpdated : Apr 04, 2024, 01:18 PM IST
ಯಶ್-ರಾಧಿಕಾ ಭೇಟಿಯಾದ ಸಪ್ತಮಿ ಗೌಡ; ಕಾಂತಾರ ಚೆಲುವೆ ಹೇಳಿದ್ದೇನು, ರಾಕಿಂಗ್ ಸ್ಟಾರ್ ಮಾಡಿದ್ದೇನು?

ಸಾರಾಂಶ

ನಟಿ ಸಪ್ತಮಿ ಗೌಡ ಅವರು ರಿಷಬ್ ಶೆಟ್ಟಿ ನಟನೆ ಹಾಗು ನಿರ್ದೇಶನದ 'ಕಾಂತಾರ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.  ಕಾಂತಾರಾ ಚಿತ್ರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವುದರಿಂದ ನಟಿ ಸಪ್ತಮಿ ಗೌಡ ಕೂಡ ಬಳಿಕ ಹಲವು ಆಫರ್ ಪಡೆದುಕೊಂಡಿದ್ದಾರೆ. 

ಕಾಂತಾರ ಚೆಲುವೆ ಸಪ್ತಮಿ ಗೌಡ (Sapthami Gowda) ಅವರು ರಾಕಿಂಗ್ ಸ್ಟಾರ್ ಯಶ್ (Yash) ಮತ್ತು ರಾಧಿಕಾ ಪಂಡಿತ್ (Radhika Pandit) ಜೋಡಿಯನ್ನು ಫಂಕ್ಷನ್ ಒಂದರಲ್ಲಿ ಭೇಟಿಯಾಗಿರುವ ಸಂತಸದ ಕ್ಷಣವನ್ನು ಹಂಚಿಕೊಂಡಿದ್ದಾರೆ. ಸಪ್ತಮಿ ಗೌಡ ಅವರು ಯಶ್ ಬಳಿ ಹೋಗುತ್ತಿದ್ದಂತೆ ಅವರೇ ಸಪ್ತಮಿ ಗೌಡ ಅವರನ್ನು ತಮ್ಮ ಪತ್ನಿ ರಾಧಿಕಾ ಪಂಡಿತ್ ಅವರಿಗೆ ಪರಿಚಯ ಮಾಡಿಸಿದರಂತೆ. 'ಇವರೇ ಕಾಂತಾರದಲ್ಲಿ (Kantara) ನಟಿಸಿರುವುದು, ಸಪ್ತಮಿ ಗೌಡ' ಎಂದು ರಾಧಿಕಾಗೆ ನಟ ಯಶ್ ಪರಿಚಿಯಿಸಿದರಂತೆ. ಅದಕ್ಕೆ ರಾಧಿಕಾ ಪಂಡಿತ್ ಅವರು 'ವೆರಿ ನೈಸ್, ಐ ಆಮ್ ವೆರಿ ಪ್ರೌಡ್ ಆಫ್ ಯೂ' ಎಂದು ಹೇಳಿದರು.

ಈ ಸಂತಸದ ಕ್ಷಣವನ್ನು ಹೇಳಿಕೊಂಡ ಸಪ್ತಮಿ ಗೌಡ, 'ರಾಧಿಕಾ ಪಂಡಿತ್ ಅವರಿಗೆ ನನ್ನನ್ನು ಪರಿಚಯ ಮಾಡಿಕೊಟ್ಟ ಬಳಿಕ ಯಶ್ ಅವರು, ನಿಮ್ಮ ಅಪ್ಪ ನನಗೆ ಚೆನ್ನಾಗಿ ಗೊತ್ತು. ಕಳ್ಳರ ಸಂತೆ ಸಿನಿಮಾ ಶೂಟಿಂಗ್ ವೇಳೆ ನಾನು ಅವರನ್ನು ಭೇಟಿಯಾಗಿದ್ದೆ. ಅಪ್ಪಾಜಿಗೆ ಕೇಳಿದ್ದೇನೆ ಎಂದು ಹೇಳಿ' ಎಂದರು. 'ಸರ್, ಖಂಡಿತವಾಗಿಯೂ ಹೇಳ್ತೀನಿ' ಎಂದೆ. 'ಇದೆಲ್ಲ ನನಗೆ ನಿಜವಾಗಿಯೂ ಫ್ಯಾನ್ ಮೂಮೆಂಟ್ಸ್.. ಅದು ತುಂಬಾ ಸಂತಸ ಕೊಟ್ಟ ಸಮಯ. ಇದೆಲ್ಲಾ ತೀರಾ ಇತ್ತೀಚಿನವರೆಗೂ ಬಂದಿರುವ ಖುಷಿಯ ಕ್ಷಣ' ಎಂದಿದ್ದಾರೆ ನಟಿ ಸಪ್ತಮಿ ಗೌಡ.

ಹೊರಜಗತ್ತಿಗೆ ನಾನು ಸ್ಟಾರ್ ಆಗಿದ್ದರೂ ನನಗೆ ನಾನೊಬ್ಬ ಕಾಮನ್ ಮ್ಯಾನ್; ಶಾರುಖ್ ಖಾನ್ ಅಚ್ಚರಿ ಹೇಳಿಕೆ ವೈರಲ್!

ನಟಿ ಸಪ್ತಮಿ ಗೌಡ ಅವರು ರಿಷಬ್ ಶೆಟ್ಟಿ ನಟನೆ ಹಾಗು ನಿರ್ದೇಶನದ 'ಕಾಂತಾರ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.  ಕಾಂತಾರಾ ಚಿತ್ರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವುದರಿಂದ ನಟಿ ಸಪ್ತಮಿ ಗೌಡ ಕೂಡ ಬಳಿಕ ಹಲವು ಆಫರ್ ಪಡೆದುಕೊಂಡಿದ್ದಾರೆ. ಅಭಿಷೇಕ್ ಅಂಬರೀಷ್ ಜತೆ 'ಕಾಳಿ' ಚಿತ್ರದಲ್ಲಿ ನಟಿಸಿದ ಬಳಿಕ ಯುವ ರಾಜ್‌ಕುಮಾರ್ ನಟನೆಯ 'ಯುವ' ಚಿತ್ರದಲ್ಲಿ (Yuva) ನಟಿಸಿದ್ದಾರೆ. ಯುವ ಚಿತ್ರವು ಬಿಡುಗಡೆಯಾಗಿ ಮೆಚ್ಚುಗೆ ಗಳಿಸಿದೆ. 

ವೆಂಕ್ಯಾ ಅಂಗಳಕ್ಕೆ ಬಂದಳು ಶಿಮ್ಲಾ ಸುಂದರಿ; ಸಾಗರ್ ಪುರಾಣಿಕ್ ಸಿನಿಮಾದಲ್ಲಿ ರೂಪಾಲಿ ಸೂದ್!

ಅಂದಹಾಗೆ, ನಟಿ ಸಪ್ತಮಿ ಗೌಡ ಅವರಿಗೆ ಸೌತ್ ಇಂಡಿಯಾದ ಬೇರೆ ಭಾಷೆಗಳ ಚಿತ್ರರಂಗದಿಂದಲೂ ಆಫರ್ ಬಂದಿದೆಯಂತೆ. ಸದ್ಯ ಅಳೆದೂ ತೂಗಿ ಪಾತ್ರ ಹಾಗೂ ಸಿನಿಮಾಗಳನ್ನು ಸಪ್ತಮಿ ಗೌಡ ಒಪ್ಪಿಕೊಂಡು ಸಹಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಏಕೆಂದರೆ, ಕಾಂತಾರ ಬಳಿಕ ಸಪ್ತಮಿ ನಟಿಸಿರುವ ಯಾವುದೇ ಚಿತ್ರವೂ ಸಖತ್ ಸದ್ದು ಮಾಡಲು ವಿಫಲವಾಗಿದೆ ಎಂದು ಹೇಳಬಹುದು. ಹೀಗಾಗಿ ಭವಿಷ್ಯದಲ್ಲಿ ನಟಿ ಸಪ್ತಮಿ ಗೌಡ ತೆಗೆದುಕೊಳ್ಳುವ ನಿರ್ಧಾರದ ಮುಂದೆ ಅವರ ಸ್ಟಾರ್‌ಡಮ್ ನಿಲ್ಲಲಿದೆ ಎನ್ನಬಹುದು. 

ರಮ್ಯಾ ಔಟ್ ಸುದ್ದಿ ಬೆನ್ನಲ್ಲೇ ಅಮಿತ್ ತ್ರಿವೇದಿ 'ಉತ್ತರಕಾಂಡ'ಕ್ಕೆ ಎಂಟ್ರಿ; ದುಪ್ಪಾಟ್ಟಾಯ್ತು ನಿರೀಕ್ಷೆ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟಾಕ್ಸಿಕ್ ಸಿನಿಮಾ ರಿಲೀಸ್ ಸಮೀಪಿಸುತ್ತಿದ್ದಂತೆ ಐಟಿ ಪ್ರಕರಣದಲ್ಲಿ ನಟ ಯಶ್‌ಗೆ ಹೈಕೋರ್ಟ್ ರಿಲೀಫ್
ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!