'ನಾನು ಬೋಲ್ಡ್ ಬಟ್ಟೆ ಹಾಕಿದ್ದೀನಿ ಅಂತ ಯಾರಾದ್ರೂ ಹೇಳಿದ ತಕ್ಷಣ ನಾನು, ನೀವು ಇದನ್ನ ಬೋಲ್ಡ್ ಬಟ್ಟೆ ಅಂತೀರಾ? ಹಾಗಿದ್ರೆ ನಾನು ಬೋಲ್ಡ್ ಪಾತ್ರ ಮಾಡ್ತೀನಿ ಅಂತ ಹೇಳ್ತೀನಿ. ನಾನು ಬೋಲ್ಡ್ ಪಾತ್ರ ಮಾಡೋಕೆ ಇಷ್ಟಪಡ್ತೀನಿ, ಯಾಕಂದ್ರೆ, ಜೀವನದಲ್ಲೇ ನಾನು ಬೋಲ್ಡ್ ಆಗಿರೋಳು.
ನಟಿ ಮತ್ತು ಗಾಯಕಿ ಚೈತ್ರಾ ಆಚಾರ್ ಅವರು ಮಾತನಾಡಿರುವ ವೀಡಿಯೋವೊಂದು ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಸದ್ಯ ಬೋಲ್ಡ್ ನಟಿ, ಬೋಲ್ಡ್ ಕ್ಯಾರಾಕ್ಟರ್ ಪ್ಲೇ ಮಾಡುವವರು ಎಂಬ ಹಣೆಪಟ್ಟಿ ಹೊತ್ತಿರುವ ನಟಿ ಚೈತ್ರಾ ಆಚಾರ್ ಅವರು ಆ ಬಗ್ಗೆಯೇ ಮಾತನಾಡಿದ್ದಾರೆ. 'ನೀವು ಯಾವ ರೀತಿಯ ಪಾತ್ರ ಮಾಡಬೇಕು ಅಂತಿದೀರಾ' ಎಂಬ ಪ್ರಶ್ನೆಗೆ ನಾನು ಯಾವುದೇ ಬ್ಲೂ ಪ್ರಿಂಟ್ ಇಟ್ಕೊಂಡಿಲ್ಲ. ನಾನು ಪ್ರಪಂಚದ ಪ್ಲೋ ಜತೆ ಹೋಗ್ತೀನಿ, ಮತ್ತು ಯಾವುದೆಲ್ಲಾ ನನಗೆ ಎಕ್ಸೈಟ್‌ಮೆಂಟ್ ಕೊಡುತ್ತಾ ಅದನ್ನೆಲ್ಲ ಮಾಡಲು ಇಷ್ಟಪಡುತ್ತೇನೆ' ಎಂದಿದ್ದಾರೆ.
ನನಗೆ ಚಾಲೆಂಜಸ್ ಇಷ್ಟ, ನಾನು ಚಾಲೆಂಜಸ್ ತೆಗೆದುಕೊಳ್ಳಲು ಇಷ್ಟಪಡ್ತೀನಿ. ನಿನ್ನ ಹತ್ರ ಅದು ಆಗಲ್ಲ, ನೀನು ಅದನ್ನೆಲ್ಲಾ ಮಾಡೋಕೆ ಹೋಗ್ಬೇಡ' ಎಂದು ಯಾರಾದ್ರೂ ಹೇಳಿದ್ರೆ 'ನಾನು ಅದನ್ನೇ ಖಂಡಿತ ಮಾಡೋಕೆ ಇಷ್ಟ ಪಡ್ತೀನಿ. ನನ್ನ ಹತ್ರ ಆಗದೇ ಸೋತ್ರೂ ಪರ್ವಾಗಿಲ್ಲ, ನಾನು ಅದನ್ನು ಮಾಡೋಕೆ ಖಂಡಿತ ಟ್ರೈ ಮಾಡ್ತೀನಿ. ಅಂತಹ ಮೆಂಟಾಲಿಟಿ ಹಾಗು ಪರ್ಸನಾಲಿಟಿ ನಂದು. ಯಾರಾದ್ರೂ ನೀನು ಬೋಲ್ಡ್ ಬಟ್ಟೆ ಹಾಕ್ಕೊಂಡಿದೀಯಾ ಅಂದ್ರೆ, ಹೌದಾ, ಹಾಗಿದ್ರೆ ನಾನು ಬೋಲ್ಡ್ ಕ್ಯಾರಾಕ್ಟರ್ ಮಾಡ್ತೀನಿ ಅಂತ ಹೇಳೋ ಥರದವ್ಳು ನಾನು' ಎಂದಿದ್ದಾರೆ ನಟಿ ಚೈತ್ರಾ ಜೆ ಆಚಾರ್.
ಹೊರಜಗತ್ತಿಗೆ ನಾನು ಸ್ಟಾರ್ ಆಗಿದ್ದರೂ ನನಗೆ ನಾನೊಬ್ಬ ಕಾಮನ್ ಮ್ಯಾನ್; ಶಾರುಖ್ ಖಾನ್ ಅಚ್ಚರಿ ಹೇಳಿಕೆ ವೈರಲ್!
ಮುಂದುವರೆದು ಹೇಳಿರುವ ಅವರು 'ನಾನು ಬೋಲ್ಡ್ ಬಟ್ಟೆ ಹಾಕಿದ್ದೀನಿ ಅಂತ ಯಾರಾದ್ರೂ ಹೇಳಿದ ತಕ್ಷಣ ನಾನು, ನೀವು ಇದನ್ನ ಬೋಲ್ಡ್ ಬಟ್ಟೆ ಅಂತೀರಾ? ಹಾಗಿದ್ರೆ ನಾನು ಬೋಲ್ಡ್ ಪಾತ್ರ ಮಾಡ್ತೀನಿ ಅಂತ ಹೇಳ್ತೀನಿ. ನಾನು ಬೋಲ್ಡ್ ಪಾತ್ರ ಮಾಡೋಕೆ ಇಷ್ಟಪಡ್ತೀನಿ, ಯಾಕಂದ್ರೆ, ಜೀವನದಲ್ಲೇ ನಾನು ಬೋಲ್ಡ್ ಆಗಿರೋಳು. ಅದಕ್ಕೆ ಒಮ್ಮೆ ರಜಿಸ್ಟರ್ ಆಗ್ಬಿಟ್ರೆ ನಂತ್ರ ಎಷ್ಟುಬಾರಿ ಬೇಕಾದ್ರೂ ಅಂತಹ ಪಾತ್ರ ಮಾಡಬಹುದು. ನಾನು ನನ್ನನ್ನು ರೆಬಲ್ ಅಂತ ಯಾಕೆ ಕರೆದುಕೊಳ್ತೀನಿ ಅಂದ್ರೆ, ಬೋಲ್ಡ್ ಪಾತ್ರಗಳನ್ನು ಮಾಡೋಕೆ ಹತ್ತರಲ್ಲಿ 9 ಜನರು ಇಷ್ಟಪಡದೇ ಇರಬಹುದು, ಆದರೆ ನಾನು ಅದನ್ನು ಮಾಡ್ತೀನಿ ಅಂತ ಚಾಲೆಂಜ್ ತಗೋತೀನಲ್ಲ! ನಾನು ಅದನ್ನು ನನ್ನಿಂದ ಆದಷ್ಟು ಚೆನ್ನಾಗಿ ನಿರ್ವಹಿಸ್ತೀನಿ' ಎಂದಿದ್ದಾರೆ ಚೈತ್ರಾ ಆಚಾರ್.
ಮತ್ತೆ ಒಂದಾಯ್ತು 'ದಸರಾ' ಜೋಡಿ, ಬಾಯಲ್ಲಿ ಸಿಗರೇಟು, ನಾನಿ ರಗಡ್ ಲುಕ್ ನೋಡಿದ್ರೆ ಶಾಕ್ ಆಗ್ತೀರಾ!
ಅಂದಹಾಗೆ, ನಟಿ ಮತ್ತು ಸಿಂಗರ್ ಚೈತ್ರಾ ಆಚಾರ್ ಅವರು ಬೋಲ್ಡ್ ಬಟ್ಟೆ ಧರಿಸಿ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಟ್ರೋಲ್ ಆಗಿದ್ದರು. ಅದಕ್ಕೆ ಅಷ್ಟೇ ದಿಟ್ಟತನದಿಂದ ಉತ್ತರಿಸಿ ತಮ್ಮ ಕೆಲಸವನ್ನು ಸಮರ್ಥಿಸಿಕೊಂಡಿದ್ದರು. ಮಹಿರಾ ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿರುವ ಚೈತ್ರಾ ಜೆ ಆಚಾರ್, ಗಾಯಕಿಯಾಗಿಯೂ ಸಾಕಷ್ಟು ಸಿನಿಮಾಗಳಿಗೆ ಹಾಗೂ ವೇದಿಕೆಗಳಲ್ಲಿ ಹಾಡಿದ್ದಾರೆ. ತಮ್ಮ ಬೋಲ್ಡ್ ಮಾತು ಹಾಗೂ ಲುಕ್‌ನಿಂದ ಆಗಾಗ ಸುದ್ದಿಯಾಗುವ ಚೈತ್ರಾ ಆಚಾರ್, ಸದ್ಯ ಗಾಯಕಿಯಾಗಿಯೂ ಸಖತ್ ಮಿಂಚುತ್ತಿದ್ದಾರೆ.
'ಆಡು ಜೀವಿತಂ' ಸಿನಿಮಾಗೆ ನಾನು ಕಡ್ಡಿ-ಗುಡ್ಡ ಎರಡೂ ಆಗಿದ್ದೇನೆ; ಪ್ರಥ್ವಿರಾಜ್ ಮಾತಿನ ಮರ್ಮವೇನಿರಬಹುದು?