‘ಟಾಕ್ಸಿಕ್ ಸಿನಿಮಾದಲ್ಲಿ ಜಗತ್ತಿನಾದ್ಯಂತದ ಅದ್ಭುತ ಕಲಾವಿದರಿದ್ದಾರೆ. ಅವರೆಲ್ಲರ ಡೇಟ್ಸ್ ಹೊಂದಿಸಿ ಸಿನಿಮಾ ಶೂಟಿಂಗ್ ಆರಂಭಿಸುವಾಗ ವಿಳಂಬವಾಗಿದೆ. ಹೀಗಾಗಿ ಈ ಹಿಂದೆ ಘೋಷಿಸಿದಂತೆ ಏ.10ಕ್ಕೆ ಸಿನಿಮಾ ಬಿಡುಗಡೆ ಸಾಧ್ಯವಾಗುತ್ತಿಲ್ಲ’ ಎಂದು ಯಶ್ ಹೇಳಿದ್ದಾರೆ.
‘ಟಾಕ್ಸಿಕ್ ಸಿನಿಮಾದಲ್ಲಿ ಜಗತ್ತಿನಾದ್ಯಂತದ ಅದ್ಭುತ ಕಲಾವಿದರಿದ್ದಾರೆ. ಅವರೆಲ್ಲರ ಡೇಟ್ಸ್ ಹೊಂದಿಸಿ ಸಿನಿಮಾ ಶೂಟಿಂಗ್ ಆರಂಭಿಸುವಾಗ ವಿಳಂಬವಾಗಿದೆ. ಹೀಗಾಗಿ ಈ ಹಿಂದೆ ಘೋಷಿಸಿದಂತೆ ಏ.10ಕ್ಕೆ ಸಿನಿಮಾ ಬಿಡುಗಡೆ ಸಾಧ್ಯವಾಗುತ್ತಿಲ್ಲ’ ಎಂದು ಯಶ್ ಹೇಳಿದ್ದಾರೆ. ಖಾಸದಿ ಸಂಸ್ಥೆ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಯಶ್, ‘ಪ್ಯಾನ್ ವರ್ಲ್ಡ್ ಸಿನಿಮಾ ‘ರಾಮಾಯಣ’ದಲ್ಲಿ ರಾವಣನ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಒಬ್ಬ ಕಲಾವಿದನಾಗಿ ನನಗಿದು ಬಹಳ ಎಗ್ಸೈಟಿಂಗ್ ಅನಿಸಿದೆ’ ಎಂದಿದ್ದಾರೆ.
‘ರಾಮಾಯಣ ಸಿನಿಮಾಕ್ಕೆ ನಾನು ಬಂದದ್ದು ಆಕಸ್ಮಿಕವಾಗಿ. ಟಾಕ್ಸಿಕ್ ಸಿನಿಮಾದ ವಿಎಫ್‌ಎಕ್ಸ್ ಕೆಲಸಕ್ಕಾಗಿ ಲಾಸ್ ಏಂಜಲೀಸ್‌ನಲ್ಲಿ ಡಿಎನ್‌ಇಜಿ ಮತ್ತು ಪ್ರೈಮ್ ಫೋಕಸ್‌ನ ನಮಿತ್ ಮಲ್ಹೋತ್ರಾ ಅವರನ್ನು ಭೇಟಿಯಾಗಿದ್ದೆ. ಈ ವೇಳೆ ನಮಿತ್ ನನ್ನ ಜೊತೆಗೆ ‘ರಾಮಾಯಣ’ ಸಿನಿಮಾದ ವಿಚಾರ ಹಂಚಿಕೊಂಡರು. ಒಂದು ಹಂತದಲ್ಲಿ ನಮ್ಮಿಬ್ಬರ ಯೋಚನೆಗಳು, ವಿಷನ್ ಒಂದೇ ಅನಿಸಿತು. ಭಾರತೀಯತೆಯನ್ನು ಜಗತ್ತಿಗೆ ಪರಿಚಯಿಸುವ ಗುರಿ ನಮ್ಮಿಬ್ಬರದೂ ಆಗಿತ್ತು.
undefined
ಈ ಕಾರಣಕ್ಕೆ ನಾನು ಈ ಸಿನಿಮಾದ ಸಹ ನಿರ್ಮಾಪಕನಾಗಲು ಒಪ್ಪಿಕೊಂಡೆ. ಈ ವೇಳೆ ಅವರು ಹಿಂಜರಿಕೆಯಲ್ಲೇ, ರಾವಣ ಪಾತ್ರ ಮಾಡಬಹುದಾ ಅಂತ ಕೇಳಿದರು. ಮಾಡುತ್ತೇನೆ ಎಂದೆ. ನನಗೆ ನನ್ನ ಸ್ಟಾರ್‌ಡಮ್‌ಗಿಂತಲೂ ರಾಮಾಯಣದಂಥಾ ಸಿನಿಮಾವನ್ನು ಜಗತ್ತಿಗೆ ತೋರಿಸುವುದು ಮುಖ್ಯವಾಗಿತ್ತು. ಕಲಾವಿದನಾಗಿಯೂ ರಾವಣನ ಪಾತ್ರ ಬಹಳ ಎಗ್ಸೈಟಿಂಗ್. ಆ ಪಾತ್ರಕ್ಕೆ ಜೀವ ತುಂಬಲು ಉತ್ಸುಕನಾಗಿದ್ದೇನೆ’ ಎಂದೂ ಯಶ್ ಹೇಳಿದ್ದಾರೆ.
ಟಾಕ್ಸಿಕ್‌ನಲ್ಲಿ ಈ ಪಾತ್ರದಲ್ಲಿ ಮಿಂಚಲಿದ್ದಾರೆ ರಾಕಿಂಗ್ ಸ್ಟಾರ್ ಯಶ್: ಫ್ಯಾನ್ಸ್ ಫುಲ್ ಖುಷ್
ಟಾಕ್ಸಿಕ್ ಬಗ್ಗೆ ಮಾತನಾಡಿದ ಯಶ್, ‘ಆಧುನಿಕ ಜಗತ್ತಿನ ಪ್ರತಿಯೊಬ್ಬರೂ ಒಂದಲ್ಲ ಒಂದು ಬಗೆಯಲ್ಲಿ ಟಾಕ್ಸಿಕ್ ಸನ್ನಿವೇಶ ಎದುರಿಸಿಯೇ ಎದುರಿಸಿರುತ್ತಾರೆ. ಅವರು ಎದುರಿಸಿರುವ ಪ್ರಸಂಗ ಬೇರೆ ಇರಬಹುದು, ಆದರೆ ಸಮಸ್ಯೆ ತಿರುಳಲ್ಲಿ ಸಾಮ್ಯತೆ ಇದೆ. ಹೀಗಾಗಿ ಇದು ಎಲ್ಲರಿಗೂ ಕನೆಕ್ಟ್ ಆಗುವ ಸಿನಿಮಾ. ನಿರ್ದೇಶಕಿ ಗೀತು ಮೋಹನ್‌ದಾಸ್, ಛಾಯಾಗ್ರಾಹಕ ರಾಜೀವ್ ರವಿ ಹಾಗೂ ನನಗೆ ಜನರಿಗೆ ಹೇಗೆ ಮನರಂಜನೆ ನೀಡಬೇಕು ಎಂಬ ಬಗ್ಗೆ ಸ್ಪಷ್ಟ ಕಲ್ಪನೆ ಇದೆ. ಮೂವರ ವಿಷನ್ ಒಂದೇ ಆಗಿರುವುದರಿಂದ ಸಿನಿಮಾ ಅದ್ಭುತವಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದೂ ಹೇಳಿದ್ದಾರೆ.