ಟಾಕ್ಸಿಕ್ ಸೆಟ್​​ನಲ್ಲಿ ರಾಕಿಂಗ್ ಸ್ಟಾರ್ ಮಾತು; ಮುಂಬೈನಿಂದ ಬಿಗ್ ನ್ಯೂಸ್ ಕೊಟ್ಟ ನಟ ಯಶ್!

Published : Oct 24, 2024, 04:17 PM ISTUpdated : Oct 24, 2024, 04:18 PM IST
ಟಾಕ್ಸಿಕ್ ಸೆಟ್​​ನಲ್ಲಿ ರಾಕಿಂಗ್ ಸ್ಟಾರ್ ಮಾತು; ಮುಂಬೈನಿಂದ ಬಿಗ್ ನ್ಯೂಸ್ ಕೊಟ್ಟ ನಟ ಯಶ್!

ಸಾರಾಂಶ

ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾ ವಾಹಿನಿಗೆ ಸಂದರ್ಶನವನ್ನ ಕೊಟ್ಟಿರೋ ಯಶ್ ಸುಧೀರ್ಘವಾಗಿ ಮಾತನಾಡಿದ್ದಾರೆ. ಟಾಕ್ಸಿಕ್ ಸೆಟ್​​ನಲ್ಲೇ ಕುಳಿತು ತಮ್ಮ ಕನಸುಗಳ ಬಗ್ಗೆ, ಬರಲಿರೋ ಪ್ರಾಜೆಕ್ಟ್​ಗಳ ಬಗ್ಗೆ ಡಿಟೈಲ್..

ರಾಕಿಭಾಯ್ (Rocking Star Yash) ಟಾಕ್ಸಿಕ್ ಶೂಟ್​​ಗಾಗಿ ಮುಂಬೈ ಸೇರಿರೋದು ಗೊತ್ತೇ ಇದೆ. ಜೊತೆಗೆ ಬಾಲಿವುಡ್​ನ ಮೆಗಾಪ್ರಾಜೆಕ್ಟ್ ರಾಮಾಯಣ ವರ್ಕ್ ಕೂಡ ನಡೀತಾ ಇದೆ. ಇದೂವರೆಗೂ ಯಶ್ ಸಿನಿಮಾಗಳ ಬಗ್ಗೆ ಬರೀ ಅಂತೆಕಂತೆ ಹರಿದಾಡ್ತಾ ಇದ್ವು. ಇದೀಗ ಖುದ್ದು ಯಶ್ ತಮ್ಮ ಅಪ್​ಕಮಿಂಗ್ ಪ್ರಾಜೆಕ್ಟ್​​ಗಳ ಅಪ್​ಡೇಟ್ ಕೊಟ್ಟಿದ್ದಾರೆ. ಟಾಕ್ಸಿಕ್, ರಾಮಾಯಣ ಅಷ್ಟೇ ಅಲ್ಲ  ಕೆಜಿಎಫ್​-3 ಕುರಿತ ಮೆಗಾಅಪ್​ಡೇಟ್​​ನೂ ಶೇರ್ ಮಾಡಿದ್ದಾರೆ. ಬನ್ನಿ ಹಾಗಾದ್ರೆ ರಾಕಿ ಕೊಟ್ಟ  ಬ್ರೇಕಿಂಗ್ ನ್ಯೂಸ್ ಏನು ಅನ್ನೋದನ್ನ  ನೋಡೋಣ.

ಯೆಸ್ ರಾಕಿಭಾಯ್ ಫೈನಲಿ ಮೌನ ಮುರಿದಿದ್ದಾರೆ. ಟಾಕ್ಸಿಕ್ (Toxic Movie) ಮುಹೂರ್ತ ಮಾಡಿದ್ದು ಬಿಟ್ರೆ ಆ ಸಿನಿಮಾದ ಒಂದೇ ಒಂದು ಹೊಸ ಅಪ್​ಡೇಟ್ ಕೊಡದೇ ಸೈಲೆಂಟ್ ಆಗಿ ಶೂಟ್ ಮಾಡ್ತಿದ್ದ ಯಶ್, ಕೊನೆಗೂ ಟಾಕ್ಸಿಕ್ ಹೇಗೆ ನಡೀತಿದೆ ಅನ್ನೋದನ್ನ ರಿವೀಲ್ ಮಾಡಿದ್ದಾರೆ ಅಷ್ಟೇ ಅಲ್ಲ ಬಾಲಿವುಡ್ ಪ್ರಾಜೆಕ್ಟ್ ರಾಮಾಯಣದ ಬಗ್ಗೆಯೂ ಇದೇ ಮೊದಲ ಬಾರಿ ಅಧಿಕೃತವಾಗಿ ಮಾತನಾಡಿದ್ದಾರೆ. 

ಸಾಯಿ ಪಲ್ಲವಿಯನ್ನು ರಾಮಾಯಣಕ್ಕೆ ಆಯ್ಕೆ ಮಾಡಿದ್ದು ಯಾರು, ನಟ ಯಶ್ ಕೈವಾಡ ಇದ್ಯಾ?

ಯೆಸ್, ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾ ವಾಹಿನಿಗೆ ಸಂದರ್ಶನವನ್ನ ಕೊಟ್ಟಿರೋ ಯಶ್ ಸುಧೀರ್ಘವಾಗಿ ಮಾತನಾಡಿದ್ದಾರೆ. ಟಾಕ್ಸಿಕ್ ಸೆಟ್​​ನಲ್ಲೇ ಕುಳಿತು ತಮ್ಮ ಕನಸುಗಳ ಬಗ್ಗೆ, ಬರಲಿರೋ ಪ್ರಾಜೆಕ್ಟ್​ಗಳ ಬಗ್ಗೆ ಡಿಟೈಲ್ ಆಗಿ ಮಾತನಾಡಿದ್ದಾರೆ. 

ಈಗಾಗ್ಲೇ ಬೆಂಗಳೂರಿನ ಹೆಚ್.ಎಂ.ಟಿ ನಲ್ಲಿ ಹಾಕಿದ್ದ ಸೆಟ್​​ನಲ್ಲಿ 30 ದಿನಗಳ ಕಾಲ ಟಾಕ್ಸಿಕ್ ಮೂವಿ ಶೂಟಿಂಗ್ ನಡೆದಿದೆ. ಸದ್ಯ ಮುಂಬೈನ ಮಡ್ ಐಲ್ಯಾಂಡ್​​ನಲ್ಲಿ ಹಾಕಿರೋ ಸೆಟ್​​ನಲ್ಲಿ ಎರಡನೇ ಹಂತದ ಚಿತ್ರೀಕರಣ ನಡೀತಾ ಇದೆ. ಟಾಕ್ಸಿಕ್ ಶೂಟ್ ಬಗ್ಗೆ.. ನಿರ್ದೇಶಕಿ ಗೀತೂ ಮೋಹನ್ ದಾಸ್ ಬಗ್ಗೆ ಯಶ್ ಹೇಳಿದ್ದು ಹೀಗೆ.

ಅವರು ಕಾನ್ಸೆಪ್ಟ್ ಜೊತೆ ಬಂದ್ರು.. ಅವರಲ್ಲಿದ್ದ ಪ್ಯಾಷನ್ ಇಷ್ಟವಾಯ್ತು ಅದಕ್ಕೇ ಗೀತು ಜೊತೆಗೆ ಕೆಲಸ ಮಾಡ್ತಿದ್ದೀನಿ ಎಂದಿರೋ ಯಶ್, ಬಾಲಿವುಡ್ ಪ್ರಾಜೆಕ್ಟ್ ರಾಮಾಯಣದಲ್ಲಿ ನಟಿಸ್ತಾ ಇರೋದು ಕೂಡ ನಿಜ ಅಂತ ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲ ರಾಮಾಯಣದಲ್ಲಿ ರಾವಣನೂ ನಾನೇ ಸಹನಿರ್ಮಾಪಕನೂ ನಾನೇ ಅನ್ನೋ ಗುಟ್ಟನ್ನ ಬಿಟ್ಟು ಕೊಟ್ಟಿದ್ದಾರೆ.

ಕನ್ನಡವೇ ಸರ್ವಸ್ವ ಅಂತಿದ್ದ ಡಾ ರಾಜ್ ಒಂದು ತೆಲುಗು ಸಿನಿಮಾದಲ್ಲಿ ನಟಿಸುವಂತೆ ಮಾಡಿದ್ದು ಯಾರು?

ಇನ್ನೂ ಈ ಎರಡೂ ಪ್ರಾಜೆಕ್ಟ್​​ಗಳ ಜೊತೆಗೆ ಕೆಜಿಎಫ್ -3 ಬಗ್ಗೆನೂ ರಾಕಿಭಾಯ್ ಮಾತನಾಡಿದ್ದಾರೆ. ಈಗಾಗಲೇ ‘ಕೆಜಿಎಫ್ 2’ ಸಿನಿಮಾ ರಿಲೀಸ್ ಆಗಿ 2 ವರ್ಷ ಕಂಪ್ಲಿಟ್​ ಆಗಿದೆ. ಇತ್ತೀಚೆಗೆ ನಿರ್ಮಾಪಕ ವಿಜಯ್ ಕಿರಗಂದೂರು 'ಕೆಜಿಎಫ್​ 3' ಬಗ್ಗೆ ಮೂರ್ನಾಲ್ಕು​​​ ತಿಂಗಳಲ್ಲಿ ಅಪ್​ಡೇಟ್ ಕೋಡೋದಾಗಿ ಹೇಳಿಕೊಂಡಿದ್ರು. ಎಲ್ಲರೂ ಅದರ ಬಗ್ಗೆ ಕೇಳ್ತಾ ಇರ್ತಾರೆ. ಇತ್ತೀಚಿಗೆ ಕ್ರಿಕೆಟರ್ ಶುಭಮನ್ ಗಿಲ್ ಕೂಡ ಕೆಜಿಎಫ್-3 ಯಾವಾಗ ಅಂತ ಕೇಳಿದ್ರೂ. ಜನರ ನಿರೀಕ್ಷೆ ಗೊತ್ತಿದೆ. ಸೋ ಮತ್ತೆ ತಾನು ರಾಕಿ ಭಾಯ್ ಆಗಿ ಸ್ಕ್ರೀನ್ ಮೇಲೆ ಬಂದೇ ಬರ್ತೀನಿ ಅದಿಂದ್ದಾರೆ ಯಶ್.

ಒಟ್ಟಾರೆಯಾಗಿ ಯಶ್ ಚಿತ್ರಗಳ​​ ಅಪ್​ಡೇಟ್​​ ಬಗ್ಗೆ ಕಾದುಕುಳಿತಿರೋ ಫ್ಯಾನ್ಸ್​ಗೆ ಸೂಪರ್​ ಡೂಪರ್​ ಸುದ್ದಿ ಸಿಕ್ಕಿದೆ.. ಜಸ್ಟ್ ಟಾಕ್ಸಿಕ್ ಬಗ್ಗೆ ಕೇಳ್ತಾ ಇದ್ದವರಿಗೆ ರಾಮಾಯಣ, ಕೆಜಿಎಫ್-3 ಬಗ್ಗೆಯೂ ಅಪ್​ಡೇಟ್ ಕೊಟ್ಟು ಸಖತ್ ಥ್ರಿಲ್ ಕೊಟ್ಟಿದ್ದಾರೆ ಯಶ್. ಇನ್​ ಏನಿದ್ರು ರಾಕಿಬಾಯ್​​  ರಾಕಿಂಗ್​​ ಹವಾಕ್ಕೆ ಕೌಂಟ್​ಡೌನ್​ ಅಷ್ಟೇ ಬಾಕಿ ಇದೆ.. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?
Karna Serial: ಸಂಜಯ್‌ ಕುತಂತ್ರಕ್ಕೆ ಬಲಿಯಾದ ನಿತ್ಯಾ: ಈಗ ಕರ್ಣನ ಜೊತೆ ಅಸಲಿ ಮದುವೆ ಆಗ್ಲೇಬೇಕು! ನಿಧಿ ಕಥೆ ಏನು?