ಹೊಸ ವರ್ಷದ ಆರಂಭದಲ್ಲೇ ರಾಕಿಂಗ್ ಸ್ಟಾರ್ ಯಶ್ ಫ್ಯಾನ್‌ಗಳಿಗೆ ಕಾದಿದೆ ಭಾರೀ ಹಬ್ಬ!

Published : Dec 29, 2023, 07:18 PM ISTUpdated : Dec 29, 2023, 07:20 PM IST
ಹೊಸ ವರ್ಷದ ಆರಂಭದಲ್ಲೇ ರಾಕಿಂಗ್ ಸ್ಟಾರ್ ಯಶ್ ಫ್ಯಾನ್‌ಗಳಿಗೆ ಕಾದಿದೆ ಭಾರೀ ಹಬ್ಬ!

ಸಾರಾಂಶ

ನ್ಯಾಷನಲ್​ ಸ್ಟಾರ್​​​​ ಯಶ್​ಗೆ ಬರ್ತ್​ಡೇ, ಹುಟ್ಟುಹಬ್ಬಕ್ಕೆ ಸಿದ್ಧವಾಗಿದೆ 'ಟಾಕ್ಸಿಕ್' ಸ್ಪೆಷಲ್ ಕಿಕ್. ಯಶ್ ಜನ್ಮದಿನ ಅಂದ್ರೆ ಕೇಳ್ಬೇಕಾ. ಸೆಲೆಬ್ರೇಷನ್ ಪೀಕ್​ನಲ್ಲಿರುತ್ತೆ. 

ರಾಕಿಂಗ್ ಸ್ಟಾರ್ ಯಶ್ ತನ್ನ 19ನೇ ಸಿನಿಮಾ ಟಾಕ್ಸಿಕ್​ ಅನೌನ್ಸ್ ಮಾಡಿದ್ಮೇಲೆ ಸೈಲೆಂಟ್ ಆದ್ರಲ್ಲಾ.? ಯಶ್​ ಬಗ್ಗೆ ಮತ್ತೆ ಯಾವ್ ಸುದ್ದಿನೂ ಬರ್ತಿಲ್ವಲ್ಲಾ.? ಯೆಸ್, ಹಾಗಂತ ಯಶ್​ ಸುನ್ನಮೇ ಕೂತಿಲ್ಲ. ರಾಕಿ ದೊಡ್ಡ ಹಬ್ಬವೊಂದಕ್ಕೆ ಸಜ್ಜಾಗುತ್ತಿದ್ದಾರೆ. ಆ ಹಬ್ಬವನ್ನ ಈ ಭಾರಿ ಫ್ಯಾನ್ಸ್​ ಜೊತೆಗೆ ಮಾಡೋ ನಿರ್ಧಾರ ಮಾಡಿದ್ದಾರಂತೆ. ಅಷ್ಟಕ್ಕು ಆ ಹಬ್ಬ ಬೇರೇನು ಅಲ್ಲ. ರಾಕಿಂಗ್ ಸ್ಟಾರ್ ಹುಟ್ಟುಹಬ್ಬ.. 

ನ್ಯಾಷನಲ್​ ಸ್ಟಾರ್​​​​ ಯಶ್​ಗೆ ಬರ್ತ್​ಡೇ, ಹುಟ್ಟುಹಬ್ಬಕ್ಕೆ ಸಿದ್ಧವಾಗಿದೆ 'ಟಾಕ್ಸಿಕ್' ಸ್ಪೆಷಲ್ ಕಿಕ್. ಯಶ್ ಜನ್ಮದಿನ ಅಂದ್ರೆ ಕೇಳ್ಬೇಕಾ. ಸೆಲೆಬ್ರೇಷನ್ ಪೀಕ್​ನಲ್ಲಿರುತ್ತೆ. ಫ್ಯಾನ್ಸ್ ಬಳಗದಲ್ಲಿ ಯಶ್ ವೈಬ್ರೇಷನ್ ಹೈ ಇರುತ್ತೆ. ಇನ್ನೇನು ಯಶ್ ಹುಟ್ಟುಹಬ್ಬ ಬಂದೇ ಬಿಟ್ಟಿದೆ. ಜನವರಿ 8ಕ್ಕೆ ರಾಕಿಗೆ ಬರ್ತ್​ಡೇ. ಈ ಭಾರಿ ಹುಟ್ಟುಹಬ್ಬದ ದಿನ ಯಶ್​ ಟಾಕ್ಸಿಕ್​​ ಕಿಕ್ ಕೊಡೋದು ಕನ್ಫರ್ಮ್​​​​. ಅದಕ್ಕಾಗಿ ರಾಕಿ ಎಲ್ಲಾ ತಯಾರಿ ಮಾಡಿಕೊಂಡದ್ದಾರೆ.

ಮುಂದಿನ ಸಿನಿಮಾಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಪ್ರಭಾಸ್; ಖ್ಯಾತ ನಿರ್ಮಾಣ ಸಂಸ್ಥೆ, ಅಂತಿಂಥವರಲ್ಲ ನಿರ್ದೇಶಕರು!
 
ಫ್ಯಾನ್ಸ್​ ಜೊತೆ ಹುಟ್ಟುಹಬ್ಬಕ್ಕೆ ನಡೆದಿದೆ ಪ್ಲ್ಯಾನ್. ಹೊಸ ವರ್ಷದಿಂದ ಯಶ್ ಹೊಸ ಪರ್ವ ಆರಂಭ ಆಗ್ತಿದೆ. ಯಶ್​​ ನ್ಯೂ ಈಯರ್​​ ಗ್ರ್ಯಾಂಡ್ ಆಗಿ ವೆಲ್​ಕಮ್ ಮಾಡ್ತಿದ್ದಾರೆ. ಫ್ಯಾಮಿಲಿ ಜೊತೆ ಹೊಸ ವರ್ಷಾಚಣೆ ಮಾಡೋ ರಾಕಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಮಾಡಿಕೊಳ್ಳೋ ನಿರ್ಧಾರ ಮಾಡಿದ್ದಾರಂತೆ. ಯಶ್​ರನ್ನ ಭೇಟಿ ಆಗೋಕೆ ಯಾರೆಲ್ಲಾ ಕಾಯುತ್ತಿದ್ರೋ ಅವರಿಗೆಲ್ಲಾ ಜನವರಿ 8ಕ್ಕೆ ರಾಕಿ ನೇರಾ ನೇರಾ ಭೇಟಿ ಮಾಡ್ತಾರೆ. ಆ ಭೇಟಿಯ ಜಾಗ ಮತ್ತು ಸಮಯ ನಿಗಧಿ ಆಗೋದೊಂದೇ ಭಾಕಿ ಅಂತ ಯಶ್ ಆಪ್ತ ಗೆಳೆಯರು ಹೇಳ್ತಿದ್ದಾರೆ.

ಎಡಗೈಯೇ ಅಪಘಾತಕ್ಕೆ ಕಾರಣ; ಟೀಸರ್ ರಿಲೀಸ್ ಮಾಡಿದ ಕಿಚ್ಚ ಸುದೀಪ್!
 
ಜನವರಿ 8ಕ್ಕೆ ರಾಕಿಯ 'ಟಾಕ್ಸಿಕ್' ಗ್ಲಿಮ್ಸ್ ರಿಲೀಸ್. ಯಶ್ ಫ್ಯಾನ್ಸ್ ಜೊತೆ ಹುಟ್ಟುಹಬ್ಬ ಮಾಡೋದೊಂದೇ ಅಲ್ಲ. ರಾಕಿ ತನ್ನ ಡೈ ಹಾರ್ಡ್ ಫ್ಯಾನ್ಸ್​ಗೆ ಭರ್ಜರಿ ಬಾಡೂಟ ರೆಡಿ ಮಾಡಿದ್ದಾರೆ. ಟಾಕ್ಸಿಕ್ ಟೈಟಲ್ ಅನೌನ್ಸ್​ ಮಾಡಿ ವರ್ಲ್ಡ್ ವೈಡ್ ಕ್ರೇಜ್ ಸೃಷ್ಟಿಸಿದ್ದ ಯಶ್​ ಹುಟ್ಟುಹಬ್ಬದ ದಿನ ಅದೇ ಟಾಕ್ಸಿಕ್​ನ ಚಿಕ್ಕಗೊಂದು ಗ್ಲಿಮ್ಸ್ ಬಿಡಲಿದ್ದಾರೆ. ಈ ಗ್ಲಿಮ್ಸ್​ನಲ್ಲಿ ಯಶ್​​​ ಲುಕ್​ ರಿವೀಲ್ ಆಗಲಿದೆಯಂತೆ. ಹೀಗಾಗಿ ರಾಕಿ ಹುಟ್ಟುಹಬ್ಬ ಈ ಭಾರಿ ಸಿಕ್ಕಾಪಟ್ಟೆ ರಂಗಾಗಿರುತ್ತೆ.

ಬಿಗ್ ಬಾಸ್ ಮನೆಯಲ್ಲಿ ಯಾವ ಸೀಸನ್‌ನಲ್ಲೂ ಆಗಿರದ ಭಾರೀ ಅವಾಂತರ; ಅಂಥ ಚೇರ್‌ಗೆ ಇಲ್ವಲ್ಲ ಮರ್ಯಾದೆ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Sankeerthana Movie: ಈ ವಯಸ್ಸಿನಲ್ಲೂ ಸಿನಿಮಾ ಮಾಡಿ ಯಶಸ್ವಿಯಾದ ಸೀತಾರಾಮ ಧಾರಾವಾಹಿ ಅಜ್ಜಿ
ಸದುದ್ದೇಶದಿಂದ ಗಂಡ ತೀರಿಕೊಂಡ ಮಹಿಳೆಯನ್ನು ಮದುವೆಯಾಗಿರೋ Su From So Movie ಬಾವ; ಇದು ಅರೇಂಜ್‌ ಮ್ಯಾರೇಜ್