ಹುಡುಕಿಕೊಂಡು ಹೋಗಿ ಚಾಟ್ಸ್ ತಿನ್ನುವೆ ಎಂದ ದರ್ಶನ್. ಭಿಕ್ಷೆ ಬೇಡುತ್ತಿಲ್ಲ..ವಿಶೇಷಚೇತನ ಆದರೂ ದುಡಿಯುತ್ತಿದ್ದಾರೆ ಎಂದ ನಟ.
ಕನ್ನಡ ಚಿತ್ರರಂಗದಲ್ಲಿ ಸದ್ಯ ಕಾಟೇರ ಸದ್ದು ಜೋರಾಗಿದೆ. ಮಾಲಾಶ್ರೀ ಪುತ್ರಿ ಆರಾಧನಾ ಮತ್ತು ದರ್ಶನ್ ನಟನೆಯ ಕಾಟೇರ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಮೊದಲ ದಿನವೇ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಲಿದೆ. ಅಭಿಮಾನಿಗಳ ನಿರೀಕ್ಷೆಗೆ ತಕ್ಕ ಹಾಗೆ ಸಿನಿಮಾ ಕೊಟ್ಟಿದ್ದಾರೆ ತರುಣ್ ಸುಧೀರ್. ಸಿನಿಮಾ ರಿಲೀಸ್‌ಗೂ ಮುನ್ನ ದರ್ಶನ್ ಪ್ರಚಾರದಲ್ಲಿ ಸಖತ್ ಬ್ಯುಸಿಯಾಗಿದ್ದರು. ಈ ವೇಳೆ ವಿಶೇಷಚೇತನ ವ್ಯಕ್ತಿ ಕೆಲಸಗಳನ್ನು ನೆನಪಿಸಿಕೊಂಡು ಸಪೋರ್ಟ್ ಮಾಡಬೇಕು ಎಂದಿದ್ದಾರೆ.
'ಕೆಲದಸ ವಿಚಾರದಲ್ಲಿ ನನಗೆ ಅನೇಕರು ಸ್ಪೂರ್ತಿಯಾಗುತ್ತಾರೆ. ಕೈ ಇಲ್ಲದ ವ್ಯಕ್ತಿನೂ ದುಡಿಯುತ್ತಿರುತ್ತಾರೆ ಅವರು ಕೂಡ ನನಗೆ ಸ್ಪೂರ್ತಿಯಾಗುತ್ತಾರೆ. ಭಿಕ್ಷೆ ಬೇಡುವ ಬದಲು ಕಷ್ಟ ಪಟ್ಟು ಕೆಲಸ ಮಾಡುತ್ತಾರೆ. ಮೊನ್ನೆ ಯಾವುದೋ ಒಂದು ವಿಡಿಯೋ ನೋಡಿದೆ. ನಾಗರಭಾವಿಯಲ್ಲಿ ಒಬ್ಬ ವಿಶೇಷಚೇತನ ವ್ಯಕ್ತಿ ಪಾನಿ ಪೂರಿ ಅಂಗಡಿ ಹಾಕಿಕೊಂಡಿದ್ದಾರೆ. ನನ್ನ ಸ್ನೇಹಿತರಿಗೆ ಹೇಳಿದೆ ನಾವು ಅಲ್ಲಿ ಹೋಗಿ ತಿನ್ನಬೇಕು ಎಂದು. ಏಕೆಂದರೆ ಆ ವ್ಯಕ್ತಿ ಭಿಕ್ಷೆ ಬೇಡದೆ ಪಾನಿ ಪೂರಿ ಅಂಗಡಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ ಅಲ್ಲದೆ ನಾಲ್ಕು ಜನರಿಗೆ ಕೆಲಸ ಕೊಟ್ಟಿದ್ದಾರೆ. ಯುಟ್ಯೂಬ್‌ನಲ್ಲಿ ಆ ಅಂಗಡಿ ನೋಡಿದೆ. ಈಗ ನಾವು ಅ ಅಂಗಡಿಯನ್ನು ಹುಡುಕಿಕೊಂಡು ಹೋದರೆ ಇನ್ನು ನಾಲ್ಕು ಜನರಿಗೆ ಅವರು ಸ್ಪೂರ್ತಿಯಾಗುತ್ತಾರೆ. ಅಂಗಡಿ ಹೆಸರು ಹೊಟ್ಟೆಪಾಡು ಚಾಟ್ಸ್ ಅಂತ ಇದೆ. ಯಾರಿಂದಲೋ ಸ್ಪೂರ್ತಿ ಪಡೆಯುವ ಬದಲು ನಮ್ಮ ಸುತ್ತ ನೋಡಿದರೆ ಈ ರೀತಿ ಅನೇಕರು ಸಿಗುತ್ತಾರೆ. ಕಷ್ಟ ಪಟ್ಟು ದುಡಿಯಲು ಇವರೇ ನಮಗೆ ಸ್ಪೂರ್ತಿಯಾಗುತ್ತಾರೆ' ಎಂದು ದರ್ಶನ್ ಸಂದರ್ಶನದಲ್ಲಿ ಹೇಳಿದ್ದಾರೆ.
undefined
ಕುರಿ ಮೇಯಿಸೋರಿಗೆ 50 ಲಕ್ಷ ಪರಿಹಾರ: ಸ್ಥಳದಲ್ಲೇ ಸಹಾಯ ಮಾಡಿದ ದರ್ಶನ್
ಕಷ್ಟದಲ್ಲಿ ಇರುವವರಿಗೆ ಒಂದು ಹೊತ್ತು ಊಟ ಕೊಡಬಹುದು ಎರಡು ಹೊತ್ತು ಕೊಡಬಹುದು ..ಮುಂದೆ ಅವರ ಜೀವನ? ಜೀವನ ಪೂರ್ತಿ ಯಾರು ಕೊಡ್ತಾರೆ? ಆ ವ್ಯಕ್ತ ಅಷ್ಟು ಕಷ್ಟ ಪಟ್ಟು ಕೆಲಸ ಮಾಡುತ್ತಿರುವುದೇ ನಮಗೆ ಖುಷಿ. ಅವರಂತೆ ಅದೆಷ್ಟೋ ಮಂದಿ ನೋಡಿ ಕೆಲಸ ಮಾಡಲು ಶುರು ಮಾಡುತ್ತಾರೆ ಎಂದಿದ್ದಾರೆ ದರ್ಶನ್.