ಡಿ-ಬಾಸ್‌ ಚಿತ್ರದಲ್ಲಿ ಕಾಲಿವುಡ್‌ ಲೇಡಿ ಸೂಪರ್‌ ಸ್ಟಾರ್; ರಾಜವೀರ ಮದಕರಿ ನಾಯಕನ ಹವಾ ಶುರು!

Suvarna News   | Asianet News
Published : Mar 09, 2020, 08:47 AM ISTUpdated : Mar 10, 2020, 04:54 PM IST
ಡಿ-ಬಾಸ್‌ ಚಿತ್ರದಲ್ಲಿ ಕಾಲಿವುಡ್‌ ಲೇಡಿ ಸೂಪರ್‌ ಸ್ಟಾರ್; ರಾಜವೀರ ಮದಕರಿ ನಾಯಕನ ಹವಾ ಶುರು!

ಸಾರಾಂಶ

ದರ್ಶನ್‌ ಅಭಿನಯದ ಬಹು ನಿರೀಕ್ಷಿತ ಐತಿಹಾಸಿಕ ಚಿತ್ರ ‘ರಾಜವೀರ ಮದಕರಿ ನಾಯಕ’ಕ್ಕೆ ಬಹುಭಾಷೆ ತಾರೆ ನಯನತಾರ ನಾಯಕಿ ಆಗಿ ಬರುತ್ತಾರಾ? ಸದ್ಯಕ್ಕೆ ಇಂತಹದೊಂದು ಸುದ್ದಿ ಹರಿದಾಡುತ್ತಿದೆ.

ಎಲ್ಲವೂ ಅಂದುಕೊಂಡಂತಾದರೆ ನಯನತಾರ ನಾಯಕಿ ಆಗಿ ಬರುವುದು ಖಚಿತ ಎನ್ನುತ್ತಿವೆ ಮೂಲಗಳು. ಮತ್ತೊಂದೆಡೆ ಈ ಚಿತ್ರದ ಹೈದರಾಲಿ ಪಾತ್ರಕ್ಕೆ ಕಾಲಿವುಡ್‌ ನಟ ಶರತ್‌ ಕುಮಾರ್‌ ಆಯ್ಕೆ ಆಗಿದ್ದು, ಇವರ ಪಾತ್ರದ ಭಾಗದ ಚಿತ್ರೀಕರಣ ರಾಜಸ್ಥಾನದ ಅರಮನೆಗಳಲ್ಲಿ ನಡೆಯಲಿದೆ.

ದಿನಕ್ಕೆ ಇಷ್ಟೊಂದು ಸಂಭಾವನೆ ಪಡೆಯುತ್ತಾರಾ ನಯನತಾರಾ ಸಹಾಯಕರು?

ಈ ಕುರಿತು ನಿರ್ದೇಶಕ ರಾಜೇಂದ್ರಸಿಂಗ್‌ ಬಾಬು ಯಾವುದೇ ಗುಟ್ಟು ಕೊಡುತ್ತಿಲ್ಲ. ರಾಜವೀರ ಮದಕರಿ ನಾಯಕ ಚಿತ್ರಕ್ಕೆ ಶೀಘ್ರದಲ್ಲೇ ಹೈದರಾಬಾದ್‌ನಲ್ಲಿ ಎರಡನೇ ಹಂತದ ಚಿತ್ರೀಕರಣ ನಡೆಯುವ ಸಾಧ್ಯತೆ ಇದೆ. ಈಗಾಗಲೇ ಒಂದು ಹಂತದ ಚಿತ್ರೀಕರಣವೂ ಮುಗಿದಿದೆ. ಈ ಹಂತದಲ್ಲಿ ನಾಯಕಿ ಆಯ್ಕೆ ಫೈನಲ… ಮಾಡುವ ಹಂತದಲ್ಲಿದೆ ಚಿತ್ರತಂಡ. ಕನ್ನಡದ ಮಟ್ಟಿಗೆ ಇದು ಬಹುನಿರೀಕ್ಷಿತ ಐತಿಹಾಸಿಕ ಸಿನಿಮಾ ಆಗಿದ್ದಕ್ಕೂ ಹಲವು ಕಾರಣಗಳಿವೆ.

ಪ್ರಚಾರಕ್ಕೆ ಬರಲ್ಲವಂತೆ, ಆದ್ರೆ ಅವಾರ್ಡ್‌ ಬೇಕು; ನಯನಾತಾರಾ ವಿರುದ್ಧ ಆಕ್ರೋಶ!

ಕನ್ನಡದ ಹೆಸರಾಂತ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಆ್ಯಕ್ಷನ್‌ ಕಟ್‌ ಹೇಳುತ್ತಿರುವುದು ಒಂದೆಡೆಯಾದರೆ, ಮತ್ತೊಂದು ರಾಕ್‌ಲೈನ್‌ ಪ್ರೊಡಕ್ಷನ್‌ ಹೌಸ್‌ ನಿರ್ಮಾಣದ ಚಿತ್ರ ಎನ್ನುವುದು ಕೂಡ ಅದರ ಕುತೂಹಲದ ಅಂಶ. ಅದರ ಜತೆಗೆ ದರ್ಶನ್‌ ಜತೆಗೆ ಬಹು ಜನಪ್ರಿಯ ತಾರೆಯರೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವೆಲ್ಲ ಕಾರಣಕ್ಕೆ ಈ ಸಿನಿಮಾ ಚಿತ್ರೀಕಣದ ಹಂತದಲ್ಲಿ ಸಾಕಷ್ಟುನಿರೀಕ್ಷೆ ಹುಟ್ಟಿಸುತ್ತಿದೆ. ಬಿ.ಎಲ…. ವೇಣು ಅವರ ಕಾದಂಬರಿ ಆಧರಿತ ಚಿತ್ರವಿದು ಎನ್ನುವುದು ಇನ್ನೂ ವಿಶೇಷ.

"

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?