ಪ್ರಥಮ ಪುರಾಣ; ಇದು ಕುರಿ ಮನೆ ವಿಷ್ಯ ಕಣಣ್ಣ !

By Suvarna News  |  First Published Mar 8, 2020, 3:15 PM IST

ಬಿಗ್ ಬಾಸ್‌ ಸೀಸನ್‌-7 ವಿನ್ನರ್ ಕುರಿ ಪ್ರತಾಪ್ ಮೈಸೂರಿನಲ್ಲಿ ಕಟ್ಟಿಸಿರುವ ಐ‍ಷಾರಾಮಿ ಬಂಗಲೆ ನೆಟ್ಟಿಗರ ಗಮನ ಸೆಳೆದಿದೆ. ಮನೆ ಖರ್ಚಿನ ಬಗ್ಗೆ ಒಂದಷ್ಟು ರೂಮರ್‌ಗಳು ಹರಿದಾಡುತ್ತಿದೆ.  
 


ಕಿರುತೆರೆ ಹಾಗೂ ಬೆಳ್ಳಿತೆರೆ ಪ್ರೇಕ್ಷಕರನ್ನು ಹಾಸ್ಯಮಯವಾಗಿ ಹಲವು ವರ್ಷಗಳ ಕಾಲ ಮನರಂಜಿಸುತ್ತಾ  ಪ್ರೀತಿ ಗಳಿಸಿರುವ ಕುರಿ ಪ್ರತಾಪ್‌ ವರ್ಷಗಳ ಕನಸು ನನಸಾಗಿದೆ.

ಕಿರುತೆರೆ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಕುರಿ ಪ್ರತಾಪ್‌ ಇತ್ತೀಚಿಗೆ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ನಡೆದ ರಿಯಾಲಿಟಿ ಶೋ 'ಬಿಗ್ ಬಾಸ್‌ ಸೀಸನ್‌-7'ರಲ್ಲಿ ಸ್ಪರ್ಧಿಸಿ ಫಸ್ಟ್‌ ರನ್ನರ್‌ ಅಪ್‌ ಆಗಿದ್ದಾರೆ.

Tap to resize

Latest Videos

ರಿಯಾಲಿಟಿ ಶೋನಲ್ಲಿ ನಡೆದ ಟಾಸ್ಕ್‌ ವೊಂದರಲ್ಲಿ ತಮ್ಮ ಕನಸಿನ ಬಗ್ಗೆ ಮನಬಿಚ್ಚಿ ಮಾತನಾಡಿದ ಪ್ರತಾಪ್‌, ನನಗೊಂದು ಮನೆ ಕಟ್ಟಿಸುವ ಆಸೆ ಇದೆ ಎಂದು ಹೇಳಿಕೊಂಡಿದ್ದರು. ಅದರಂತೆ ಬಿಗ್‌ ಬಾಸ್‌ಯಿಂದ ಹೊರ ಬಂದ ನಂತರ ಮನೆ ಕಟ್ಟಿಸಿ ಅದ್ಧೂರಿಯಾಗಿ ಗೃಹ ಪ್ರವೇಶ ಮಾಡಿದ್ದಾರೆ.

ಕುರಿ ಪ್ರತಾಪ್‌ ಫ್ಯಾಮಿಲಿ ಜೊತೆ ಫೋಟೋ ತೆಗೆದು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡ ಒಳ್ಳೆ ಹುಡುಗ ಪ್ರಥಮ್ 'Most important ಕುರಿ ಮನೆಗೆ  50 ಕೋಟಿ ...30 ಕೋಟಿ ಖರ್ಚಾಗಿದೆ ಎಂದೆಲ್ಲಾ ಸುದ್ದಿ ಹರಿದಾಡುತ್ತಿದೆ. ಇವೆಲ್ಲಾ ಸುಳ್ಳು. ಈ ರೀತಿ  wrong ನ್ಯೂಸ್‌ ಹಬ್ಬಿಸಬೇಡಿ' ಎಂದು ಬರೆದುಕೊಂಡಿದ್ದಾರೆ. ಆದರೂ ಮನೆ ಫೋಟೋ ನೋಡಿದ ನೆಟ್ಟಿಗರು ಎಷ್ಟು ಕೋಟಿ ಎಂದು ಅಂದಾಜು ಹಾಕಲು ಶುರು ಮಾಡಿದ್ದಾರೆ.

click me!