
ಬೆಂಗಳೂರು (ಜೂನ್ 23): ನಟ ಕಿಚ್ಚ ಸುದೀಪ್ (Kiccha Sudeep) ಅಭಿನಯದ ಬಹುನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ ಚಿತ್ರದ ಟ್ರೇಲರ್ ( Vikrant Rona Trailer) ಬಿಡುಗಡೆಯಾಗಿದೆ. ಲಹರಿ ಮ್ಯೂಸಿಕ್ ಯೂಟ್ಯೂಬ್ (You Tube) ಪೇಜ್‌ನಲ್ಲಿ ಕನ್ನಡ ಭಾಷೆಯ ಟ್ರೇಲರ್ ಬಿಡುಗಡೆಯಾದ 2 ಗಂಟೆಯಲ್ಲಿಯೇ 1,084,465 ವೀವ್ಸ್ ಪಡೆದುಕೊಂಡಿದೆ.
ಸಂಜೆ 5 ಗಂಟೆಯ ವೇಳೆಗೆ ವಿಕ್ರಾಂತ್ ರೋಣ ಟ್ರೇಲರ್ ಸೋಷಿಯಲ್ ಮೀಡಿಯಾಗಳಲ್ಲಿ (Social Media) ಅಧಿಕೃತವಾಗಿ ಬಿಡುಗಡೆಯಾಗಿತ್ತು. ಇದರ ಬೆನ್ನಲ್ಲಿಯೇ ಸುದೀಪ್ ಹಾಗೂ ವಿಕ್ರಾಂತ್ ರೋಣ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಟ್ರೇಲರ್ ವೀಕ್ಷಿಸಿದ ಅಭಿಮಾನಿಗಳೆಲ್ಲರೂ ಚಿತ್ರವನ್ನು ಯಾವಾಗ ಕಣ್ತುಂಬಿಕೊಳ್ಳೋದು ಎನ್ನುವುದನ್ನು ಕಾಯುತ್ತಿದ್ದಾರೆ. ಜುಲೈ 28 ರಂದು ಚಿತ್ರ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
ಪ್ಯಾನ್ ಇಂಡಿಯಾ, ಪ್ಯಾನ್ ವರ್ಲ್ಡ್ ಚಿತ್ರ ಎನಿಸಿಕೊಂಡಿರುವ ವಿಕ್ರಾಂತ್ ರೋಣ ಒಟ್ಟು 6 ಭಾಷೆಗಳಲ್ಲಿ ಭರ್ಜರಿಯಾಗಿ ಬಿಡುಗಡೆಯಾಗಲಿದೆ. ಇನ್ನು ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಪ್ರಖ್ಯಾತ ಸೆಲೆಬ್ರಿಟಿಗಳು ಟ್ರೇಲರ್ ಅನ್ನು ರಿಲೀಸ್ ಮಾಡಿದ್ದಾರೆ. ಎಲ್ಲೆಲ್ಲೋ ವಿಕ್ರಾಂತ್ ರೋಣ ಚಿತ್ರ ದೊಡ್ಡ ಗಮನಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಕೆಜಿಎಫ್, ಚಾರ್ಲಿ ಚಿತ್ರಗಳು ಪರಭಾಷೆ ಚಿತ್ರರಂಗ ಕನ್ನಡ ಚಿತ್ರರಂಗದ ಕುರಿತಾಗಿ ಮಾತನಾಡುವ ಹಾಗೆ ಮಾಡಿದ್ದವು. ವಿಕ್ರಾಂತ್ ರೋಣ ಚಿತ್ರದ ಟ್ರೇಲರ್ ವೀಕ್ಷಿಸಿದರೆ, ಇನ್ನಷ್ಟು ದಿನಗಳ ಕಾಲ ಕನ್ನಡ ಚಿತ್ರರಂಗದ ಸುದ್ದಿ ದೇಶದ ಸಿನಿಮಾರಂಗದಲ್ಲಿ ಸುದ್ದಿ ಮಾಡುವುದು ಖಂಡಿತ.
ಚಿತ್ರರಂಗದ ಬಹುತೇಕ ತಾರೆಯರು 'ವಿಕ್ರಾಂತ್ ರೋಣ' ವೇದಿಕೆಯಲ್ಲಿ, ಸುದೀಪ್‌ಗೆ ಸಾಥ್
ಸುದೀಪ್ ದ್ವಿಪಾತ್ರದ ಬಗ್ಗೆ ಕುತೂಹಲ: ಟ್ರೇಲರ್ ವೀಕ್ಷಣೆ ಮಾಡಿದ ಎಲ್ಲರಿಗೂ ಇಂಥದ್ದೊಂದು ಪ್ರಶ್ನೆ ಕಾಡುತ್ತಿದೆ. ವಿಕ್ರಾಂತ್ ರೋಣ ಚಿತ್ರದಲ್ಲಿ ಸುದೀಪ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆಯೇ ಎನ್ನುವುದು. ಟ್ರೇಲರ್ ನಲ್ಲಿ ಈಗಾಗಲೇ ಸುದೀಪ್ ಅವರ ಪಾತ್ರದ ಪರಿಚಯ ಮಾಡಿಕೊಡಲಾಗಿದ್ದರೆ, ಕೊನೆಯಲ್ಲಿ ನೀಡಿರುವ ಟ್ವಿಸ್ಟ್ ಇನ್ನಷ್ಟು ಕುತೂಹಲ ಕೆರಳಿಸಿದೆ. ಬಹುಶಃ ಸುದೀಪ್ ಚಿತ್ರದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುಬಹುದು ಎನ್ನುವ ಕುತೂಹಲ ಉಂಟಾಗಿರುವಾಗ, ಇದಕ್ಕೆ ಉತ್ತರ ಇನ್ನು ಕೆಲವೇ ದಿನಗಳಲ್ಲಿ ಸಿಗಲಿದೆ.
ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ಇಂಟರ್‌ನ್ಯಾಷನಲ್ ಸಿನಿಮಾ ವಿಕ್ರಾಂತ್ ರೋಣ: ಇಂದ್ರಜಿತ್ ಲಂಕೇಶ್
ಕನ್ನಡದಲ್ಲಿ ಬುಧವಾರ ಸ್ಯಾಂಡಲ್‌ವಡ್ ನಟ-ನಟಿಯರಿಗಾಗಿ ಟ್ರೇಲರ್ ತೋರಿಸಲಾಗಿತ್ತು. ಗುರುವಾರ ಸಂಜೆ 5 ಗಂಟೆ 2 ನಿಮಿಷಕ್ಕೆ 6 ಭಾಷೆಗಳಲ್ಲಿ ಟ್ರೇಲರ್ ರಿಲೀಸ್ ಆಗಿದೆ. ಹಿಂದಿ ಭಾಷೆಯ ಟ್ರೇಲರ್ ಅನ್ನು ಸಲ್ಮಾನ್ ಖಾನ್, ತಮಿಳು ಭಾಷೆಯಲ್ಲಿ ಖ್ಯಾತ ನಟ ಧನುಷ್, ತೆಲುಗು ಭಾಷೆಯಲ್ಲಿ ಚಿರಂಜೀವಿ ಪುತ್ರ ರಾಮ ಚರಣ್ ತೇಜ ಹಾಗೂ ಮಲಯಾಳಂ ಭಾಷೆಯಲ್ಲಿ ದುಲ್ಕರ್ ಸಲ್ಮಾನ್ ಬಿಡುಗಡೆ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.