
ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಚಿತ್ರದ ಟ್ರೇಲರ್ ಇಂದು (ಜೂ.23) ಸಂಜೆ 5.02ಕ್ಕೆ ಏಳು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಟ್ರೇಲರ್ ರಿಲೀಸ್ ಆಗುವ ಒಂದು ದಿನ ಮೊದಲೇ ಚಿತ್ರದ 3ಡಿ ಟ್ರೇಲರ್‌ನ ಪ್ರೀಮಿಯರ್ ಶೋ ಜೂ.22ರಂದು ನಡೆಯಿತು. ಈ ಟ್ರೇಲರ್ ಬಿಡುಗಡೆ ಮಾಡಿದ ರವಿಚಂದ್ರನ್, ಶಿವರಾಜ್ ಕುಮಾರ್, ರಮೇಶ್ ಅರವಿಂದ್, ರಕ್ಷಿತ್ ಶೆಟ್ಟಿ, ಸೃಜನ್ ಲೋಕೇಶ್, ರಿಷಬ್ ಶೆಟ್ಟಿ, ಧನಂಜಯ, ರಾಜ್ ಬಿ ಶೆಟ್ಟಿಅವರು ಸುದೀಪ್‌ರನ್ನು ಕೊಂಡಾಡಿದರು.
ವಿಕ್ರಾಂತ್ ರೋಣ ಸೆಟ್‌ಗೆ ಬಂದಾಗಲೇ ವೋವ್ ಅನ್ನಿಸಿತ್ತು. ಕನ್ನಡಕ್ಕೆ ನನ್ನನ್ನು ನೀವೆಲ್ಲಾ ಬರಮಾಡಿಕೊಂಡಿದ್ದು ನನಗೆ ಸಂದ ಗೌರವ. ಸುದೀಪ್ ತಾವು ಒಳ್ಳೆಯ ಡಾನ್ಸರ್ ಅಲ್ಲ ಎನ್ನುತ್ತಾರೆ. ಆದರೆ ಅವರು ಒಳ್ಳೆಯ ಡಾನ್ಸರ್.
- ಜಾಕ್ವೆಲಿನ್ ಫೆರ್ನಾಂಡಿಸ್
ಚಿತ್ರರಂಗದ ಬಹುತೇಕ ಸ್ಟಾರ್‌ಗಳನ್ನು ಸುದೀಪ್ ಒಂದು ವೇದಿಕೆಯಲ್ಲಿ ಒಗ್ಗೂಡಿಸಿದ್ದು ಮೆಚ್ಚುಗೆಗೆ ಪಾತ್ರವಾಯಿತು. ಬುಜ್‌ರ್ ಖಲೀಫಾದಲ್ಲಿ ಚಿತ್ರದ ತುಣುಕು ಪ್ರದರ್ಶನದಿಂದ ಆರಂಭವಾದ ಚಿತ್ರದ ಪಯಣವನ್ನು ನೆನೆಸಿಕೊಂಡ ಚಿತ್ರತಂಡ ಗಡಂಗ್ ರಕ್ಕಮ್ಮ ಮತ್ತು ಟ್ರೇಲರ್‌ನ 3ಡಿ ಪ್ರದರ್ಶನ ಆಯೋಜಿಸಿತ್ತು. ಟ್ರೇಲರ್ ನೋಡಿದ ಪ್ರತಿಯೊಬ್ಬರು ಟ್ರೇಲರ್ ಮೆಚ್ಚಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಸುದೀಪ್, ‘ನನ್ನನ್ನು ಒಬ್ಬರು ಜಡ್ಜ್ ಮಾಡುತ್ತಾರೆ. ನನ್ನ ಸಿನಿಮಾ ನೋಡಿದರೂ ಪ್ರತಿಕ್ರಿಯಿಸಲ್ಲ. ಒಮ್ಮೆ ಅವರಿಗೆ ನನ್ನ ಸಿನಿಮಾದ ಕತೆ ಹೇಳೋಣ ಅಂತ ಹೋಗಿದ್ದೆ. ಆದರೆ ಅವರೇ ನನ್ನನ್ನು ಒಂದು ಕತೆ ಕೇಳುವಂತೆ ಮಾಡಿದರು. ಅವರಿಲ್ಲದೆ ಈ ಸಿನಿಮಾದ ಕತೆ ನಾನು ಕೇಳುತ್ತಿದ್ದೆನೋ ಇಲ್ಲವೋ. ಕತೆ ಕೇಳುವಂತೆ ಮಾಡಿ ಈ ಸಿನಿಮಾಗೆ ಕಾರಣಕರ್ತಳಾದ ನನ್ನ ಪತ್ನಿ ಪ್ರಿಯಾಗೆ ಧನ್ಯವಾದ. ನನ್ನ ಸ್ನೇಹಿತ, ಸಹೋದರ ಜಾಕ್ ಮಂಜುನಾಥ್ ಇಲ್ಲದಿದ್ದರೆ ಈ ಸಿನಿಮಾ ಆಗುತ್ತಲೇ ಇರಲಿಲ್ಲ. ಅವರು ಈ ಚಿತ್ರಕ್ಕೆ ಎಲ್ಲವನ್ನೂ ಕೊಟ್ಟಿದ್ದಾರೆ. ಈ ಚಿತ್ರಕ್ಕೆ ಪ್ರೀತಿ ತೋರಿಸುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದ’ ಎಂದರು.
Vikrant Rona: ಸುದೀಪ್ ಅವರ ಟ್ರೇಲರ್ ಮೊದಲು ನೋಡೋ ಅವಕಾಶ ಸಿಕ್ಕಿರೋದು ಪುಣ್ಯ: ರಾಜ್ ಬಿ ಶೆಟ್ಟಿ
ಪ್ರೇಮಲೋಕ ಸಿನಿಮಾ ಬಿಡುಗಡೆ ಆದಾಗ ನನ್ನಪ್ಪ ನನ್ನ ಹೆಗಲ ಮೇಲೆ ಕಣ್ಣೀರು ಹಾಕಿದ್ದು ಇನ್ನೂ ನೆನಪಿದೆ. ವಿಕ್ರಾಂತ್ ರೋಣ ಬಿಡುಗಡೆ ದಿನ ನನ್ನ ಹಿರಿಯ ಮಗ ಸುದೀಪ್‌ರಿಂದ ನನಗೂ ಆ ತಂದೆತನದ ಭಾಗ್ಯ ಸಿಗುತ್ತದೆ ಎಂದು ಕಾಯುತ್ತಿದ್ದೇನೆ.
- ರವಿಚಂದ್ರನ್
ಸಿನಿಮಾದ ನಿರ್ಮಾಪಕ ಜಾಕ್ ಮಂಜುನಾಥ್ ಸಿನಿಮಾದಲ್ಲಿ ದುಡಿದ ಪ್ರತಿಯೊಬ್ಬರನ್ನೂ ಸ್ಮರಿಸಿಕೊಂಡರು. ಶಿವರಾಜ್ ಕುಮಾರ್, ‘ಸುದೀಪ್ ಅಂದ್ರೆ ಹೃದಯಕ್ಕೆ ಹತ್ತಿರ’ ಎಂದರು. ರಮೇಶ್ ಅರವಿಂದ್, ‘ನಾನು ಈ ಸಿನಿಮಾ ನೋಡಿದ್ದೇನೆ. ಸಿನೆಮಾ ನೋಡಿ ಬಂದ ಮೇಲೆ ಮೂರು ದಿನ ವಿಷುವಲ್ ತಲೆಯಲ್ಲಿ ಇತ್ತು. ಸುದೀಪ್ ಬೇರೆ ಲೆವೆಲ್‌ಗೆ ಈ ಸಿನಿಮಾ ತೆಗೆದುಕೊಂಡು ಹೋಗಿದ್ದಾರೆ’ ಎಂದರು.
Vikrant Rona: ರಕ್ಷಿತ್ ಶೆಟ್ಟಿ ಆಡಿದ ಮಾತಿಗೆ ವೇದಿಕೆ ಮೇಲೆ ಬಂದು ಅಪ್ಪಿಕೊಂಡ ಸುದೀಪ್
ಯಾವತ್ತೂ ನಾವು ನಮ್ಮ ಹೀರೋನನ್ನು ಭೇಟಿಯಾಗಬಾರದು. ಭೇಟಿಯಾದಾಗ ನಾವು ಅವರ ಮೇಲಿಟ್ಟಕಲ್ಪನೆಯೇ ಬದಲಾಗುತ್ತದೆ. ಹಾಗಾಗಿ ಹೀರೋ ಎಂಬ ಪರಿಕಲ್ಪನೆ ಇಟ್ಟುಕೊಂಡು ನಾನು ಚಿತ್ರರಂಗಕ್ಕೆ ಬರಲಿಲ್ಲ. ಆದರೆ ಸುದೀಪ್‌ರನ್ನು ಭೇಟಿಯಾದ ಮೇಲೆ ಅವರು ನನ್ನ ಹೀರೋ ಅನ್ನಿಸಿದರು. ಭಾರತದ ಶ್ರೇಷ್ಠ 5 ಮಂದಿ ಕಲಾವಿದರಲ್ಲಿ ಸುದೀಪ್ ಇದ್ದಾರೆ.
- ರಕ್ಷಿತ್ ಶೆಟ್ಟಿ
ಧನಂಜಯ್, ಯೋಗರಾಜ ಭಟ್, ರಿಷಬ್ ಶೆಟ್ಟಿ, ಸೃಜನ್ ಲೋಕೇಶ್, ಅರ್ಜುನ್ ಜನ್ಯಾ, ರಾಜ್ ಬಿ ಶೆಟ್ಟಿ, ನಂದಕಿಶೋರ್, ಝೀ ಕನ್ನಡ ಮುಖ್ಯಸ್ಥ ರಾಘವೇಂದ್ರ ಹುಣಸೂರು, ಇಂದ್ರಜಿತ್ ಲಂಕೇಶ್ ಟ್ರೇಲರ್ ಮೆಚ್ಚಿಕೊಂಡರು. ಚಿತ್ರ ನಿರ್ದೇಶಕ ಅನೂಪ್ ಭಂಡಾರಿ, ಸಹ ನಿರ್ಮಾಪಕ ಅಲಂಕಾರ್ ಪಾಂಡ್ಯನ್, ಕಾಸ್ಟೂ್ಯಮ್ ಡಿಸೈನರ್ ನೀತಾ ಅನೂಪ್ ಭಂಡಾರಿ, ನಾಯಕ ನಟಿ ನೀತಾ ಅಶೋಕ್, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಇದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.