ನಟಿ ಶಾಲಿನಿ ಪಾಂಡೆ ಚಿತ್ರೀಕರಣದ ವೇಳೆ ನಿರ್ದೇಶಕನಿಂದ ಎದುರಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ತಕ್ಷಣವೇ ರಿಯಾಕ್ಟ್ ಮಾಡಿ ನಿರ್ದೇಶಕನಿಗೆ ತಕ್ಕ ಪಾಠ ಕಲಿಸಿದ ಬಗ್ಗೆ ಮಾತನಾಡಿದ್ದಾರೆ.
ಸಿನಿಮಾ ಇಂಡಸ್ಟ್ರಿ ಯಾವುದೇ ಆಗಿರಲಿ ಹೆಣ್ಣುಮಕ್ಕಳಿಗೆ ಒಂದಲ್ಲ ಒಂದು ರೀತಿಯಲ್ಲಿ ಮರೆಯಲಾಗದ ಕಹಿ ಘಟನೆಗಳನ್ನು ಎದುರಿಸಿರುತ್ತಾರೆ.ಕಾಸ್ಟಿಂಗ್ ಕೌಸ್, ಮೀ ಟೂ ಪ್ರಕರಣ, ಹೇಮಾ ಕಮಿಟಿ ಏನೇ ಬಂದಲಿ ಬಿಡಲಿ ಕೆಲವೊಂದು ಸಮಸ್ಯೆಗಳಿಗೆ ಪರಿಹಾರ ಇರುವುದಿಲ್ಲ. ಸಮಸ್ಯೆ ಸರಿ ಹೋಗುತ್ತೋ ಶಿಕ್ಷೆ ಸಿಗುತ್ತೋ ಇಲ್ವೋ ಅನ್ನೋ ಗೊಂದಲದಲ್ಲಿ ಇರುವ ಬದಲು ಆ ಕ್ಷಣವೇ ರಿಯಾಕ್ಟ್ ಮಾಡುವುದು ಉತ್ತಮ. ಇದಕ್ಕೆ ಉಹಾರಣೆ ನಟಿ ಶಾಲಿನಿ ಪಾಂಡೆ ಜೀವನದಲ್ಲಿ ನಡೆದ ಘಟನೆ.
ಹೌದು! ಅರ್ಜುನ್ ರೆಡ್ಡಿ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಶಾಲಿನಿ ಪಾಂಡೆ ಮರೆಯಲಾಗದ ಘಟನೆ ಹಂಚಿಕೊಂಡಿದ್ದಾರೆ. ಶಾಲಿನಿ ತಮ್ಮ ಸಿನಿಮಾ ಚಿತ್ರೀಕರಣ ಮುಗಿಸಿ ಬಟ್ಟೆ ಬದಲಾಯಿಸಿಕೊಳ್ಳಲು ನೀಡಿದ್ದ ವ್ಯಾನಿಟಿ ವಾನ್‌ಗೆ ಎಂಟ್ರಿ ಕೊಡುತ್ತಾರೆ. ಅರ್ಧ ಬಟ್ಟೆ ಬದಲಾಯಿಸುತ್ತಿದ್ದಂತೆ ಇದ್ದಕ್ಕಿದ್ದಂತೆ ಬಾಗಿಲು ತೆಗೆದುಕೊಂಡು ನಿರ್ದೇಶಕರು ಪ್ರವೇಶಿಸುತ್ತಾರೆ. ಭಯ ಪಡದೆ ಶಾಲಿನಿ ಸುಮ್ಮನಾಗಲಿಲ್ಲ ಬದಲಿಗೆ ತಕ್ಷಣವೇ ಜೋರಾಗಿ ಕೂಗಿದ್ದಾರೆ. ಬಟ್ಟೆ ಬದಲಾಯಿಸಿಕೊಂಡು ಬಂದು ನಿರ್ದೇಶಕರ ಮೇಲೆ ಕೂಗಾಗಿದ್ದಾರೆ. ಈ ಘಟನೆ ನಡೆದಾಗ ಪಕ್ಕದಲ್ಲಿ ಇದ್ದವರು ಗಾಬರಿ ಆಗಿದ್ದಾರೆ ಮುಂದೆಕ್ಕೆ ಸಿನಿಮಾ ಮಾಡ್ಬೇಕು ಜಗಳ ಮಾಡಿಕೊಳ್ಳಬೇಡ ಎಂದಿದ್ದಾರೆ.
ಅಜ್ಜಿ ಕೊಟ್ಟ ಸೀರೆ ಹಾಕ್ಬೇಕು ಅಂತ ರಾಜ್ಯ ಪ್ರಶಸ್ತಿಗೆ ಆಸೆ ಪಡ್ತಿದ್ದೀನಿ, ಮದುವೆ ದೂರದ ಮಾತು: ಸಾಯಿ ಪಲ್ಲವಿ
'ನಾನು ಒಂದು ನಿಮಿಷವೂ ಯೋಚನೆ ಮಾಡದೆ ರಿಯಾಕ್ಟ್ ಮಾಡಿದ್ದೀನಿ. ನಮ್ಮ ಸುತ್ತನಾವೇ ಬೌಂಡರಿಗಳನ್ನು ಕ್ರಿಯೇಟ್ ಮಾಡಿಕೊಳ್ಳಬೇಕು. ಇಷ್ಟವಾಗಲಿಲ್ಲ ಅಂದ್ರೆ ನೇರವಾಗಿ ಹೇಳಿ ಸರಿ ಮಾಡಿಕೊಳ್ಳಬೇಕು. ಮಾಡಿದ್ದು ಒಂದೇ ಸಿನಿಮಾ ಹಿಟ್ ಆಗಿರುವುದು ಒಂದೇ ಸಿನಿಮಾ ಯಾಕೆ ಜೋರಾಗಿ ಕೂಗಾಡಬೇಕು ಎಂದು ಪ್ರಶ್ನೆ ಮಾಡಿದವರಿಗೂ ನಾನು ಉತ್ತರ ಕೊಟ್ಟಿದ್ದೀನಿ. ಘಟನೆ ನಡೆದ ಮೇಲೆ ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡಬೇಕು ಯಾವ ರೀತಿಯಲ್ಲಿ ಬುದ್ಧಿ ಕಲಿಸಿದರೆ ಬೆಸ್ಟ್ ಎಂದು ಅರ್ಥ ಮಾಡಿಕೊಂಡೆ' ಎಂದು ಶಾಲಿನಿ ಮಾತನಾಡಿದ್ದಾರೆ.
ಇದ್ದಕ್ಕಿದ್ದಂತೆ ಶೂಟಿಂಗ್ ನಿಲ್ಲಿಸಿಬಿಟ್ಟ ರವಿಚಂದ್ರನ್; ಕೂದಲು ಮುಖ ಮುಚ್ಚುತ್ತಿತ್ತು ಅಂತ ಶಕುನಿ ಬಿಟ್ರಾ?