ಶಿವರಾಜ್ ಕುಮಾರ್ ಅಭಿನಯದ ಆ್ಯಕ್ಷನ್, ಥ್ರಿಲ್ಲರ್ ಚಿತ್ರ ಘೋಸ್ಟ್ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಇದರಿಂದ ಪಂಚಿಂಗ್ ಡೈಲಾಗ್ಸ್ಗೆ ಫ್ಯಾನ್ಸ್ ಫಿದಾ ಆಗಿದ್ದು, ಚಿತ್ರ ಬಿಡುಗಡೆಗೆ ಕಾಯುತ್ತಿದ್ದಾರೆ.
ಶಿವರಾಜ್ ಕುಮಾರ್ ನಟನೆಯ ಬಹುನಿರೀಕ್ಷಿತ ಘೋಸ್ಟ್ ಸಿನಿಮಾದ ಟ್ರೇಲರ್ ಇಂದು ಬಿಡುಗಡೆಯಾಗಿದೆ. ಶಿವರಾಜ್ಕುಮಾರ್ ಅವರ ಯಂಗ್ ಮತ್ತು ಈಗಿನ ಲುಕ್ ಫ್ಯಾನ್ಸ್ಗಳನ್ನು ಮರುಳು ಮಾಡಿದೆ. ಟ್ರೇಲರ್ನಲ್ಲಿ ಶಿವಣ್ಣನವರ ಸಖತ್ ಲುಕ್, ಥ್ರಿಲ್ಲಿಂಗ್ ಆ್ಯಕ್ಷನ್ಸ್ ಹೈಲೈಟ್ ಆಗಿದ್ದು, ಪಂಚಿಂಗ್ ಡೈಲಾಗ್ ಇದೆ. ಇವರ ಗ್ಯಾಂಗ್‌ಸ್ಟರ್ ಲುಕ್, ಖಡಕ್ ಡೈಲಾಗ್‌ಗಳು ಹೈಲೈಟ್ ಆಗಿವೆ. ಸಾಮ್ರಾಜ್ಯ ಕಟ್ಟಿದವರನ್ನು ಇತಿಹಾಸ ನೆನಪಿಡಲ್ಲ. ಸಾಮ್ರಾಜ್ಯ ಧ್ವಂಸ ಮಾಡುವ ನನ್ನಂಥವರನ್ನು ಸಮಾಜ, ಇತಿಹಾಸ ಎಂದೂ ಮರೆತಿಲ್ಲ ಎನ್ನುವ ಮೂಲಕ ಶುರುವಾಗುವ ಟ್ರೇಲರ್ನಲ್ಲಿ ಶಿವರಾಜ್ ಕುಮಾರ್ ಅವರು ದೆ ಕಾಲ್ ಮಿ ಘೋಷ್ಟ್ ಎನ್ನುತ್ತಾರೆ. ಕನ್ನಡ, ತೆಲುಗು, ತಮಿಳಿನಲ್ಲಿ ಘೋಸ್ಟ್ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ತೆಲುಗು ಟ್ರೈಲರ್ ಅನ್ನು ರಾಜಮೌಳಿ ಬಿಡುಗಡೆ ಮಾಡಿದ್ದಾರೆ. ಕೆಲವೇ ದಿನಗಳ ಹಿಂದೆ ‘ಘೋಸ್ಟ್’ ಸಿನಿಮಾದ ಒರಿಜಿನಲ್ ಗ್ಯಾಂಗ್‌ಸ್ಟರ್ ಮ್ಯೂಸಿಕ್ ರಿಲೀಸ್ ಆಗಿತ್ತು. ಆ ಮೂಲಕ ಸಿನಿಮಾ ಮೇಲಿನ ಕ್ರೇಜ್ ಹೆಚ್ಚಿಸಲಾಗಿತ್ತು. ಈಗ ಟ್ರೇಲರ್ ಅಬ್ಬರಿಸುತ್ತಿದೆ. ಶಿವರಾಜ್ಕುಮಾರ್ ಅವರ ಗೆಟಪ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.
ಟ್ರೈಲರ್ ಆರಂಭದಲ್ಲಿಯೇ ಹೆಡ್‌ಫೋನ್ ಹಾಕಿ ನೋಡಿ ಎಂಬ ಸಂದೇಶ ಬರುತ್ತದೆ. ಇದರಲ್ಲಿ ಶಿವರಾಜ್ ಕುಮಾರ್ ಅವರ ಪಂಚಿಂಗ್ ಡೈಲಾಗ್ ಇದೆ. ಅದನೇನಂದರೆ, ಯುದ್ಧ, ಮಾನವ ಲೋಕದ ಮಾಗದ ಕರಗ, ಇಂತಹ ಯುದ್ಧಗಳಿಂದ, ಸಾಮ್ರಾಜ್ಯಗಳಿಂದ ಕಟ್ಟಿದ್ದಕ್ಕಿಂತ ಅಧಃಪತನವೇ ಜಾಸ್ತಿ. ಸಾಮ್ರಾಜ್ಯ ಕಟ್ಟಿರೋವರನ್ನ ಇತಿಹಾಸ ಮರೆತಿರಬಹುದು. ಆದರೆ ಧ್ವಂಸ ಮಾಡೋನ ನನ್ನಂಥವರನ್ನ ಎಂದಿಗೂ ಮರೆತಿಲ್ಲ ಎನ್ನುತ್ತಾರೆ. ಶಿವಣ್ಣನವರ ಎಂಟ್ರಿ ಗನ್ ಹಿಡಿಯುವ ಮೂಲಕ ಆರಂಭವಾಗುತ್ತದೆ. ಕೈದಿಗಳೆಲ್ಲ ತಲೆಬಗ್ಗಿಸಿ ಕುಳಿತ ದೃಶ್ಯವಿದೆ. ಅವರ ಮುಂದೆ ಶಿವಣ್ಣ ಡಾನ್ ಲುಕ್ ನೀಡಿದ್ದಾರೆ. ಫೈಟಿಂಗ್‌ನಿಂದ ಉರಿದ ಬೆಂಕಿಯಲ್ಲೇ ಸಿಗರೇಟ್ ಸೇದೋ ದೃಶ್ಯವಿದೆ.
ಮನೇಲಿದ್ದ ತಟ್ಟೆ, ಚಂಬು, ಬಟ್ಲು ಕದೀತಿದ್ದೆ, 2ನೇ ಕ್ಲಾಸ್ನಲ್ಲೇ ಪೊಲೀಸ್ ಠಾಣೆಗೂ ಹೋಗಿದ್ದೆ ಎಂದ ಸರ್‌ದೇಶಪಾಂಡೆ
ಎರಡು ಡಿಫರೆಂಟ್ ಗೆಟಪ್ನಲ್ಲಿ ಶಿವಣ್ಣ ಕಾಣಿಸಿಕೊಂಡಿರುವ ಈ ಟ್ರೇಲರ್ ನೋಡಿ ಅಭಿಮಾನಿಗಳ ನಿರೀಕ್ಷೆ ಡಬಲ್ ಆಗಿದೆ. ಹಿನ್ನೆಲೆ ಸಂಗೀತ ಕೂಡ ಗಮನ ಸೆಳೆಯುವಂತಿದೆ. ಅಕ್ಟೊಬರ್ 19 ರಂದು ಎಲ್ಲಡೆ ರಿಲೀಸ್ ಆಗ್ತಿರೋ ಈ ಚಿತ್ರ ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಈಗ ಸಿನಿಮಾ ಪ್ರಚಾರ ಕೂಡ ಜೋರಾಗಿಯೇ ಇದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿ ಈ ಸಿನಿಮಾ ಬಿಡುಗಡೆ ಆಗಲಿದೆ. ಭರ್ಜರಿ ಆ್ಯಕ್ಷನ್ ದೃಶ್ಯಗಳು, ಖಡಕ್ ಡೈಲಾಗ್ಗಳಿಂದಲೇ ತುಂಬಿರುವ ‘ಘೋಸ್ಟ್’ ಟ್ರೇಲರ್ (Ghost Movie Trailer) ಈಗ ವೈರಲ್ ಆಗುತ್ತಿದೆ.
ಇತಿಹಾಸ ಬರೆಯೋದೆ ತಾಕತ್ತು ಇರೋ ಮನುಷ್ಯನ ಬಗ್ಗೆ, ಸಲಾಂ ಹೊಡೆಯೋನ ಬಗ್ಗೆ ಒಂದೂ ಸಾಲು ಬರೆಯೋದಿಲ್ಲ. ಸಾಮಾನ್ಯವಾಗಿ ನಾನು ಯಾರ ತಂಟೆಗೂ ಹೋಗೋದಿಲ್ಲ. ಹಾಂ, ಸೋಲು ತಿನ್ನೋ ಭಯಕ್ಕಲ್ಲ, ನಾನು ಹೋದ್ರೆ ಯುದ್ಧ ಭೂಮಿ ರುದ್ರಭೂಮಿ ಆಗುತ್ತೆ ಎನ್ನುವ ಇನ್ನೊಂದು ಪಂಚಿಂಗ್ ಡೈಲಾಗ್ ಕೂಡ ಇದೆ. ಚಿತ್ರದಲ್ಲಿ ಬಾಲಿವುಡ್ ನಟ ಅನುಪಮ್ ಖೇರ್ ಅವರೂ ನಟಿಸಿದ್ದಾರೆ. ಸ್ಲೋ ಮೋಷನ್ನಲ್ಲಿ ಬಾಲಿವುಡ್ ನಟ ಅನುಪಮ್ ಖೇರ್ ಹಾಗೂ ಶಿವರಾಜ್ಕುಮಾರ್ ಅವರು ನಡೆದುಕೊಂಡು ಬರುವ ದೃಶ್ಯ ಸಖತ್ ಆಗಿ ಮೂಡಿಬಂದಿದೆ. ಈ ಒಂದು ದೃಶ್ಯಕ್ಕೆ ಬ್ಯಾಗ್ರೌಂಡ್ ಮ್ಯೂಸಿಕ್ ಕೂಡಾ ಕೊಟ್ಟಿದ್ದು ಶಿವರಾಜ್ಕುಮಾರ್ ಅವರು ಭರ್ಜರಿಯಾಗಿ ಹೈಲೈಟ್ ಆಗಿದ್ದಾರೆ.
ಹಾಲಿವುಡ್ನಲ್ಲಿ ಹಲ್ಚಲ್ ಸೃಷ್ಟಿಸಲಿದ್ದಾರೆ 'ಮೋದಿ'! ಶುರುವಾಯ್ತು ಶೂಟಿಂಗ್: ಏನಿದರ ಕಥೆ?