ಮೈಸೂರು ಟೋಲ್‌ ಬಳಿ 'ರಾಮಚಾರಿ' ನಾರಾಯಣಾಚಾರ್‌ಗೆ ಕಿರಿಕ್; Fast tagನಲ್ಲಿ ಮೋಸ?

Published : Sep 29, 2023, 04:06 PM ISTUpdated : Sep 29, 2023, 04:25 PM IST
ಮೈಸೂರು ಟೋಲ್‌ ಬಳಿ 'ರಾಮಚಾರಿ' ನಾರಾಯಣಾಚಾರ್‌ಗೆ ಕಿರಿಕ್; Fast tagನಲ್ಲಿ ಮೋಸ?

ಸಾರಾಂಶ

ಫಾಸ್ಟ್‌ ಟ್ಯಾಗ್ ಇದ್ದರೂ ಟೋಲ್‌ ಬಳಿ ಬಿಗ್ ಕಿರಿಕ್. ನಾರಾಯಣಾಚಾರ್‌ಗೆ ಯಾಕೆ ಮೋಸ ಆಗುತ್ತಿದೆ ಎಂದು ಬೇಸರ ಮಾಡಿಕೊಂಡ ನೆಟ್ಟಿಗರು...  

ಕನ್ನಡ ಚಿತ್ರರಂಗದ ಹೆಸರಾಂತ ನಟ ಶಂಕರ್ ಅಶ್ವತ್ಥ್ ನಾರಾಯಣಾಚಾರ್ ಆಗಿ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ರಾಮಾಚಾರಿ ಸೀರಿಯಲ್ ಮೂಲಕ ಕನ್ನಡ ಕಿರುತೆರೆ ವೀಕ್ಷಕರಿಗೆ ಹತ್ತಿರವಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ಶಂಕರ್ ಸಮಾಜದಲ್ಲಿ ನಡೆಯುತ್ತಿರುವ ಅದೆಷ್ಟೋ ವಿಚಾರಗಳನ್ನು ಜನರ ಜೊತೆ ಹಂಚಿಕೊಳ್ಳುತ್ತಾರೆ. ಹೀಗೆ ಮೈಸೂರಿನಿಂದ ನಂಜನಗೂಡು ಕಡೆ ಪ್ರಯಾಣ ಮಾಡುವಾಗ ನಡೆದ ಘಟನೆಯನ್ನು ಜನರ ಜೊತೆ ಹಂಚಿಕೊಂಡಿದ್ದಾರೆ. 

'ನನಗಾದ ಅನುಭವವನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿರುವೆ. ನಾನು ಮೈಸೂರಿನಿಂದ ನಂಜನಗೂಡು ಕಡೆ ಪ್ರಯಾಣ ಮಾಡುವಾಗ ಒಂದು ಟೋಲ್ ಸಿಗುತ್ತದೆ ಆಗ ನಾನು ಫಾಸ್ಟ್ ಟ್ಯಾಗ್ ಟೋಲ್‌ನಲ್ಲಿ ಪಾಸ್ ಅದೆ ಕ್ಲೀಯರ್ ಆಯ್ತು. ಅಲ್ಲಿಂದ ಮೂರು ಕಿಲೋ. ಮುಂದೆ ಬಂದ ಮೇಲೆ 30 ರೂಪಾಯಿ ಕಟ್ ಆಗಿದೆ ಅಂತ ಮೆಸೇಜ್ ಬಂದಿದೆ. ಮತ್ತೆ ನಂಜನಗೂಡಿನಿಂದ ಮೈಸೂರು ಕಡೆ ಬರಬೇಕಾದರೆ ಅದೇ ಟೋಲ್ ಸಿಕ್ಕಿತ್ತು ಅದೇ ಟೋಲ್‌ನಲ್ಲಿ ಬ್ಲಾಕ್‌ಲಿಸ್ಟ್‌ ಅಂತ ತೋರಿಸುತ್ತಿದೆ. ಅಲ್ಲಿದ್ದ ಹುಡುಗ ನಿಲ್ಲಿಸಿ ಸರ್ ಕಾರು ಬ್ಲಾಕ್‌ ಲಿಸ್ಟ್ ಅಂತ ತೋರಿಸುತ್ತಿದೆ ನೀವು ದುಡ್ಡು ಕೊಡಬೇಕು ಎಂದು ಹೇಳಿದೆ' ಎಂದು ಘಟನೆ ಬಗ್ಗೆ ಶಂಕರ್ ಮಾತನಾಡಿದ್ದಾರೆ.

ಸ್ವಾಮಿ!! ದುಡ್ದಿಲ್ಲ ಅಂದ್ರೆ ಜೀವನ ನಡೆಯಲ್ಲ; ನಾನು ಶ್ರೀಮಂತನಲ್ಲ ಎಂದ 'ರಾಮಚಾರಿ' ನಾರಾಯಣಾಚಾರ್!

'ಬೆಳಗ್ಗೆ ಈ ದಾರಿಯಲ್ಲಿ ಹೋಗಿದ್ದೀನಿ ಫಾಸ್ಟ್ ಟ್ಯಾಗ್‌ನಲ್ಲಿ ದುಡ್ಡಿದೆ ಆಕ್ಟಿವ್ ಅಗಿದೆ ನೋಡಿ ಅಲ್ಲಿ ಯಾರನ್ನಾದರೂ ವಿಚಾರಿಸು ಎಂದು ಹೇಳಿದೆ. ಬ್ಲಾಕ್ ಲಿಸ್ಟ್‌ನಲ್ಲಿ ಇಲ್ಲ ಎಂದು ಪದೇ ಪದೇ ಹೇಳುತ್ತಿದ್ದ ಎಂದು ನಾನು ಚೋರು ಮಾಡಿದಕ್ಕೆ ಮತ್ತೊಮ್ಮೆ ಸ್ಕ್ಯಾನ್ ಮಾಡಿ ಸರಿಯಾಗಿದೆ ಕ್ಲಿಯರ್ ಇದೆ ಎಂದು ಹೇಳಿದ. ಅಕಸ್ಮಾತ ನಾನು ಜೋರು ಮಾಡದೇ ಹೋಗಿದ್ರೆ 30 ರೂಪಾಯಿ ಜಾಗದಲ್ಲಿ 60 ರೂಪಾಯಿ ಕೊಡಬೇಕಿತ್ತು. ಇದೇ ರೀತಿ ಬೇಕಾದಷ್ಟು ಟೋಲ್‌ನಲ್ಲಿ ಈ ರೀತಿ ಆಗುತ್ತದೆ. ಇದ್ದಕ್ಕಿಂದತ ಬ್ಲಾಕ್ ಲಿಸ್ಟ್‌ ಯಾಕೆ ತೋರಿಸುತ್ತದೆ ಒಮ್ಮೆ ಟೋಲ್ ಕಟ್ ಆಗುತ್ತದೆ ಮತ್ತೊಮ್ಮೆ ಸರಿಯಾಗಿಲ್ಲ ಎನ್ನುತ್ತಾರೆ ಏನಿದು ಅಂತ ಯೋಚನೆ ಮಾಡಿದೆ. ಟೋಲ್‌ನಲ್ಲಿ ಈ ರೀತಿ ದುಡ್ಡು ವಸೂಲಿ ಮಾಡುವುದು ಅಧಿಕಾರಿಗಳಿಗೆ ಗೊತ್ತಿದ್ಯಾ? ಅವರ ಗಮನಕ್ಕೆ ಬಾರದೆ ಹೀಗೆ ಮಾಡುತ್ತಿದ್ದಾರಾ? ಇಲ್ಲ ಹಣ ಮಾಡಲು ಬ್ಲಾಕ್‌ ಲಿಸ್ಟ್‌ ಕ್ರಿಯೇಟ್ ಮಾಡುತ್ತಿದ್ದಾರಾ? ಎಲ್ಲವೂ ದೊಡ್ಡ ಪ್ರಶ್ನೆಯಾಗಿದೆ ಯಾವುದಕ್ಕೂ ಉತ್ತರವಿಲ್ಲ. ಜನರೇ ನೀವೇ ಹೇಳಬೇಕು' ಎಂದು ಶಂಕರ್ ಹೇಳಿದ್ದಾರೆ. 

ಲಾಭ ಬರುತ್ತಿರುವುದಕ್ಕೆ ಟಿವಿಯಲ್ಲಿ ಸತ್ಯ ಹರಿಶ್ಚಂದ್ರ, ಶ್ರೀ ಮಂಜುನಾಥ ಸಿನಿಮಾ ಹಾಕುತ್ತಿರುವುದು: ಶಂಕರ್ ಅಶ್ವತ್ಥ್

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

75ನೇ ವಸಂತಕ್ಕೆ ಕಾಲಿಟ್ಟ ನಟಿ ಗಿರಿಜಾ ಲೋಕೇಶ್, ಮನೆಯಲ್ಲಿ ಪೂಜೆ ಸಂಭ್ರಮ
Aditi Prabhudeva Birthday: ಅಮ್ಮನಂತೆಯೇ ಪುಟಾಣಿಯ ವರ್ಕ್​ಔಟ್​- ಕ್ಯೂಟ್​ ವಿಡಿಯೋ ವೈರಲ್​