ಸ್ಯಾಂಡಲ್‌ವುಡ್ ನಟಿ ಜ್ಯೋತಿ ರೈ ಗುಟ್ಟಾಗಿ ಇನ್ನೊಂದ್ ಮದ್ವೆಯಾದ್ರಾ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಕಾರಣ ಅವರ ವೈರಲ್ ಫೋಟೋಗಳು!
ಕೆಲ ದಿನಗಳ ಹಿಂದಷ್ಟೇ ಹಾಟ್ ಫೋಟೋಗಳನ್ನು ಶೇರ್ ಮಾಡಿಕೊಂಡು ಪಡ್ಡೆ ಹುಡುಗರ ನಿದ್ದೆ ಕದ್ದಿದ್ದ ಸ್ಯಾಂಡಲ್‌ವುಡ್ ತಾರೆ ಜ್ಯೋತಿ ರೈ ಈಗ ಮದುವೆಯ ವಿಷಯವಾಗಿ ಸಕತ್ ಸುದ್ದಿಯಲ್ಲಿದ್ದಾರೆ. ನಟಿ ಜ್ಯೋತಿ ರೈ ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿದ್ದರು. ಪದ್ಮನಾಭ ರೈ ಎನ್ನುವವರ ಜೊತೆ ಜ್ಯೋತಿ ರೈ ಹಸೆಮಣೆ ಏರಿದ್ದರು. ಮದುವೆಯಾದ ಬಳಿಕ ಜ್ಯೋತಿ ರೈ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಜ್ಯೋತಿ ಮತ್ತು ಪದ್ಮನಾಭ್ ದಂಪತಿಗೆ 10 ವರ್ಷದ ಮಗನಿದ್ದಾನೆ. ಆದರೀಗ ಇಬ್ಬರೂ ದೂರ ಆಗಿದ್ದಾರೆ ಎನ್ನಲಾಗಿದೆ. ಕನ್ನಡ ಮತ್ತು ತೆಲುಗು ಕಿರುತೆರೆ ಹಾಗೂ ಸಿನಿಮಾರಂಗದಲ್ಲಿ ಫೇಮಸ್ ಆಗಿರೋ ನಟಿ ಜ್ಯೋತಿ ರೈ, ತೆಲುಗು ಯುವ ನಿರ್ದೇಶಕ ಸುಕು ಪುರ್ವಜ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಎರಡು ತಿಂಗಳ ಹಿಂದೆ ಇವರು ಫೋಟೋ ಕೂಡ ಶೇರ್ ಮಾಡಿಕೊಂಡಿದ್ದರು. ಆಗಲೂ ಇವರಿಬ್ಬರೂ ಗುಟ್ಟಾಗಿ ಮದ್ವೆಯಾಗಿದ್ರಾ ಎನ್ನುವ ಸುದ್ದಿ ಹರಡಿತ್ತು. ಆದರೆ ಕಮೆಂಟ್ ಸೆಕ್ಷನ್ ಆಫ್ ಮಾಡಿದ್ದ ನಟಿ ಈಗ ಮತ್ತೆ ಅದೇ ರೀತಿಯ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ತೆಲುಗಿನಲ್ಲಿ 'ಗುಪ್ಪೆದಂಥ ಮನಸು' ಎನ್ನುವ ಧಾರಾವಾಹಿ ಮೂಲಕ ತೆಲುಗು ಪ್ರೇಕ್ಷಕರ ಮನೆಮಾತಾಗಿರುವ ಬೆಡಗಿ ಜ್ಯೋತಿ ಕನ್ನಡದಲ್ಲಿಯೂ ಬಿಜಿ ಇದ್ದಾರೆ. ಇದರ ನಡುವೆಯೇ ತೆಲುಗು ನಿರ್ದೇಶಕನ ಜೊತೆ ಫೋಟೋ ಶೇರ್ ಮಾಡಿದ್ದಾರೆ. ಕೆಲವರು ಎಂಗೇಜ್‌ಮೆಂಟ್ ಆಗಿದೆ ಎನ್ನುತ್ತಿದ್ದಾರೆ. ಆದರೆ ನಟಿಯ ಕೊರಳಿನಲ್ಲಿ ತಾಳಿ ಇರುವುದು ಹೈಲೈಟ್ ಆಗಿದ್ದು, ಹಾಗಿದ್ದರೆ ನಟಿ ಮದ್ವೆಯಾಗಿಬಿಟ್ಟಿದ್ದಾರಾ ಎನ್ನುವ ಸುದ್ದಿ ಹರಿದಾಡುತ್ತಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವು ಫೋಟೋಗಳನ್ನು ಶೇರ್ ಮಾಡಿರುವ ನಟಿ, ಯಾವುದೇ ಮಾಹಿತಿ ನೀಡಲಿಲ್ಲ. ಇದರಿಂದ ಇನ್ನಷ್ಟು ಗೊಂದಲಕ್ಕೆ ಅವಕಾಶ ಮಾಡಿಕೊಟ್ಟಿದೆ. ಆದರೆ ಇವರಿಬ್ಬರೂ ಕೊಟ್ಟಿರುವ ಪೋಸ್ ನೋಡಿದರೆ ಒಂದೋ ಇವರ ಮದ್ವೆ ಇದಾಗಲೇ ನಡೆದಿದೆ, ಇಲ್ಲವೇ ಶೀಘ್ರದಲ್ಲಿಯೇ ನಡೆಯಲಿದೆ ಎನ್ನಲಾಗುತ್ತಿದೆ.
ಪರಿಣಿತಿ-ರಾಘವ್ ಮದ್ವೆಯ ರೋಚಕ ವಿಡಿಯೋ ವೈರಲ್: ಹನಿಮೂನ್ ಕ್ಯಾನ್ಸಲ್!
ಹಿಂದೆ ಕೂಡ ಇದೇ ರೀತಿಯ ಫೋಟೋಗಳನ್ನು ಶೇರ್ ಮಾಡಿದ್ದಾಗ ನಟಿ, ಎಲ್ಲಾ ಫೋಟೋಗಳಿಗೂ 'ಜ್ಯೋತಿಪುರ್ವಜ್' ಎಂದು ಹ್ಯಾಷ್ ಟ್ಯಾಗ್ ಹಾಕಿದ್ದರು. ಜ್ಯೋತಿ ಪೂರ್ವಜ್ ಹೆಸರಿನಲ್ಲಿ ಟ್ವಿಟ್ಟರ್ ಅಕೌಂಟ್ ಕೂಡ ಓಪನ್ ಮಾಡಿದ್ದಾರೆ. ಇನ್ನು ಮುಂದೆ ನನ್ನನ್ನು ನೀವು ಟ್ವಿಟ್ಟರ್‌ನಲ್ಲೂ ಫಾಲೋ ಮಾಡಬಹುದು ಎಂದು ಬರೆದುಕೊಂಡಿದ್ದರು. ಆಗಲೇ ಇವರಿಬ್ಬರ ಬಗ್ಗೆ ಗುಸುಗುಸು ಶುರುವಾಗಿತ್ತು. ಮತ್ತೆ ನಟಿ ಫ್ಯಾನ್ಸ್ ತಲೆಗೆ ಹುಳು ಬಿಟ್ಟಿದ್ದಾರೆ.
ಇನ್ನು ಇವರ ಬಣ್ಣದ ಪಯಣದ ನಟಿ ಜ್ಯೋತಿ ರೈ ಕನ್ನಡದಲ್ಲಿ ಅನೇಕ ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿನು ಬಳಂಜ ಅವರ 'ಬಂದೇ ಬರತಾವ ಕಾಲ' ಎಂಬ ಧಾರಾವಾಹಿ ಮೂಲಕ ಜ್ಯೋತಿ ರೈ ಮೊದಲ ಬಾರಿಗೆ ಕನ್ನಡ ಧಾರಾವಾಹಿಯಲ್ಲಿ ಕಾಣಿಸಿಕೊಂಡರು. ಬಳಿಕ ಜ್ಯೋತಿ ಬ್ಯಾಕ್ ಟು ಬ್ಯಾಕ್ ಧಾರಾವಾಹಿಗಳಲ್ಲಿ ನಟಿಸಿದರು. ಜೋಗುಳ, ಕಿನ್ನರಿ, ಕಸ್ತೂರಿ ನಿವಾಸ, ಜೋ ಜೋ ಲಾಲಿ, ಗೆಜ್ಜೆಪೂಜೆ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಧಾರಾವಾಹಿ ಜೊತೆಗೆ ಸಿನಿಮಾಗಳಲ್ಲೂ ನಟಿಸಿದ್ದಾರೆ. ಕನ್ನಜ ಮಾತ್ರವಲ್ಲದೆ ಪರಭಾಷೆಯಲ್ಲು ಜ್ಯೋತಿ ಧಾರಾವಾಹಿ, ಸಿನಿಮಾ ಹಾಗೂ ವೆಬ್ ಸೀರಿಸ್‌ಗಳಲ್ಲಿ ನಟಿಸುತ್ತಿದ್ದಾರೆ.
ಮೊಬೈಲ್ ಸಂಖ್ಯೆ ಬದಲಿಸಿ ಪತಿಯಿಂದ ವಂಚನೆ! ಮೋಸ ಹೋದೆನೆಂದು ಬಿಕ್ಕಿಬಿಕ್ಕಿ ಅಳ್ತಿರೋ ಮಹಾಲಕ್ಷ್ಮಿ