ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದಲ್ಲಿ ಚಂದನ್​ ಶೆಟ್ಟಿಯ ಗೆಟಪ್​ ಹೇಗಿದೆ? ಫ್ಯಾನ್ಸ್ ಕಾತರಕ್ಕೆ ಬಿತ್ತು ತೆರೆ

By Suvarna News  |  First Published Mar 10, 2024, 4:12 PM IST

ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದ ಮೂಲಕ ನಾಯಕನಾಗುತ್ತಿರುವ ಚಂದನ್​ ಶೆಟ್ಟಿಯ ಗೆಟಪ್​ ಕುರಿತು ಇದ್ದ ರಹಸ್ಯ ಈಗ ಬಹಿರಂಗಗೊಂಡಿದೆ. 
 


ಕನ್ನಡದ ರ್ಯಾಪರ್​ ಎಂದೇ ಫೇಮಸ್​ ಆಗಿರೋ ಚಂದನ್​ ಶೆಟ್ಟಿ ಅವರ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದ ವಿಆರ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಅರುಣ್ ಅಮುಕ್ತ ನಿರ್ದೇಶನದ ಈ ಚಿತ್ರದ ವಿಆರ್ ಪೋಸ್ಟರ್ ಅಂದರೆ ವರ್ಚುವಲ್ ರಿಯಾಲಿಟಿ (Virtual reality) ಪೋಸ್ಟರ್​ ಸಾಕಷ್ಟು ಗಮನ ಸೆಳೆದಿದೆ. ಈ ಚಿತ್ರದಲ್ಲಿ  ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಅವರ ಪತಿ, ಚಂದನ್ ಶೆಟ್ಟಿ ನಾಯಕನಾಗಿ ನಟಿಸಿದ್ದಾರೆಂಬ ವಿಚಾರ ಹೇಳಲಾಗಿದ್ದರೂ ಈ ಪೋಸ್ಟರ್​ ಈಗ ಸಾಕಷ್ಟು ಗಮನ ಸೆಳೆದಿದೆ.  ಚಂದನ್ ಶೆಟ್ಟಿಯವರ ಗೆಟಪ್​ ರಿವೀಲ್​ ಆಗಿದೆ.

ಶಿವರಾತ್ರಿ ಹಬ್ಬದ ಪ್ರಯುಕ್ತ ಇದೀಗ ಪೋಸ್ಟರ್​ ರಿಲೀಸ್​ ಮಾಡಲಾಗಿದೆ.  ಈ ಹಿಂದೆ ಪೋಸ್ಟರ್ ಮತ್ತು ಮೋಷನ್ ಪೋಸ್ಟರ್ ಬಿಡುಗಡೆಗೊಂಡಿತ್ತು. ಇದೀಗ ನಾಯಕನಾಗಿ ನಟಿಸಿರುವ ಚಂದನ್ ಶೆಟ್ಟಿಯ ವಿಆರ್ ಪೋಸ್ಟರ್ ಬಿಡುಗಡೆಯಾಗಿದ್ದು, ಇದರನ್ನು ಖುದ್ದು  ನಿವೇದಿತಾ ಗೌಡ ಬಿಡುಗಡೆ ಮಾಡಿದ್ದಾರೆ. ಸಿನಿಮಾದ ನಾಯಕ ಚಂದನ್ ಶೆಟ್ಟಿ ಪಾತ್ರದ  ಲುಕ್ ಹೇಗೆ ಅನ್ನೋದು ಕ್ಲಾರಿಟಿ ನೋಡಿ ಫ್ಯಾನ್ಸ್ ಖುಷಿಯಾಗಿದ್ದಾರೆ.  ಹೊಸ ಟೆಕ್ನಾಲಜಿ ಬಳಸಿ ಯುವ ನಿರ್ದೇಶಕ ಅರುಣ್ ಅಮುಕ್ತ  ವಿ.ಆರ್.ಪೋಸ್ಟರ್ ಮತ್ತು ಮೋಷನ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಹೊಸತನಕ್ಕೆ ನಾಂದಿ ಹಾಡಿದ್ದಾರೆ.  

Tap to resize

Latest Videos

ನನ್ನ ಫೆವರೇಟ್​ ನಾನೇ ಎನ್ನುತ್ತ ರೀಲ್ಸ್​ ಮಾಡಿದ ನಿವೇದಿತಾ: ಕೂದಲೇನಾಯ್ತು ಕೇಳಿದ ಫ್ಯಾನ್ಸ್​!

 ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದಲ್ಲಿ ಹೊಸಬರೂ ಇದ್ದಾರೆ. ಹಳಬರೂ ಇದ್ದಾರೆ. ಸುನಿಲ್ ಪುರಾಣಿಕ್, ಭವ್ಯ, ಟಗರು ಖ್ಯಾತಿಯ ಕಾಕ್ರೋಚ್ ಸುಧಿ, ಪ್ರಶಾಂತ್ ಸಂಬರ್ಗಿ ಅಭಿನಯಿಸಿದ್ದಾರೆ. ಮಾನಸಿ, ವಿವಾನ್,ಅಮರ್, ಭಾವನಾ ಕೂಡ ಈ ಸಿನಿಮಾದಲ್ಲಿದ್ದಾರೆ. ಈ ಸಿನಿಮಾದಲ್ಲಿ ಸೈಬರ್ ಫಂಕ್ ಕಥೆ ಇದೆ ಅನಿಸುತ್ತಿದೆ ಎನ್ನುವುದು ಸಿನಿ ಪ್ರಿಯರ ಅಭಿಮತ. ಈಗೀನ ಕಾಲದ ಹುಡುಗರಿಗೆ ಕನೆಕ್ಟ್ ಆಗೋ ರೀತಿಯಲ್ಲಿಯೇ ಚಿತ್ರದ ಪ್ರಚಾರ ಮಾಡಲಾಗುತ್ತಿದೆ.  ಚಂದನ್ ಶೆಟ್ಟಿಯ ಗೆಟಪ್ಪು ಕೂಡಾ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಈ ಹಿಂದೆ ಬಿಡುಗಡೆಗೊಂಡಿದ್ದ ಪೋಸ್ಟರಿನಲ್ಲಿ ಕೈಯಲ್ಲಿ ಹಾಕಿ ಸ್ಟಿಕ್ ಹಿಡಿದಿದ್ದ ನಾಲಕ್ಕು ಪಾತ್ರಗಳು ಎದುರುಗೊಂಡಿದ್ದವು. ಚಂದನ್ ಪಾತ್ರ ಕೈಯಲ್ಲಿ ವಿಆರ್ ಅನ್ನು ಹಿಡಿದುಕೊಂಡಿದೆ. ಇದೆಲ್ಲವನ್ನೂ ಕಂಡ ಪ್ರೇಕ್ಷಕರಿಗೆ ಇದೊಂದು ಈ ಕಾಲಮಾನದ ಆವೇಗ ಬಚ್ಚಿಟ್ಟುಕೊಂಡಿರುವ ಕಥೆಯೆಂಬ ವಿಚಾರವನ್ನು ದಾಟಿಸಿದೆ.  

ಇನ್ನು ಈ ಚಿತ್ರದ ಕುರಿತು ಹೇಳುವುದಾದರೆ, ಸುಬ್ರಮಣ್ಯ ಕುಕ್ಕೆ ಮತ್ತು ಶಿವಲಿಂಗೇಗೌಡ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.  ವಿಜೇತ್ ಕೃಷ್ಣ, ವಾಸು ದೀಕ್ಷಿತ್ ಮತ್ತು ಸಂಗೀತ ನಿರ್ದೇಶನ ಮಾಡಲಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ಶ್ರೀಕಾಂತ್ ಜಿ ಕಶ್ಯಪ್, ಕುಮಾರ್ ಗೌಡ ಛಾಯಾಗ್ರಹಣ, ಭರ್ಜರಿ ಚೇತನ್ ಮತ್ತು ವಾಸುಕಿ ವೈಭವ್ ಸಾಹಿತ್ಯ, ಪವನ್ ಗೌಡ ಸಂಕಲನ, ಟೈಗರ್ ಶಿವು, ನರಸಿಂಹ ಸಾಹಸ ನಿರ್ದೇಶನ ಈ ಚಿತ್ರಕ್ಕಿರಲಿದೆ. ಅಮರ್, ಭಾವನಾ, ಮಾನಸಿ, ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ, ಕಾಕ್ರೋಚ್ ಸುಧಿ ಮುಂತಾದವರು ನಟಿಸಿದ್ದಾರೆ. 

ಅಡುಗೆ ಮನೆಯಲ್ಲಿ ಬಿಗ್​ಬಾಸ್​ ನಿವೇದಿತಾ- ತನಿಷಾ: ಹಾಲನ್ನು ಎಲ್ಲಿ ಸೇರಿಸ್ಲಿ ಎಂದು ಕೇಳಿದ ಬೆಡಗಿ!

 

click me!