ನಟ ಜಗ್ಗೇಶ್ ನಾಯಕತ್ವದ 'ರಂಗನಾಯಕ' ಚಿತ್ರವು ಬಿಡುಗಡೆಗಿಂತ ಮೊದಲು ಭಾರೀ ಹೈಪ್ ಕ್ರಿಯೇಟ್ ಮಾಡಿತ್ತು. ಸಂದರ್ಶನಗಳಲ್ಲಿ ಗುರುಪ್ರಸಾದ್ ಆಡಿರುವ ಮಾತುಗಳು ಸಾಕಷ್ಟು ವೈರಲ್ ಆಗಿದ್ದವು. ನಟ ಜಗ್ಗೇಶ್ ಸಹ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ, ಭರವಸೆಗಳನ್ನು ಇಟ್ಟುಕೊಂಡಿದ್ದರು.
ಗುರುಪ್ರಸಾದ್ ಅವರು ಕನ್ನಡದ ಬಗ್ಗೆ ಮಾತನಾಡಿರುವ ವೀಡಿಯೋವೊಂದು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ. 'ಮಠ' ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಅವರು ಸದ್ಯ 'ರಂಗನಾಯಕ' ಸಿನಿಮಾ ಬಿಡುಗಡೆ ಮಾಡಿ ಫಲಿತಾಂಶವನ್ನು ಎದುರು ನೋಡುತ್ತಿದ್ದಾರೆ. ಬಿಡುಗಡೆಯಾಗಿ ಎರಡು ದಿನಗಳಷ್ಟೇ ಕಳೆದಿರುವ 'ರಂಗನಾಯಕ' ಚಿತ್ರಕ್ಕೆ ನವರಸನಾಯಕ ಜಗ್ಗೇಶ್ ನಾಯಕರು. ಕನ್ನಡ ಭಾಷೆಯ ಬಗ್ಗೆ ಕೂಡ ರಂಗನಾಯಕದ ಕಥೆಯಲ್ಲಿ ಜಾಗವಿದೆ ಎಂಬುದನ್ನು ಗುರುಪ್ರಸಾದ್ ಅವರು ಇಲ್ಲಿ ಸೂಚ್ಯವಾಗಿ ಹೇಳಿದ್ದಾರೆ.
ವೈರಲ್ ವೀಡಿಯೋದಲ್ಲಿ ನಿರೂಪಕಿ ಅನುಶ್ರೀ ಜತೆಗೆ ಮಾತನಾಡಿರುವ ಗುರುಪ್ರಸಾದ್ 'ನನ್ನದು ಕನಕಪುರ ತಾಲೂಕು, ಹುಟ್ಟಿ ಬೆಳೆದಿದ್ದು, ಓದಿದ್ದೆಲ್ಲ ಅಲ್ಲೇ. ಅಲ್ಲಿ ನಮಗೆ ಕನ್ನಡ ಬಿಟ್ಟು ಬೇರೆ ಯಾವುದೇ ಭಾಷೆಯ ಇನ್‌ಫ್ಲುಯೆನ್ಸ್ ಇಲ್ಲ. ಅಲ್ಲಿ ತಮಿಳು, ತೆಲುಗು ಮಾತನಾಡುವ ಭಾಷಿಗರು ತುಂಬಾ ಕಡಿಮೆ. ಹೀಗಾಗಿ ನಮಗೆ ಕನ್ನಡ ಭಾಷೆ ಬಿಟ್ಟರೆ ಬೇರೆ ಭಾಷೆ ಮಾತನಾಡಲು ಬರುವುದೇ ಇಲ್ಲ. ಹಿಂದಿ ಸೇರಿದಂತೆ ಬೇರೆ ಯಾವುದೇ ಭಾಷೆ ನನಗೆ ಸರಿಯಾಗಿ ಮಾತನಾಡಲು ಬರುವುದಿಲ್ಲ. ನಮ್ಮ ಕನ್ನಡದ ಬಗ್ಗೆ ನನಗೆ ತುಂಬಾ ಅಭಿಮಾನವಿದೆ. ನಾನು ನಮ್ಮ ಕನ್ನಡ ಭಾಷೆಯನ್ನು ಯಾವುದೇ ಅಪಭ್ರಂಶವಿಲ್ಲದೇ ಮಾತನಾಡುತ್ತೇನೆ.
ಕುಬೇರನಾದ್ರೂ ಚೆನ್ನೈನಲ್ಲಿ ಭಿಕ್ಷೆ ಬೇಡುತ್ತಿರುವ ಧನುಷ್; ಪಕ್ಕದಲ್ಲಿ ರಶ್ಮಿಕಾ ಮಂದಣ್ಣ ಯಾಕೆ ಗುರೂ?
ಆದರೆ, ಕನ್ನಡ ಬಾವುಟವನ್ನು ಹಿಡಿದುಕೊಳ್ಳುವ ಅದೆಷ್ಟೋ ನಟರಿಗೆ ಕನ್ನಡ ಭಾಷೆಯನ್ನುಸರಿಯಾಗಿ ಬಳಸಲು ಬರುವುದಿಲ್ಲ. ಅವರು ಮಾತಿನಾಡಿದರೆ ಬಹಳಷ್ಟು ಅಪಭ್ರಂಶ ಇರುತ್ತದೆ. ಸಾಕಷ್ಟು ಜನರು ಬಾಯಲ್ಲಿ, ತಲೆಯಲ್ಲಿ ಕನ್ನಡ ಅಭಿಮಾನವನ್ನು ತುಂಬಿಕೊಂಡಿದ್ದರೂ ಮಾತನಾಡುವಾಗ ಬಹಳಷ್ಟು ತಪ್ಪುಗಳು ಅವರ ಬಾಯಿಂದ ಬರುತ್ತವೆ. ಆದರೆ, ನಮಗೆ ಬರುವುದೊಂದೇ ಭಾಷೆಯಾದರೂ ಅದನ್ನು ಸ್ಪಷ್ಟವಾಗಿ ಮಾತನಾಡುತ್ತೇವೆ, ಬಳಸುತ್ತೇವೆ ಎಂಬ ಹೆಮ್ಮೆ ನನಗಿದೆ. ಕನ್ನಡಕ್ಕೆ ಬಹಳಷ್ಟು ಶಕ್ತಿ ಇದೆ, ನಾವು ಅದನ್ನು ಇನ್ನೂ ಮುಟ್ಟಿಲ್ಲ. ರಂಗನಾಯಕ ಸಿನಿಮಾದಲ್ಲಿ ಕನ್ನಡದ ಬಗ್ಗೆ ಇದೆ, ಹಾಗಾಗಿ ಕನ್ನಡ ದೈವಮಯಿ' ಎಂದಿದ್ದಾರೆ ನಿರ್ದೇಶಕ ಗುರುಪ್ರಸಾದ್.
ಮಹೇಶ್ ಬಾಬು ಜತೆ ಕಿಸ್ ಮಾಡಿದ್ದೀರಾ ಎಂದ ಫ್ಯಾನ್ಸ್‌ಗೆ ರಶ್ಮಿಕಾ ಮಂದಣ್ಣ ಏನಂದ್ರು ನೋಡಿ!
ಅಂದಹಾಗೆ, ನಟ ಜಗ್ಗೇಶ್ ನಾಯಕತ್ವದ ರಂಗನಾಯಕ ಚಿತ್ರವು ಬಿಡುಗಡೆಗಿಂತ ಮೊದಲು ಭಾರೀ ಹೈಪ್ ಕ್ರಿಯೇಟ್ ಮಾಡಿತ್ತು. ಸಂದರ್ಶನಗಳಲ್ಲಿ ಗುರುಪ್ರಸಾದ್ ಆಡಿರುವ ಮಾತುಗಳು ಸಾಕಷ್ಟು ವೈರಲ್ ಆಗಿದ್ದವು. ನಟ ಜಗ್ಗೇಶ್ ಸಹ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ, ಭರವಸೆಗಳನ್ನು ಇಟ್ಟುಕೊಂಡಿದ್ದರು. ಬಿಡುಗಡೆ ಬಳಿಕ ಸಿನಿಮಾ ಎಷ್ಟರಮಟ್ಟಿಗೆ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಏಕೆಂದರೆ, ರಿಲೀಸ್ ಆಗಿ ಮೂರನೇ ದಿನಕ್ಕೆ ಕಾಲಿಟ್ಟಿರುವ ರಂಗನಾಯಕ ಚಿತ್ರದ ಫಲಿತಾಂಶವನ್ನು ಈಗಲೇ ನಿರ್ಧರಿಸಲು ಅಸಾಧ್ಯ.
ಮಡಿಕೇರಿಯಲ್ಲಿ ರುದ್ರಶಿವನ 'ಶಬ್ಭಾಷ್' ಆಟ; ಜಲಪಾತದ ಅಂಚಿನಲ್ಲಿ ಶರತ್-ನಿಸರ್ಗ ರೊಮಾನ್ಸ್!