ಯಶ್ ಈಗ ಜಗತ್ತೇ ಲವ್ ಮಾಡೋ ನಟ.. ಆದ್ರೆ, ಕೆಜಿಎಫ್ ರಿಲೀಸ್ ವೇಳೆ ಭಾರೀ 'ಹೈಡ್ರಾಮಾ' ನಡೆದಿತ್ತು! ಅದೇನು ನೋಡಿ..

Published : Aug 08, 2026, 05:07 PM IST
Yash Toxic Movie

ಸಾರಾಂಶ

ಕನ್ನಡದ ರಾಕಿಂಗ್ ಸ್ಟಾರ್ ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್ ಹಾಗೂ ಜಗತ್ತೇ ಕೊಂಡಾಡುವ ನಟ. ಆದರೆ, ಕೆಜಿಎಫ್ ಸಿನಿಮಾ ಬಿಡುಗಡೆ ವೇಳೆ ನಡೆದ ಹೈಡ್ರಾಮಾ ನಡೆದಿತ್ತು. ಕಾರಣ, ಅಂದು ನಟ ಯಶ್ ಅವರು ಕನ್ನಡ ಸಿನಿಜಗತ್ತಿನ 'ರಾಜಾಹುಲಿ' ಮಾತ್ರ ಆಗಿ ಮಿಂಚುತ್ತಿದ್ದರು. ಅದೇನು ಆಗಿತ್ತು ನೋಡಿ..!

Racking Star Yash 'KGF' release time High Drama to know here: ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಸಿನಿಮಾ ಬಿಡುಗಡೆ ವೇಳೆ ನಡೆದಿದ್ದ ಹೈಡ್ರಾಮಾ ಸಂಗತಿ!

ಕನ್ನಡದ ರಾಕಿಂಗ್ ಸ್ಟಾರ್ ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್ ಹಾಗೂ ಜಗತ್ತೇ ಕೊಂಡಾಡುವ ನಟ. ಆದರೆ, ಕೆಜಿಎಫ್ ಸಿನಿಮಾ ಬಿಡುಗಡೆ ವೇಳೆ ನಡೆದ ಹೈಡ್ರಾಮಾ ನಡೆದಿತ್ತು. ಕಾರಣ, ಅಂದು ನಟ ಯಶ್ ಅವರು ಕನ್ನಡ ಸಿನಿಜಗತ್ತಿನ 'ರಾಜಾಹುಲಿ' ಮಾತ್ರ ಆಗಿ ಮಿಂಚುತ್ತಿದ್ದರು. ಪ್ರಶಾಂತ್ ನೀಲ್ ಹಾಗೂ ಯಶ್ ಜೋಡಿ ಕೆಜಿಎಫ್ ಎನ್ನುವ ಸಿನಿಮಾ ಮಾಡಿ, ಅದನ್ನು ಬಾಲಿವುಡ್, ಟಾಲಿವುಡ್, ಕಾಲಿವುಡ್, ಮಾಲಿವುಡ್ ಸೇರಿದಂತೆ ಬಾಲಿವುಡ್ ಅಂಗಳಕ್ಕೆ ಕೊಂಡೊಯ್ದು ಅದನ್ನು ಪ್ಯಾನ್ ಇಂಡಿಯಾ ಲೆವೆಲ್‌ಗೆ ರೀಚ್ ಮಾಡಿಸಬೇಕು ಎಂದು ಪ್ರಯತ್ನ ಪಟ್ಟಾಗ ಅದೇನು ಆಗಿತ್ತು? ಅಲ್ಲಿ ಏನೆಲ್ಲಾ ಅಡೆತಡೆಗಳು ಸೃಷ್ಟಿಯಾಗಿದ್ದವು ಗೊತ್ತಾ? ಅದನ್ನು ಸ್ವತಃ ನಟ ಯಶ್ ಅವರೇ ಒಂದು ಇಂಟರ್‌ವ್ಯೂದಲ್ಲಿ ಹೇಳಿದ್ದಾರೆ. ನೋಡಿ ಈ ಸ್ಟೋರಿ..

'ನಾವು ಕೆಜಿಎಫ್ ಸಿನಿಮಾವನ್ನು ಪ್ಯಾನ್ ಇಂಡಿಯಾ ಮಾಡೋಣ ಅಂತ ಹೋದಾಗ ಕೇಳೋರೇ ಇರ್ಲಿಲ್ಲ. ಈ ಸೇಲ್ಸ್‌ಮನ್ಸ್‌ ಬಂದ್ರೆ ಜನರು ಆಡ್ತಾರಲ್ಲ ಹಾಗೆ.. ಏ ನಮ್ಮ ಹತ್ರನೇ ಎಲ್ಲಾ ಇದೆ ಅನ್ನೋ ಥರ.. ಇರ್ಲಿ ಮೊದ್ಲು ಕೇಳ್ರಯ್ಯಾ ನಾವ್ ಹೇಳೋದನ್ನ ಅಂದ್ರೆ ಯಾರೂ ರೆಡಿ ಇರ್ಲಿಲ್ಲ. ಕ್ರೆಡಿಟ್ ಕಾರ್ಡ್‌ನವ್ರು ಬಂದ್ರೆ ಮಾಡ್ತಾರಲ್ಲ ಹಾಗೆ. ಕನ್ನಡ ಇಂಡಸ್ಟ್ರಿ ಅಂದ್ರೆ ಅನ್ನೋ ಫೀಲು.. ಬಟ್ ನಾವು ಹೇಗ್ ಅಟ್ರಾಕ್ಟ್ ಮಾಡ್ಬೇಕು ಹಾಗೆ ಮಾಡಿ, ಹೊಡೆದು ಎತ್ಕೊಂಡ್ ಬಂದ್ಮೇಲೆ, ಇವತ್ತು ನಮ್ಗೆ ಬೇಕು ಅಂತ, ಅಂದ್ರೆ ಮೆಂಬರ್‌ಶಿಪ್ ಬೇಕು ಅಂತಾರಲ್ಲ, ಹಾಗ್ ಕೇಳ್ತಾರೆ ಎಲ್ಲಾ..

ಕೆಜಿಎಫ್ ಬಂದಾಗ ನಾನು 'ಫಸ್ಟ್ ಡೇ' ನೇ ಹೇಳಿದೆ- ಇದು ಪ್ರೈಡ್ ಆಫ್ ಕರ್ನಾಟಕ ಅಂತ.. ಅದಕ್ಕೆ ತುಂಬಾ ಜನರು ನನ್ ಮಾತು ಉತ್ಪ್ರೇಕ್ಷೆ ಅಂದ್ಕೊಂಡದ್ರು.. ಇವ್ನ ಸಿನಿಮಾ, ಅದಕ್ಕೇ ಹೀಗ್ ಹೇಳ್ತಾನೆ ಅಂತ ಫೀಲ್ ಮಾಡ್ಕೊಂಡ್ರು.. ಆದ್ರೆ, ನಿಜವಾಗಿಯೂ ಅದು ಪ್ರೈಡ್ ಆಫ್ ಕರ್ನಾಟಕ.. ಇಷ್ಟೂ ಜನರ ಆಸೆ ಇದ, ಕನಸು ಇದು.. ಕನ್ನಡ ಸಿನಿಮಾಗೆ ಎಲ್ಲಾ ಈ ತರ ಕಡೆ ಮನ್ನಣೆ ಸಿಗಬೇಕು, ಬೇರೆ ಭಾಷೆಯವರು ನಮ್ಮನ್ನು ಗೌರವಿಸಬೇಕು, ನಮ್ಮನ್ನ ಎಲ್ರೂ ಸೀರಿಯಸ್ಸಾಗಿ ತಗೋಬೇಕು ಅನ್ನೋ ಯೋಚ್ನೆ ಪ್ರತಿಯೊಬ್ರಲ್ಲೂ ಇತ್ತು..' ಎಂದಿದ್ದರು ಕೆಜಿಎಫ್ ಬಿಡುಗಡೆ ಬಳಿಕ ನಡೆದಿದ್ದ ಒಂದು ಸಂದರ್ಶನದಲ್ಲಿ!

ಇಂದು ಏನಾಗಿದೆ? ಕೆಜಿಎಫ್ ಮೂಲಕ ಕನ್ನಡ ಸಿನಿಮಾವೊಂದನ್ನು ಪ್ಯಾನ್ ಇಂಡಿಯಾ ಹಂತಕ್ಕೆ ಹೊತ್ತೊಯ್ದಿದ್ದ ನಟ ಯಶ್, ಇಂದು ಕನ್ನಡ ಸಿನಿಮಾವೊಂದನ್ನು ಹಾಲಿವುಡ್ ಲೆವಲ್‌ಗೆ ಅನ್ನೋದಕ್ಕಿಂತ 'ಜಾಗತಿಕ ಮಟ್ಟಕ್ಕೆ' ಇಂಟರ್‌ನ್ಯಾಷನಲ್ ಪ್ಲಾಟ್‌ಫಾರ್ಮ್‌'ಗೆ ಕೊಂಡೊಯ್ದಿದ್ದಾರೆ. ಯಶ್ ನಾಯಕತ್ವ, ಗೀತೂ ಮೋಹನ್‌ದಾಸ್ ನಿರ್ದೇಶನದ 'ಟಾಕ್ಸಿಕ್' ಕನ್ನಡ ಸಿನಿಮಾ ಇಂದು ಪ್ರಪಂಚದಾದ್ಯಂತ ಸೌಂಡ್ ಮಾಡುತ್ತಿದೆ. ಇದು ಅತಿಂಥ ಸದ್ದು-ಸುದ್ದಿಯಲ್ಲ, ಇಡೀ ಜಗತ್ತು ಸಿನಿಮಾ ನೋಡಲು ಕಾಯುತ್ತಿದೆ!

ಹೌದು, ಟಾಕ್ಸಿಕ್ ಸಿನಿಮಾ ಅಪಾರ ನಿರೀಕ್ಷೆ ಸೃಷ್ಟಿಸಿದೆ. ಇಡೀ ಜಗತ್ತು ಮಾತನ್ನಾಡುವಂತೆ ಮಾಡಿರುವ ಟಾಕ್ಸಿಕ್ ಸಿನಿಮಾದ ಟ್ರೇಲರ್ ಇಂದು, ಅಂದರೆ 08 ಆಗಸ್ಟ್ 2026ರಂದು ಬಿಡುಗಡೆ ಆಗುತ್ತಿದೆ. ಅದೂ ಕೂಡ ಟಾಕ್ಸಿಕ್ ಸಿನಿಮಾದ ನಾಯಕನಟ ಯಶ್ ಅವರ ತಾಯ್ನಾಡು, ಕರ್ನಾಟಕದ ಬೆಂಗಳೂರಿನಲ್ಲಿ. ಇಂದು ಸಾಯಂಕಾಲ 7 ಗಂಟೆ ಒಂದು ನಿಮಿಷಕ್ಕೆ ಯಶ್ 'ಟಾಕ್ಸಿಕ್' ಟ್ರೇಲರ್ ಜಗತ್ತಿಗೆ ಅರ್ಪಣೆ ಆಗಲಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕನ್ನಡದ ಹಿರಿಯ ನಟ 'ಡಾ ಶಿವರಾಜ್‌ಕುಮಾರ್' ಭಾಗಿಯಾಗಲಿದ್ದಾರೆ.

ಯಶ್ ತಮ್ಮ ಕನಸುಗಳನ್ನು ಕೆಜಿಎಫ್, ಹಾಗೂ ಟಾಕ್ಸಿಕ್ ಮೂಲಕ ಈಡೇರಿಸಿಕೊಳ್ಳುತ್ತಿದ್ದಾರೆ. ಮುಂದೆ ಇನ್ನೇನೇನು ಬಿಗ್ ಡ್ರೀಮ್ಸ್‌ ಇದೆಯೋ ಏನೋ ಯಶ್ ಮನದಲ್ಲಿ! ಅವೆಲ್ಲವನ್ನೂ ನನಸಾಗಿರುವ ಟ್ಯಾಲೆಂಟ್, ಪ್ಲಾನ್ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರಲ್ಲಿದೆ. ಅದನ್ನು ನಾವೆಲ್ಲರೂ ನೋಡಲು, ಎಂಜಾಯ್ ಮಾಡಲು ಹಾಗೂ ಹೆಮ್ಮೆ ಪಡಲು ಸಜ್ಜಾಗಬೇಕು ಅಷ್ಟೇ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Pichchar Review: ನಾಯಕನಿಗೆ ಕುಟುಂಬವೇ ಇಲ್ಲ.. ನಾಯಕಿಗೆ ಮಾತ್ರ ದೊಡ್ಡ ಕುಟುಂಬ ಬೇಕು!
ಬಾಸ್‌ ಸಿನಿಮಾ ಹೇಗಿದೆ? ‘ನಾವೇ ಕೊಲೆ ಮಾಡಿದ್ದು’ ಎಂದ ನಾಲ್ವರು: ಮುಂದೇನಾಗುತ್ತೆ?