
Yash Toxic Trailer Event-AMB Mall Bengaluru-Yash Fans Gathering Majestic: ಮೆಜೆಸ್ಟಿಕ್ ನ ಎಎಂಬಿ ಸಿನಿಮಾಸ್ ನಲ್ಲಿ ಸಿನಿಮಾ ಟ್ರೈಲರ್ ಲಾಂಚ್; ಬೆಂಗಳೂರಿನಲ್ಲಿ ರಾಕಿಂಗ್ ಸ್ಟಾರ್ ಯಶ್ ಹವಾ!
ಹೌದು, ಕನ್ನಡದ ಮಣ್ಣಿನ ನಟ, ಪ್ಯಾನ್ ಇಂಡಿಯಾ ಸ್ಟಾರ್ ಯಶ್ ನೋಡಲು ಬೆಮಗಳೂರಿನ ಮೆಜೆಸ್ಟಿಕ್ ಬಳಿ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದಾರೆ. ಕಾರಣ, ಇಂದು ಸಂಜೆ ಬೆಂಗಳೂರು-ಮೆಜೆಸ್ಟಿಕ್ ಬಳಿಯಲ್ಲಿರುವ ಎಎಂಬಿ ಮಾಲ್‌ನಲ್ಲಿ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಟ್ರೇಲರ್ ಬಿಡುಗಡೆ ಈವೆಂಟ್ ನಡೆಯಲಿದೆ. ಸಾಯಂಕಾಲ 7 ಗಂಟೆ 1 ನಿಮಿಷಕ್ಕೆ ಈ ಬಿಗ್ ಈವೆಂಟ್ ನಡೆಯಲಿದೆ. ರಸ್ತೆ ಬದಿಯಲ್ಲಿ ಯಶ್ ಅವರನ್ನು ನೋಡಲು ಸಾವಿರಾರು ಜನರು ಸಾಲುಗಟ್ಟಿ ನಿಂತಿದ್ದಾರೆ. ಈ ದೃಶ್ಯವನ್ನು ಯಶ್ ಅಭಿಮಾನಿಗಳು ಸೇರಿದಂತೆ ಕನ್ನಡಿಗರು ಸಂಭ್ರಮಿಸುತ್ತಿದ್ದಾರೆ.
ಟಾಕ್ಸಿಕ್ ಟ್ರೈಲರ್ ಲಾಂಚ್ ಈವೆಂಟ್‌ನಲ್ಲಿ ಇಡೀ 'ಟಾಕ್ಸಿಕ್' ಸಿನಿಮಾದ ತಂಡ ಭಾಗಿಯಾಗಲಿದೆ. ನಟ ಯಶ್, ನಿರ್ದೇಶಕಿ ಗೀತೂ ಮೋಹನ್‌ದಾಸ್, ನಟಿಯರಾದ ಕಿಯಾರ ಅಡ್ವಾನಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತಾ, ಹುಮಾ ಖುರೇಷಿ, ರುರ್ಮಿಣಿ ವಸಂತ್ ಹಾಗೂ ನಟರಾದ ವಿವೇಕ್ ಒಬೆರಾಯ್, ಸುದೇವ್ ನಾಯರ್ ಸೇರಿದಂತೆ ಹಲವು ಕಲಾವಿದರು ಹಾಗೂ ಟಾಕ್ಸಿಕ್ ಸಿನಿಮಾದ ನಿರ್ಮಾಣ, ನಿರ್ದೇಶನ ಸೇರಿದಂತೆ ಎಲ್ಲಾ ತಂತ್ರಜ್ಞರ ಟೀಮ್ ಭಾಗಿಯಾಗಲಿದೆ.
ಇಂದು ಸಂಜೆ 5 ಗಂಟೆಗೆ ಕಾರ್ಯಕ್ರಮ ಆರಂಭ ಆಗಲಿದೆ. 7 ಗಂಟೆಗೆ ಟ್ರೇಲರ್ ಲಾಂಚ್. ಈ ಬಹುಮುಖ್ಯ ಹಾಗೂ ಬಿಗ್ ಈವೆಂಟ್‌ಗೆ ಕನ್ನಡದ ಹಿರಿಯ ನಟ ಡಾ ಶಿವರಾಜ್‌ಕುಮಾರ್ ಅವರು ಮುಖ್ಯ ಅತಿಥಿಯಾಗಿ ಭಾಗಿಯಾಗಲಿದ್ದಾರೆ. ಟಾಕ್ಸಿಕ್ ಟ್ರೇಲರ್ ಲಾಂಚ್ ಈವೆಂಟ್‌ನ ಇಡೀ ಕಾರ್ಯಕ್ರಮವನ್ನು ಡ್ಯಾನಿಶ್ ಸೇಟ್ ನಿರೂಪಣೆ ಮಾಡಲಿದ್ದಾರೆ.
ಯಶ್ ಬರುತ್ತಿರೋ ಹಿನ್ನೆಲೆ ಮಾಲ್ ಹೊರಗಡೆ ಸೇರಿರೋ ಅಭಿಮಾನಿಗಳು 'ಯಶ್.. ಯಶ್ ಎಂದು ಕನವರಿಸುತ್ತಿದ್ದಾರೆ. ಇನ್ನೇನು ಕೆಲವೇ ನಿಮಿಷದಲ್ಲಿ ಕಾರ್ಯಕ್ರಮ ಶುರುವಾಗಲಿದೆ. ಕನ್ನಡದ ಸ್ಟಾರ್ ನಟ, ಕನ್ನಡ ಭಾಷೆಯ ಪ್ಯಾನ್ ವರ್ಲ್ಡ್ ಸಿನಿಮಾ ಟಾಕ್ಸಿಕ್‌ನ ಟ್ರೇಲರ್ ಲಾಂಚ್‌ಗೆ ಬೆಂಗಳೂರಿನ ಮೆಜೆಸ್ಟಿಕ್ ಬಳಿಯ ಎಎಂಬಿ ಮಾಲ್ ಸಾಕ್ಷಿಯಾಗಲಿದೆ. ಇದು ಕನ್ನಡಿಗರ ಕನಸು, ಇದು ನನಸಾಗುತ್ತಿರುವ ಕನಸು ಎಂದು ಎಲ್ಲರ ಹೃದಯ ಹೇಳುತ್ತಿದೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.