ಯಶ್ ಟಾಕ್ಸಿಕ್ ಟ್ರೇಲರ್ ಲಾಂಚ್‌ಗೆ ಮುಖ್ಯ ಅತಿಥಿ ಕರುನಾಡ ಚಕ್ರವರ್ತಿ ಡಾ ಶಿವರಾಜ್ ಕುಮಾರ್!

Published : Aug 08, 2026, 02:01 PM IST
Yash Toxic Shivarajkumar

ಸಾರಾಂಶ

ಕನ್ನಡದ ನಟ ಯಶ್ ಅವರು ಕೆಜೆಎಫ್ ಬಳಿಕ ಇಡೀ ಜಗತ್ತು ಕನ್ನಡ ಸಿನಿಮಾ ಬಗ್ಗೆ ಮಾತನ್ನಾಡುವಂತೆ ಮಾಡಿದ್ದಾರೆ. ಜೊತೆಗೆ, ಇದೀಗ ‘ಟಾಕ್ಸಿಕ್’ ಪ್ಯಾನ್ ವರ್ಲ್ಡ್ ಸಿನಿಮಾ ಮೂಲಕ ಕನ್ನಡನಾಡಿನ ಕೀರ್ತಿಯನ್ನು ಜಾಗತಿಕ ಮಟ್ಟದಲ್ಲಿ ಮೆರೆಸುತ್ತಿದ್ದಾರೆ. ಇಂದಿನ ಟ್ರೇಲರ್‌ ಲಾಂಚ್‌ ಮುಖ್ಯ ಅತಿಥಿ ಕನ್ನಡದ ಹಿರಿಯ ನಟ ಶಿವರಾಜ್‌ಕುಮಾರ್.

Yash Toxic Trailer Launch Event-Shivarajkumar as Chief Guest: ಕನ್ನಡದ ನಟ ಯಶ್ ಟಾಕ್ಸಿಕ್ ಟ್ರೇಲರ್ ಲಾಂಚ್‌ ಈವೆಂಟ್‌ ಮುಖ್ಯ ಅತಿಥಿಯಾಗಿ ಕನ್ನಡದ ಹಿರಿಯ ನಟ ಶಿವರಾಜ್‌ಕುಮಾರ್ ಆಗಮನ!

ಇಂದು, ಅಂದರೆ 08 ಆಗಸ್ಟ್ 2026ರಂದು ಕನ್ನಡದ ನಟ, ಪ್ಯಾನ್ ಇಂಡಿಯಾ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಟ್ರೇಲರ್ ಬಿಡುಗಡೆ ಆಗಲಿದೆ ಅನ್ನೋದು ಬಹುತೇಕರಿಗೆ ಗೊತ್ತು . ಈ ಬಿಗ್ ಈವೆಂಟ್‌ಗೆ ಮುಖ್ಯ ಅತಿಥಿಯಾಗಿ ಕನ್ನಡದ ಹಿರಿಯ ನಟ, ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಅವರು ಆಗಮಿಸಲಿದ್ದಾರೆ. ಸಾಯಂಕಾಲ 7 ಗಂಟೆ 1 ನಿಮಿಷಕ್ಕೆ ಬೆಂಗಳೂರಿನ ಎಎಂಬಿ ಮಾಲ್‌ನಲ್ಲಿ ಟಾಕ್ಸಿಕ್ ಟ್ರೇಲರ್ ಲಾಂಚ್ ಈವೆಂಟ್ ಆಯೋಜನೆ ಆಗಿದೆ.

ಕನ್ನಡಿಗ ನಟ ಯಶ್ ಅವರ ಕನಸಿನ ಬಿಗ್ ಬಜೆಟ್ ಸಿನಿಮಾ 'ಟಾಕ್ಸಿಕ್'. ಈ ಸಿನಿಮಾದ ಟೀಸರ್ ಹಾಗೂ ಹಾಡುಗಳು ಈಗಾಗಲೇ ಬಹಳಷ್ಟು ಸೌಂಡ್ ಮಾಡಿವೆ. ಇಂದು ಟ್ರೇಲರ್ ರಿಲೀಸ್ ಆಗಲಿದ್ದು, ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕನ್ನಡ ಚಿತ್ರರಂಗದ ಮೇರು ನಟ ಡಾ ರಾಜ್‌ಕುಮಾರ್ ಮಗ ಹಾಗೂ ಹಿರಿಯ ನಟ ಶಿವರಾಜ್‌ಕುಮಾರ್ ಆಗಮಿಸಲಿರುವುದು ಕನ್ನಡಿಗರ ಖುಷಿಯನ್ನು ಮತ್ತಷ್ಟು ಹೆಚ್ಚಿಸಿದೆ.

ಕನ್ನಡನಾಡಿನಲ್ಲಿ, ಕನ್ನಡದ ಸ್ಟಾರ್ ನಟ ಯಶ್ ಅವರ ಹಾಲಿವುಡ್ ರೇಂಜ್‌ನ ಸಿನಿಮಾ 'ಟಾಕ್ಸಿಕ್' ಟ್ರೇಲರ್ ರಿಲೀಸ್ ಆಗುತ್ತಿರುವದೇ ಒಂದು ದೊಡ್ಡ ಹೆಮ್ಮೆ. ಈ ಈವೆಂಟ್‌ಗೆ ಕನ್ನಡದ ಹಿರಿಯ ನಟ ಶಿವಣ್ಣ ಆಗಮಿಸುವ ಮೂಲಕ ಇದು ಕನ್ನಡಿಗರ ಹಬ್ಬ ಆಗಲಿದೆ ಎನ್ನಬಹುದು. ಯಶ್ ನಟನೆಯ 'ಕೆಜಿಎಫ್' ಸಿನಿಮಾದ ಟ್ರೇಲರ್‌ ಬಿಡುಗಡೆಗೆ ಅಂದು ಕನ್ನಡದ ರೆಬೆಲ್ ಸ್ಟಾರ್ ಅಂಬರೀಷ್ ಅವರು ಬಂದಿದ್ದರು. ಆದರೆ, ಅವರು ಇಂದು ನಮ್ಮೊಂದಿಗಿಲ್ಲ, ದಿವಂಗತರಾಗಿದ್ದಾರೆ.

ಒಟ್ಟಿನಲ್ಲಿ, ಕನ್ನಡದ ನಟ ಯಶ್ ಅವರು ತಾವು ಕನಸು ಕಂಡಿರುವಂತೆ, ಕೆಜೆಎಫ್ ಬಳಿಕ ಇಡೀ ಜಗತ್ತು ಕನ್ನಡ ಸಿನಿಮಾ ಬಗ್ಗೆ ಮಾತನ್ನಾಡುವಂತೆ ಮಾಡಿದ್ದಾರೆ. ಜೊತೆಗೆ, ಇದೀಗ ಟಾಕ್ಸಿಕ್ ಹೆಸರಿನಲ್ಲಿ ಪ್ಯಾನ್ ವರ್ಲ್ಡ್ ಸಿನಿಮಾಗೆ ನಾಯಕರಾಗಿ ಇಡೀ ಕನ್ನಡನಾಡಿನ ಕೀರ್ತಿಯನ್ನು ಜಾಗತಿಕ ಮಟ್ಟದಲ್ಲಿ ಮೆರೆಸಿದ್ದಾರೆ. ಇಂದು ಬೆಂಗಳೂರಿನಲ್ಲಿ ನಡೆಯಲಿರುವ ಟಾಕ್ಸಿಕ್ ಈವೆಂಟ್‌ಗೆ ಇಡೀ ಚಿತ್ರದ ನಟನಟಿಯರು, ಕಲಾವಿದರು ಸೇರಿದಂತೆ ಇಡೀ ಟೀಮ್ ಹಾಜರಾಗಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Exclusive Interview: 'ಗೋಲ್ಡನ್​​ ಸ್ಟಾರ್'​ ಗಣೇಶ್​ ದಂಪತಿ ಮಕ್ಕಳನ್ನು ಬೆಳೆಸ್ತಿರೋದು ಹೇಗೆ? ಶಿಲ್ಪಾ ಮಾತಿಗೆ ಫ್ಯಾನ್ಸ್​ ಫಿದಾ
ಯಶ್ 'ಟಾಕ್ಸಿಕ್' ಟ್ರೇಲರ್ ಲಾಂಚ್ ಮುಹೂರ್ತ 7:01 PM; ಈ ಟೈಮ್ ಹಿಂದಿರೋ ಸೀಕ್ರೆಟ್ ಏನ್ ಗೊತ್ತಾ?