ಜಿಮ್‌ಗೆ ಹೋಗಿ ಬಾಡಿ ಬಿಲ್ಡ್ ಮಾಡಿಕೊಂಡರೆ ನಟರಾಗುತ್ತೇವೆ ಎನ್ನುವುದು ಈಗಿನ ಬಹಳಷ್ಟು ನಟರ ನಂಬಿಕೆ. ದೇಹ ಬೆಳೆಸಿಕೊಂಡರೆ ನಟ ಆಗಲ್ಲ. ಭಾಷೆ, ಸಂಸ್ಕೃತಿ, ಸಾಹಿತ್ಯ, ಕಲೆ ತಿಳಿದಿರಬೇಕು.
ಆರ್. ಕೇಶವಮೂರ್ತಿ
- ನನ್ನ ಹೊಸ ಸಿನಿಮಾ ‘ರಾಯನ್’ ಚಿತ್ರಕ್ಕೆ ರೆಹಮಾನ್ ಸಂಗೀತ ಸಂಯೋಜಿಸುತ್ತಿದ್ದಾರೆ. ರೆಹಮಾನ್ ಚಿತ್ರರಂಗಕ್ಕೆ ಬಂದು 30 ವರ್ಷಗಳಾಗಿವೆ. ನನ್ನ ಮೊದಲ ತಮಿಳು ಚಿತ್ರಕ್ಕೂ ಅವರೇ ಸಂಗೀತ ನಿರ್ದೇಶಕರು. 30 ವರ್ಷಗಳ ನಂತರವೂ ನಾವಿನ್ನೂ ಇದ್ದೀವಲ್ಲ, ನಾನು ನಟನೆ ಮಾಡುತ್ತಿದ್ದೇನಲ್ಲ, ಹೊಸ ತಲೆಮಾರಿನ ನಟ, ನಟಿ, ತಂತ್ರಜ್ಞರ ಜತೆಗೆ ಕೆಲಸ ಮಾಡುತ್ತಿದ್ದೇನಲ್ಲ ಎಂಬುದೇ ನನ್ನ ಪಾಲಿನ ದೊಡ್ಡ ಸಂಭ್ರಮ.
- ಕಲಾವಿದನೊಬ್ಬನ ಬೆಳವಣಿಗೆ ಅವನ ಪ್ರತಿಭೆ ಜತೆಗೆ ಜನ ಆತನ ಮೇಲಿಟ್ಟಿರುವ ಪ್ರೀತಿ, ನಂಬಿಕೆ ಮತ್ತು ಅಭಿಮಾನ ಕೂಡ ಕಾರಣವಾಗುತ್ತದೆ. 30 ವರ್ಷಗಳಿಂದ ನಾನು ಜನರ ನಂಬಿಕೆ, ಪ್ರೀತಿ ಉಳಿಸಿಕೊಂಡಿದ್ದೇನೆಂಬ ಹೆಮ್ಮೆ ಆಗುತ್ತದೆ. ವ್ಯಕ್ತಿಯೊಬ್ಬನ ಬೆಳವಣಿಗೆ ಎಂಬುದು ಎಷ್ಟು ಮಂದಿಯ ಬೆಳವಣಿಗೆಗೆ ಕಾರಣನಾದ ಎಂಬುದರ ಮೇಲೆ ನಿಂತಿರುತ್ತದೆ. ಆ ನಿಟ್ಟಿನಲ್ಲಿ ನಾನು ನಟಿಸುತ್ತಾ ಸಂಪಾದನೆ ಮಾಡಿಕೊಳ್ಳುತ್ತಲೇ ಬೇರೆಯವರನ್ನು ಜತೆ ಮಾಡಿಕೊಂಡು ಸಿನಿಮಾ ನಿರ್ಮಿಸುತ್ತೇನೆ, ನಿರ್ದೇಶನ ಮಾಡುತ್ತೇನೆ. ಸಿನಿಮಾ, ರಂಗಭೂಮಿ, ಓದು, ಸಾಹಿತ್ಯ, ಕೃಷಿ, ಅನ್ಯಾಯವನ್ನು ಪ್ರಶ್ನಿಸುವುದು ನನ್ನ ಬೆಳವಣಿಗೆಯನ್ನು ಸಾರ್ಥಕವಾಗಿಸುತ್ತದೆ ಎಂದು ನಂಬಿದ್ದೇನೆ.
ಮಹಾತ್ಮ ಗಾಂಧಿ ಬಿಟ್ಟರೆ ನಾನೇ ಫಾದರ್ ಆಫ್ ದಿ ನೇಷನ್: ದರ್ಶನ್ ಬಗ್ಗೆ ತುಟಿ ಬಿಚ್ಚದ ಪ್ರಕಾಶ್ ರಾಜ್!
- ಜಿಮ್‌ಗೆ ಹೋಗಿ ಬಾಡಿ ಬಿಲ್ಡ್ ಮಾಡಿಕೊಂಡರೆ ನಟರಾಗುತ್ತೇವೆ ಎನ್ನುವುದು ಈಗಿನ ಬಹಳಷ್ಟು ನಟರ ನಂಬಿಕೆ. ದೇಹ ಬೆಳೆಸಿಕೊಂಡರೆ ನಟ ಆಗಲ್ಲ. ಭಾಷೆ, ಸಂಸ್ಕೃತಿ, ಸಾಹಿತ್ಯ, ಕಲೆ ತಿಳಿದಿರಬೇಕು. ಸೋಲಿನಿಂದ ಹಾಳಾದ ಪ್ರತಿಭಾವಂತರಿಗಿಂತ ಸಕ್ಸಸ್‌ನಿಂದ ಹಾದಿ ತಪ್ಪಿದವರೇ ಹೆಚ್ಚು. ಗೆಲುವು ಸುಲಭಕ್ಕೆ ದಕ್ಕಲ್ಲ. ಅದು ದಕ್ಕಿದ ಮೇಲೆ ಅದನ್ನು ನಿಭಾಯಿಸುವುದನ್ನು ಕಲಿಯಬೇಕು. ಸಕ್ಸಸ್ ಎಂಬುದು ಒಂಥರಾ ನಶೆ ಇದ್ದಂತೆ. ಆ ನಶೆಯನ್ನು ಬಹುಬೇಗ ಇಳಿಸಿಕೊಂಡು ಮತ್ತೊಂದು ಪಯಣಕ್ಕೆ ಸಜ್ಜಾಗಬೇಕು. ಇಲ್ಲದೆ ಹೋದರೆ ಯಶಸ್ಸಿನ ನಶೆ ನಮ್ಮನ್ನು ಸುಟ್ಟು ಹಾಕುತ್ತದೆ. ಡಾ ರಾಜ್‌ಕುಮಾರ್, ರಜನಿಕಾಂತ್, ಕಮಲ್ ಹಾಸನ್ ದಶಕಗಳ ಕಾಲ ಕಲಾವಿದರಾಗಿ ಜನ ಪ್ರೀತಿಗೆ ಪಾತ್ರರಾಗುತ್ತಿದ್ದಾರೆ ಎಂದರೆ ಸಕ್ಸಸ್‌ನ ನಶೆಯಲ್ಲಿ ಅವರಾರೂ ಬಂಧಿಗಳಾದವರಲ್ಲ.- ಈಗ ಎಲ್ಲರೂ ಗೆಲ್ಲಲೇ ಬೇಕು ಎನ್ನುವ ಒತ್ತಡದಲ್ಲಿದ್ದಾರೆ. ಸೋಲಿನ ವಾಸ್ತವ ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ. ಸೋಲನ್ನು ಕ್ಷಮಿಸುವ ಗುಣ ನಮಗೆ ಇಲ್ಲ. ಸ್ಟಾರ್‌ಡಮ್ ಅನ್ನು ನಿಭಾಯಿಸುವ ಕಲೆಯೂ ಗೊತ್ತಿರಬೇಕು. ಸೋಲನ್ನು ಪ್ರೀತಿಸುವ ತಾಳ್ಮೆಯೂ ತಿಳಿದಿರಬೇಕು.
- ಪ್ರೇಕ್ಷಕ ಕೂತಲ್ಲಿಯೇ ಚಿತ್ರಗಳು ಸಿಗುತ್ತಿವೆ. ಆತ ತನ್ನ ಬಳಿ ಬರುವ ಎಲ್ಲಾ ಭಾಷೆಯ, ಎಲ್ಲಾ ಚಿತ್ರಗಳನ್ನು ನೋಡುತ್ತಿದ್ದಾನೆ. ಭಾಷೆಯ ಬೇಲಿಗಳನ್ನು ದಾಟಿ ಹೋಗಿದ್ದಾನೆ. ಸಿನಿಮಾಗಿಂತ ಹೆಚ್ಚಾಗಿ ಪ್ರೇಕ್ಷಕನೇ ಈಗ ಪ್ಯಾನ್ ಇಂಡಿಯಾ, ಪ್ಯಾನ್ ವರ್ಲ್ಡ್ ಆಗಿದ್ದಾನೆ. ಭಾಷೆಯ ಬೇಲಿ ಇಲ್ಲದ ಪ್ರೇಕ್ಷಕನ ಮುಂದೆ ಯಾವ ಸಿನಿಮಾ ಇಡಬೇಕು ಎಂಬುದು ಸವಾಲು. ಅದನ್ನು ಈ ತಲೆಮಾರಿನ ನಿರ್ದೇಶಕರು, ನಟರು, ತಂತ್ರಜ್ಞರು ಸಮರ್ಥವಾಗಿ ಮಾಡುತ್ತಿದ್ದಾರೆ ಅಥವಾ ಮಾಡಲಿದ್ದಾರೆ ಎಂಬ ನಂಬಿಕೆ ಇದೆ.
ಮೈಸೂರಿನ 100 ವರ್ಷ ಹಳೆಯ ಮನೆಯಲ್ಲಿ ಫಾದರ್ ಶೂಟಿಂಗ್: ನೂರು ವರ್ಷಗಳ ಇತಿಹಾಸ ಇರುವ ಮೈಸೂರಿನ ಒಂದು ಹಳೆಯ ಮನೆಯಲ್ಲಿ ರಾಜಮೋಹನ್ ನಿರ್ದೇಶನದ ‘ಫಾದರ್’ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಪ್ರಕಾಶ್ ರೈ, ಡಾರ್ಲಿಂಗ್ ಕೃಷ್ಣ ಹಾಗೂ ಅಮೃತಾ ಅಯ್ಯಂಗಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆರ್ ಚಂದ್ರು ಅವರು ಆರ್‌ಸಿ ಸ್ಟುಡಿಯೋ ಮೂಲಕ ನಿರ್ಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಆರ್ ಚಂದ್ರು, ‘ಇದು ನಮ್ಮ ಆರ್‌ಸಿ ಸ್ಟುಡಿಯೋಸ್‌ನ ಮೊದಲ ಚಿತ್ರ. ಈ ಚಿತ್ರಕ್ಕೆ ಗ್ರ್ಯಾಂಡ್ ಫಾದರ್ ಪ್ರಕಾಶ್ ರೈ ಅವರೇ. ‘ತಾಜ್‌ಮಹಲ್’ ಸಿನಿಮಾದಂತೆಯೇ ಭಾವುಕವಾಗಿ ಆವರಿಸಿಕೊಳ್ಳುವ ಸಿನಿಮಾ’ ಎಂದರು. ನಿರ್ದೇಶಕ ರಾಜ್ ಮೋಹನ್, ಛಾಯಾಗ್ರಾಹಕ ಸುಜ್ಞಾನ್, ದಯಾಳ್ ಪದ್ಮನಾಭನ್ ಇದ್ದರು.
ಮೂರೇ ವರ್ಷದಲ್ಲಿ ನಾನು ಹೇಗೆ ಬೆಳೆದೆ ಎಂದು ಎಲ್ಲರೂ ಕೇಳುತ್ತಾರೆ. ಅದರ ಹಿಂದೆ....: ರಕ್ಷಕ್ ಬುಲೆಟ್ ವಿಡಿಯೋ ರಿಲೀಸ್!
ಆರ್‌ಸಿ ಸ್ಟುಡಿಯೋ ನಿರ್ಮಾಣದಲ್ಲಿ ಪ್ರಕಾಶ್ ರೈ ಕತೆ: ಆರ್‌ಸಿ ಸ್ಟುಡಿಯೋಸ್ ಮೂಲಕ ನಿರ್ಮಾಪಕರಾಗಿರುವ ನಿರ್ದೇಶಕ ಆರ್ ಚಂದ್ರು, ಪ್ರಕಾಶ್ ರೈ ಬಳಿ ಸಿನಿಮಾ ಕತೆ ಕೇಳಿದ್ದಾರೆ. ಆ ಕತೆಯನ್ನು ಆರ್ ಚಂದ್ರು ನಿರ್ಮಿಸಲಿದ್ದು, ಈ ಕತೆಯನ್ನು ಪ್ರಕಾಶ್ ರೈ ಅವರೇ ನಿರ್ದೇಶಿಸುವ ಸಾಧ್ಯತೆ ಇದೆ.