
ವಿಶ್ವದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾದ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಸ್ಯಾಂಡಲ್‌ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ಭಾಗಿಯಾಗಿದ್ದಾರೆ. ಹೀಗಾಗಿ ದಂಪತಿ ಮುಂಬೈನಲ್ಲಿ ಪಾಪರಾಜಿಗಳ ಕಣ್ಣಿಗೆ ಬಿದ್ದರು. ವಿಮಾನ ನಿಲ್ದಾಣದಲ್ಲಿ ಹೊರ ಬರುತ್ತಿರುವ ವಿಡಿಯೋ ವೈರಲ್ ಆಗಿದೆ.
ಮುಂಬೈ ವಿಮಾನ ನಿಲ್ದಾಣದಲ್ಲಿ ಪತ್ನಿ ರಾಧಿಕಾ ಪಂಡಿತ್ ಜೊತೆ ಯಶ್ ಕಾಣಿಸಿಕೊಂಡಾಗ ಅಭಿಮಾನಿಗಳು ಸಪ್ರೈಸ್ ಆಗಿದ್ದಾರೆ. ಇಷ್ಟು ದಿನ ಉದ್ದನೆಯ ಕೂದಲು ಮತ್ತು ಗಡ್ಡದಿಂದ ಅಭಿಮಾನಿಗಳ ಮುಂದೆ ಕಾಣಿಸುತ್ತಿದ್ದ ರಾಕಿಂಗ್ ಸ್ಟಾರ್ ಈಗ ತನ್ನ ಹೇರ್ ಸ್ಟೈಲ್ ಬದಲಾಯಿಸಿಕೊಂಡಿದ್ದು, ಸಂಪೂರ್ಣವಾಗಿ ತಲೆಯ ಕೂದಲು ತೆಗೆಸಿಕೊಂಡು ಮಾಮೂಲಿ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಸರಿ ಸುಮಾರು 2017ರಿಂದ ರಾಕಿಂಗ್ ಸ್ಟಾರ್ ಉದ್ದನೆಯ ಕೂದಲಿನಿಂದಲೇ ಅಭಿಮಾನಿಗಳ ಮುಂದೆ ಕಾಣಿಸಿಕೊಂಡಿದ್ದು, ಅವರ ಸಂಪೂರ್ಣ ಲುಕ್ ಬದಲಾಗಿತ್ತು. ಇದೀಗ ಟಾಕ್ಸಿಕ್ ಮತ್ತು ರಾಮಾಯಣ ಚಿತ್ರದಲ್ಲಿ ಯಶ್ ನಟಿಸುತ್ತಿದ್ದು, ಶೂಟಿಂಗ್ ಹಂತದಲ್ಲಿದೆ.
ಇನ್ನು ಕೂದಲಿನ ಹೊಸ ಲುಕ್ ಹಲವಾರು ಊಹಾಪೋಹಗಳಿಗೆ ಕಾರಣವಾಗಿದೆ. ಇದು ಟಾಕ್ಸಿಕ್ ಚಿತ್ರದ ಹೊಸ ಲುಕ್ ಇರಬಹುದು ಎಂದು ಕೆಲವರು ಭಾವಿಸಿದರೆ, ಅಲ್ಲ ಇದು ರಾಮಾಯಣ ಆಗಿರಬಹುದು ಎಂದಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಕಪ್ಪು ಬಣ್ಣ ಉಡುಪಿನಲ್ಲಿ ಯಶ್ ಕಾಣುತ್ತಿದ್ದರು. ಪತ್ನಿ ರಾಧಿಕಾ ಸ್ಟೈಲಿಶ್ ಗಾಗಲ್ ಮತ್ತು ಬಿಳಿ ಮತ್ತು ಕಪ್ಪು ಮಿಶ್ರಿತ ಪೋಲ್ಕ ಡಾಟ್ ಡ್ರೆಸ್‌ನಲ್ಲಿ ಚೆಂದವಾಗಿ ಕಾಣುತ್ತಿದ್ದರು. ಯಶ್ ಮಾಡಿಸಿರುವುದು ಮಲ್ಲೆಟ್ ಕೇಶ ವಿನ್ಯಾಸ (Mullet Hairstyles) ಎನ್ನಲಾಗಿದೆ. ಇದನ್ನು ಯಾರು ಮಾಡಿದರು ಎಂಬುದು ತಿಳಿದುಬಂದಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.