ನಟ ಯಶ್ ಅವರು ಸದ್ಯ ಎರಡು ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬಾಲಿವುಡ್‌ನ ರಾಮಾಯಣ ಸಿನಿಮಾ ಅದರಲ್ಲಿ ಒಂದಾದರೆ, ಇನ್ನೊಂದು ಗೀತೂ ಮೋಹನ್ ದಾಸ್ ನಿರ್ದೇಶನದ ಟಾಕ್ಸಿಕ್..
ಕನ್ನಡದ ಹೆಮ್ಮೆಯ ನಟ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರ ಹೊಸ ಹೇರ್ ಸ್ಟೈಲ್ ಸಖತ್ ವೈರಲ್ ಆಗ್ತಿದೆ. ಕೆಜಿಎಫ್ ನಲ್ಲಿ ಉದ್ದ ಕೂದಲು ಬಿಟ್ಟು ಜುಟ್ಟು ಮಾಡಿಕೊಂಡಿದ್ದ ನಟ ಯಶ್, ಬಳಿಕ ಹೊಸ ಹೇರ್ ಸ್ಟೈಲ್‌ಗೆ ಮೊರೆ ಹೋಗಿದ್ದರು. ಇದೀಗ, ಮತ್ತೊಂದು ರೀತಿಯ ಕೇಶ ವಿನ್ಯಾಸದಲ್ಲಿ ನಟ ಯಶ್ ಸಖತ್ ಮಿಂಚಿಂಗ್ ಆಗಿದ್ದಾರೆ. ನೋಡಿದ್ರಾ? ನೋಡಿಲ್ಲ ಅಂದ್ರೆ ನೋಡಿ, ಹೇಗಿದೆ ಹೇಳಿ ಹೊಸ ಹೇರ್ ಸ್ಟೈಲ್...!
ಹೌದು, ನಟ ಯಶ್ ಅವರು ಸದ್ಯ ಎರಡು ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬಾಲಿವುಡ್‌ನ ರಾಮಾಯಣ ಸಿನಿಮಾ ಅದರಲ್ಲಿ ಒಂದಾದರೆ, ಇನ್ನೊಂದು ಗೀತೂ ಮೋಹನ್ ದಾಸ್ ನಿರ್ದೇಶನದ ಟಾಕ್ಸಿಕ್. ಕೆಜಿಎಫ್ ಸಿನಿಮಾದ ಬಳಿಕ ನಟ ಯಶ್ ಅವರು ಪ್ಯಾನ್ ಇಂಡಿಯಾ ಸ್ಟಾರ್ ಅಗಿ ಮಿಂಚುತ್ತಿದ್ದಾರೆ. ಅಷ್ಟೇ ಅಲ್ಲ, ಜಗತ್ತಿನಾದ್ಯಂತ ಅವರಿಗೆ ಫ್ಯಾನ್ ಫಾಲೋವರ್ಸ್ ಕ್ರಿಯೇಟ್ ಆಗಿದ್ದಾರೆ.
'ಕೆಜಿಎಫ್'ನಲ್ಲೇ ಅದನ್ನು ಮಾಡಿದ್ದಾರೆ ನಟ ಯಶ್, ರಾಮಾಯಣದಲ್ಲೇ ಮೊದಲು ಎಂಬುದು ಶುದ್ಧ ಸುಳ್ಳು!
ಪ್ಯಾನ್ ಇಂಡಿಯಾ ಸ್ಟಾರ್ ನಟ ಯಶ್ ಅವರು ಇಂದು ಏರಿರುವ ಎತ್ತರ ಸಾಮಾನ್ಯವಾದುದಲ್ಲ. ಇಂಟರ್‌ನ್ಯಾಷನಲ್ ಲೆವಲ್‌ನಲ್ಲಿ ಕನ್ನಡದ ನಟರೊಬ್ಬರಿಗೆ ಅತ್ಯಂತ ಡಿಮಾಂಡ್ ಇದೆ ಎಂದರೆ ಅದು ನಟ ಯಶ್ ಅವರಿಗೆ ಎನ್ನಬಹುದು. ಕನ್ನಡ ಸಿನಿಮಾವನ್ನು ಪ್ಯಾನ್ ಇಂಡಿಯಾ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ನಟ ಯಶ್ ಹಾಗು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಸಲ್ಲುತ್ತದೆ ಎಂದರೆ ಸುಳ್ಳೇನೂ ಅಲ್ಲ.
ಅಪರ್ಣಾ ಸಾವಿಗೆ ಯಾಕಿಷ್ಟು ಕಂಬನಿ, ಸಾವಿನ ಬಳಿಕವೂ ಜೀವಿಸೋದು ಅಂದ್ರೇನು ಅಂತ ಹೇಳಿಕೊಟ್ರಾ..?
ಸದ್ಯಕ್ಕೆ ಎರಡು ಸಿನಿಮಾ ಪ್ರಾಜೆಕ್ಟ್‌ಗಳಲ್ಲಿ ನಟ ಯಶ್ ಬ್ಯುಸಿ ಆಗಿದ್ದಾರೆ. ಒಂದು, ಬಾಲಿವುಡ್ ರಾಮಾಯಣ ಚಿತ್ರ. ಅದಕ್ಕೆ ನಿರ್ಮಾಪಕರಾಗಿಯೂ ಯಶ್ ಭಾಗಿಯಾಗಿದ್ದಾರೆ. ಆ ಚಿತ್ರದಲ್ಲಿ ಬಾಲಿವುಡ್ ನಟ ರಣಬೀರ್ ಕಪೂರ್ ಅವರು ನಾಯಕರಾಗಿದ್ದು, ರಾಮನ ಪಾತ್ರ ಪೋಷಿಸುತ್ತಿದ್ದಾರೆ ಎನ್ನಲಾಗಿದೆ. ಸೀತೆಯಾಗಿ ನಟಿ ಸಾಯಿ ಪಲ್ಲವಿ ಕಾಣಿಸಿಕೊಳ್ಳಲಿದ್ದು, ರಾವಣನಾಗಿ ಯಶ್ ನಟಿಸಲಿದ್ದಾರೆ ಎಂದಿವೆ ಸುದ್ದಿ ಮೂಲಗಳು. ಇನ್ನೊಂದು ಚಿತ್ರ ಮಲಯಾಳಂ ನಿರ್ದೇಶಕಿ ಗೀತೂ ಮೋಹನ್‌ದಾಸ್ ಅವರ 'ಟಾಕ್ಸಿಕ್' ಸಿನಿಮಾ.
ಬೆಂಗಳೂರಲ್ಲೆ ಬೇಕಾದಷ್ಟು ಜಾಗ ಸಿಗ್ತವೆ, ಮಾರಿದ್ರೆ ತುಂಬಾ ರೇಟೂ ಬರುತ್ತೆ; ರಾಕಿಂಗ್ ಸ್ಟಾರ್ ಯಶ್!
ಒಟ್ಟನಲ್ಲಿ, ನಟ ಯಶ್ ಪ್ಯಾನ್ ವರ್ಲ್ಡ್ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ರಾಮಾಯಣ ಶೂಟಿಂಗ್ ಸದ್ಯ ಕಾಪಿ ರೈಟ್ ಸಮಸ್ಯೆಯಿಂದ ಸ್ವಲ್ಪ ಕಾಲದ ಮಟ್ಟಿಗೆ ಶೂಟಿಂಗ್ ನಿಲ್ಲಿಸಿದೆ. ಆದರೆ, ಟಾಕ್ಸಿಕ್ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಆದರೆ, ಟಾಕ್ಸಿಕ್ ಸಿನಿಮಾದ ಶೆಡ್ಯೂಲ್ ಹೇಗಿದೆ, ಎಲ್ಲಿದೆ. ಎಷ್ಟು ದಿನಗಳ ಕಾಲ ಯಾವ ಲೊಕೇಶನ್‌ಗಳಲ್ಲಿ ನಡೆಯಲಿದೆ ಎಂಬ ಮಾಹಿತಿಯನ್ನು ಚಿತ್ರದ ಟೀಮ್ ಬಹಿರಂಗ ಪಡಿಸಿಲ್ಲ. ಒಟ್ಟಿನಲ್ಲಿ, ಟಾಕ್ಸಿಕ್ ಹಾಗು ರಾಮಾಯಣ ಇವೆರಡೂ ಬಿಗ್ ಬಜೆಟ್ ಚಿತ್ರಗಳೇ ಆಗಿವೆ ಎಂಬುದು ಗಮನಿಸಬೇಕಾದ ಸಂಗತಿ.
ಸುದೀಪ್ ಯಾರನ್ನ ಬಾಸ್ ಅಂತಾರೆ..? ಅದ್ಯಾಕೆ ಅಂತ್ಲೂ ಹೇಳಿದಾರೆ, ಹೀಗೂ ಉಂಟೇ ಅನ್ಬೇಡಿ!