ರಿಯಲ್ ಸ್ಟಾರ್ ಉಪೇಂದ್ರ ಡೈರೆಕ್ಷನ್ನಲ್ಲಿ ಮ್ಯಾಜಿಕ್ ಮಾಡ್ತಾರೆ. ಹೀಗಾಗಿ ಉಪ್ಪಿ ಡೈರೆಕ್ಷನ್ನಲ್ಲಿ ಸಿನಿಮಾ ಬರಲಿ ಅಂತ ಅಭಿಮಾನಿಗಳು ಆಗಾಗ ಹರಕೆ ಕಡ್ತಾರೆ. ಪೂಜೆ ಮಾಡಿಸ್ತಾರೆ. ಕಳೆದ ಏಳು ವರ್ಷದಿಂದ ರಿಯಲ್ ಸ್ಟಾರ್ ನಿರ್ದೇಶನದಲ್ಲಿ ಒಂದೇ ಒಂದು ಸಿನಿಮಾ ಬಂದಿರಲಿಲ್ಲ.
ರಿಯಲ್ ಸ್ಟಾರ್ ಉಪೇಂದ್ರ ಡೈರೆಕ್ಷನ್ನಲ್ಲಿ ಮ್ಯಾಜಿಕ್ ಮಾಡ್ತಾರೆ. ಹೀಗಾಗಿ ಉಪ್ಪಿ ಡೈರೆಕ್ಷನ್ನಲ್ಲಿ ಸಿನಿಮಾ ಬರಲಿ ಅಂತ ಅಭಿಮಾನಿಗಳು ಆಗಾಗ ಹರಕೆ ಕಡ್ತಾರೆ. ಪೂಜೆ ಮಾಡಿಸ್ತಾರೆ. ಕಳೆದ ಏಳು ವರ್ಷದಿಂದ ರಿಯಲ್ ಸ್ಟಾರ್ ನಿರ್ದೇಶನದಲ್ಲಿ ಒಂದೇ ಒಂದು ಸಿನಿಮಾ ಬಂದಿರಲಿಲ್ಲ. ಹೀಗಾಗಿ ಉಪ್ಪಿಯ ರೀಯಲ್ ಫ್ಯಾನ್ಸ್ ದೇವಸ್ಥಾನದಲ್ಲಿ ಪೂಜೆ ಮಾಡಿ ಹರಕೆ ಹೊತ್ತಿದ್ರು. ಈಗ ಅವರ ಹರಕೆ ಫಲಿಸಿದೆ. ಉಪ್ಪಿ ಡೈರೆಕ್ಷನ್ನಲ್ಲಿ ಯುಐ ಸಿನಿಮಾ ಬರುತ್ತಿದೆ. ರಿಲೀಸ್ ಆಯ್ತು ಉಪ್ಪಿ ಡೈರೆಕ್ಷನ್ನ 'ಯುಐ' ಟೀಸರ್. ಈಗ AI ತಂತ್ರಜ್ನಾನದ ಟ್ರೆಂಡ್ ನಡೀತಿದೆ. ಆದ್ರೆ ಸಿನಿಮಾ ಜಗತ್ತಲ್ಲಿ ಈಗ UI ಟ್ರೆಂಡ್ ಶುರುವಾಗಿದೆ.
ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ ನಟಿಸಿರುವ 'UI' ಚಿತ್ರದ ಅಫೀಷಿಯಲ್ ಟೀಸರ್ ರಿಲೀಸ್ ಆಗಿದೆ. AI ಜಮಾನದಲ್ಲಿ ಉಪ್ಪಿ 'UI' ಕಥೆ ಹೇಳೋಕೆ ಬರ್ತಿದ್ದಾರೆ. UI ಟೀಸರ್ಗಾಗಿ ಆದ ಗಲಾಟೆಗಳು ಒಂದಾ ಎರಡ. ಉಪ್ಪಿ ಅಭಿಮಾನಿಗಳು ಯುಐ ಟೀಸರ್ಗಾಗಿ ಪ್ರೊಟೆಸ್ಟ್ ಮಾಡಿದ್ರು. ಯುಐ ಸಿನಿಮಾ ನಿರ್ಮಾಪಕರು ಟೀಸರ್ ಕೊಡಿ ಬಾಸ್ ಅಂತ ಉಪ್ಪಿ ಜೊತೆ ಪರಿ ಪರಿಯಾಗಿ ಕೇಳಿಕೊಂಡಿದ್ರು. ಕೊನೆಗೆ ರಿಯಲ್ ಸ್ಟಾರ್ ಉಪೇಂದ್ರ ತನ್ನ ಹುಟ್ಟುಹಬ್ಬಕ್ಕೆ ಟೀಸರ್ ಕೊಡ್ತೇನೆ ಅಂತ ಅನೌನ್ಸ್ ಮಾಡಿ ಕತ್ತಲು ಕತ್ತಲು ಟೀಸರ್ ತೋರಿಸಿ ಚಮಕ್ ಕೊಟ್ಟಿದ್ರು. ಈಗ ಸೂಪರ್ ಸ್ಟಾರ್ ಸೂಪರ್ ಟೀಸರ್ ರಿಲೀಸ್ ಮಾಡಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ ರಾಯಲ್ ಆಗಿ ಕೊಂಬಿರೋ ಕದುರೇ ಏರಿ ಬಂದಿದೆ. ಯುಐ ಟೀಸರ್ ನೋಡುತ್ತಿದ್ರೆ ಉಪೇಂದ್ರ ಈ ಭಾರಿ ಫ್ಯಾಂಟಸಿ ಜಗತ್ತಿಗೆ ಎಂಟ್ರಿ ಕೊಟ್ಟಂತೆ ಕಾಣ್ತಿದೆ. ಯುಐ ಲೋಕಕ್ಕೆ ಜಿಗಿದ ಪ್ರೇಕ್ಷಕರು ವಾವ್ಹ್ ಎನ್ನುತ್ತಾರೆ. ಮೇಕಿಂಗ್ ಬಿಜಿಎಂ ಮೂಲಕ ಕಣ್ಮನ ಸೆಳೆಯೋ ಯುಐ ಟೀಸರ್ ಡಾರ್ಕ್ ಥೀಮ್ ನಲ್ಲಿ ಯುಐ ಯೂನಿವರ್ಸ್ ಸೃಷ್ಟಿಯಾಗಿದೆ. ಹೀಗಾಗಿ ಈ ಸಿನಿಮಾ ಮೇಲಿದ್ದ ನಿರೀಕ್ಷೆ ದುಪ್ಪಟ್ಟಾಗುತ್ತೆ. UI ಟೀಸರ್ ನೋಡುತ್ತಿದ್ರೆ ಇಡೀ ಮನುಕುಲದ ಚರಿತ್ರೆಯನ್ನು ಉಪೇಂದ್ರ ತೆರೆದಿಡುತ್ತಿದ್ದಾರಾ ಅನ್ನಿಸುತ್ತೆ. ಆಡಂ-ಈವ್‌ನಿಂದ ಟೀಸರ್ ಶುರುವಾದಂತೆ ಕಾಣುತ್ತೆ.
ಅಲ್ಲಿಂದ ಮುಂದೆ ನಾಗರೀಕತೆ ಬೆಳೆದು ಕೈಗಾರೀಕರಣ, ಆಧುನಿಕರಣದಿಂದ ಪ್ರಪಂಚ ಹೇಗೆಲ್ಲಾ ಬದಲಾಯ್ತು ಎನ್ನುವುದು ಒಮ್ಮೆ ಕಣ್ಮುಂದೆ ಬರುವಂತಿದೆ ಯುಐ ಟೀಸರ್.. ಕೆಟ್ಟದನ್ನು ಅಳಿಸಿ, ಒಳ್ಳೆಯದನ್ನು ಉಳಿಸೋ ಕಲ್ಕಿ ಅವತಾರದಲ್ಲಿ ಉಪ್ಪಿ ಬಂದಂತಿದೆ. ಯು ಅಂದ್ರೆ ನೀನು ಐ ಅಂದ್ರೆ ನಾನು.. ಯುಐ ಅಂದ್ರೆ ನಿನ್ನೊಳಗಿನ ನಾನು ಅಂತ ಅರ್ಥ ಬರುತ್ತೆ. ಉಪೇಂದ್ರ ಸಿನಿಮಾದಲ್ಲಿ ನಾನು ಆಗಿದ್ದ ರಿಯಲ್ ಸ್ಟಾರ್ ಉಪ್ಪಿ2 ಸಿನಿಮಾದಲ್ಲಿ ನೀನು ಆಗಿದ್ರು. ಈಗ ನೀನು ನಾನು ಸೇರಿಸಿ ಯುಐ ಮೂವಿ ಆಗಿದೆ. ಈ ಬಗ್ಗೆ ಉಪ್ಪಿ ಏನ್ ಹೇಳ್ತಾರೆ ಕೇಳ್ಬಿಡಿ. ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹಾಗೂ ತೆಲುಗಿನ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ 'UI' ಟೀಸರ್ ಲಾಂಚ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ರು.
ಅಭಿಮಾನಿಗಳ ನಿಧನ ಬೇಸರದಲ್ಲಿ ನಟ ಯಶ್: ಟಾಕ್ಸಿಕ್ ಶೂಟಿಂಗ್‌ಗೆ ಬ್ರೇಕ್ ಹಾಕಿ ಗೋವಾ ಸೇರಿದ ನಟ!
ಉಪ್ಪಿ ಆಪ್ತರು ಕೂಡ ಕಾರ್ಯಕ್ರಮಕ್ಕೆ ಬಂದು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಈ ಸಿನಿಮಾದಲ್ಲಿ ರೀಷ್ಮಾ ನಾಣಯ್ಯ ಹಾಗು ನಿಧಿ ಸುಭಯ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಜಿ. ಮನೋಹರನ್ ಹಾಗೂ ಕೆ. ಪಿ ಶ್ರೀಕಾಂತ್ 'UI' ಚಿತ್ರವನ್ನು ನಿರ್ಮಿಸಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದ್ದು ಉಪೇಂದ್ರ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಹೆಚ್. ಸಿ ವೇಣು ಛಾಯಾಗ್ರಹಣ ಚಿತ್ರಕ್ಕಿದೆ. ಅಚ್ಯುತ್ ಕುಮಾರ್, ಆರ್ಮುಗ ರವಿಶಂಕರ್, ಸಾಧು ಕೋಕಿಲ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಸಧ್ಯದಲ್ಲೇ ಯುಐ ಟ್ರೈಲರ್ ಕೂಡ ರಿಲೀಸ್ ಆಗಲಿದೆ.