ಡ್ರೆಸ್ ಮಾಡ್ಕೊಳ್ಳಕ್ಕೆ ಹುಡುಗಿಯರಿಗಿಂತ ತರುಣ್ ಜಾಸ್ತಿ ಟೈಮ್ ತಗೋತಾರೆ, ಅವರಿಗೆ ಜಾಸ್ತಿ ನಾಚಿಕೆ: ಸೋನಾಲ್

By Govindaraj S  |  First Published Nov 3, 2024, 1:03 PM IST

ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸೋನಲ್‌ ಮೊಂಥೆರೋ ಹಾಗೂ ತರುಣ್ ಸುಧೀರ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ತಮ್ಮದೇ ಆದಂತಹ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. 


ಸ್ಯಾಂಡಲ್‌ವುಡ್‌ ಸ್ಟಾರ್​ ಡೈರೆಕ್ಟರ್ ತರುಣ್ ಸುಧೀರ್ ಹಾಗೂ ಸೋನಲ್‌ ಮೊಂಥೆರೋ ಇಬ್ಬರು ಕಳೆದ ಆಗಸ್ಟ್ ತಿಂಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟು, ಹನಿಮೂನ್‌ಗೆ ಮಾಲ್ಡೀವ್ಸ್‌ಗೆ ಸಹ ಹೋಗಿ ಬಂದಿದ್ದರು. ಇತ್ತೀಚೆಗೆ ದೀಪಾವಳಿ ಹಬ್ಬವನ್ನು ಇವರಿಬ್ಬರು ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಿದ್ದರು. ಈ ನಡುವೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸೋನಾಲ್‌ ಹಾಗೂ ತರುಣ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ತಮ್ಮದೇ ಆದಂತಹ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. 

ರ್ಯಾಪಿಡ್ ಫೈರ್‌ನಲ್ಲಿ ತರುಣ್ ಹಾಗೂ ಸೋನಾಲ್‌ಗೆ ಸಂದರ್ಶಕಿ ಎರಡು ಸ್ಲೇಟ್ ಕೊಟ್ಟು ಪ್ರಶ್ನೆಗಳನ್ನು ಕೇಳುತ್ತಾರೆ. ಅದಕ್ಕೆ ಉತ್ತರವನ್ನು ಅವರಿಬ್ಬರು ಸ್ಲೇಟ್ ಮೇಲೆ ಬರೆದು ತೋರಿಸಿ ತಮ್ಮ ಅಭಿಪ್ರಾಯಗಳನ್ನು ತಿಳಿಸಬೇಕು. ಮೊದಲ ಬಾರಿಗೆ ತರುಣ್ ಅವರ ಮನೆಗೆ ಬಂದಾಗ ಸೋನಾಲ್ ಮಾಡಿಕೊಟ್ಟ ಅಡುಗೆ ಏನು? ಎಂದಾಗ ತರುಣ್ ಸುಧೀರ್ ಕಬಾಬ್, ಸೋನಲ್‌ ಮೊಂಥೆರೋ ಡಯಟ್ ಫುಡ್ ಬಾಯ್ಲ್ಡ್ ರೈಸ್ ಎಂದು ಬರೆಯುತ್ತಾರೆ. ಆಗ ತರುಣ್ ಬಾಯ್ಲ್ಡ್ ರೈಸ್ ಅಲ್ಲ ಕಬಾಬ್ ಮಾಡಿಕೊಟ್ಟಿದ್ರಿ ಅಂದ್ರು. ವಿಶೇಷವಾಗಿ ಸೋನಾಲ್ ಮನೆಗೆ ಮೊದಲ ಬಾರಿಗೆ ಭೇಟಿ ನೀಡಿದಾಗಲೂ ಕಬಾಬ್ ಹಾಗೂ ದಾಲ್ ರೈಸ್ ಅನ್ನೇ ಸೋನಾಲ್ ಮಾಡಿಕೊಟ್ಟಿದ್ರು ಎಂದರು.

Tap to resize

Latest Videos

undefined

70 ಪರ್ಸೆಂಟ್ ಯಶಸ್ವಿನಿ, 30% ಗಗನಾಳನ್ನು ಲವ್ ಮಾಡ್ತೀನಿ ಎಂದ ಗಿಲ್ಲಿ ನಟ: ಆದರೆ ರಕ್ಷಿತಾ ಹೇಳಿದ್ದೇ ಬೇರೆ!

ತರುಣ್ ಹಾಗೂ ಸೋನಾಲ್‌ ಇವರಿಬ್ಬರಲ್ಲಿ ಯಾರಿಗೆ ಬೇಗ ಸಿಟ್ಟು ಬರುತ್ತೆ? ಎಂದಾಗ ಸೋನಾಲ್ ಅವರು ಸ್ಲೇಟ್ ಮೇಲೆ ಬಾಣದ ಗುರುತು ಬರೆದು ತರುಣ್‌ಗೆ ಎಂದು ತೋರಿಸುತ್ತಾರೆ. ಹೌದು ನನಗೆ ಬೇಗ ಸಿಟ್ಟು ಬರುತ್ತೆ ಎಂದು ತರುಣ್ ಮುಗುಳ್ನಗುತ್ತಾ ಹೇಳುತ್ತಾರೆ. ತರುಣ್‌ಗೆ ಸಿಟ್... ಸಿಟ್ಟು ಬರಲ್ಲ ಒಟ್ಟಿನಲ್ಲಿ ಸಿಟ್ಟು ಮಾತ್ರ ಬರುತ್ತೆ ಎಂದು ಸೋನಾಲ್ ನಗುತ್ತಾ ಹೇಳುತ್ತಾರೆ. ನಿಮ್ಮಿಬ್ಬರಲ್ಲಿ ಯಾರಿಗೆ ಒಸಿಡಿ ಪ್ರಾಬ್ಲಮ್ ಇದೆ. ಅಂದ್ರೆ ತುಂಬಾ ನೀಟ್‌ನೆಸ್ ಇರಬೇಕು, ಕ್ಲೀನ್ ಇರಬೇಕು? ಎಂಬ ಪ್ರಶ್ನೆಗೆ ಸೋನಾಲ್ ಮತ್ತೆ ಸ್ಲೇಟ್ ಮೇಲೆ ಬಾಣದ ಗುರುತು ಬರೆದು ತರುಣ್‌ ಎಂದು ತೋರಿಸುತ್ತಾರೆ. ಆಗ ತರುಣ್ ನನಗೆ ಕ್ಲೀನ್ ಇರಬೇಕು ಎನ್ನುತ್ತಾರೆ. 

ಸೋನಾಲ್ ನಟಿಸಿರುವ ಯಾವ ಚಿತ್ರ, ಯಾವ ಪಾತ್ರ ತರುಣ್‌ಗೆ ಇಷ್ಟ? ಎಂದಾಗ ತರುಣ್ ಬನಾರಸ್ ಸಿನಿಮಾ ಎಂದು, ಸೋನಾಲ್ ರಾಬರ್ಟ್ ಚಿತ್ರ ಎಂದು ಬರೆದು ತೋರಿಸುತ್ತಾರೆ. ನಿಮ್ಮಿಬ್ಬರಲ್ಲಿ ಯಾರಿಗೆ ನಾಚಿಕೆ ಸ್ವಭಾವ ಜಾಸ್ತಿ? ಎಂಬ ಪ್ರಶ್ನೆಗೆ ಸೋನಾಲ್ ನಗುತ್ತಾ 100 ಪರ್ಸೆಂಟ್ ತರುಣ್ ಎಂದು ನಗುತ್ತಾ ಹೇಳುತ್ತಾರೆ. ಆಗ ತರುಣ್ ಸಹ ನಗುತ್ತಾ ನಾನೇ ಅನ್ನುತ್ತಾರೆ. ಜೊತೆಗೆ ನಾನು ಎಲ್ಲೆ ಇದ್ದರೂ ನಾಚಿಕೆ ಸ್ವಭಾವ ಇರುತ್ತದೆ. ಆದರೆ ಕೆಲಸದ ವಿಚಾರದಲ್ಲಿ ಇದು ಅನ್ವಯವಾಗುವುದಿಲ್ಲ ಎಂದು ಹೇಳುತ್ತಾರೆ. ಸೋನಾಲ್ ಸಹ ಮೊದಲ ಬಾರಿಗೆ ನಾವು ಭೇಟಿಯಾದಾಗ ಇವರು ಜಾಸ್ತಿ ಮಾತಾಡೇ ಇಲ್ಲ ಅಂದ್ರು.

ಹೊಟ್ಟೆಲಿರೋದು ನಂದೆ ಮಗು ಅಂತ ಕೈ ಎತ್ತಿದ ತ್ರಿವಿಕ್ರಮ್: ಪಕ್ಕದಲ್ಲಿ ಇರೋ ಆ ಕೈ ಯಾಕೆ ಬಿಡ್ತಿಲ್ಲ ಎಂದ ಕಿಚ್ಚ ಸುದೀಪ್

ಸೋನಾಲ್‌ ಹಾಗೂ ತರುಣ್ ಇವರಿಬ್ಬರಲ್ಲಿ ಖರ್ಚು ಜಾಸ್ತಿ ಮಾಡೋದು ಯಾರು? ಎಂದು ಕೇಳಿದಾಗ ತರುಣ್ ನಾನೇ ಅನ್ನುತ್ತಾರೆ. ಸೋನಾಲ್ ಸಹ ತರುಣ್ ಜಾಸ್ತಿ ಖರ್ಚು ಮಾಡುತ್ತಾರೆ. ಯಾಕಂದ್ರೆ ಎಲ್ಲ ಹುಡುಗೀರೂ ಜಾಸ್ತಿ ಶಾಪಿಂಗ್ ಅಂತ ಖರ್ಚು ಮಾಡುತ್ತಾರೆ. ಆದರೆ ಅದು ನಮ್ಮಲ್ಲಿ ಉಲ್ಟಾ. ಹಾಗೇ ನಾನು ನಾನೇ ಶಾಪಿಂಗ್ ಹೋಗ್ತೀನಿ. ತರುಣ್‌ಗೆ ಶಾಪಿಂಗ್ ಅಂದ್ರೆ ಇಷ್ಟ. ಡ್ರೆಸ್ ಮಾಡ್ಕೊಳ್ಳಕ್ಕೆ ಹುಡುಗೀರು ಜಾಸ್ತಿ ಟೈಮ್ ತಗೋತಾರೆ. ಆದರೆ ನಮ್ಮನೇಲಿ ತರುಣ್ ಜಾಸ್ತಿ ಟೈಮ್ ತಗೋತಾರೆ. ಆದರೆ ನಾನು ಮಾತ್ರ ಬೇಗ ರೆಡಿ ಆಗ್ತೀನಿ. ಆಕಸ್ಮಾತ್ ಮೇಕಪ್, ಹೇರ್‌ಸ್ಟೈಲ್ ಇದ್ದರೆ ನಾನು ಸ್ವಲ್ಪ ಲೇಟ್ ಆಗಿ ರೆಡಿ ಆಗ್ತೀನಿ ಎಂದು ನಗುತ್ತಾ ಸೋನಾಲ್ ಹೇಳಿದ್ದಾರೆ. 

click me!