ಬರ್ತಡೇಗೂ ಮುನ್ನವೇ ಡೆತ್ ಡೇ ಮಾಡಿಕೊಂಡ ನಿರ್ದೇಶಕ ಗುರುಪ್ರಸಾದ್!

By Sathish Kumar KH  |  First Published Nov 3, 2024, 12:18 PM IST

ಖ್ಯಾತ ನಿರ್ದೇಶಕ ಗುರುಪ್ರಸಾದ್ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಠ ಮತ್ತು ಎದ್ದೇಳು ಮಂಜುನಾಥ ಸಿನಿಮಾಗಳ ಮೂಲಕ ಖ್ಯಾತಿ ಪಡೆದಿದ್ದ ಗುರುಪ್ರಸಾದ್, ತಮ್ಮ ಜನ್ಮದಿನಕ್ಕೆ ಮುನ್ನವೇ ಜೀವನಕ್ಕೆ ಅಂತ್ಯ ಹಾಡಿದ್ದಾರೆ.


ಬೆಂಗಳೂರು (ನ.03): ಕನ್ನಡ ಚಿತ್ರರಂಗದ (Sandalwood) ಖ್ಯಾತ ನಿರ್ದೇಶಕ ಮಠ ಸಿನಿಮಾ ಖ್ಯಾತಿಯ ಡೈರೆಕ್ಟರ್ ಗುರುಪ್ರಸಾದ್ (Director Guruprasad) ಅವರು ಮೂಲತಃ ರಾಮನಗರದವರು. ರಾಮನಗರದಲ್ಲಿ ನವೆಂಬರ್ 02, 1972 ರಂದು ಜನಿಸಿದ್ದರು. ಆದರೆ, ಇದೀಗ ಅವರ ಜನ್ಮದಿನಕ್ಕೆ ಮುನ್ನವೇ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಗುರುಪ್ರಸಾದ್ ಕನ್ನಡ ಚಲನಚಿತ್ರೋದ್ಯಮ ವಿಶೇಷ ನಿರ್ದೇಶಕರಾಗಿದ್ದರು. ಮಠ ಸಿನಿಮಾದ ಮೂಲಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗದಲ್ಲಿ ಮುನ್ನೆಲೆಗೆ ಬಂದ ಅವರು ಮೊದಲ ಸಿನಿಮಾದಿಂದಲೇ ಯಶಸ್ವಿಯನ್ನು ಕಂಡಿದ್ದರು. ನಿರ್ದೇಶಕರಾಗಿ ಅವರ ಎರಡನೇ ಚಿತ್ರ ಎದ್ದೇಳು ಮಂಜುನಾಥ ಕೂಡ ಯಶಸ್ಸಿನ ಕದ ತಟ್ಟಿತ್ತು.ಈ  ಎರಡೂ ಚಲನಚಿತ್ರಗಳು ಸಕಾರಾತ್ಮಕ ವಿಮರ್ಶೆಗಳೊಂದಿಗೆ ಜನರಿಂದ ಸ್ವೀಕರಿಸಲ್ಪಟ್ಟವು. ಈ ಚಿತ್ರಗಳು ಅನೇಕ ಪ್ರಶಸ್ತಿ ವಿಭಾಗಗಳಿಗೆ ಪರಿಗಣಿಸಲ್ಪಟ್ಟವು. ಸಮಾನದ ಜೈನತೆಯನ್ನು ವಿಡಂಬನೆ ಮೂಲಕ ತೆರೆಯ ಮೇಲೆ ತೋರಿಸಿದ್ದರು. ಇದೀಗ ಅವರೇ ಆತ್ಮಹತ್ಯೆಗೆ ಶರಣಾಗಿದ್ದಾರೆ.

Latest Videos

ಇದನ್ನೂ ಓದಿ : ಮಠ ಖ್ಯಾತಿಯ ಕನ್ನಡ ನಿರ್ದೇಶಕ ಗುರು ಪ್ರಸಾದ್ ಆತ್ಮಹತ್ಯೆ ಶರಣು?

ಗುರುಪ್ರಸಾದ್ ಅವರ ನಿರ್ದೇಶನದ ಚಿತ್ರಗಳು:
2006    ಮಠ  -  ಚೊಚ್ಚಲ ಸಿನಿಮಾ ನಿರ್ದೇಶನ. ಮಠ ಸಿನಿಮಾಗೆ ಭರ್ಜರಿ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
2009    ಎದ್ದೇಳು ಮಂಜುನಾಥ ಈ ಸಿನಿಮಾಗಾಗಿ ಅತ್ಯುತ್ತಮ ಚಿತ್ರಕಥೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದರು.    
2013    ಡೈರೆಕ್ಟರ್ ಸ್ಪೆಷಲ್  
2017    ಎರಡನೆ ಸಲಾ  
2024    ರಂಗನಾಯಕ -  ಇದು ಅವರ ನಿರ್ದೇಶನದಲ್ಲಿ ಪೂರ್ಣಗೊಳಿಸಿದ ಕೊನೆಯ ಚಿತ್ರವಾಗಿದೆ.
TBA    † ಅದೆಮಾ - ಚಿತ್ರೀಕರಣ ನಡೆಯುತ್ತಿತ್ತು.

ಜನ್ಮಭೂಮಿ ಬಗ್ಗೆ ಹೇಳಿಕೊಂಡಿದ್ದ ಗುರುಪ್ರಸಾದ್: 'ನನ್ನದು ಕನಕಪುರ ತಾಲೂಕು, ಹುಟ್ಟಿ ಬೆಳೆದಿದ್ದು, ಓದಿದ್ದೆಲ್ಲ ಅಲ್ಲೇ. ಅಲ್ಲಿ ನಮಗೆ ಕನ್ನಡ ಬಿಟ್ಟು ಬೇರೆ ಯಾವುದೇ ಭಾಷೆಯ ಇನ್‌ಫ್ಲುಯೆನ್ಸ್‌ ಇಲ್ಲ. ಅಲ್ಲಿ ತಮಿಳು, ತೆಲುಗು ಮಾತನಾಡುವ ಭಾಷಿಗರು ತುಂಬಾ ಕಡಿಮೆ. ಹೀಗಾಗಿ, ನಮಗೆ ಕನ್ನಡ ಭಾಷೆ ಬಿಟ್ಟರೆ ಬೇರೆ ಭಾಷೆ ಮಾತನಾಡಲು ಬರುವುದಿಲ್ಲ. ಹಿಂದಿ ಸೇರಿದಂತೆ ಬೇರೆ ಯಾವುದೇ ಭಾಷೆ ನನಗೆ ಸರಿಯಾಗಿ ಮಾತನಾಡಲು ಬರಲ್ಲ. ನಮ್ಮ ಕನ್ನಡದ ಬಗ್ಗೆ ನನಗೆ ತುಂಬಾ ಅಭಿಮಾನವಿದೆ. ನಾನು ನಮ್ಮ ಕನ್ನಡ ಭಾಷೆಯನ್ನು ಯಾವುದೇ ಅಪಭ್ರಂಶವಿಲ್ಲದೇ ಮಾತನಾಡುತ್ತೇನೆ ಎಂದು ಸ್ವತಃ ವಿಡಿಯೋವೊಂದರಲ್ಲಿ ನಿರ್ದೇಶಕ ಗುರುಪ್ರಸಾದ್ ಹೇಳಿಕೊಂಡಿದ್ದರು.

ಇದನ್ನೂ ಓದಿ: ಕನ್ನಡ ಭಾಷೆ ಬಗ್ಗೆ ಗುರುಪ್ರಸಾದ್ ಹೇಳಿದ್ದೇನು; ಅಪಭ್ರಂಶವಿಲ್ಲದೇ ಮಾತನಾಡುವ ಬಗ್ಗೆ ಏನಂದ್ರು?

ಪೊಲೀಸ್ ಠಾಣೆಯಲ್ಲಿ ದೂರು ದಾಖಲು: ಕನ್ನಡ ಸಿನಿಮಾ ನಿರ್ದೇಶಕ ಗುರುಪ್ರಸಾದ್ ಅವರು 2019ರಲ್ಲಿ ಜಯನಗರದ (Jayanagara) ಟೋಟಲ್ ಕನ್ನಡ ಪುಸ್ತಕ ಮಳಿಗೆಯಲ್ಲಿ ಪುಸ್ತಕ ಮತ್ತು ಖಾಲಿ ಸಿಡಿಗಳನ್ನು ಖರೀದಿ ಮಾಡಿ ಹಣ ಕೊಟ್ಟಿರಲಿಲ್ಲವಂತೆ. ಈ ಹಿನ್ನೆಲೆಯಲ್ಲಿ ಪುಸ್ತಕ ಅಂಗಡಿ ಮಾಲೀಕ ಲಕ್ಷ್ಮೀಕಾಂತ್ ಅವರು ನಟ ಹಾಗೂ ನಿರ್ದೇಶಕ ಗುರುಪ್ರಸಾದ್ ಅವರ ವಿರುದ್ಧ ಅ.20ರಂದು ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಗುರುಪ್ರಸಾದ್ ಅವರು ಬಂದು 75 ಪುಸ್ತಕಗಳ 5 ಸೆಟ್‌ಗಳನ್ನು ಖರೀದಿ ಮಾಡಿ ಡಿಸ್ಕೌಂಟ್ ಕಳೆದು ಪ್ರತು ಸೆಟ್‌ಗೆ 13 ಸಾವಿರ ರೂ.ಗಳಂತೆ ಐದು ಸಟ್‌ಗೆ 65 ಸಾವಿರ ರೂ. ಹಣವನ್ನು ನೀಡಬೇಕಿತ್ತು. ಆದರೆ, ಈವರೆಗೆ ಹಣವನ್ನು ಕೊಟ್ಟಿಲ್ಲ ಎಂದು ದೂರು ನೀಡಿದ್ದರು. ಜೊತೆಗೆ, ಹಣ ಕೇಳಲು ಕರೆ ಮಾಡಿದರೆ ಸ್ವೀಕರಿಸುತ್ತಿರಲಿಲ್ಲ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದರು. ಈ ಬಗ್ಗೆ ಪೊಲೀಸರು ಎನ್‌ಸಿಆರ್ ದಾಖಲಿಸಿ ಕೇಸ್ ಬಗೆಹರಿಸುವ ಯತ್ನ ಮಾಡಿದ್ದರು.

click me!