'ಮಠ' ಖ್ಯಾತಿಯ ಕನ್ನಡ ನಿರ್ದೇಶಕ ಗುರು ಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕನ್ನಡದ ಹೆಸರಾಂತ ನಿರ್ದೇಶಕ ಗುರುಪ್ರಸಾದ್ ಕೊನೆಯುಸಿರು ಎಳೆದಿದ್ದಾರೆ. ನಿರ್ದೇಶಕ ಗುರು ಪ್ರಸಾದ್ ಅವರಿಗೆ 52 ವರ್ಷ ವಯಸ್ಸಾಗಿತ್ತು..
ಜಗ್ಗೇಶ್ ಹಾಗೂ ಹಲವಾರು ಖ್ಯಾತ ಕಲಾವಿದರ ನಟನೆಯ 'ಮಠ' ಸಿನಿಮಾ ಖ್ಯಾತಿಯ ಕನ್ನಡ ನಿರ್ದೇಶಕ ಗುರು ಪ್ರಸಾದ್ (Guruprasad) ನಿಧನರಾಗಿದ್ದಾರೆ. ಸಾವಿಗೆ ಶರಣಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಎನ್ನಲಾಗುತ್ತಿದೆ. ಕನ್ನಡ ಹೆಸರಾಂತ ನಿರ್ದೇಶಕ ಗುರುಪ್ರಸಾದ್ ಕೊನೆಯುಸಿರು ಎಳೆದಿದ್ದಾರೆ. ನಿರ್ದೇಶಕ ಗುರು ಪ್ರಸಾದ್ ಅವರಿಗೆ 52 ವರ್ಷ ವಯಸ್ಸಾಗಿತ್ತು. ಸಾವಿಗೆ ಶರಣಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಎನ್ನಲಾಗುತ್ತಿದೆ. ಮೃತರಾಗಿ ಹತ್ತು ದಿನಗಳು ಆಗಿದ್ವಾದಿರಬಹುದು ಎನ್ನಲಾಗುತ್ತಿದ್ದು, ಕೊಳೆತ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ
2006 ರಲ್ಲಿ 'ಮಠ' ಸಿನಿಮಾ ಮೂಲಕ ನಿರ್ದೇಶಕ ಆಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರು. ಮಠ, ಎದ್ದೇಳು ಮಂಜುನಾಥ, ಡೈರೆಕ್ಟರ್ ಸ್ಪೆಷಲ್ , ಎರಡನೇ ಸಲ ಸಿನಿಮಾಗಳನ್ನ ನಿರ್ದೇಶಿಸಿದ್ರು. 'ರಂಗನಾಯಕ' ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರು. ಆದರೆ ಈ ಚಿತ್ರ ಭಾರೀ ಸೋಲು ಅನುಭವಿಸಿತ್ತು. ರಂಗನಾಯಕ ಚಿತ್ರದ ಸುದ್ದಿಗೋಷ್ಠಿ ವೇಳೆ ಸಾಕಷ್ಟು ಸುದ್ದಿಯಾಗಿದ್ದರು. ಕನ್ನಡದ ಬಗ್ಗೆ, ಕನ್ನಡ ಸಿನಿಮಾ ಬಗ್ಗೆ ಬಹಳಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದರು.
undefined
ಕಾಂತಾರ ಪ್ರೀಕ್ವೆಲ್ಗೆ ರಾಜಮೌಳಿ ಮೆಚ್ಚಿದ್ದ ಆ್ಯಕ್ಷನ್ ಡೈರೆಕ್ಷನ್ ಟೊಡರ್ ಲ್ಯಾಜರೋವ್!
ಬಿಗ್ ಬಾಸ್ ಸೇರಿದಂತೆ, ಕಿರುತೆರೆಯಲ್ಲೂ ಸಾಕಷ್ಟು ರಿಯಾಲಿಟಿ ಶೋ ಗಳಲ್ಲಿ ಭಾಗಿ ಆಗಿದ್ರು. ಬಿಗ್ ಬಾಸ್ ನಲ್ಲೂ ಮಿಂಚಿದ್ದ ಗುರು ಪ್ರಸಾದ್, ವಿವಾದಗಳಿಂದಲೂ ಆಗಾಗ ಹೆಸರುವಾಸಿಯಾಗಿದ್ದರು. ಇದೀಗ ಆತ್ಮಹತ್ಯೆ ಮೂಲಕ ಗುರು ಪ್ರಸಾದ್ ಸಿನಿಪ್ರಿಯರ ಕಣ್ಣಲ್ಲಿ ನೀರು ತರಿಸಿದ್ದಾರೆ. ಯಾಕೆ ಆತ್ಮಹತ್ಯೆ ಮಾಡಿಕೊಂಡರು? ಅಂತಹ ಕಾರಣವೇನಿತ್ತು ಎಂಬುದು ಇನ್ನಷ್ಟೇ ಬಹಿರಂಗ ಆಗಬೇಕಿದೆ.
ಗುರುಪ್ರಸಾದ್ ನಿರ್ದೇಶನದ 'ರಂಗನಾಯಕ' ಚಿತ್ರದಲ್ಲಿ ನವರಸನಾಯಕ ಜಗ್ಗೇಶ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಇದ್ದಕ್ಕಿದ್ದಂತೆ ನಿರ್ದೇಶಕ ಗುರುಪ್ರಸಾದ್ ಕಣ್ಮರೆಯಾಗಿದ್ದಾರೆ. ಈ ಸಂಗತಿ ತಿಳಿದು ಕನ್ನಡ ಸಿನಿಪ್ರಿಯರು ದಿಗ್ಭ್ರಾಂತರಾಗಿದ್ದಾರೆ. ಹಲವರು ಈ ಸುದ್ದಿ ತಿಳಿದು ಅದೆಷ್ಟು ಶಾಕ್ ಆಗಿದ್ದಾರೆ ಎಂದರೆ, ಈ ಸಂಗತಿಯನ್ನು ನಂಬಲಿಕ್ಕೂ ಕಷ್ಟವಾಗುತ್ತಿದೆ ಎಂದೇ ಹೇಳುತ್ತಿದ್ದಾರೆ.
ಬಿಗ್ ಬಾಸ್ ಮನೇಲಿರೋ ಧರ್ಮ ಭೂಮಿ ತೂಕದವ್ರಂತೆ! ಅಷ್ಟೊಂದು ಸಾಚಾ ಅಂತಿರೋದ್ಯಾಕೆ?
ಆದರೆ, ನಿರ್ದೇಶಕ ಗುರುಪ್ರಸಾದ್ ಇನ್ನಿಲ್ಲ ಎಂಬ ಸಂಗತಿಯನ್ನು ಕನ್ನಡದ ಸಿನಿಪ್ರಿಯರು ಅರಗಿಸಿಕೊಳ್ಳಲೇಬೇಕಾಗಿದೆ. ಸಾಕಷ್ಟು ಖ್ಯಾತಿ ಪಡೆದಿದ್ದ ಗುರುಪ್ರಸಾದ್ ಜೀವನದಲ್ಲಿ ಆತ್ಮಹತ್ಯೆಗೆ ಶರಣಾಗುವಂಥದ್ದು ಏನಾಗಿತ್ತು ಎಂಬ ನೋವು ಈಗ ಎಲ್ಲರನ್ನೂ ಕಾಡತೊಡಗಿದೆ.