ರಾತ್ರಿ ಫ್ರಿಡ್ಜ್‌ ಒಳಗಡೆ ಹೋಗಿ ಮಲಗ್ತಾರೆ ನಟಿ ಮಧುಬಾಲಾ.. ಸೀಕ್ರೆಟ್ ರಿವೀಲ್ ಮಾಡಿದ ಅಕ್ಷಯ್‌ ಕುಮಾರ್!

Published : Feb 28, 2025, 01:29 PM ISTUpdated : Feb 28, 2025, 01:40 PM IST
ರಾತ್ರಿ ಫ್ರಿಡ್ಜ್‌ ಒಳಗಡೆ ಹೋಗಿ ಮಲಗ್ತಾರೆ ನಟಿ ಮಧುಬಾಲಾ.. ಸೀಕ್ರೆಟ್ ರಿವೀಲ್ ಮಾಡಿದ ಅಕ್ಷಯ್‌ ಕುಮಾರ್!

ಸಾರಾಂಶ

ಅಲ್ಲಿ ವೇದಿಕೆ ಮೇಲೆ ಮಾತನ್ನಾಡಿದ ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ 'ಮಧುಬಾಲಾ ಅವರೊಂದಿಗೆ ನಾನು ಇಪ್ಪತ್ತು ವರ್ಷಗಳ ಹಿಂದೆ ಸಿನಿಮಾದಲ್ಲಿ ನಟಿಸಿದ್ದೆ. ಈಗಲೂ ಅವರು ಹಾಗೇ ಸುಂದರಿಯಾಗಿಯೇ ಇದ್ದಾರೆ. ರಾತ್ರಿ ಅವರು ರೆಫ್ರಿಜರೇಟರ್‌ನಲ್ಲಿ ಹೋಗಿ ಮಲಗ್ತಾರೆ..

ರೋಜಾ ಖ್ಯಾತಿಯ ನಟಿ ಮಧುಬಾಲಾ (Madhubala) ಅವರು ಬಹಳಷ್ಟು ವರ್ಷಗಳ ಬಳಿಕ ಮತ್ತೆ ಸಿನಿಮಾರಂಗಕ್ಕೆ ಮರಳಿದ್ದಾರೆ. ಇತ್ತೀಚೆಗೆ ಅವರು ಮತ್ತೆ ತಾವು ಸಿನಿಮಾಗಳಲ್ಲಿ ಅಭಿನಯಿಸಲು ಇಷ್ಟಪಡುವುದಾಗಿ ಓಪನ್ ಹೇಳಿಕೆ ನೀಡಿದ್ದರು. ಕನ್ನಡ ಚಿತ್ರರಂಗ ಹಾಗೂ ನಟ-ನಿರ್ದೇಶಕ ರವಿಚಂದ್ರನ್ (Crazy Star Ravichandran) ಬಗ್ಗೆ ಕೂಡ ಹೊಗಳಿ ಮಾತನ್ನಾಡಿದ್ದರು. ಅದೇ ರೀತಿ, ಇದೀಗ ಬಾಲಿವುಡ್ ಸಿನಿಮಾವೊಂದರ ಈವೆಂಟ್‌ನಲ್ಲಿ ನಟಿ ಮಧುಬಾಲಾ ಹಾಜರಿ ಹಾಕಿದ್ದರು. 

ಅಲ್ಲಿ ವೇದಿಕೆ ಮೇಲೆ ಮಾತನ್ನಾಡಿದ ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ (Akshay Kumar) 'ಮಧುಬಾಲಾ ಅವರೊಂದಿಗೆ ನಾನು ಇಪ್ಪತ್ತು ವರ್ಷಗಳ ಹಿಂದೆ ಸಿನಿಮಾದಲ್ಲಿ ನಟಿಸಿದ್ದೆ. ಈಗಲೂ ಅವರು ಹಾಗೇ ಸುಂದರಿಯಾಗಿಯೇ ಇದ್ದಾರೆ. ಇದು ನಿಜವಾಗಿಯೂ ಅಚ್ಚರಿಯ ಸಂಗತಿಯೇ ಸರಿ. ಬಹುಶಃ ರಾತ್ರಿ ಅವರು ರೆಫ್ರಿಜರೇಟರ್‌ನಲ್ಲಿ ಹೋಗಿ ಮಲಗ್ತಾರೆ..' ಎಂದರು. ಅದಕ್ಕೆ ಅಲ್ಲಿರುವ ಎಲ್ಲರೂ ನಕ್ಕುನಕ್ಕು ಸುಸ್ತಾದ್ರು. 

Open ಆಗಿಯೇ ನಟ ರವಿಚಂದ್ರನ್ ಬಗ್ಗೆ ಹೇಳಿದ ಮಧುಬಾಲಾ; 'ಅಣ್ಣಯ್ಯ' ನಟಿ ಹೇಳಿದ್ದೇನು?

ನಟ ಅಕ್ಷಯ್ ಕುಮಾರ್ ಮಾತಿಗೆ ನಟಿ ಮಧುಬಾಲಾ ಅವರು ಮುಗುಳ್ನಗೆ ಸೂಸಿದ್ದೂ ಅಲ್ಲದೇ ತಮ್ಮ ಮಾಸದ ಸೌಂದರ್ಯ ಹೊಗಳಿದ ಬಗ್ಗೆ ಅಕ್ಷಯ್ ಕುಮಾರ್‌ಗೆ 'ಥ್ಯಾಂಕ್ಸ್' ಹೇಳಿದರು, ಸಾಕಷ್ಟು ಸ್ಲಿಮ್ ಹಾಘು ಹಾಟ್ ಆಗಿರುವ ನಟಿ ಮಧುಬಾಲಾ ತಮ್ಮ ಸೌಂದರ್ಯವನ್ನು ಕಾಪಾಡಿಕೊಂಡಿದ್ದು ಎದ್ದು ಕಾಣುವಂತಿದೆ. ಬಾಲಿವುಡ್ ಹಾಗೂ ಸೌತ್ ಚಿತ್ರಗಳು ಎಂಬ ಬೇಧವಿಲ್ಲದೇ ನಟಿ ಮಧುಬಾಲಾ ಅಂದೂ ಕೂಡ ನಟಿಸಿದ್ದರು. ಇಂದೂ ಕೂಡ ಅದಕ್ಕೆ ಸಿದ್ಧವಾಗಿದ್ದಾರೆ. 

ಅಂದಹಾಗೆ, ನಟಿ ಮುಧುಬಾಲಾ ಅವರು ಸಂದರ್ಶನವೊಂದರಲ್ಲಿ ತಾವು ಕನ್ನಡದ ಅಣ್ಣಯ್ಯ ಚಿತ್ರದಲ್ಲಿ ನಟಿಸಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ. ಕನ್ನಡದ ನಟ ಹಾಗೂ ನಿರ್ದೇಶಕ ರವಿಚಂದ್ರನ್ ಅವರಷ್ಟು ಚೆನ್ನಾಗಿ ಸಾಂಗ್ ಶೂಟಿಂಗ್ ಮಾಡೋರು ತುಂಬಾ ವಿರಳ ಎಂದು ರವಿಮಾಮನನ್ನು ಹೊಗಳಿದ್ದಾರೆ ಮಧುಬಾಲಾ. ಸಂಸಾರ, ಮಕ್ಕಳ ಜವಾಬ್ದಾರಿ ಎಲ್ಲವನ್ನೂ ಚೆನ್ನಾಗಿ ನಿಭಾಯಿಸಿ ಈಗ ಮತ್ತೆ ಚಿತ್ರರಂಗದಲ್ಲಿ ನಟಿಸಲು ತಾವು ರೆಡಿ ಆಗಿದ್ದಾಗಿ ಘೋಷಿಸಿದ್ದಾರೆ ನಟಿ ಮಧುಬಾಲಾ. ಅವರ ಲುಕ್ ಕೂಡ ಈಗಲೂ ಚೆನ್ನಾಗಿಯೇ ಇದೆ. 

ಹುಚ್ಚ ವೆಂಕಟ್‌ಗೆ ಅಣ್ಣಾವ್ರ ಟಿಪ್ಸ್‌.. ಮತ್ತೆ ಬಂದ ವೆಂಕ; ವಿಡಿಯೋ ನೋಡಿದ್ರೆ ತಲೆ ಸುತ್ತಿ ಬೀಳಲ್ಲ ಬಿಡಿ..!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಈಗ್ಲೇ ದರ್ಶನ್ 'ಡೆವಿಲ್'ಗೆ ಯಾಕೆ ಟೆನ್ಷನ್..? ನರ್ತಕಿ ಚಿತ್ರಮಂದಿರದ ಮೇಲೆ ಬೇರೆ ಸ್ಟಾರ್‌ಗಳ ಕಣ್ಣು ಬಿತ್ತಾ?
ಬೆಂಗಳೂರಿನಲ್ಲಿ ಬಿಗ್ ಮ್ಯೂಸಿಕಲ್ ನೈಟ್; JAM JUNXION"ನಲ್ಲಿ ಚಂದನ್ ಶೆಟ್ಟಿ ಸೇರಿದಂತೆ ಪ್ರಸಿದ್ಧ ಬ್ಯಾಂಡ್ ಧಮಾಕಾ!