
ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಬಾಲಿವುಡ್ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿಲ್ಲವಾದರೂ ಸಹ ಸ್ಟಾರ್ ನಟರ ಜೊತೆಗಿನ ಸಿನಿಮಾ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ನಾಯಕಿಯಾಗಿ ಜನರಿಗೆ ಹತ್ತಿರವಾಗುವುದಕ್ಕಿಂತ ಹೆಚ್ಚಾಗಿ ಮಿಡಲ್ ಕ್ಲಾಸ್ ಹುಡುಗೆ ಜೀವನದಲ್ಲಿ ಬೆಳೆದ ರೀತಿಗೆ ಹೆಚ್ಚು ಹತ್ತಿರವಾಗಿದ್ದಾರೆ. ಕೊಡಗು ಮತ್ತು ಬೆಂಗಳೂರಿನಲ್ಲಿ ಮನೆ ಮಾಡಿಕೊಂಡ ರಶ್ಮಿಕಾ ಮಂದಣ್ಣ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದಕ್ಕೆ ಹೈದರಾಬಾದ್‌ನಲ್ಲಿ ಮನೆ ಖರೀದಿಸಿದ್ದರು, ಈಗ ಬಾಂದ್ರದಲ್ಲಿ ಮನೆ ಮಾಡಿದ್ದಾರೆ. ದುಡ್ಡು ಸಿರಿತನವಿದ್ದರೂ ತಮ್ಮ ಪುಟ್ಟ ತಂಗಿಯನ್ನು ಸಖತ್ ಸಿಂಪಲ್ ಆಗಿ ಬೆಳೆಸುತ್ತಿದ್ದಾರೆ. ತಮ್ಮ ಕೆಲಸದಿಂದ ಆಕೆಯನ್ನು ದೂರ ಇಟ್ಟಿರುವುದು ಯಾಕೆ ಎಂದು ರಿವೀಲ್ ಮಾಡಿದ್ದಾರೆ.
ನೇಹಾ ದೂಪಿಯಾ ಸಂದರ್ಶನದಲ್ಲಿ ಭಾಗಿಯಾದ ರಶ್ಮಿಕಾ ಮಂದಣ್ಣ'ನನಗೆ 10 ವರ್ಷ ತಂಗಿ ಇದ್ದಾಳೆ. ನಮ್ಮಿಬ್ಬರ ನಡುವೆ 16 ವರ್ಷಗಳ ವಯಸ್ಸಿನ ಅಂತರವಿದೆ' ಎನ್ನುತ್ತಾರೆ. ಯಾಕೆ ನೀನು ನನ್ನ ತಂಗಿ ನಮ್ಮ ಬಳಿ ಇಷ್ಟು ಇದೆ ನಾವು ಹೀಗೆ ಇದ್ದೀವಿ ಎಂದು ಯಾರೊಟ್ಟಿಗೆ ಹಂಚಿಕೊಳ್ಳಬಾರದು ಎಂದು ಕಂಡಿಷನ್ ಹಾಕಿರುವುದು ಯಾಕೆ ಎಂದು ಪ್ರಶ್ನೆ ಎದುರಾಗುತ್ತದೆ. 'ನನ್ನ ಪೋಷಕರು ತುಂಬಾ ಸ್ಟ್ರಿಕ್ಟ್ ಆಗಿ ಬೆಳೆಸಿದ್ದಾರೆ. ಇದು ನನ್ನ ಕೆಲಸ ನನ್ನ ಜೀವನ ಹೀಗಾಗಿ ಅವರನ್ನು ಎಳೆಯುವುದು ಸರಿ ಅಲ್ಲ. ಎಳೆಯಬಾರದು ಅಂತ ಅಮ್ಮ ಹೇಳಿದ್ದಾರೆ. ನನ್ನ ತಂಗಿ ಏನ್ ಬೇಕಿದ್ದರೂ ಪಡೆದುಕೊಳ್ಳುವ ಎಲ್ಲಾ ಅವಕಾಶಗಳು ಇದೆ. ಒಂದು ಮಾತು ಹೇಳಿದರೆ ಸಾಕು ಅದು ಅವಳ ಮುಂದೆ ಇರುತ್ತದೆ. ಆದರೆ ಆ ಸೌಲಭ್ಯ ಅವಳಿಗೆ ಸಿಗಬಾರದು ಏಕೆಂದರೆ ಇಂದು ನಾನು ಶ್ರಮ ಪಟ್ಟಿದ್ದಕ್ಕೆ ಈ ರೀತಿ ಇರಲು ಸಾಧ್ಯವಾಗಿದ್ದು. ನನ್ನ ಪೋಷಕರು ನನ್ನನ್ನು ಆ ರೀತಿಯಲ್ಲಿ ಬೆಳೆಸಿದ್ದಾರೆ. ಖಂಡಿತ ಆಕೆಗೆ ನಾನು ಸಾಕಷ್ಟು ಸೆಕ್ಯೂರಿಟಿ ಮತ್ತು ಕಂಫರ್ಟ್ ನೀಡಬಹುದು ಆದರೆ ಆಕೆ ಇನ್ನೂ ಪುಟ್ಟ ಹುಡುಗಿ' ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.
ಕೀರ್ತಿ ಸುರೇಶ್‌ಗೆ ಬಾಯ್‌ಫ್ರೆಂಡ್ ಇದ್ರೂ ಮದುವೆ ಪ್ರಪೋಸಲ್ ಮುಂದಿಟ್ರಾ ನಟ ವಿಶಾಲ್? ಸತ್ಯ ತೆರೆದಿಟ್ಟ ನಿರ್ದೇಶಕ
ಕಿರಿಕ್ ಪಾರ್ಟಿ ಬ್ಲಾಕ್ ಬಸ್ಟರ್ ಹಿಟ್ ಕಾಣುತ್ತಿದ್ದಂತೆ ಗೀತಾ ಗೋವಿಂದಮ್ ತೆಲುಗು ಚಿತ್ರದಲ್ಲಿ ಅವಕಾಶ ಗಿಟ್ಟಿಸಿಕೊಂಡರು. ರಕ್ಷಿತ್ ಶೆಟ್ಟಿ ಜೊತೆ ನಿಶ್ಚಿತಾರ್ಥವಾಗಿದ್ದರೂ ಕೂಡ ವಿಜಯ್ ದೇವರಕೊಂಡ ಜೊತೆ ಚಿತ್ರದಲ್ಲಿ ಲಿಪ್ ಲಾಕ್ ಮಾಡಿದ್ದಕ್ಕೆ ದೊಡ್ಡ ಸೀನ್ ಕ್ರಿಯೇಟ್ ಆಗಿತ್ತು. ಹೀಗಾಗಿ ಮದುವೆ ಅಲ್ಲಿಗೆ ಮುರಿದು ಬಿತ್ತು. ಅಲ್ಲಿಂದ ರಶ್ಮಿಕಾ ವಿರುದ್ಧ ಟ್ರೋಲ್, ನೆಗೆಟಿವ್ ಕಾಮೆಂಟ್‌ಗಳು ಶುರುವಾಯ್ತು. ಇದನ್ನು ಚಾಲೆಂಜ್ ಆಗಿ ತೆಗೆದುಕೊಂಡ ರಶ್ಮಿಕಾ ಮಂದಣ್ಣ ದೊಡ್ಡ ದೊಡ್ಡ ಸಿನಿಮಾ ಪ್ರಾಜೆಕ್ಟ್‌ಗಳಿಗೆ ಕೈ ಹಾಕಿದರು. ಹೀಗಾಗಿ ಬಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟು ಅಲ್ಲಿನ ಸ್ಟಾರ್ ನಟಿಯರನ್ನು ಸೈಡ್‌ಗೆ ಇಟ್ಟಿದ್ದಾರೆ. ಎತ್ತರಕ್ಕೆ ಏರಿದ ರಶ್ಮಿಕಾ ಮಂದಣ್ಣ ಮತ್ತೆ ಕನ್ನಡ ಸಿನಿಮಾ ಕಡೆ ತಿರುಗಿ ನೋಡಲಿಲ್ಲ.
ಗಂಡನ ಅನೈತಿಕ ಸಂಬಂಧದ ಬಗ್ಗೆ ತಿಳಿದು ವಿಚ್ಛೇದನ ಪಡೆದ ಬಿಗ್ ಬಾಸ್ ಸ್ಪರ್ಧಿ; ಮುಂದೆ ಮಗನ ಗತಿ ಏನು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.