
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಹುಡುಗರು ಚಿತ್ರ 'ನೀರಲ್ಲಿ ಸಣ್ಣ ಹನಿಯೊಂದು...' ಹಾಡಿನ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ಗಾಯಕಿ ಸುನೀತಾ ಎರಡನೇ ಮದುವೆಯಾಗಿದ್ದಾರೆ. ಎರಡನೇ ಮದುವೆ ಅದ್ಧೂರಿಯಾಗಿ ನಡೆಯಲು ಮಕ್ಕಳೇ ಕಾರಣವೆಂದು ಹೇಳಿದ್ದಾರೆ.
2ನೇ ಮದ್ವೆಗೆ ಓಕೆ ಎಂದ ಗಾಯಕಿ; ಮಕ್ಕಳ ಸಮ್ಮುಖದಲ್ಲಿ ನಡೆಯಿತು ನಿಶ್ಚಿತಾರ್ಥ!
ಕುಟುಂಬಸ್ಥರು ಹಾಗೂ ಆಪ್ತರು ಮಾತ್ರ ಭಾಗಿಯಾಗಿದ್ದ ಮದುವೆ ಕಾರ್ಯಕ್ರಮ ನಡೆದದ್ದು ಹೈದರಾಬಾದ್‌ನಲ್ಲಿ. ಯಾರನ್ನೂ ಹೆಚ್ಚಾಗಿ ಮದುವೆಗೆ ಆಹ್ವಾನಿಸದ ಕಾರಣ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಅಪ್ಡೇಟ್ಸ್ ನೀಡುವುದಾಗಿ ಹೇಳಿದ್ದರು. ಅದರಂತೆ ಮದುವೆ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಸುನೀತಾ ಹಾಗೂ ರಾಮಕೃಷ್ಣ ಮೇಹೆಂದಿ ಹಾಗೂ ಸಂಗೀತ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದ್ದು, ಸಿನಿ ಆಪ್ತರು ಹೆಜ್ಜೆ ಹಾಕಿದ್ದಾರೆ. ಕಿರಿಯ ವಯಸ್ಸಿನಲ್ಲಿಯೇ ಮೊದಲ ಮದುವೆಯಾಗಿದ್ದ ಸುನೀತಾಗೆ ಇಬ್ಬರು ಮಕ್ಕಳಿವೆ. ಆಕರ್ಶ್ ಹಾಗೂ ಶ್ರೇಯಾ. ಇಬ್ಬರೂ ಮುಂದಾಗಿ ನಿಂದು, ತಾಯಿ ಮದುವೆಗೆ ತಯಾರಿ ಮಾಡಿದ್ದರು.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ; ಮದುವೆ ಸಂಭ್ರಮದ ಫೋಟೋ!
ಡಿಸೆಂಬರ್ 7ರಂದು ಸುನೀತಾ ನಿವಾಸದಲ್ಲಿ ಸರಳ ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿದೆ. ಮೀಡಿಯಾ ಹೌಸ್ ಒಂದರ CEO ಆಗಿ ಕಾರ್ಯ ನಿರ್ವಹಿಸುತ್ತಿರುವ ರಾಮ್ ಸುನೀತಾ ಕುಟುಂಬ ತೋರಿಸುತ್ತಿರುವ ಪ್ರೀತಿಗೆ ನಾನು ಆಭಾರಿ ಎಂದು ಹೇಳಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.