
ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕ, ಗಾಯಕ ರಘು ದೀಕ್ಷಿತ್ ಬಗ್ಗೆ ಯೂಟ್ಯೂಬ್ ಚಾನೆಲ್‌ವೊಂದು ಸುಳ್ಳು ಸುದ್ದಿ ಹಬ್ಬಿಸಿತ್ತು. ಈ ಸುದ್ದಿ ವೈರಲ್ ಸಹ ಆಗುತ್ತಿತು. ಸುಳ್ಳು ಸುದ್ದಿಯಿಂದಾನ್ ವ್ಯೂಯರ್ಸ್ ಪಡೆಯುತ್ತಿದ್ದ ಕಾರಣ ಚಾನೆಲ್ ವಿರುದ್ಧ ದೂರು ದಾಖಲಿಸಲು ನಿರ್ಧರಿಸಿದ್ದಾರೆ. ಇನ್‌ಸ್ಟಾ ಸ್ಟೋರಿಯಲ್ಲಿ ಸ್ಕ್ರೀನ್ ಶಾಟ್ ಶೇರ್ ಮಾಡಿಕೊಂಡು, ಈ ಬಗ್ಗೆ ವ್ಯಂಗ ಆಡಿದ್ದಾರೆ.
'ಇಷ್ಟ ಇಲ್ಲದಿದ್ರೂ ಒತ್ತಾಯಕ್ಕೆ ಶಿವಣ್ಣ 'ಪೋಲೀಸ್ ಬೇಬಿ' ಹಾಡು ಒಪ್ಕೊಂಡೆ'!
ಇತ್ತೀಚಿಗೆ ಯುಟ್ಯೂಬ್ ಚಾನೆಲ್‌ಗಳು ಹೆಚ್ಚಾಗಿವೆ. Subscribers and Viewers ಹೆಚ್ಚಾಗ ಬೇಕು ಎಂಬ ಕಾರಣಕ್ಕೆ ಅರ್ಥವಿಲ್ಲದ ವಿಚಾರಗಳ ಬಗ್ಗೆ ವಿಡಿಯೋ ಮಾಡಿ ಅಪ್ಲೋಡ್ ಮಾಡಲಾಗುತ್ತಿದೆ. ಈ ಹಿಂದೆ ನಟಿ ಮೇಘನಾ ರಾಜ್ ಕೂಡ ಯುಟ್ಯೂಬ್‌ನಲ್ಲಿ ತಮ್ಮ ಪುತ್ರನ ಬಗ್ಗೆ ಹರಿದಾಡುತ್ತಿರುವ ಫೇಕ್ ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಿದ್ದರು.
ರಘು ಸ್ಪಷ್ಟನೆ:
'ರಘು ದೀಕ್ಷಿತ್ ಆತ್ಮಹತ್ಯೆ. ಕಣ್ಣೀರಿನಲ್ಲಿ ಕನ್ನಡ ಚಿತ್ರರಂಗ, ಏನಾಯ್ತು?' ಎಂದು ಹೆಡ್‌ಲೈನ್ ನೀಡಿ ಯುಟ್ಯೂಬ್‌ನಲ್ಲಿ ವಿಡಿಯೋ ಶೇರ್ ಮಾಡಲಾಗಿತ್ತು. ಹಲವು ವರ್ಷಗಳ ಹಿಂದೆ ರಘು ದೀಕ್ಷಿತ್ ಖಿನ್ನತೆಗೆ ಒಳಗಾಗಿ ಅನುಭವಿದ ನೋವನ್ನು ಖಾಸಗಿ ಸಂದರ್ಶವೊಂದರಲ್ಲಿ ಹಂಚಿಕೊಂಡಿದ್ದರು. ಅದರ ಒಂದು ಸಾಲನ್ನು ಹೆಡ್‌ಲೈನ್ ಆಗಿ ಬಳಸಿದ್ದಾರೆ. ಚಾನೆಲ್ ಫೋಟೋವನ್ನು ರಘು ಶೇರ್ ಮಾಡಿಕೊಂಡು 'ಜೀವನದಲ್ಲಿ ಸಾಕಷ್ಟು ನೋಡಿದ್ದೇನೆ, ಆದರೆ ಇದು ಎಲ್ಲವನ್ನೂ ಮೀರಿಸಿದ್ದು,' ಎಂದು ವ್ಯಂಗ್ಯ ಮಾಡಿದ್ದಾರೆ.
ಡ್ರಗ್ಸ್ ಜಾಲದಲ್ಲಿ ಸಂಗೀತ ನಿರ್ದೇಶಕ ರಘು; ಪ್ರಶಾಂತ ಹೇಳಿಕೆ ನಿಜವೇ?
ಹೀಗೆ ಬಿಟ್ಟರೆ ಇಂತಹ ಚಾನೆಲ್‌ಗಳು ಸೋಷಿಯಲ್ ಮೀಡಿಯಾವನ್ನು ದುರ್ಬಳಕೆ ಮಾಡಿಕೊಳ್ಳುತ್ತವೆ, ಎಂದು 'ಈ ಚಾನೆಲ್ ವಿರುದ್ಧ ದೂರು ನೀಡುವುದು ಹೇಗೆ?' ಎಂದು ರಘು ಅಭಿಮಾನಿಗಳನ್ನು ಪ್ರಶ್ನಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.