ನಾನು ಆತ್ಮಚರಿತ್ರೆ ಬರೆದರೆ ಅದು ಖಂಡಿತವಾಗಿಯೂ ವಿವಾದಾತ್ಮಕವಾಗಿ ಇರುತ್ತದೆ. 60 ವಯಸ್ಸಾಗುವವರೆಗೂ ನಾನು ಆತ್ಮಚರಿತ್ರೆ ಬರೆಯಲಾರೆ. ಸದ್ಯ ನನಗೆ ಆ ಧೈರ್ಯವಿಲ್ಲ.
- ಈ ಮಾತು ಹೇಳಿದ್ದು ಮಲಯಾಳಂ ಚಿತ್ರನಟಿ ನವ್ಯಾ ನಾಯರ್. ದರ್ಶನ್ ಜತೆ ಗಜ, ದೃಶ್ಯ ಚಿತ್ರದಲ್ಲಿ ನಟಿಸಿದ ಈ ನಟಿ ಮಲಯಾಳಂನಲ್ಲಿ ಬರೆದ ನವ ರಸಂಗಳ್ ಪುಸ್ತಕ ಧನ್ಯವೀಣಾ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಗೊಂಡಿದೆ. ಆ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಈ ಮಾತು ಹೇಳಿದರು.
ಕಷ್ಟಗಳ ನಡುವೆ ಗಿರಿಜಾ ಲೋಕೇಶ್ ಸಾರ್ಥಕ ಬದುಕು: ಡಾ. ವಿಜಯಮ್ಮ
undefined
ಕನ್ನಡಿಗರು ಈಗಲೂ ನನ್ನನ್ನು ನೆನಪಲ್ಲಿ ಇಟ್ಟುಕೊಂಡಿದ್ದಾರೆ. ಅದಕ್ಕಾಗಿ ಧನ್ಯವಾದ. ನಾನು ಮತ್ತೆ ಚಿತ್ರರಂಗಕ್ಕೆ ಬಂದಿದ್ದು ಒರುತ್ತಿ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು. ಪುಸ್ತಕ ಬಿಡುಗಡೆ ಮಾಡಿದ ಭಾವನಾ ಬೆಳಗೆರೆ ತಾನು 30 ಪುಸ್ತಕಗಳನ್ನು ಹೊರತರುತ್ತಿದ್ದು, ಅದರಲ್ಲಿ 25 ಪುಸ್ತಕಗಳು ಅನುವಾದಗಳಾಗಿವೆ ಎಂದು ತಿಳಿಸಿದರು. ಸಂಚಾರಿ ವಿಜಯ್ ತಾನು ತಮಿಳ್ ಸೆಲ್ವಿ ಅನುವಾದಿಸಿದ ನಾನು ಅವನಲ್ಲ ಅವಳು ಪುಸ್ತಕ ಓದಿದ ಮೇಲೆ ನಾನು ಅವನಲ್ಲ ಅವಳು ಸಿನಿಮಾಗೆ ಒಪ್ಪಿಗೆ ನೀಡಿದ್ದು ಎಂದರು.
ಪುಸ್ತಕ ಅನುವಾದ ಮಾಡಿದ ಜಾನೆಟ್ ಐಜೆ, ಸಂಯೋಜನೆ ಮಾಡಿದ ಜಿಎಸ್ ಯುಧಿಷ್ಠಿರ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಕಲ್ಲೂರು ಕಾರ್ಯಕ್ರಮದಲ್ಲಿ ಇದ್ದರು. ವಂಶಿ ಪ್ರಕಾಶನದ ಪ್ರಕಾಶ್ ಈ ಪುಸ್ತಕ ಪ್ರಕಟಿಸಿದ್ದಾರೆ.