ಸುಮಲತಾ ಪೋಸ್ಟ್ ಅರ್ಥವೇನು? ದರ್ಶನ್ ಕೇಸ್ ಬಗ್ಗೆ ಹೇಳಬೇಕಾಗಿದ್ದು ಎಲ್ಲವೂ ಅಲ್ಲಿದ್ಯಂತೆ ನೋಡಿ..!?

By Shriram Bhat  |  First Published Jul 13, 2024, 8:01 PM IST

ಆದರೆ, ಎಲ್ಲರೂ ಕೇಳುತ್ತಿದ್ದುದು ಒಂದೇ ಪ್ರಶ್ನೆ. ಅದೇನೆಂದರೆ, ದರ್ಶನ್ ಅವರಿಗೆ ತಾಯಿ ಸ್ಥಾನದಲ್ಲಿರುವ ನಟಿ ಹಾಗು ಮಾಜಿ ಸಂಸದೆ ಸುಮಲತಾ ಅಂಬರೀಷ್ ಅವರು ಯಾಕೆ ನಟ ಕೇಸ್‌ ಬಗ್ಗೆ ಎಲ್ಲೂ ಏನು ಬಾಯಿ ಬಿಡುತ್ತಿಲ್ಲ?..


ಬಹುತೇಕ ಎಲ್ಲರಿಗೂ ತಿಳಿದಿರುವಂತೆ, ಕನ್ನಡದ ಖ್ಯಾತ ನಟ ದರ್ಶನ್ (Darshan) ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ನಟ ದರ್ಶನ್ ಪೊಲೀಸ್ ಕಸ್ಟಡಿಯಲಲ್ಲಿ ಇರುವಾಗ, ಚಿತ್ರರಂಗದಲ್ಲಿ ನಟ ದರ್ಶನ್ ಅವರಿಗೆ ಆಪ್ತರಾಗಿರುವ ಯಾರೊಬ್ಬರೂ ಕೂಡ ಅಲ್ಲಿ ಹೋಗಿ ದರ್ಶನ್ ಅವರನ್ನು ಭೇಟಿಯಾಗಿರಲಿಲ್ಲ. ಆದರೆ, ನ್ಯಾಯಾಂಗ ಬಂಧನ ಆಗುತ್ತಿದ್ದಂತೆ, ಒಬ್ಬೊಬ್ಬರಾಗಿ ಜೈಲಿಗೆ ಹೋಗಿ ದರ್ಶನ್ ಅವರನ್ನು ಮಾತನಾಡಿಸಿಕೊಂಡು ಬರುತ್ತಿದ್ದಾರೆ. 

Tap to resize

Latest Videos

ಆದರೆ, ಎಲ್ಲರೂ ಕೇಳುತ್ತಿದ್ದುದು ಒಂದೇ ಪ್ರಶ್ನೆ. ಅದೇನೆಂದರೆ, ದರ್ಶನ್ ಅವರಿಗೆ ತಾಯಿ ಸ್ಥಾನದಲ್ಲಿರುವ ನಟಿ ಹಾಗು ಮಾಜಿ ಸಂಸದೆ ಸುಮಲತಾ ಅಂಬರೀಷ್ (Sumalatha Ambareesh) ಅವರು ಯಾಕೆ ನಟ ದರ್ಶನ್ ಅವರನ್ನು ಭೇಟಿಯಾಗಿಲ್ಲ? ಹಾಗೇ, ಯಾಕೆ ದರ್ಶನ್‌ ಕೇಸ್‌ ಬಗ್ಗೆ ಎಲ್ಲೂ ಏನು ಬಾಯಿ ಬಿಡುತ್ತಿಲ್ಲ? ಕೆಲವು ದರ್ಶನ್ ಆಪ್ತರು ಭೇಟಿಯಾಗಿ ಮಾತನಾಡಿದ ಮೇಲೂ, ಭೇಟಿಯಾಗದೇ ಕೂಡ ಮಾತನಾಡಿದ್ದರೂ ಸುಮಲತಾ ಮಾತ್ರ ಸೈಲೆಂಟ್ ಆಗಿದ್ದರು ಯಾಕೆ? ಈ ಪ್ರಶ್ನೆಗಳಿಗೆ ಸುಮಲತಾ ಅವರು ಅದಾಗಲೇ, ತುಂಬಾ ಹಿಂದೆಯೇ ಉತ್ತರ ಕೊಟ್ಟಿದ್ದರು.

ವಿಷ್ಣುವರ್ಧನ್‌ಗೆ ಗಿಫ್ಟ್ ಕೊಟ್ಟಿದ್ರು ಎಂಜಿಆರ್‌, ಅದ್ನ ಶಿವರಾಜ್‌ಕುಮಾರ್‌ಗೆ ಕೊಟ್ಟಿದ್ದೇಕೆ ವಿಷ್ಣು ದಾದಾ? 

ಹೌದು, ಸುಮಲತಾ ಅವರು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಆ ಬಗ್ಗೆಯೇ ಬರೆದುಕೊಂಡಿದ್ದು ಎನ್ನಬಹುದೇನೋ! ಕಾರಣ, ದರ್ಶನ್ ಅವರು ಕೊಲೆ ಕೇಸಿನಲ್ಲಿ, ಆರೋಪಿಯಾಗಿ ಜೈಲು ಸೇರಿದ ಬಳಿಕವೇ ಸುಮಲತಾ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಆ ಒಂದು ಮೆಸೇಜ್ ಪೋಸ್ಟ್ ಮಾಡಿದ್ದರು. ಅದು 'ಭಗವದ್ಗೀತೆ'ಯಲ್ಲಿ ಶ್ರೀ ಕೃಷ್ಣ ಹೇಳಿದ್ದ ಸಾಲುಗಳು. 'A Lot will go wrong before everything goes right. Just have faith.' ಎಂಬ ಈ ಸಾಲುಗಳನ್ನು ಸುಮಲತಾ ಅವರು ಪೋಸ್ಟ್ ಮಾಡಿದ್ದರು. ಎಲ್ಲವೂ ಸರಿಹೋಗುವ ಮೊದಲು ಬಹಳಷ್ಟು ತಪ್ಪುಗಳು ನಡೆಯುತ್ತವೆ. ಅಚಲ ನಂಬಿಕೆಯಿರಲಿ' ಎಂಬುದು ಕನ್ನಡದಲ್ಲಿ ಈ ವಾಕ್ಯದ ಅರ್ಥ.

ಆಪ್ತರು ಹೇಳುವ ಪ್ರಕಾರ, ಈ ಪೋಸ್ಟ್ ಮೂಲಕವೇ ಸುಮಲತಾ ಅವರು ಹೇಳಬೇಕಾದ ಎಲ್ಲವನ್ನೂ ಹೇಳಿದ್ದಾರೆ. ಹೇಳಬೇಕಾದ ಜಾಗ ಸದ್ಯಕ್ಕೆ ಅದೇ ಎಂದು ಅರಿತಿದ್ದ ಸುಮಲತಾ ಅವರು, ಯಾರ ಕಣ್ಣಿಗೂ ಬೀಳದೇ, ಯಾರ ಕೈಗೂ ಸಿಗದೇ ದರ್ಶನ್ ವಿಷಯದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಂಡಿದ್ದಾರೆ. ಜೊತೆಗೆ, ಶ್ರೀ ಕೃಷ್ಣ ಹೇಳಿದ ಆ ಮಾತಿನ ಮೇಲೆ ನಂಬಿಕೆ ಇಟ್ಟಿದ್ದಾರೆ. ಜೊತೆಗೆ, ಅದನ್ನೇ ತಮ್ಮ ಆಪ್ತರ ಮೂಲಕ ನಟ ದರ್ಶನ್ ಅವರಿಗೂ ತಲುಪಿಸಿದ್ದಾರೆ. 

'ನಟ ದರ್ಶನ್ ಜೀವನದಲ್ಲಿ ಎಲ್ಲವೂ ಮುಂದೆ ಸರಿ ಹೋಗಲಿಕ್ಕಾಗಿಯೇ ಈಗ ಬಹಳಷ್ಟು ತಪ್ಪುಗಳು ನಡೆದಿವೆ. ಏನೇ ಆದರೂ ನಂಬಿಕೆ ಇರಲಿ' ಎಂಬ ಮಾತನ್ನು ಸುಮಲತಾ ಅವರು ಅಕ್ಷರಶಃ ನಂಬಿರುವಂತೆ ಕಾಣಿಸುತ್ತಿದೆ. ಅದೇ ನಂಬಿಕೆಯಲ್ಲಿಯೇ ಅವರು ದರ್ಶನ್ ಅವರಿಗೆ ಮುಂದೆ ಒಳ್ಳೆಯದಾಗಲಿದೆ, ಹೀಗಾಗಿ ಈಗ ತಾವು ಹೋಗಿ ಮಾಡುವಂಥದ್ದು ಏನೂ ಇಲ್ಲ ಎಂದು ಸ್ವಲ್ಪ ದಿನ ಸೈಲೆಂಟ್ ಆಗಿ ಇದ್ದರು ಎನ್ನಬಹುದು. ಆದರೆ, ನ್ಯಾಯಾಂಗ ಬಂಧನ ಜಾರಿಯಾದ ಬಳಿಕ, ಒಮ್ಮೆ ಜೈಲಿಗೆ ಹೋಗಿ ನಟ ದರ್ಶನ್ ಅವರನ್ನು ಭೇಟಿಯಾಗಿ ಬಂದಿದ್ದಾರೆ. 

ಎನೋ ಇದೆ, ಅಪರ್ಣಾ ಎದುರು ದರ್ಶನ್ ಅಂದು ಪುನೀತ್ ಬಗ್ಗೆ ಹೇಳಿದ್ದ ಮಾತು ಇಂದು ವೈರಲ್ ಆಗ್ತಿದ್ಯಲ್ಲ..!

ಜೈಲಿನಲ್ಲಿ ನಟ ದರ್ಶನ್ ಭೇಟಿಯ ಬಳಿಕ ಮಾಧ್ಯಮದ ಮುಂದೆ ಮಾತನ್ನಾಡಿದ್ದ ಸುಮಲತಾ ಅವರು 'ದರ್ಶನ್ ಪರಿಸ್ಥಿತಿ ನೋಡಿ ತುಂಬಾ ನೋವಾಗಿದೆ. ಆದರೆ, ಕಾನೂನಿನ ಮೇಲೆ ನಂಬಿಕೆಯಿದೆ. ಆದಷ್ಟು ಬೇಗ ದರ್ಶನ್ ಈ ಆರೋಪದಿಂದ ಮುಕ್ತರಾಗಿ ಆಚೆ ಬರಲಿ ಎಂಬುದು ನನ್ನ ಆಶಯ' ಎಂದಿದ್ದಾರೆ. ಆದರೆ, ಮನಸ್ಸಿನಲ್ಲಿ ಅವರಿಗೆ ದೇವರ ಮೇಲೆ ಅಚಲವಾದ ನಂಬಿಕೆ ಇದೆ ಎನ್ನಬಹುದು. ನಟ ದರ್ಶನ್ ಅವರಿಗೆ ಈಗ ಕೆಟ್ಟ ಕಾಲ, ಮುಂದೆ ಒಳ್ಳೆಯ ಕಾಲ ಬರಲಿದೆ' ಎಂಬುದು ಸುಮಲತಾರ ನಿಲುವು ಎನ್ನುತ್ತಿದ್ದಾರೆ ಅವರ ಆಪ್ತರು. 

click me!