ಕಳೆದ ವರ್ಷ ಅನಿವಾರ್ಯ ಕಾರಣಗಳಿಂದ ರದ್ದಾಗಿದ್ದ ಫಿಲಂ ಫೇರ್ ಅವಾರ್ಡ್ ಈಗ ನೀಡಲಾಗಿದೆ. ಹಲವು ಪ್ರಶಸ್ತಿಗಳನ್ನು ಕಾಂತಾರ ಬಾಚಿಕೊಂಡಿದ್ದು, ಫುಲ್ ಡಿಟೇಲ್ಸ್ ಇಲ್ಲಿದೆ...
ಚಿತ್ರರಂಗದಲ್ಲಿಯೇ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದು ಎನಿಸಿರುವ, ಬಹುತೇಕ ಎಲ್ಲಾ ತಾರೆಯರ ಕನಸಾಗಿರುವ ಪ್ರತಿಷ್ಠಿತ ಫಿಲಂ ಫೇರ್ ಅವಾರ್ಡ್ ಲಿಸ್ಟ್ ಬಿಡುಗಡೆಯಾಗಿದೆ. ಇದು 69ನೇ ಫಿಲಂ ಫೇರ್ ಅವಾರ್ಡ್ ಆಗಿದೆ. ಕಳೆದ ವರ್ಷ ಅಂದರೆ 2023 ರಲ್ಲಿ ಬಿಡುಗಡೆಯಾಗಿರುವ ಚಲನಚಿತ್ರಗಳನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅಂದಹಾಗೆ ಇದು ದಕ್ಷಿಣದ ಚಿತ್ರಗಳಿಗೆ ನೀಡುವ ಪ್ರಶಸ್ತಿ. ಅಂದರೆ, ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳ ಸಿನಿಮಾಗಳಿಗೆ ಆಯಾ ಭಾಷೆಯ ಸಿನಿಮಾಗಳೊಟ್ಟಿಗೆ ಹೋಲಿಸಿ ನೋಡಿ ಪ್ರಶಸ್ತಿ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ಪ್ರೇಕ್ಷಕರ ಆನ್ಲೈನ್ ಮತದಾನ ಹಾಗೂ ವಿಮರ್ಶಕರ ಮೆಚ್ಚುಗೆಯ ಆಧಾರದಲ್ಲಿ ನೀಡಲಾಗುತ್ತದೆ. ಕಳೆದ ವರ್ಷವೇ ಈ ಪ್ರಶಸ್ತಿ ಬಿಡುಗಡೆಯಾಗಬೇಕಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಅದನ್ನು ಮುಂದೂಡಲಾಗಿತ್ತು.
ಈ ಪ್ರಶಸ್ತಿಯಲ್ಲಿ ಕನ್ನಡಿಗರಿಗೆ ಹೆಮ್ಮೆ ತರುವ ವಿಷಯವೊಂದು ಪ್ರಕಟವಾಗಿದೆ. ಅದೇನೆಂದರೆ, ಅತ್ಯಂತ ಕಡಿಮೆ ಬಜೆಟ್ನಲ್ಲಿಯೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುವ, ದೇಶ ಮಾತ್ರವಲ್ಲದೇ ವಿದೇಶಿಗರಿಗೂ ಒಂದು ನಾಡಿನ ಸಂಸ್ಕೃತಿಯನ್ನು ತೋರಿಸಲು ಸಾಧ್ಯ ಎಂದು ತೋರಿಸಿಕೊಟ್ಟಿರುವ ರಿಷಬ್ ಶೆಟ್ಟಿಯವರ ಕಾಂತಾರ ಚಿತ್ರ ಮೇಲುಗೈ ಸಾಧಿಸಿದೆ. ಕಾಂತಾರದಲ್ಲಿನ ರಿಷಬ್ ಶೆಟ್ಟಿ ಅಭಿನಯಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕರೆ, ಅತ್ಯುತ್ತಮ ಸಿನಿಮಾ ಕೂಡ ಕಾಂತಾರ ಆಗಿದೆ. ಅತ್ಯುತ್ತಮ ನಟಿ ವಿಮರ್ಶಕರ ಆಯ್ಕೆ ಕೂಡ ಕಾಂತಾರಕ್ಕೆ ಬಂದಿದೆ. ಈ ಪ್ರಶಸ್ತಿಗೆ ಸಪ್ತಮಿ ಗೌಡ ಆಯ್ಕೆಯಾಗಿದ್ದರೆ, ಇದೇ ಚಿತ್ರದಲ್ಲಿನ ಅತ್ಯುತ್ತಮ ಪೋಷಕ ನಟನಾಗಿ ಅಚ್ಯುತ್ ಕುಮಾರ್ ಆಯ್ಕೆಯಾಗಿದ್ದಾರೆ.
'ವಿಶೇಷ' ತಮ್ಮನಿಗೆ 20ರ ಹರೆಯದಲ್ಲಿ ಉಪನಯನ ಮಾಡಿದ 'ಪಾರು': ಇವರದ್ದು ನೋವಿನ ಕಥೆ...
ಕಾಂತಾರ ಚಿತ್ರದಲ್ಲಿನ ವರಾಹ ರೂಪಂಗೆ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿಯೂ ಸಿಕ್ಕಿದೆ. ವಿಘ್ನೇಶ್ ಅವರು ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಮಾತ್ರವಲ್ಲದೇ, ಅತ್ಯುತ್ತಮ ಸಂಗೀತ ಇದೇ ಚಿತ್ರಕ್ಕಾಗಿ ಅಜನೀಶ್ ಲೋಕನಾಥ್ ಅವರ ಪಾಲಾಗಿದೆ.
ಯಾವ ಚಿತ್ರಕ್ಕೆ ಪ್ರಶಸ್ತಿ ಸಿಕ್ಕಿದೆ ಎನ್ನುವ ಫುಲ್ ಡಿಟೇಲ್ಸ್ ಇಲ್ಲಿದೆ;
* ಅತ್ಯುತ್ತಮ ನಟ- ರಿಷಬ್ ಶೆಟ್ಟಿ (ಕಾಂತಾರ)
* ಅತ್ಯುತ್ತಮ ನಟಿ- ಚೈತ್ರಾ ಆಚಾರ್ (ತಲೆ ದಂಡ)
* ಅತ್ಯುತ್ತಮ ಸಿನಿಮಾ- (ಕಾಂತಾರ)
* ಅತ್ಯುತ್ತಮ ನಟಿ ವಿಮರ್ಶಕರ ಆಯ್ಕೆ- ಸಪ್ತಮಿ ಗೌಡ (ಕಾಂತಾರ)
* ಅತ್ಯುತ್ತಮ ಪೋಷಕ ನಟ- ಅಚ್ಯುತ್ ಕುಮಾರ್ (ಕಾಂತಾರ)
* ಅತ್ಯುತ್ತಮ ಹಿನ್ನೆಲೆ ಗಾಯಕ- ವಿಘ್ನೇಶ್ (ವರಾಹ ರೂಪಂ-ಕಾಂತಾರ)
* ಅತ್ಯುತ್ತಮ ಪೋಷಕ ನಟಿ- ಮಂಗಳ ಎನ್ (ತಲೆದಂಡ)
* ಅತ್ಯುತ್ತಮ ಸಿನಿಮಾ ವಿಮರ್ಶಕರ ಆಯ್ಕೆ (ಧರಣಿ ಮಂಡಲ ಮಧ್ಯದೊಳಗೆ)
* ಅತ್ಯುತ್ತಮ ನಿರ್ದೇಶಕ- ಕಿರಣ್ ರಾಜ್ (777 ಚಾರ್ಲಿ)
* ಅತ್ಯುತ್ತಮ ನಟ ವಿಮರ್ಶಕರ ಆಯ್ಕೆ- ನವೀನ್ ಶಂಕರ್ (ಧರಣಿ ಮಂಡಲ ಮಧ್ಯದೊಳಗೆ)
* ಅತ್ಯುತ್ತಮ ಸಂಗೀತ- ಅಜನೀಶ್ ಲೋಕನಾಥ್ (ಕಾಂತಾರ)
* ಅತ್ಯುತ್ತಮ ಗೀತ ಸಾಹಿತ್ಯ- ವಿ ನಾಗೇಂದ್ರ ಪ್ರಸಾದ್ (ಬೆಳಕಿನ ಕವಿತೆ-ಬನಾರಸ್)
* ಅತ್ಯುತ್ತಮ ಹಿನ್ನೆಲೆ ಗಾಯಕಿ- ಸುನಿಧಿ ಚೌಹಾಣ್ (ರಾ ರಾ ರಕ್ಕಮ್ಮ-ವಿಕ್ರಾಂತ್ರೋಣ)
ಮಹಾನಟಿ ಕಿರೀಟ ರಿವೀಲ್! ಕೊಠಡಿಯೊಳಕ್ಕೆ ಇಣುಕಿದ ಐವರು ಬೆಡಗಿಯರ ರಿಯಾಕ್ಷನ್ ಹೀಗಿದೆ ನೋಡಿ!