ಕನ್ನಡದ ಮೇರು ನಟ ವಿಷ್ಣುವರ್ಧನ್ ಅವರು 1982-83ರಲ್ಲಿ ತಮಿಳುನಾಡಿನ ಅಂದಿನ ಮುಖ್ಯಮಂತ್ರಿ ಎಂಜಿ ರಾಮಚಂದ್ರನ್ (MGR) ಅವರನ್ನು ಭೇಟಿಯಾಗುವ ಸಂದರ್ಭ ಒದಗಿ ಬರುತ್ತದೆ. ಅಲ್ಲಿ ಎಂಜಿಆರ್ ಅವರು ನಟ ವಿಷ್ಣುವರ್ಧನ್ ಅವರ ಜೊತೆ ತುಂಬಾ ಚೆನ್ನಾಗಿ ಮಾತನಾಡುತ್ತಾರೆ.
ಇದೊಂದು ಭಾರೀ ಕುತೂಹಲ ಸೃಷ್ಟಿಸುವ ಸಂಗತಿಯಾಗಿದೆ. ಕನ್ನಡದ ಮೇರು ನಟ ವಿಷ್ಣುವರ್ಧನ್ (Vishnuvardhan) ಅವರು 1982-83ರಲ್ಲಿ ತಮಿಳುನಾಡಿನ ಅಂದಿನ ಮುಖ್ಯಮಂತ್ರಿ ಎಂಜಿ ರಾಮಚಂದ್ರನ್ (MGR) ಅವರನ್ನು ಭೇಟಿಯಾಗುವ ಸಂದರ್ಭ ಒದಗಿ ಬರುತ್ತದೆ. ಅಲ್ಲಿ ಎಂಜಿಆರ್ ಅವರು ನಟ ವಿಷ್ಣುವರ್ಧನ್ ಅವರ ಜೊತೆ ತುಂಬಾ ಚೆನ್ನಾಗಿ ಮಾತನಾಡುತ್ತಾರೆ. ಅಷ್ಟೇ ಅಲ್ಲ, ಸಿನಿಮಾಗಳು ಮಾಡುತ್ತಿರುವ ದಾಖಲೆಗಳ ಬಗ್ಗೆಯೂ ಮಾತನಾಡುತ್ತಾರೆ.
ಆ ಸಂದರ್ಭದಲ್ಲಿ ನಟ ವಿಷ್ಣುವರ್ಧನ್ ಅವರಿಗೆ ಒಂದು ವಾಚ್‌ನ ಗಿಫ್ಟ್ ಆಗಿಯೂ ಕೊಡುತ್ತಾರೆ. ತಮಿಳುನಾಡಿನ ಒಬ್ಬರು ಸಿಎಂ ಕರ್ನಾಟಕದ ಒಬ್ಬರು ನಟರಿಗೆ ಹೀಗೆ ಒಂದು ಗಿಫ್ಟ್ ಕೊಡುತ್ತಾರೆ ಎಂದರೆ, ಯಾರೇ ಆಗಿರಲಿ, ಆ ನಟ ಅದೆಷ್ಟು ದೊಡ್ಡ ಸಾಧನೆ ಮಾಡಿರಬೇಕು ಅಲ್ಲವೇ? ಹಾಗೇ ಆಗಿದೆ. ಆ ಗಿಫ್ಟನ್ನ ಪಡೆದುಕೊಂಡಿದ್ದ ನಟ ವಿಷ್ಣುವರ್ಧನ್ ಅವರು ತುಂಬಾ ಜೋಪಾನವಾಗಿ ಇಟ್ಟಿರುತ್ತಾರೆ.
ಏನೇ ಪ್ರಾಬ್ಲಂ ಬಂದ್ರೂ ಒಂದ್ ವಾರ ಸುಮ್ನೆ ಇದ್ಬಿಡಿ, ಆಮೇಲ್ ಕರೆಕ್ಟಾಗಿ ಟಾರ್ಗೆಟ್‌ಗೇ ಹೊಡಿತೀರಾ...!
1986ನಲ್ಲಿ ನಟ ಶಿವರಾಜ್‌ಕುಮಾರ್ ಹಾಗು ಸುಧಾರಾಣಿ ಜೋಡಿ ನಟಿಸಿದ್ದ 'ಆನಂದ್' ಸಿನಿಮಾ ಬಿಡುಗಡೆಯಾಗಿ ದೊಡ್ಡ ಓಪನಿಂಗ್ ಪಡೆದುಕೊಳ್ಳುತ್ತದೆ. ಥಿಯೇಟರ್‌ನಲ್ಲಿ 35ವಾರ ಅಂದರೆ, 245 ದಿನಗಳನ್ನು ಪೂರೈಸುತ್ತದೆ. ಅಷ್ಟೇ ಅಲ್ಲ, ಆ ವರ್ಷದಲ್ಲಿ ಆನಂದ್ ಚಿತ್ರವು ಅತೀ ಹೆಚ್ಚಿನ ಕಲೆಕ್ಷನ್ ಮಾಡಿರುವ ಚಿತ್ರವಾಗಿ ದಾಖಲೆ ನಿರ್ಮಿಸಿರುತ್ತದೆ. ಆ ಸಿನಿಮಾ ಮೂಲಕ ಅತೀ ಕಡಿಮೆ ಅವಧಿಯಲ್ಲಿ ನಟ ಶಿವರಾಜ್‌ಕುಮಾರ್ ಅವರು ಬಹಳಷ್ಟು ಅಭಿಮಾನಿಗಳನ್ನು ಅದೊಂದೇ ಚಿತ್ರದ ಮೂಲಕ ಸಂಪಾದಿಸಿಕೊಂಡಿರುತ್ತಾರೆ.
ಚಂದನ್ ಶೆಟ್ಟಿಗೆ ಚಿರಂಜೀವಿ ಸರ್ಜಾ ಏನ್ ಮಾಡಿದ್ರು? ಗುಟ್ಟು ರಟ್ಟು ಮಾಡಿದಾರೆ ರ್‍ಯಾಪಿಡ್ ರಶ್ಮಿ!
ಆನಂದ್ ಚಿತ್ರದ ಯಶಸ್ಸು ನಟ ಶಿವರಾಜ್‌ಕುಮಾರ್ ಹಾಗು ಡಾ ರಾಜ್‌ಕುಮಾರ್ ಫ್ಯಾಮಿಲಿಗೆ ಅದೆಷ್ಟು ಸಂತೋಷ ಕೊಡುತ್ತೋ ಅಷ್ಟೆ ಸಂತೋಷವನ್ನು ನಟ ವಿಷ್ಣುವರ್ಧನ್ ಅವರಿಗೂ ಕೊಡುತ್ತೆ. ತಮಗೆ ತಮಿಳುನಾಡು ಸಿಎಂ ಗಿಫ್ಟ್ ಕೊಟ್ಟಿದ್ದ ವಾಚ್ ಅನ್ನು ನಟ ವಿಷ್ಣುವರ್ಧನ್ ಅವರು ನಟ ಶಿವರಾಜ್‌ಕುಮಾರ್ ಅವರಿಗೆ ಕೊಟ್ಟು ಅವರನ್ನು ಗೌರವಿಸುತ್ತಾರೆ. ತಮಗೆ ಬಂದಿರುವ ಗಿಫ್ಟ್ ಅನ್ನು ಇನ್ನೊಬ್ಬರಿಗೆ ಕೊಟ್ಟು ಕೊಡುತ್ತಾರೆ ಎಂದರೆ ಅವರನ್ನು ವಿಷ್ಣು ಅವರು ಅದೆಷ್ಟು ಪ್ರೀತಿಸುತ್ತಾರೆ, ಗೌರವಿಸುತ್ತಾರೆ ಎಂಬುದು ಅರ್ಥವಾಗುತ್ತದೆ.
ಎನೋ ಇದೆ, ಅಪರ್ಣಾ ಎದುರು ದರ್ಶನ್ ಅಂದು ಪುನೀತ್ ಬಗ್ಗೆ ಹೇಳಿದ್ದ ಮಾತು ಇಂದು ವೈರಲ್ ಆಗ್ತಿದ್ಯಲ್ಲ..!
ಆನಂದ್ ಚಿತ್ರದ ಬಳಿಕ ಶಿವರಾಜ್‌ಕುಮಾರ್ ಹಾಗು ಸುಧಾರಾಣಿ ಜೋಡಿಯೇ 'ಮನಮೆಚ್ಚಿದ ಹುಡುಗಿ' ಚಿತ್ರದಲ್ಲೂ ಕಾಣಿಸಿಕೊಂಡು ಮತ್ತೆ ಯಶಸ್ಸು ಪಡೆಯುತ್ತಾರೆ. ಆ ಸಮಯದಲ್ಲಿ ಕೂಡ ನಟ ವಿಷ್ಣುವರ್ಧನ್ ಅವರು ಹೋಗಿ ಶಿವರಾಜ್‌ಕುಮಾರ್ ಅವರನ್ನು ಭೇಟಿಯಾಗಿ ಸಂತಸ ವ್ಯಕ್ತಪಡಿಸುತ್ತಾರೆ. ಹೀಗೇ ಸಾಗುತ್ತದೆ ಶಿವರಾಜ್‌ಕುಮಾರ್ ಹಾಗು ವಿಷ್ಣುವರ್ಧನ್ ಅವರಿಬ್ಬರ ಆತ್ಮೀಯ ಸಂಬಂಧ. ಈ ಮೂಲಕ ನಟ ವಿಷ್ಣುವರ್ಧನ್ ಹಾಗು ಡಾ ರಾಜ್‌ಕುಮಾರ್ ಫ್ಯಾಮಿಲಿ ಅಂದು ಪರಸ್ಪರರ ಯಶಸ್ಸನ್ನು ಗೌರವಿಸುತ್ತಿದ್ದರು, ಗಿಫ್ಟ್ ಕೊಡುವುದು, ಪಡೆದುಕೊಳ್ಳುವುದರ ಮೂಲಕ ಹಂಚಿಕೊಳ್ಳುತ್ತಿದ್ದರು ಎನ್ನಲಾಗಿದೆ.
ಡಾ ರಾಜ್‌ಗೆ ಯಾರೋ ಮಾಡಿದ್ದ ಕಥೆಯನ್ನು ವಿಷ್ಣುವರ್ಧನ್‌ಗೆ ಮಾಡಿ ಸಿನಿಮಾ ಗೆಲ್ಲಿಸಿದ್ದು ಯಾರು..?