ಕಿಚ್ಚ ಸುದೀಪ್​ @50: ಹುಟ್ಟುಹಬ್ಬದ ಸುವರ್ಣ ಮಹೋತ್ಸವಕ್ಕೆ ಪತ್ನಿ ಪ್ರಿಯಾ ಬಿಗ್​ ಸರ್​ಪ್ರೈಸ್​!

Published : Sep 01, 2023, 04:03 PM ISTUpdated : Sep 02, 2023, 10:33 AM IST
ಕಿಚ್ಚ ಸುದೀಪ್​ @50: ಹುಟ್ಟುಹಬ್ಬದ ಸುವರ್ಣ ಮಹೋತ್ಸವಕ್ಕೆ ಪತ್ನಿ ಪ್ರಿಯಾ ಬಿಗ್​ ಸರ್​ಪ್ರೈಸ್​!

ಸಾರಾಂಶ

ನಾಳೆ (ಸೆ.2) ಕಿಚ್ಚ ಸುದೀಪ್​ ಹುಟ್ಟುಹಬ್ಬದ ಸಂಭ್ರಮ. ಈ ಹೊತ್ತಿನಲ್ಲಿ ಟ್ವೀಟರ್​ ಮೂಲಕ ಅವರ ಪತ್ನಿ ವಿಶೇಷ ಮಾಹಿತಿ ಶೇರ್​ ಮಾಡಿಕೊಂಡಿದ್ದಾರೆ. ಅಚ್ಚರಿಯೊಂದು ಕಾದಿರುವುದಾಗಿ ಹೇಳಿದ್ದಾರೆ.  

ಕಿಚ್ಚ ಸುದೀಪ್ ಅವರು ನಾಳೆ ಅಂದರೆ ಸೆಪ್ಟೆಂಬರ್​ 2ರಂದು 50ನೇ ಹುಟ್ಟುಹಬ್ಬವನ್ನು  ಆಚರಿಸಿಕೊಳ್ಳುತ್ತಿದ್ದಾರೆ. ಸುವರ್ಣ ಮಹೋತ್ಸವದ ಖುಷಿಯಲ್ಲಿರುವ  ಕಿಚ್ಚ ಸುದೀಪ್ (Kiccha Sudeep) ಅವರ ಹುಟ್ಟುಹಬ್ಬಕ್ಕೆ ಇದಾಗಲೇ ಭರ್ಜರಿ ತಯಾರಿ ನಡೆದಿದೆ.  ಇವರ ಹುಟ್ಟುಹಬ್ಬವನ್ನು  ಅದ್ಧೂರಿಯಾಗಿ ಆಚರಿಸೋದಕ್ಕೆ ದೊಡ್ಡ ಪ್ಲ್ಯಾನ್ ಇದಾಗಲೇ ರೆಡಿ ಆಗಿದೆ. ಅವರ ಫ್ಯಾನ್ಸ್​ ಇದಾದಲೇ ಭರ್ಜರಿ ತಯಾರಿ ನಡೆಸಿದ್ದಾರೆ. ನಂದಿ ಲಿಂಕ್​ ಗ್ರೌಂಡ್​ನಲ್ಲಿ ತಮ್ಮ ನೆಚ್ಚಿನ ನಟರ ಬರ್ತ್​ಡೇ ಸೆಲೆಬ್ರೇಟ್​ ಮಾಡಲು ಅಪಾರ ಸಂಖ್ಯೆಯ ಅಭಿಮಾನಿಗಳು ಜಮಾಯಿಸಲಿದ್ದಾರೆ. ಅದಕ್ಕೆ ಈಗಾಗಲೇ ಸಕಲ ಸಿದ್ಧತೆ ಆಗಿದೆ. ಅವರ ಜನ್ಮದಿನದ ಹೊಸ್ತಿಲಿನಲ್ಲಿ ‘ಅರಸು ಕ್ರಿಯೇಷನ್ಸ್​’ ಸಂಸ್ಥೆ ಕಡೆಯಿಂದ ಒಂದು ವಿಶೇಷವಾದ ಉಡುಗೊರೆ ನೀಡಲಾಗಿದೆ. ಆಕಾಶದಲ್ಲಿನ ಒಂದು ನಕ್ಷತ್ರಕ್ಕೆ ಕಿಚ್ಚ ಸುದೀಪ ಎಂದು ಹೆಸರು ಇಡಲಾಗಿದೆ. ಈ ಮೂಲಕ ಸುದೀಪ್​ಗೆ ವಿಶೇಷವಾದ ಗೌರವ ಸಲ್ಲಿಸಲಾಗಿದೆ.

ಇದರ ನಡುವೆಯೇ, ಇದೀಗ ಸುದೀಪ್​ ಅವರ ಪತ್ನಿ ಪ್ರಿಯಾ ಸುದೀಪ್​ ಅವರು ಕುತೂಹಲದ ವಿಷಯವೊಂದನ್ನು ಶೇರ್​ ಮಾಡಿಕೊಂಡಿದ್ದಾರೆ. ಹುಟ್ಟುಹಬ್ಬಕ್ಕೆ ಸರ್​ಪ್ರೈಸ್​ ನೀಡಲು ಪ್ರಿಯಾ ಮುಂದಾಗಿದ್ದಾರೆ. ಪ್ರಿಯಾ ರಾಧಾಕೃಷ್ಣ ಮತ್ತು ಸುದೀಪ್​ ಅವರು ವಿವಾಹವಾದದ್ದು 2001ರಲ್ಲಿ.  ಮದುವೆಗೂ ಮುನ್ನ ಪ್ರಿಯಾ ವಿಮಾನಯಾನ ಸಂಸ್ಥೆ ಮತ್ತು ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಸುದೀಪ್-‌ಪ್ರಿಯಾ ದಂಪತಿಗೆ ಸಾನ್ವಿ ಎಂಬ ಮಗಳಿದ್ದಾಳೆ. ತಮ್ಮ ಪತಿಗೆ ಹುಟ್ಟುಹಬ್ಬದಂದು ಸರ್​ಪ್ರೈಸ್​ ನೀಡುವುದಾಗಿ ಟ್ವಿಟರ್ ಮೂಲಕ ಪ್ರಿಯಾ ತಿಳಿಸಿದ್ದಾರೆ. ಟ್ವಿಟರ್​ನಲ್ಲಿ ಪ್ರಿಯಾ ಅವರು, ‘ಇಂದು ನಿಮ್ಮ ಪ್ರೀತಿಯ ಕಿಚ್ಚ ಸುದೀಪರ ( Kiccha Sudeep Birthday) ಹುಟ್ಟುಹಬ್ಬವನ್ನು ನಿಮ್ಮೊಂದಿಗೆ ಆಚರಿಸಲು ಕಾತುರದಿಂದ ಕಾಯುತ್ತಿದ್ದೇನೆ. ಇಂದಿನ ಕಾರ್ಯಕ್ರಮದಲ್ಲಿ ನನ್ನ ಕಡೆಯಿಂದ ನಿಮ್ಮೆಲ್ಲರ ಪರವಾಗಿ ಕಿಚ್ಚನಿಗೆ ಒಂದು ವಿಶೇಷವಾದ ಅದ್ದೂರಿ ಅಚ್ಚರಿ ಕಾದಿದೆ. ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಅಚ್ಚರಿಯನ್ನು ಆನಂದಿಸಿ, ಕಿಚ್ಚನನ್ನು ಹರಸಿ’ ಎಂದು ಬರೆದುಕೊಂಡಿದ್ದಾರೆ. ಇದರಿಂದ ಇವರು ಏನು ಸರ್​ಪ್ರೈಸ್​​ ಕೊಡಲು ಕಾತರರಾಗಿದ್ದಾರೆ ಎಂದು ಫ್ಯಾನ್ಸ್​ ಕಾಯುತ್ತಿದ್ದಾರೆ.

ಕಿಚ್ಚ ಸುದೀಪ್‌ಗೆ ಹುಟ್ಟು ಹಬ್ಬದ 'ಸುವರ್ಣ' ಮಹೋತ್ಸವ..! ಹೆಬ್ಬುಲಿ ಫ್ಯಾನ್ಸ್‌ಗೆ ಕಾದಿದೆ 'ಕಿಚ್ಚ@46' ಬಿಗ್ ಸರ್ಪ್ರೈಸ್..!

ಇನ್ನು ಸುದೀಪ್​ ಅವರ ಸಿನಿಮಾದ ಕುರಿತು ಹೇಳುವುದಾದರೆ,  ಅವರ ‘ವಿಕ್ರಾಂತ್​ ರೋಣ’ ಬ್ಲಾಕ್​ಬಸ್ಟರ್​ ಸಿನಿಮಾ ಆಗಿ ಹೊರಹೊಮ್ಮಿತು. ಇದೀಗ  ಟೈಟಲ್​ ರಿವೀಲ್​ ಆಗದ ಸಿನಿಮಾ ಒಂದರಲ್ಲಿ ಬಿಜಿಯಾಗಿದ್ದಾರೆ ಸುದೀಪ್​. ಇದು ಅವರ  46ನೇ ಸಿನಿಮಾ ಆಗಿದೆ.  ಸದ್ಯಕ್ಕೆ ಇದನ್ನು Kichcha 46 ಎಂದು ಕರೆಯಲಾಗುತ್ತಿದೆ. ನಾಳೆಯೇ ಅಂದರೆ ಬರ್ತ್​ಡೇ ದಿನವೇ ಈ ಚಿತ್ರದ ಶೀರ್ಷಿಕೆ ಕೂಡ ಬಹಿರಂಗಪಡಿಸಲಾಗುವುದು ಎನ್ನಲಾಗುತ್ತಿದೆ.  ದೊಡ್ಡ ಬಜೆಟ್​ ಸಿನಿಮಾ ಇದಾಗಿದ್ದು, ಇದೇ ವರ್ಷ ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿದೆ ಚಿತ್ರ ತಂಡ. ಈ ವರ್ಷ ಮುಗಿಯಲು ಇನ್ನೇನು ನಾಲ್ಕು ತಿಂಗಳು ಮಾತ್ರವಿದ್ದು, ಅಷ್ಟರಲ್ಲಿಯೇ ಮುಗಿಸುವ ತವಕದಲ್ಲಿದೆ.


 
ಇನ್ನು ಸುದೀಪ್​  ಮತ್ತು ಪ್ರಿಯಾ (Priya Sudeep) ಅವರ ದಾಂಪತ್ಯದ ಕುರಿತು ಹೇಳುವುದಾದರೆ, ಅದ್ಯಾವುದೋ ಕೆಟ್ಟ ಘಳಿಗೆಯಲ್ಲಿ ದಂಪತಿ  2015 ರಲ್ಲಿ ದಂಪತಿ ಬೇರ್ಪಟ್ಟು ನಾಲ್ಕು ವರ್ಷ ಪ್ರತ್ಯೇಕವಾಗಿ ವಾಸವಾಗಿದ್ದರು. ಡಿವೋರ್ಸ್​ಗೆ ಅರ್ಜಿ  ಕೂಡ ಸಲ್ಲಿಕೆಯಾಗಿತ್ತು.  ತನ್ನ ವೈವಾಹಿಕ ಜೀವನದ ಸಮಸ್ಯೆಗಳನ್ನು ಸುದೀಪ್‌ ಯಾರಿಗೂ ತಿಳಿಸುತ್ತಿರಲಿಲ್ಲ. ಸುದೀಪ್ ಪತ್ನಿಯಿಂದ ಮಗಳ ಕಸ್ಟಡಿ ಪಡೆಯದಿರಲು ನಿರ್ಧರಿಸಿದ್ದರು. ನಟ ವಿಚ್ಛೇದನ ಪಡೆದರೆ 19 ಕೋಟಿ ಕೊಡಬೇಕಾಗುತ್ತಿತ್ತು ಎಂಬ ಚರ್ಚೆ ನಡೆದಿತ್ತು. ಆದರೆ ಮಗಳಿಗಾಗಿ ಇವರು ಈ ಕೆಟ್ಟ ನಿರ್ಧಾರ ಕೈಬಿಟ್ಟು ಜೊತೆಯಾಗಿ ವಾಸಿಸಲು ತೀರ್ಮಾನಿಸಿ ಈಗ ಸುಖಿ ದಾಂಪತ್ಯ ನಡೆಸುತ್ತಿದ್ದಾರೆ. 

ಪ್ರಿಯಾ ಸುದೀಪ್‌ ಬರ್ತಡೆಗೇ ಕಿಚ್ಚನ ಅತಿದೊಡ್ಡ ಸರ್‌ಪ್ರೈಸ್!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?