ಕಾಂತಾರ-2 ನಂತರ ಬಾಲಿವುಡ್​ ನಿರ್ದೇಶಕರಿಂದ ರಿಷಭ್ ಶೆಟ್ಟಿಗೆ ಆ್ಯಕ್ಷನ್​-ಕಟ್: ಕುತೂಹಲದ ಮಾಹಿತಿ ರಿವೀಲ್​!

By Suvarna News  |  First Published Sep 1, 2023, 3:32 PM IST

ರಿಷಬ್​ ಶೆಟ್ಟಿ ಅವರ ಬಹು ನಿರೀಕ್ಷಿತ ಕಾಂತಾರ-2 ಚಿತ್ರದ ಬಳಿಕ ರಿಷಬ್​ ಶೆಟ್ಟಿ ಅವರಿಗೆ ಬಾಲಿವುಡ್​ ನಿರ್ದೇಶಕರೊಬ್ಬರು ಆ್ಯಕ್ಷನ್​-ಕಟ್​ ಹೇಳಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಯಾರೀ ನಿರ್ದೇಶಕ? 
 


ಸಿನಿ ಕ್ಷೇತ್ರದಲ್ಲಿ ಕಾಂತಾರಸೃಷ್ಟಿಸಿದ ದಾಖಲೆ ಅಷ್ಟಿಷ್ಟಲ್ಲ.  ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿರುವ 'ಕಾಂತಾರ' ಸಿನಿಮಾ ತೆರೆಕಂಡಾಗ ಕೇವಲ ಕನ್ನಡ ಸಿನಿಮಾವಾಗಿತ್ತು. ಆದರೆ ನಂತರ  ಅದು ಪ್ಯಾನ್ ಇಂಡಿಯಾ ಸಿನಿಮಾವಾಗಿ ಮಿಂಚಿತು. ಸ್ಯಾಂಡಲ್​ವುಡ್​ ನೆಲದಿಂದ ವಿಶ್ವಾದ್ಯಂತ ಕನ್ನಡದ ಕಂಪನ್ನು ಪಸರಿಸಿದೆ. ದಾಖಲೆಯ ಮೇಲೆ ದಾಖಲೆ ಬರೆದ ಕಾಂತಾರ  ಭಾರತದಲ್ಲಿ 362 ಕೋಟಿ ಕಲೆ ಹಾಕಿದರೆ, ವಿಶ್ವಾದ್ಯಂತ 398 ಕೋಟಿ ಕ್ಲಬ್​ಗೆ ಸೇರಿಸಿತು.  ಕನ್ನಡದಲ್ಲಿ ನಿರ್ಮಿಸಿದ್ದ 'ಕಾಂತಾರ' ನಂತರ  ತೆಲುಗು, ಹಿಂದಿ, ತಮಿಳು ವರ್ಷನ್‌ಗಳಲ್ಲಿಯೂ ಡಬ್​ ಆಗಿ ಅಲ್ಲಿಂದಲೂ  ಹಣ ಹರಿದುಬಂತು.  ಈಗ ಕಾಂತಾರ-2ಗಾಗಿ ವೀಕ್ಷಕರು ತುದಿಗಾಲಿನಲ್ಲಿ ನಿಂತಿದ್ದಾರೆ. ಕಾಂತಾರ 1 ಯಶಸ್ಸಿನ ಬೆನ್ನಲ್ಲೇ ಪಾರ್ಟ್​ 2 ಬಗ್ಗೆಯೂ ಸಾಕಷ್ಟು ಚರ್ಚೆಯಾಗುತ್ತಲೇ ಇದೆ. 

ಕಳೆದ ಡಿಸೆಂಬರ್​ನಲ್ಲಿ ಕಾಂತಾರ 2 ಬಗ್ಗೆ ಸಕತ್​ ಸುದ್ದಿಯಾಗಿತ್ತು.   ಸಿನಿಮಾ ತಂಡ ಕಾಂತಾರಭಾಗ 2 ಚಿತ್ರಕ್ಕೆ ಅಣ್ಣಪ್ಪ ಪಂಜುರ್ಲಿ ಬಳಿ ಅನುಮತಿ ಕೇಳಿರುವುದು ಸುದ್ದಿಯಾಗಿತ್ತು. ಅಣ್ಣಪ್ಪ ಪಂಜುರ್ಲಿ ಕೋಲದ ಸಂದರ್ಭದಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರು, ನಟ ರಿಷಬ್ ಶೆಟ್ಟಿ, ಸಪ್ತಮಿ ಗೌಡ, ಪ್ರಮೋದ್ ಶೆಟ್ಟಿ,ರಿಷಬ್ ಪತ್ನಿ ಪ್ರಗತಿ ಶೆಟ್ಟಿ (Pragati Shetty) ಸೇರಿದಂತೆ ಕಾಂತಾರಕಲಾವಿದರು, ರಿಷಬ್ ಕುಟುಂಬಸ್ಥರು ಭಾಗಿಯಾಗಿದ್ದರು. ಮಂಗಳೂರಿನ ಬಂದಲೆಯಲ್ಲಿ ನಡೆದ ಅಣ್ಣಪ್ಪ ಪಂಜುರ್ಲಿ ಕೋಲದಲ್ಲಿ ಚಿತ್ರತಂಡ ಭಾಗವಹಿಸಿ ಮುಂದಿನ ಸಿನಿಮಾ ಮಾಡಲು ಅನುಮತಿ ಕೇಳಿತ್ತು. ಹರಕೆ ಕೋಲದಲ್ಲಿ ಕಾಂತಾರ-2 ಚಿತ್ರಕ್ಕೆ ಅನುಮತಿ ಕೇಳಿದ ಚಿತ್ರತಂಡ ಈ ಬಗ್ಗೆ ಪ್ರಸ್ತಾಪಿಸಿದೆ. ಈ ವೇಳೆ ಚಿತ್ರತಂಡಕ್ಕೆ ಹಲವು ನಿಯಮಗಳನ್ನು ಹೇಳಿದ ದೈವ ಅಣ್ಣಪ್ಪ ಪಂಜುರ್ಲಿ ಸಿನಿಮಾ ಮಾಡಲು ಅವಕಾಶ ಕೊಟ್ಟಿದೆ ಎನ್ನಲಾಗಿತ್ತು. ಮೊದಲು ಚಿತ್ರಮಾಡುವಾಗ ಹತ್ತು ಬಾರಿ ಯೋಚನೆ ಮಾಡಿದ್ದೀರಿ. ಈ ಬಾರಿ ನೂರು ಬಾರಿ ಯೋಚನೆ ಮಾಡಿ. ಹಳೆಯ ತಂಡವನ್ನೇ ಉಪಯೋಗಿಸಿ ಮುಂದುವರಿಯಿರಿ ಎಂದು ದೈವ ಷರತ್ತು ವಿಧಿಸಿದೆ ಎಂದೂ ವರದಿಯಾಗಿತ್ತು. 

Tap to resize

Latest Videos

ಬಹು ನಿರೀಕ್ಷಿತ ಕಾಂತಾರ-2 ಕುರಿತು ಕುತೂಹಲದ ಮಾಹಿತಿ: ಬಜೆಟ್​ ಎಷ್ಟು ಗೊತ್ತಾ?

ಇದೀಗ ಇನ್ನೊಂದು ಹೊಸ ಮಾಹಿತಿ ಸಿಕ್ಕಿದೆ. ಅದೇನೆಂದರೆ, ಕಾಂತಾರಾ-2 ಬಳಿಕ ರಿಷಬ್​ ಶೆಟ್ಟಿಯವರ ಇನ್ನೊಂದು ಚಿತ್ರಕ್ಕೆ ಬಾಲಿವುಡ್​ ನಿರ್ದೇಶಕರು ಆ್ಯಕ್ಷನ್​ ಕಟ್​ ಹೇಳಲಿದ್ದಾರೆ.  ಹೌದು! ಇದೊಂದು ಕುತೂಹಲದ ಮಾಹಿತಿ ಈಗ ರಿವೀಲ್​ ಆಗಿದೆ. ಕಾಂತಾರಾ-2 ಮುಗಿಯುತ್ತಿದ್ದಂತೆಯೇ, ರಿಷಬ್​ ಶೆಟ್ಟಿಯವರ ಇನ್ನೊಂದು ಚಿತ್ರ ಸೆಟ್ಟೇರಲಿದೆ. ಆ ಚಿತ್ರಕ್ಕೆ ಬಾಲಿವುಡ್​ ನಿರ್ದೇಶಕ ಆ್ಯಕ್ಷನ್​-ಕಟ್​ ಹೇಳಲಿದ್ದಾರೆ ಎಂದು ವರದಿಯಾಗಿದೆ. ಅಷ್ಟಕ್ಕೂ ಈ ಬಾಲಿವುಡ್​ ನಿರ್ದೇಶಕ ಯಾರೆಂದರೆ  ಅಶುತೋಷ್ ಗೋವರಿಕೆರ್.  ಜೋಧಾ ಅಕ್ಬರ್, ಲಗಾನ್, ಮೊಹೆಂಜದಾರೋದಂತಹ ಸಿನಿಮಾ ನಿರ್ದೇಶಿಸಿದ   ನಿರ್ದೇಶಕ ಇವರು. ಅಶುತೋಷ್ ಗೋವರಿಕೆರ್ ಅವರು ರಿಷಬ್ ಶೆಟ್ಟಿ ಅವರಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದ್ದು ಕಾಂತಾರ 2 (Kantara 2) ಸಿನಿಮಾ ಮುಗಿಯುತ್ತಿದ್ದಂತೆ ಈ ಸಿನಿಮಾದ ಕೆಲಸಗಳು ಶುರುವಾಗಲಿದೆಯಂತೆ. ಅಷ್ಟಕ್ಕೂ ಈ ಸುದ್ದಿಯನ್ನು ಬಹಿರಂಗಪಡಿಸಿದವರು  ಹಿರಿಯ ಸಿನಿಮಾ ವರದಿಗಾದ ಹಿಮೇಶ್. ತಮ್ಮ  ಟ್ವಿಟರ್ ಖಾತೆಯಲ್ಲಿ ಅವರು ಈ ಮಾಹಿತಿಯನ್ನು ಶೇರ್​ ಮಾಡಿದ್ದಾರೆ. 

ಕಾಂತಾರ-1 16 ಕೋಟಿ ರೂಪಾಯಿಗಳಲ್ಲಿ ಮಾಡಿದ್ದರೆ ಕಾಂತಾರ-2 125 ಕೋಟಿ ರೂಪಾಯಿ ಬಂಡವಾಳದಲ್ಲಿ ಮಾಡಲಾಗುತ್ತಿದೆ ಎನ್ನಲಾಗಿದೆ. ಅಂದರೆ ಮೊದಲಿಗಿಂತಲೂ 100 ಕೋಟಿ ರೂಪಾಯಿಗೂ ಅಧಿಕ ಮೊತ್ತದಲ್ಲಿ ಎರಡನೆಯ ಭಾಗ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಇದಕ್ಕೆ ಈಗಾಗಲೇ  ಸ್ಕ್ರಿಪ್ಟ್ ರೆಡಿಯಾಗಿದೆ. ಸಿನಿಮಾದ ಶೂಟಿಂಗ್ ಶೀಘ್ರದಲ್ಲಿಯೇ ಸೆಟ್ಟೇರಲಿದೆ ಎನ್ನಲಾಗುತ್ತಿದೆ. ಕಾಂತಾರ 2 ಸಿನಿಮಾದಲ್ಲಿ ಕಾಡು, ಹಳ್ಳಿ ಪ್ರದೇಶ, ನೀರು ಇರುವಂತಹ ಪ್ರದೇಶದಲ್ಲಿಯೇ ಚಿತ್ರೀಕರಣ ಮಾಡಲು ಯೋಜಿಸಲಾಗಿದೆ. ಈ ಸಿನಿಮಾದ ಬಜೆಟ್ ಕೂಡಾ ಹೆಚ್ಚಾಗಲಿದ್ದು ಸಿನಿಮಾ ಕಲಾವಿದರ ಸಂಖ್ಯೆಯೂ ಹೆಚ್ಚಾಗಲಿದೆ ಎನ್ನಲಾಗಿದೆ. ಅದೇ ರೀತಿ ಇದು ಕಾಂತಾರಾದ ಸೀಕ್ವೆಲ್​ ಅಲ್ಲ, ಬದಲಿಗೆ ಪ್ರೀಕ್ವೆಲ್​ ಎನ್ನಲಾಗಿದೆ. ಮೊದಲು ರಿಲೀಸ್​ ಮಾಡಿದ್ದೇ ಪಾರ್ಟ್​-2 ಎನ್ನುವ ಮಾಹಿತಿಯೂ ಇದೆ.  

Kantara: ಮೂರು ಬಿಗ್ ನ್ಯೂಸ್ ಕೊಟ್ಟ ಡಿವೈನ್ ಸ್ಟಾರ್: ಕಾಂತಾರಾ ಪಾರ್ಟ್ 2 ಬಗ್ಗೆ ರಿಷಬ್ ಶೆಟ್ಟಿ ಹೇಳಿದ್ದೇನು?
 

click me!