ಉಳಿದವರು ಕಂಡಂತೆಯ ರಿಚ್ಚಿ ಫ್ಯಾನ್ಸ್ ಸೀಟ್ ಬೆಲ್ಟ್ ಕಟ್ಕಳಿ: ರಿಚರ್ಡ್ ಆ್ಯಂಟನಿಗೆ ರೆಡಿಯಾಗ್ತಿದಾರೆ ರಕ್ಷಿತ್ ಶೆಟ್ಟಿ

Published : Sep 01, 2023, 03:58 PM IST
ಉಳಿದವರು ಕಂಡಂತೆಯ ರಿಚ್ಚಿ ಫ್ಯಾನ್ಸ್ ಸೀಟ್ ಬೆಲ್ಟ್ ಕಟ್ಕಳಿ: ರಿಚರ್ಡ್ ಆ್ಯಂಟನಿಗೆ ರೆಡಿಯಾಗ್ತಿದಾರೆ ರಕ್ಷಿತ್ ಶೆಟ್ಟಿ

ಸಾರಾಂಶ

ಸಪ್ತ ಸಾಗರದಾಚೆಯಲ್ಲೋ ಚಿತ್ರ ಬಿಡುಗಡೆಗೆ ಸಿದ್ಧವಾಗುತ್ತಿದ್ದಂತೆ, ಸ್ಯಾಂಡಲ್‌ವುಡ್‌ನ ಸಿಂಪಲ್ ಸ್ಟಾರ್ ಮತ್ತೊಂದು ಚಿತ್ರ ರಿಚರ್ಡ್ ಆ್ಯಂಟನಿಗೆ ಸಜ್ಜಾಗಿದ್ದಾರೆ. ಈ ಬಗ್ಗೆ ಇಲ್ಲಿದೆ ಮಾಹಿತಿ. 

ರಕ್ಷಿತ್ ಶೆಟ್ಟಿ ಯಾವಾಗ ಉಳಿದವರು ಕಂಡಂತೆ ಸಿನಿಮಾ ಮಾಡಿದರೋ ಅವತ್ತಿನಿಂದ ಎಷ್ಟೊ ಮಂದಿ ಆ ಸಿನಿಮಾದ ರಿಚ್ಚಿ ಪಾತ್ರದ ಮೇಲೆ ಅಭಿಮಾನ ಇಟ್ಟುಕೊಂಡಿದ್ದಾರೆ. ಕಣ್ಣಿಗೆ ರೇಬಾನ್ ಗ್ಲಾಸು, ಬಾಯಿ ತುಂಬಾ ಬೀಡಾ, ಸೊಂಟಕ್ಕೆ ಪೊಲೀಸರ ರಿವಾಲ್ವರ್ ಇಡುವ ಬೆಲ್ಟು ಇವೆಲ್ಲಾ ವ್ಯಕ್ತಿತ್ವದ ಭಾಗವೇ ಆಗಿ ಹೋಗಿರುವ ರಿಚ್ಚಿ ಸಿನಿಮಾ ಪ್ರೇಮಿಗಳ ಮನಸ್ಸು ಗೆದ್ದಿದ್ದ. ಅವತ್ತಿನಿಂದ ಆ ಪಾತ್ರವನ್ನು ಆರಾಧಿಸುತ್ತಾ ಇದ್ದವರಿಗೆ ಮತ್ತೆ ಖುಷಿಯಾಗಿದ್ದು ರಕ್ಷಿತ್ ಶೆಟ್ಟಿ ರಿಚರ್ಡ್ ಆ್ಯಂಟನಿ ಸಿನಿಮಾ ಮಾಡುತ್ತಾರೆ ಅನ್ನುವಾಗ. ಅದರ ಟೀಸರ್ ಬಂದಾಗ, ಹುಲಿ ಡ್ಯಾನ್ಸಿನ ಮ್ಯೂಸಿಕ್ ಬೀಟ್ ಕೇಳಿದಾಗ ಅಕ್ಷರಶಃ ಥ್ರಿಲ್ ಆಗಿದ್ದರು.

ಅದಾಗಿ ವರ್ಷವೇ ಕಳೆದು ಹೋಯಿತು. ರಕ್ಷಿತ್ ಶೆಟ್ಟಿ ಸಂಪೂರ್ಣವಾಗಿ ಸಪ್ತ ಸಾಗರದಾಚೆ ಎಲ್ಲೋ ಚಿತ್ರದಲ್ಲಿ ಕಳೆದುಹೋಗಿದ್ದರು. ಆ ಮಧ್ಯೆಯೇ ಸ್ಕ್ರಿಪ್ಟ್ ಬರೆಯುತ್ತಿದ್ದೇನೆ ಎಂದೂ ಹೇಳಿದ್ದರು. ಇದೀಗ ರಕ್ಷಿತ್ ಶೆಟ್ಟಿ ನಟನೆಯ, ಹೇಮಂತ್ ರಾವ್ ನಿರ್ದೇಶನದ ಸಪ್ತ ಸಾಗರದಾಚೆ ಎಲ್ಲೋ ಚಿತ್ರಕ್ಕೆ ಭಾರಿ ಮೆಚ್ಚುಗೆ ಸಿಗುತ್ತಿದೆ. ಸೈಡ್ ಎ ಸಿನಿಮಾ ನೋಡಿದವರು ಸೈಡ್ ಬಿಗೆ ಕಾಯುತ್ತೇವೆ ಎಂದು ಹೇಳಿದ್ದಾರೆ. ಇದರೊಂದಿಗೆ ರಕ್ಷಿತ್ ಮತ್ತೆ ರಿಚರ್ಡ್ ಆ್ಯಂಟರಿ ಅಲಿಯಾಸ್ ರಿಚ್ಚಿ ಜಗತ್ತಿಗೆ ಮರಳುವ ಸೂಚನೆ ನೀಡಿದ್ದಾರೆ.

10 ವರ್ಷ ಆದ್ಮೇಲೆ ಈಕೆ ಸಿಕ್ಕಿರುವುದು ನನ್ನ ಅದೃಷ್ಟ: ಲವ್‌ ಬಗ್ಗೆ ಹಿಂಟ್ ಕೊಟ್ಟ ರಕ್ಷಿತ್ ಶೆಟ್ಟಿ?

ರಕ್ಷಿತ್ ಶೆಟ್ಟಿ ತಮ್ಮ ಸಿನಿಮಾಗಳ ಪಾತ್ರವನ್ನು ಸ್ವಲ್ಪ ಮಟ್ಟಿಗೆ ತಮ್ಮೊಳಗೆ ಆವಾಹಿಸಿಕೊಂಡಿರುತ್ತಾರೆ. ಅದರಿಂದ ಹೊರಬಂದ ಮೇಲೆಯೇ ಮುಂದಿನ ಸಿನಿಮಾ ಅಥವಾ ಮುಂದಿನ ಪಾತ್ರ. ಇದೀಗ ಅವರು ಸಪ್ತ ಸಾಗರದಾಚೆ ಸಿನಿಮಾದ ಮನುವಿನ ಪಾತ್ರದಿಂದ ಕಳಚಿಕೊಳ್ಳುವ ಸಿದ್ಧತೆಯಲ್ಲಿ ಇದ್ದಾರೆ. 

ಈ ಬಗ್ಗೆ ಮಾತನಾಡುವ ಅವರು, ‘ನಾನು ಯಾವುದೇ ಸಿನಿಮಾದ ಪಾತ್ರವಾದಾಗ ಸಿನಿಮಾ ಸೆಟ್‌ನಿಂದ ಆಚೆಯೂ ಆ ಪಾತ್ರ ಕೆಲವಷ್ಟನ್ನು ನನ್ನೊಳಗೆ ಇಟ್ಟುಕೊಂಡಿರುತ್ತೇನೆ. ಅದು ಯಾಕೆಂದರೆ ನಾನು ಮತ್ತೆ ಸೆಟ್‌ಗೆ ಹೋದಾಗ ಪೂರ್ತಿ ಆ ಪಾತ್ರವೇ ಆಗಲು ನೆರವಾಗುತ್ತದೆ. ಇಲ್ಲಿಯವರೆಗೆ ನಾನು ಸಪ್ತ ಸಾಗರದಾಚೆ ಚಿತ್ರದ ಪಾತ್ರ ಮನುವನ್ನು ನನ್ನೊಳಗೆ ಇಟ್ಟುಕೊಂಡಿದ್ದೆ. ಸೈಡ್ ಬಿ ಬಂದ ಮೇಲೆ ಅವನನ್ನು ಪೂರ್ತಿ ಆಚೆ ಕಳುಹಿಸಬೇಕು. ರಿಚ್ಚಿ ಬರುವಾಗ ನಾನು ಮತ್ತೆ ಹಳೆಯ ರಕ್ಷಿತ್ ಶೆಟ್ಟಿ ಆಗಬೇಕು. ಬೇರೆ ದಾರಿಯೇ ಇಲ್ಲ ನನಗೆ,’ ಎಂದು ಹೇಳಿದ್ದಾರೆ.

ರಕ್ಷಿತ್‌ ಶೆಟ್ಟಿಯಂತ ಹುಡುಗ ಸಿಕ್ಕಿದ್ರೆ, ಮದುವೆಯಾಗ್ತೀನಿ ಎಂದ ನಟಿ !

ಇಲ್ಲಿಯವರೆಗೆ ರಕ್ಷಿತ್ ಶೆಟ್ಟಿ ಏನೋ ಒಂದು ವಿಚಾರದ ಹುಡುಕಾಟದಲ್ಲಿ ಇದ್ದರು. ಅವರೇ ಹೇಳುವಂತೆ, ‘ಇಲ್ಲಿಗೆ ನನ್ನ ಒಂದು ಸರ್ಕಲ್ ಮುಗಿಯುತ್ತದೆ. ಇಲ್ಲಿಂದ ನನ್ನ ಹೆಜ್ಜೆ, ದಾರಿ ಬೇರೆಯಾಗುತ್ತದೆ. ನಾನು ನನ್ನ ಕತೆಯನ್ನು ಹೇಳಬೇಕು. ನಿರ್ದೇಶನ ಮಾಡಬೇಕು. ಸಪ್ತ ಸಾಗರದಾಚೆ ಮುಗಿದಲ್ಲಿಂದ ನನ್ನ ಹೊಸ ಪ್ರಯಾಣ ಆರಂಭ,’ ಎಂದು ತಿಳಿಸಿದ್ದಾರೆ. ಅಲ್ಲಿಗೆ ರಕ್ಷಿತ್ ಶೆಟ್ಟಿ ಡೈರೆಕ್ಟರ್ ಸೀಟಲ್ಲಿ ಕೂರಲು ಮಾನಸಿಕವಾಗಿ ಸಿದ್ಧರಾಗಿ ಆಗಿದೆ. ಹಾಗಾಗಿ ಇನ್ನು ಹಲವು ತಿಂಗಳಲ್ಲಿ ರಿಚ್ಚಿ ಆಗಮನ ಆಗಲಿದೆ. ರಿಚ್ಚಿ ಅಭಿಮಾನಿಗಳೆಲ್ಲಾ ಸೀಟ್ ಬೆಲ್ಟ್ ಕಟ್ಕಂಡು ರೆಡಿಯಾಗಿ. ನೀವು ಮತ್ತೆ ರಿಚ್ಚಿ ಜಗತ್ತಿಗೆ ಹೋಗಬೇಕಿದೆ. ಅಲ್ಲಿ ಟೈಗರ್ ಡಾನ್ಸಿಗೆ ಹೆಜ್ಜೆ ಹಾಕಬೇಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬಸ್‌ ಅಪಘಾತದಿಂದ ಪವಾಡಸದೃಶ್ಯವಾಗಿ ಪಾರಾದ 'ರಾಧಾ ಮಿಸ್‌' ಶ್ವೇತಾ ಪ್ರಸಾದ್‌!
ಮುಸ್ಲಿಮರ ವಿರುದ್ಧ ದ್ವೇಷದ ಅಸ್ತ್ರವಾಗಿ ವಂದೇ ಮಾತರಂ ಬಳಸಲಾಗ್ತಿದೆ: ನಟ ಕಿಶೋರ್‌ ಆಕ್ರೋಶ!