
ಕಿಚ್ಚ ಸುದೀಪ್ (Sudeep) ಪತ್ನಿ ಪ್ರಿಯಾ ಸುದೀಪ್ (Priya Sudeep) ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಅವರೀಗ ಸಿನಿಮಾ ನಿರ್ಮಾಣ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಪ್ರಿಯಾ ಸುದೀಪ್ ಬೆನ್ನಿಗೆ ಸದಾ ನಿಂತಿರುವ ಕಿಚ್ಚ ಸುದೀಪ್, ಈ ಸಂತೋಷದ ವಿಷ್ಯವನ್ನು ತಮ್ಮ ಅಭಿಮಾನಿಗಳ ಮುಂದೆ ಹಂಚಿಕೊಂಡಿದ್ದಾರೆ. ಸುದೀಪ್ ತಮ್ಮ ಸೋಶಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ, ಪ್ರಿಯಾ ಸುದೀಪ್ ಸಿನಿಮಾ ನಿರ್ಮಾಣದ ವಿಷ್ಯವನ್ನು ಹಂಚಿಕೊಂಡಿದ್ದಾರೆ.
ಕಿಚ್ಚ ಸುದೀಪ್ ತಮ್ಮ ಎಕ್ಸ್ ಖಾತೆಯಲ್ಲಿ ಪ್ರಿಯಾ ಸುದೀಪ್ ಸಿನಿಮಾ ನಿರ್ಮಾಣ ಮಾಡ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಪ್ರಿಯಾ ಸುದೀಪ್, ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋದ ನಿರ್ಮಾಣ ಸಂಸ್ಥೆ ಜೊತೆ ನಿರ್ಮಾಣ ಕೆಲಸಕ್ಕೆ ಕಾಲಿಟ್ಟಿದ್ದಾರೆ. ಇದು ಹೆಮ್ಮೆಯ ಕ್ಷಣ ಎಂದು ಸುದೀಪ್ ಬರೆದುಕೊಂಡಿದ್ದಾರೆ. ಪ್ರಿಯಾ ಸುದೀಪ್ ಮ್ಯಾಂಗೋ ಪಚ್ಚ (mango pachcha), ಸಿನಿಮಾವನ್ನು ನಿರ್ಮಾಣ ಮಾಡ್ತಿದ್ದಾರೆ. ಈ ಸಿನಿಮಾದಲ್ಲಿ ಸಂಚಿತ್ ಸಂಜೀವ್ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ಸಂಚಿತ್ ಸಂಜೀವ್ ಸುದೀಪ್ ಅವರ ಸೋದರಳಿಯ. ಅವರನ್ನು ಜ್ಯೂನಿಯರ್ ಕಿಚ್ಚ ಎಂದೇ ಕರೆಯಲಾಗುತ್ತದೆ.
ಮತ್ತೆ ಒಂದಾದ ಕಿಲಾಡಿ ಜೋಡಿ ರಿಷಬ್-ತಾರಕ್ ! ವೇದಿಕೆಯಲ್ಲಿ ಕುಂದಾಪುರ ಕಲಿಗಳ ಸಮಾಗಮ..!
ಹೊಸ ಪ್ರತಿಭೆಗಳೊಂದಿಗೆ ಹೆಚ್ಚಿನ ಕನ್ನಡ ಚಲನಚಿತ್ರಗಳನ್ನು ನಿರ್ಮಿಸಲು ಮತ್ತು ಪ್ರೇಕ್ಷಕರನ್ನು ರಂಜಿಸುವುದು ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋದ ಮೂಲ ಉದ್ದೇಶವಾಗಿದೆ. ನಿಮ್ಮ ನಿರಂತರ ಪ್ರೀತಿ ಮತ್ತು ಬೆಂಬಲವಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ. ಮುಕ್ತ ಹೃದಯದಿಂದ ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಅನ್ನು ಸ್ವಾಗತಿಸೋಣ ಮತ್ತು ಕೆಲವು ಮಾಂತ್ರಿಕ ಕಥೆಗಳನ್ನು ನಿರೀಕ್ಷೆ ಮಾಡೋಣ ಎಂದು ಸುದೀಪ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಸುದೀಪ್ ಪೋಸ್ಟ್ ಗೆ ಸಾಕಷ್ಟು ಕಮೆಂಟ್ ಬಂದಿದೆ. ಜನರು ಪ್ರಿಯಾ ಸುದೀಪ್ ಹೊಸ ಪ್ರಯತ್ನಕ್ಕೆ ಶುಭಕೋರಿದ್ದಾರೆ. ಆಲ್ ದಿ ಬೆಸ್ಟ್ ವಿಶ್ ಮಾಡಿರುವ ಅಭಿಮಾನಿಗಳು, ಸಂಚಿತ್ ಸಂಜೀವ್ ನಮ್ಮ ಹುಡುಗ, ಅವರನ್ನು ನಾವು ಬೆಂಬಲಿಸ್ತೇವೆ ಅಂತ ಭರವಸೆ ನೀಡಿದ್ದಾರೆ. ಪ್ರಿಯಾ ಸುದೀಪ್ ಈಗಾಗಲೇ ಅಶ್ವಿನಿ ನಕ್ಷತ್ರ ಸೀರಿಯಲ್ ನಿರ್ಮಾಣ ಮಾಡಿ ಗೆದ್ದಿದ್ದಾರೆ. ಈಗ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. 2001ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರಿಯಾ, ಅಭಿನಯ ಚಕ್ರವರ್ತಿ ಸುದೀಪ್ ಗೆ ಶಕ್ತಿಯಾಗಿ ನಿಂತಿದ್ದಾರೆ.
ಮ್ಯಾಂಗೊ ಪಚ್ಚ ಚಿತ್ರದ ಟೀಸರ್ ಇಂದು ಮಧ್ಯಾಹ್ನ 12.30ಕ್ಕೆ ಬಿಡುಗಡೆಯಾಗಿದೆ. ಸಿನಿಮಾ ಟೀಸರನ್ನು ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋದ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಸುದೀಪ್ ಕೂಡ ಟೀಸರನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮ್ಯಾಂಗೊ ಪಚ್ಚಾಗೆ ಗುಡ್ ರೆಸ್ಪಾನ್ಸ್ ಸಿಕ್ಕಿದೆ. ಬಹುತೇಕ ಫ್ಯಾನ್ಸ್, ಸಂಚಿತ್ ಸಂಜೀವ್ ಅವ್ರನ್ನು ಜ್ಯೂನಿಯರ್ ಕಿಚ್ಚಾ ಎಂದೇ ಕಮೆಂಟ್ ಮಾಡಿದ್ದಾರೆ. ಪಚ್ಚ, ಮ್ಯಾಂಗೊ ಪಚ್ಚಾಆಗಿದ್ದು ಹೇಗೆ ಅನ್ನೋದೇ ಈ ಸಿನಿಮಾ ಕಥೆ. ನೈಜ ಕಥೆ ಆಧರಿತ ಈ ಕಥೆ ಮೈಸೂರಿನ ಸುತ್ತಮುತ್ತ ಶೂಟ್ ಆಗಿದೆ. 2010ರಲ್ಲಿ ನಡೆದ ಕಥೆಯೊಂದನ್ನು ಸಿನಿಮಾ ರೂಪಕ್ಕೆ ತರಲಾಗಿದೆ. ಟೀಸರ್ ನೋಡಿದ ಫ್ಯಾನ್ಸ್ ಸಿನಿಮಾ ರಿಲೀಸ್ ಯಾವಾಗ ಕೇಳ್ತಿದ್ದಾರೆ. ಇನ್ನು ಚಿತ್ರವನ್ನು ವಿವೇಕ್ ನಿರ್ದೇಶನ ಮಾಡಿದ್ದಾರೆ. ಸಂಚಿತ್ ಸಂಜೀವ್ ಈ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಪದಾರ್ಪಣೆ ಮಾಡ್ತಿದ್ದಾರೆ. ಚರಣ್ ರಾಜ್ ಸಂಗೀತವಿದ್ದು, ಶೇಖರ್ ರಾಜ್ ಛಾಯಾಗ್ರಹಣವಿದೆ. ಪ್ರಿಯಾ ಸುದೀಪ್ ಜೊತೆ ಕಾರ್ತಿಕ್, ಯೋಗಿ ಜಿ ರಾಜ್ ನಿರ್ಮಾಣ ಮಾಡ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.