ಆಸ್ಟ್ರೇಲಿಯಾದಲ್ಲಿ ಸುದೀಪ್ ದಂಪತಿ; ರೋಚಕ ಗೆಲುವು ಕಣ್ತುಂಬಿಕೊಂಡ ಕಿಚ್ಚ ಹೇಳಿದ್ದೇನು?

By Shruthi Krishna  |  First Published Oct 24, 2022, 9:40 AM IST

ಸುದೀಪ್ ದಂಪತಿ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾರೆ. ಅಲ್ಲೇ ಇದ್ದು ಭಾರತ ಹಾಗೂ ಪಾಕ್ ವಿಶ್ವಕಪ್​ ಮ್ಯಾಚ್​ ಸ್ಟೇಡಿಯಂನಲ್ಲೇ ವೀಕ್ಷಿಸಿದ್ದಾರೆ. ಸುದೀಪ್ ಮ್ಯಾಚ್ ವೀಕ್ಷಿಸುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


ಅಭಿನಯಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಪ್ರಿಯಾ ದಂಪತಿ ವಿದೇಶಿ ಪ್ರವಾಸದಲ್ಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿತ್ತು. ಆದರೆ ಯಾವ ಕಡೆ ಪಯಣ ಬೆಳೆಸಿದ್ದಾರೆ ಎನ್ನುವ ಮಾಹಿತಿ ರಿವೀಲ್ ಆಗಿರಲಿಲ್ಲ. ಇತ್ತೀಚಿಗಷ್ಟೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಕಿಚ್ಚ ದಂಪತಿ ಎಲ್ಲಿ ಇದ್ದಾರೆ ಎನ್ನುವ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ. ಇದೀಗ ಸುದೀಪ್ ಸ್ಟ್ರೇಲಿಯಾದಲ್ಲಿರುವುದು ಕನ್ಫರ್ಮ್ ಆಗಿದೆ.  ಅಲ್ಲಿಯೇ ಇದ್ದು ಭಾರತ ಹಾಗೂ ಪಾಕ್ ವಿಶ್ವಕಪ್​ ಮ್ಯಾಚ್​ ಅನ್ನು ಸ್ಟೇಡಿಯಂನಲ್ಲೇ ವೀಕ್ಷಿಸಿದ್ದಾರೆ. ಸುದೀಪ್ ಮ್ಯಾಚ್ ವೀಕ್ಷಿಸುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಟಿ-20 ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಐತಿಹಾಸಿಕ ಗೆಲುವು ದಾಖಲಿಸಿದೆ. ವಿರಾಟ್ ಕೊಹ್ಲಿ ಅವರ ಅಜೇಯ 82 ರನ್​ಗಳ ಆಟದಿಂದ ಪಾಕ್ ವಿರುದ್ಧ ಟೀಂ ಇಂಡಿಯಾ ಗೆದ್ದು ಬಿಗಿದೆ. ಈ ರೋಚಕ ಗೆಲುವನ್ನು ಭಾರತ ಸಂಭ್ರಮಿಸುತ್ತಿದೆ. ಕಿಂಗ್ ಕೊಹ್ಲಿ ಆಟವನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ಇಂಥ ರೋಚಕ ಪಂದ್ಯವನ್ನು ಸುದೀಪ್ ಆಸ್ಟ್ರೇಲಿಯಾದ ಮೆಲ್ಬೋರ್ನ್​ ಸ್ಟೇಡಿಯಮ್‌ನಲ್ಲಿ ಕುಳಿತು ಕಣ್ತುಂಬಿಕೊಂಡಿದ್ದಾರೆ. ಗೆಲುವಿನ ಬಳಿಕ ಸುದೀಪ್ ಕೂಡ ಕೊಹ್ಲಿ ಆಟವನ್ನು ಮೆಚ್ಚಿ ಟ್ವೀಟ್ ಮಾಡಿದ್ದಾರೆ. ಮಹಾರಾಜ ಎಲ್ಲಿದ್ದರೂ ಮಹಾರಾಜನೇ ತಾನೆ ಎಂದು ಕೊಹ್ಲಿಯನ್ನು ಹಾಡಿಹೊಗಳಿದ್ದಾರೆ. 

ಇದೇ ಮೊದಲ ಬಾರಿಗೆ ಮೈದಾನದಲ್ಲಿ ಕಣ್ಣೀರಿಟ್ಟ ಕೊಹ್ಲಿ, ಚಾಂಪಿಯನ್ಸ್ ಕಿಂಗ್‌ಗೆ ದಿಗ್ಗಜರ ಸಲಾಂ!

Tap to resize

Latest Videos

undefined

ವಿರಾಟ್ ಕೊಹ್ಲಿಯನ್ನು ಹೊಗಳಿರುವ ಸುದೀಪ್,  'ಮಹಾರಾಜ ಎಲ್ಲಿದ್ದರೂ ಮಹಾರಾಜನೇ ತಾನೆ. ರಾಜ ರಾಜನಾಗಿಯೇ ಉಳಿಯುತ್ತಾನೆ. ಕಿಂಗ್ ಕೊಹ್ಲಿ. ಇಂಥ ಪಂದ್ಯವನ್ನು ನೇರವಾಗಿ ಸ್ವೇಡಿಯಂನಲ್ಲೇ ವೀಕ್ಷಿಸಿದ್ದು ಖುಷಿಯಾಗಿದೆ. ಹ್ಯಾಟ್ಸ್ ಆಫ್ ವಿರಾಟ್ ಕೊಹ್ಲಿ' ಎಂದು ಬರೆದುಕೊಂಡಿದ್ದಾರೆ. ಸುದೀಪ್ ಟ್ವೀಟ್‌ಗೆ ಅಭಿಮಾನಿಗಳು ಸಹ ಸಂತಸ ವ್ಯಕ್ತಪಡಿಸಿ ವಿಶ್ ಮಾಡುತ್ತಿದ್ದಾರೆ.

Maharaajanu yellidharu maharaajane thaane...
King remains a king.
King Kohli

Witnessing this live at the stadium was an honour.
🙏🏼 ❤️🥂
Hats off .. it wouldn't have been possible without Ua calmness,, hats off.

To team India ... ❤️❤️❤️❤️❤️❤️

— Kichcha Sudeepa (@KicchaSudeep)


T20 World Cup ಟೀಕೆಗೆ ಬೆಂಕಿ ಬೌಲಿಂಗ್‌ನಿಂದಲೇ ಉತ್ತರಿಸಿದ ಆರ್ಶದೀಪ್ ಸಿಂಗ್!

ಅಂದಹಾಗೆ ಸುದೀಪ್ ಅವರಿಗೆ ಕ್ರಿಕೆಟ್ ಎಂದರೆ ತಂಬಾ ಇಷ್ಟ ಎನ್ನುವುದು ಗೊತ್ತಿರುವ ವಿಚಾರ. ಜೊತೆಗೆ ವಿರಾಟ್ ಕೊಹ್ಲಿ ಬಗ್ಗೆ ಅವರಿಗೆ ವಿಶೇಷ ಪ್ರೀತಿ ಇದೆ. ಹಾಗಾಗಿ ಕಿಚ್ಚ ಆಸ್ಟ್ರೇಲಿಯಾದಲ್ಲೇ ಇದ್ದು ರೋಚಕ ಪಂದ್ಯ ವೀಕ್ಷಿಸಿ ಎಂಜಾಯ್ ಮಾಡಿದ್ದಾರೆ. ಸುದೀಪ್ ಸದ್ಯ ಸಿನಿಮಾ ಮತ್ತು ರಿಯಾಲಿಟಿ ಶೋನಿಂದ ಬ್ರೇಕ್ ಪಡೆದು ವಿದೇಶಿ ಪ್ರವಾಸದ ಸಂತಸದಲ್ಲಿದ್ದಾರೆ. ಅಂದಹಾಗೆ ಕಿಚ್ಚ ಸದ್ಯ ಬಿಗ್ ಬಾಸ್ ಸೀಸನ್ 9 ನಡೆಸಿಕೊಡುತ್ತಿದ್ದಾರೆ. ಬಿಗ್ ಬಾಸ್ ವೀಕೆಂಡ್ ಎಪಿಸೋಡ‌್‌ಗೆ ಕಿಚ್ಚ ಹಾಜರಾಗಬೇಕಿತ್ತು. ಆದರೆ ಆಸ್ಟ್ರೇಲಿಯಾದಲ್ಲಿರುವ ಕಾರಣ ಕಳೆದ ವಾರದ ವೀಕೆಂಡ್ ಸಂಚಿಕೆಗೆ ಕಿಚ್ಚ ಗೈರಾಗಿದ್ದರು. ಸುದೀಪ್ ಇಲ್ಲದೆ ಈ ವಾರ ಬಿಗ್ ಬಾಸ್ ಮನೆಯಲ್ಲಿ ಎಲಿಮಿನೇಷನ್ ಕೂಡ ನಡೆದಿದೆ. ಅಸ್ಟ್ರೇಲಿಯಾದಲ್ಲಿರುವ ಕಿಚ್ಚ ದಂಪತಿ ಸದ್ಯದಲ್ಲೇ ವಾಪಾಸ್ ಆಗುತ್ತಿದ್ದಾರೆ.    

click me!