Puneeth Rajkumar ಮುರುಡೇಶ್ವರದ ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವ್ ಮಾಡಿ ಗಂಧದ ಗುಡಿ ಪ್ರಚಾರ ಮಾಡಿದ ಅಭಿಮಾನಿ!

Published : Oct 23, 2022, 04:55 PM IST
Puneeth Rajkumar ಮುರುಡೇಶ್ವರದ ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವ್ ಮಾಡಿ ಗಂಧದ ಗುಡಿ ಪ್ರಚಾರ ಮಾಡಿದ ಅಭಿಮಾನಿ!

ಸಾರಾಂಶ

ಉತ್ತರಕನ್ನಡ ಜಿಲ್ಲೆಯ ಮುರುಡೇಶ್ವರದ ನೇತ್ರಾಣಿ ದ್ವೀಪಕ್ಕೆ ತೆರಳಿದ ಅಭಿಮಾನಿಯೋರ್ವರು ನೇತ್ರಾಣಿ ಅಡ್ವೆಂಚರ್ಸ್ ಅವರ ಸಹಾಯದಿಂದ ಸ್ಕೂಬಾ ಡೈವ್ ಮಾಡಿಕೊಂಡು ಗಂಧದ ಗುಡಿ ಪ್ರಮೋಷನ್ ಮಾಡಿದ್ದಾರೆ.  

ವನ್ಯಜೀವಿಗಳು ಹಾಗೂ ಸಮುದ್ರ ಜೀವಿಗಳ ರಕ್ಷಣೆ ಹಾಗೂ ಪ್ರವಾಸೋದ್ಯಮ ಬೆಳವಣಿಗೆ ಉದ್ದೇಶದಿಂದ ದಿ. ಪವರ್ ಸ್ಟಾರ್ ಪುನೀತ್‌ರಾಜ್ ಕುಮಾರ್ ಗಂಧದ ಗುಡಿ ಡಾಕ್ಯುಮೆಂಟರಿ ಫಿಲ್ಮ್‌ನಲ್ಲಿ ಅಭಿನಯಿಸಿದ್ದರು. ಈ ಡಾಕ್ಯುಮೆಂಟರಿ ಫಿಲ್ಮ್‌ನ ಪ್ರೀ ರಿಲೀಸ್ ಈವೆಂಟ್ ಬೆಂಗಳೂರಿನಲ್ಲಿ ಭರ್ಜರಿಯಾಗೇ ನಡೆದಿತ್ತು. ಈ ಪ್ರೀ ರಿಲೀಸ್ ಈವೆಂಟ್ ಬಳಿಕ ಅಭಿಮಾನಿಗಳಿಂದಲೂ ಸಕ್ಕತ್ ಪ್ರಮೋಷನ್ ದೊರೆಯುತ್ತಿದೆ. ಕೆಲವರಂತೂ ಸಮುದ್ರದಾಳಕ್ಕೆ ಸ್ಕೂಬಾ ಡೈವ್ ಮಾಡಿಕೊಂಡು ಕೂಡಾ ಗಂಧದಗುಡಿಗೆ ವಿಶೇಷ ಪ್ರಮೋಷನ್ ನೀಡಿದ್ದಾರೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ ನೋಡಿ..

 ಹೌದು, ಪವರ್ ಸ್ಟಾರ್ ಪುನೀತ್‌ರಾಜ್ ಕುಮಾರ್ ಅಭಿನಯಿಸಿದ್ದ ಗಂಧದ ಗುಡಿ ಡಾಕ್ಯುಮೆಂಟರಿ ಫಿಲ್ಮ್ ಮೂಲಕ ಮತ್ತೆ ಅಪ್ಪು ಅವರನ್ನು ಕಾಣಲು ಕೋಟ್ಯಾಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಅಮೋಘವರ್ಷ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ಮೂಲಕ ನಟ ಪುನೀತ್ ಕನ್ನಡ ನಾಡಿನ ನೈಸರ್ಗಿಕ ಸಂಪತ್ತಿನ ಮಾಡಿದ್ದಾರೆ. ಪಿ.ಆರ್‌.ಕೆ. ಬ್ಯಾನರ್‌ನಡಿ ನಿರ್ಮಾಣವಾದ ಈ ಡಾಕ್ಯುಮೆಂಟರಿ ಚಿತ್ರವನ್ನು ಅಶ್ವಿನಿ ಪುನೀತ್‌ರಾಜ್ ಕುಮಾರ್ ನಿರ್ಮಾಣ ಮಾಡಿದ್ದರು. ಈ ಡಾಕ್ಯುಮೆಂಟರಿ ಫಿಲ್ಮ್ ಅನ್ನು ಉತ್ತರಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆ ಶೂಟ್ ಮಾಡಲಾಗಿದೆ. ಮೊನ್ನೆಯಷ್ಟೇ ಈ ಡಾಕ್ಯುಮೆಂಟರಿಯ ಪ್ರೀ ರಿಲೀಸ್ ಈವೆಂಟ್ ಬೆಂಗಳೂರಿನಲ್ಲಿ ನಡೆದಿದ್ದು, ದೊಡ್ಡ ದೊಡ್ಡ ಸ್ಟಾರ್ ನಟರು ಸೇರಿದಂತೆ ಸಾಕಷ್ಟು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಪ್ರೀ ರಿಲೀಸ್ ಈವೆಂಟ್ ಬಳಿಕ ಅಭಿಮಾನಿಗಳಿಂದ ಗಂಧದ ಗುಡಿ ಡಾಕ್ಯುಮೆಂಟರಿಗೆ ಭರ್ಜರಿ ಪ್ರಮೋಷನ್ ದೊರೆಯುತ್ತಿದೆ. ಕೆಲವರಂತೂ ಸಮುದ್ರದೊಳಗೂ ಈ  ಡಾಕ್ಯುಮೆಂಟರಿಯ ಪ್ರಮೋಷನ್ ನಡೆಸುತ್ತಿದ್ದಾರೆ. 

ಉತ್ತರಕನ್ನಡ ಜಿಲ್ಲೆಯ ಮುರುಡೇಶ್ವರದ ನೇತ್ರಾಣಿ ದ್ವೀಪಕ್ಕೆ ತೆರಳಿದ ಅಭಿಮಾನಿಯೋರ್ವರು ನೇತ್ರಾಣಿ ಅಡ್ವೆಂಚರ್ಸ್ ಅವರ ಸಹಾಯದಿಂದ ಸ್ಕೂಬಾ ಡೈವ್ ಮಾಡಿಕೊಂಡು ಗಂಧದ ಗುಡಿ ಪ್ರಮೋಷನ್ ಮಾಡಿದ್ದಾರೆ. ವನ್ಯಜೀವಿ ಹಾಗೂ ಸಮುದ್ರಜೀವಿಗಳನ್ನು ರಕ್ಷಿಸಿ ಅನ್ನೋ ಟ್ಯಾಗ್‌ಲೈನ್ ಜತೆ ಡಾಕ್ಯುಮೆಂಟರಿಯ ಪೋಸ್ಟರ್ ಫ್ರೇಮ್ ಹಿಡಿದುಕೊಂಡು ಸಮುದ್ರದಡಿ ವಿಶೇಷ ರೀತಿಯಲ್ಲಿ ಪ್ರಮೋಷನ್ ನೀಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

Puneeth Parva: ಬೊಂಬೆ ಹೇಳುತೈತೆ ಹಾಡಿದ ರಾಜ್‌ ಕುಟುಂಬ, ವೇದಿಕೆ ಮೇಲೆ ಅಶ್ವಿನಿ ಪುನೀತ್‌ ಕಣ್ಣೀರು

ಅಂದಹಾಗೆ, ಈ ಹಿಂದೆ ಗಂಧದ ಗುಡಿ ಡಾಕ್ಯುಮೆಂಟರಿ ಶೂಟ್‌ಗಾಗಿ ಉತ್ತರಕನ್ನಡ ಜಿಲ್ಲೆಗೆ ಭೇಟಿ ಕೊಟ್ಟಿದ್ದ ಪವರ್ ಸ್ಟಾರ್ ಪುನೀತ್‌ರಾಜ್ ಕುಮಾರ್, ಜೊಯಿಡಾ, ದಾಂಡೇಲಿ, ಯಲ್ಲಾಪುರ, ಮಾಜಾಳಿಯ ಬಳಿಕ ಮುರುಡೇಶ್ವರದಲ್ಲೂ ಶೂಟಿಂಗ್ ಮುಗಿಸಿದ್ದರು. ಮುರುಡೇಶ್ವರದ ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್ ಮಾಡಿ ಕೊನೇಯ ಶೂಟ್ ಮುಗಿಸಿದ್ದ ಪುನೀತ್, ಸಮುದ್ರದೊಳಗಿನ ಪ್ರಪಂಚ ಕಂಡು  ತುಂಬಾ ಸಂತೋಷಪಟ್ಟಿದ್ದರು. ಈ ವೇಳೆ ಅಪ್ಪು ಅವರಿಗೆ ಸ್ಕೂಬಾ ಡೈವಿಂಗ್ ಮಾಡಲು ಸಹಾಯ ಮಾಡಿದ್ದ ನೇತ್ರಾಣಿ ಅಡ್ವೆಂಚರ್ಸ್ ಮಾಲಕ ಗಣೇಶ್, ನೇತ್ರಾಣಿ ದ್ವೀಪದವರೆಗೆ ತೆರಳಲು ಬೋಟ್ ಹಾಗೂ ಸ್ಕೂಬಾ ಡೈವಿಂಗ್ ಕಿಟ್‌ಗಳನ್ನು ಒದಗಿಸಿದ್ರು. ಸುಮಾರು 10 ಮೀಟರ್ ಆಳದಲ್ಲಿ 30-40 ನಿಮಿಷ ಸ್ಕೂಬಾ ಡೈವಿಂಗ್ ಮಾಡಿದ್ದ ಪುನೀತ್, ಸಮುದ್ರದ ಜಲಚರಗಳನ್ನು ಕಂಡು ಸಾಕಷ್ಟು ಎಂಜಾಯ್ ಮಾಡಿದ್ದರು. 

ಮುಂದಿನ ಬಾರಿ ಕುಟುಂಬ ಸಮೇತನಾಗಿ ಸ್ಕೂಬಾ ಡೈವಿಂಗ್ ಮಾಡಲು ಬರುತ್ತೇನೆ. ನೀನು ನನಗೆ ಸ್ಕೂಬಾ ಡೈವಿಂಗ್ ಮಾಡಿಸಬೇಕು ಎಂದು ಹೇಳಿದ್ರು. ಪುನೀತ್ ತುಂಬಾ ಸರಳವಾಗಿ, ಅನ್ಯೋನ್ಯವಾಗಿದ್ದರು. ಅವರ ಜತೆ ಕಳೆದ ಸಮಯ ಬಹಳಷ್ಟು ಅಮೂಲ್ಯವಾದದ್ದು. ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಅಂತಾರೆ ನೇತ್ರಾಣಿ ಅಡ್ವೆಂಚರ್ಸ್ ಮಾಲಕ ಗಣೇಶ್‌.

ಬೆಂಗಳೂರಿನಲ್ಲಿ ವೈಭವದ ‘ಪುನೀತ ಪರ್ವ’: ಹರಿದು ಬಂದ ಜನ ಸಾಗರ, ಚಿತ್ರೋದ್ಯಮದ ಗಣ್ಯರು

ಡಾಕ್ಯುಮೆಂಟರಿ ಶೂಟ್‌ಗಳೆಲ್ಲಾ ಮುಗಿಸಿ ಮತ್ತೆ ಉಳಿದ ಸಿನೆಮಾಗಳ ಶೂಟಿಂಗ್ ನಡೆಸುತ್ತಿದ್ದ ನಡುವೆಯೇ ಹೃದಯಾಘಾತದಿಂದ ಪುನೀತ್ ಇಹಲೋಕ ತ್ಯಜಿಸಿದ್ದರು. ಆದರೆ, ಈ ಹಿಂದೆ ಎರಡು ಸಿನೆಮಾಗಳಲ್ಲಿ ಕಾಣಿಸಿಕೊಂಡಿದ್ದ ಪುನೀತ್ ಅವರನ್ನು ಮತ್ತೆ ಡಾಕ್ಯುಮೆಂಟರಿ ಫಿಲ್ಮ್‌ನಲ್ಲಿ ನೋಡಲು ಕೋಟ್ಯಾಂತರ ಜನರು ಕಾತುರರಾಗಿದ್ದಾರೆ. 

ಭರತ್‌ರಾಜ್ ಕಲ್ಲಡ್ಕ ಜತೆ ಕ್ಯಾಮೆರಾಮ್ಯಾನ್ ಗಿರೀಶ್ ನಾಯ್ಕ್, ಏಷಿಯಾನೆಟ್ ಸುವರ್ಣ ನ್ಯೂಸ್ ಕಾರವಾರ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?