ಹಿರಿಯ ನಟ ಅನಂತ್‌ ನಾಗ್ ಬಗ್ಗೆ 'ಮೀಟೂ' ಖ್ಯಾತಿ ನಟಿ ಶ್ರುತಿ ಹರಿಹರನ್ ಹೇಳಿದ್ದೇನು?

By Shriram Bhat  |  First Published Jun 22, 2024, 6:41 PM IST

ಅವರಿಂದ ನಾನು ಕಲಿತುಕೊಂಡ ಮತ್ತೊಂದು ಸಂಗತಿ ಎಂದರೆ, ಶಿಸ್ತು. ಅನಂತ್‌ನಾಗ್ ಸರ್ ಅವರು ಎಷ್ಟೊಂದು ಡೀಸೆಂಟ್ ಮತ್ತು ಡಿಸಿಪ್ಲೇನ್ ಆಗಿರ್ತಾರೆ ಅಂದ್ರೆ ಅದನ್ನು ಎಲ್ಲರೂ ಕಲಿತುಕೊಳ್ಳಬೇಕು. ಅಗತ್ಯವಿದ್ದರಷ್ಟೇ ಮಾತು, ಅಗತ್ಯವಿದ್ದರಷ್ಟೇ ನೋಟ, ಹರಟೆ...


ನಟಿ ಶ್ರುತಿ ಹರಿಹರನ್ ಕನ್ನಡದ ಹಿರಿಯ, ಮೇರು ನಟ ಅನಂತ್‌ನಾಗ್ (Anant Nag) ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ನಟಿ ಶ್ರುತಿ ಹರಿಹರನ್ (Sruthi Hariharan) 'ನಾನು ಅಚ್ಚರಿಗೊಳಗಾಗಿ ಅವರಿಂದ ಸಾಕಷ್ಟು ವಿಷಯಗಳನ್ನಂತೂ ಕಲಿತುಕೊಂಡೆ. ಅದೇನೆಂದರೆ, ಡೈಲಾಗ್‌ ಸ್ಕ್ರಿಪ್ಟ್‌ ಅನ್ನು ಬಹಳಷ್ಟು ಬಾರಿ ನೋಡಿ ರಿಹರ್ಸಲ್ ಮಾಡಬೇಕು ಎಂಬುದು. ನಾನು ಅನಂತ್‌ನಾಗ್ ಸರ್ ಜೊತೆ ಗೋಧಿ ಬಣ್ಣ, ಸಾಧಾರಣ ಮೈಕಟ್ಟು ಸಿನಿಮಾ ಮಾಡುವಾಗ, ಶೂಟಿಂಗ್‌ ಸ್ಪಾಟ್‌ನಲ್ಲಿ ಅವರನ್ನು ಸಾಕಷ್ಟು ಗಮನಿಸುತ್ತಿದ್ದೆ. 

ಮೂಲೆಯೊಂದರಲ್ಲಿ ಕುಳಿತು ಅವರು ಕೊಟ್ಟಿರುವ ಡೈಲಾಗ್ ಶೀಟ್ಸ್‌ ನೋಡಿಕೊಂಡು ಬಹಳಷ್ಟು ಸಾರಿ ಅವರು ಅದನ್ನು ರಿಹರ್ಸಲ್ ಮಾಡುತ್ತಿದ್ದರು, ನನಗೆ ಆಗ ನಿಜವಾಗಿಯೂ ಆಶ್ಚರ್ಯ ಆಗುತ್ತಿತ್ತು. ನಾನೂ ಕೂಡ ಗಾಬರಿಯಿಂದ ಡೈಲಾಗ್ ರಿಹರ್ಸಲ್ ಮಾಡುತ್ತಿದ್ದೆ. ಅಷ್ಟು ಸೀನಿಯರ್ ನಟರಾಗಿ ಅವರೇ ಅಷ್ಟೊಂದು ರಿಹರ್ಸಲ್ ಮಾಡಿಕೊಂಡು ಆದಷ್ಟು ಕಡಿಮೆ ಟೇಕ್ ತೆಗದುಕೊಳ್ಳುವಾಗ, ನಾವು ರಿಹರ್ಸಲ್ ಮಾಡದೇ ತುಂಬಾ ಟೇಕ್ ತೆಗೆದುಕೊಳ್ಳುವುದು ತಪ್ಪು ಎನಿಸುತ್ತಿತ್ತು. 

Tap to resize

Latest Videos

undefined

ಹಂಸಲೇಖಾ ಚೇಂಜ್ ಓವರ್ ಬಗ್ಗೆ ಗುರುಕಿರಣ್ ಹೇಳಿದ್ದೇನು; ಯಾರದ್ದು ಕಾಂಪ್ಲಿಕೇಟೆಡ್ ಅಂದ್ರು?

ಅವರಿಂದ ನಾನು ಕಲಿತುಕೊಂಡ ಮತ್ತೊಂದು ಸಂಗತಿ ಎಂದರೆ, ಶಿಸ್ತು. ಅನಂತ್‌ನಾಗ್ ಸರ್ ಅವರು ಎಷ್ಟೊಂದು ಡೀಸೆಂಟ್ ಮತ್ತು ಡಿಸಿಪ್ಲೇನ್ ಆಗಿರ್ತಾರೆ ಅಂದ್ರೆ ಅದನ್ನು ಎಲ್ಲರೂ ಕಲಿತುಕೊಳ್ಳಬೇಕು. ಅಗತ್ಯವಿದ್ದರಷ್ಟೇ ಮಾತು, ಅಗತ್ಯವಿದ್ದರಷ್ಟೇ ನೋಟ, ಹರಟೆ. ಇಲ್ಲದಿದ್ದರೆ ಅವರು ಮೌನಕ್ಕೇ ಶರಣಾಗಿ ಇರುತ್ತಾರೆ. ಅದರಿಂದ ಶೂಟಿಂಗ್ ಸ್ಪಾಟ್‌ನಲ್ಲಿ ಅನಗತ್ಯ ವಿವಾದ, ಗಲಾಟೆ ತಪ್ಪಿ ಶಾಂತತೆ ನೆಲೆಸಿರುತ್ತದೆ. ಹೀಗಾಗಿ ಅದನ್ನೂ ಎಲ್ಲರೂ ತಪ್ಪದೇ ಪಾಲಿಸಬೇಕು ಎಂಬುದು ನನ್ನ ಅಭಿಪ್ರಾಯ. 

ಮಧ್ಯರಾತ್ರಿ ಕೋಣೆ ಬಾಗಿಲು ತಟ್ಟಿದ್ರು ಡಾ ರಾಜ್‌ಕುಮಾರ್; ಶಾಕ್ ಆಗಿ ಪ್ರೊಡ್ಯೂಸರ್ ಮಾಡಿದ್ದೇನು?

ನಟಿ ಶ್ರುತಿ ಹರಿಹರನ್ ಅವರು ರ್‍ಯಾಪಿಡ್ ರಶ್ಮಿ ಅವರ ಸಂದರ್ಶನದಲ್ಲಿ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಮದುವೆ, ಮಗು ಎಂದು ಸದ್ಯ ಸಂಸಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ನಟಿ ಶ್ರುತಿ ಹರಿಹರನ್, ಇತ್ತೀಚೆಗೆ ಯಾವುದೇ ಹೊಸ ಸಿನಿಮಾದಲ್ಲಿ ನಟಿಸುತ್ತಿಲ್ಲ. ಆಗಾಗ ಕೆಲವು ಸಂದರ್ಶನಗಳಲ್ಲಿ ಮಾತನಾಡುತ್ತ, ಹಳೆಯ ನೆನಪುಗಳನ್ನು ಹೇಳಿಕೊಳ್ಳುತ್ತ, ಅನುಭವಗಳನ್ನು ಹಂಚಿಕೊಳ್ಳುತ್ತ ಇರುತ್ತಾರೆ. ಅಂದಹಾಗೆ, ನಟಿ ಶ್ರುತಿ ಹರಿಹರನ್ ಅಂದಾಕ್ಷಣವೇ ಎಲ್ಲರಿಗೂ ನೆನಪಾಗುವುದು ಮೀಟೂ ಅಭಿಯಾನ. 

ಆಮೇಲೇನಾಯ್ತು ಅನ್ನೋದು ಎಲ್ರಿಗೂ ಗೊತ್ತಿರೋ ವಿಷ್ಯ, ನಾನು ಹೇಳೋದೇನಿಲ್ಲ; ಚಂದನ್ ಶೆಟ್ಟಿ ಹೀಗಂದ್ಬಿಟ್ರು!

click me!