ಮೆಸೇಜ್ ಮಾಡಿದವನಿಗಿಂತ ದೊಡ್ಡ ತಪ್ಪು ಮಾಡಿದ್ದಾರೆ. ಘಟನೆ ಏನೇ ಇರಲಿ ಖಂಡಿತಾ ಶಿಕ್ಷೆ ಆಗುತ್ತದೆ ಎಂದು ನಿರ್ದೆಶಕ....
ಕನ್ನಡ ಚಿತ್ರರಂಗ ಖ್ಯಾತ ನಿರ್ದೇಶಕ AMR ರಮೇಶ್ ರೇಣುಕಾಸ್ವಾಮಿ ಕೊಲೆ ಪ್ರಕರಣದ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇಲ್ಲಿ ಯಾರ ತಪ್ಪಿದೆ, ಈ ತಪ್ಪಿನಿಂದ ಯಾರು ಅನುಭವಿಸುತ್ತಿದ್ದಾರೆ, ಈ ತಪ್ಪು ಫ್ಯಾಮಿಲಿ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂದು ಮಾತನಾಡಿದ್ದಾರೆ.
ಪವಿತ್ರಾ ಗೌಡ ವ್ಯಂಗ್ಯ ನಗು ಚಾರ್ಜ್ ಶೀಟ್ ಕೋರ್ಟ್ ಮತ್ತು ಜೈಲು ಸೇರಿದ ಮೇಲೆ ಎಲ್ಲವೂ ಹೋಗುತ್ತದೆ. ಪರಪ್ಪನ ಅಗ್ರಹಾರಕ್ಕೆ ಹೋದಾಗ ಬಾಡಿ ಲ್ಯಾಂಗ್ವೇಜ್ ಸಂಪೂರ್ಣವಾಗಿ ಬದಲಾಗುತ್ತದೆ. ನಾವೆಲ್ಲಾ ಸ್ನೇಹಿತರು ಒಟ್ಟಿಗಿದ್ದೀವಿ ಎಂದು ನಗು ನಗುತ್ತಾ ಇರುತ್ತಾರೆ ಆದರೆ ಇದೆಲ್ಲವೂ ಫ್ಯಾಮಿಲಿ ಮೇಲೆ ಪರಿಣಾಮ ಬೀರುತ್ತದೆ. ಯಾರೇ ಜೈಲು ಸೇರಿದ ಮೇಲೆ ನೊಂದು ಹೀಗುತ್ತಾರೆ ಅಲ್ಲಿ ನಡೆದ ಕೃತ್ಯ ಯಾರು ಮಾಡಿದ್ದಾರೆ ಅಂತ ನಂಗೆ ಗೊತ್ತಿಲ್ಲ ಆದರೆ ಖಂಡಿತಾ ಶಿಕ್ಷೆ ಆಗುತ್ತದೆ ಎಂದು ಕನ್ನಡ ಖಾಸಗಿ ವಾಹಿನಿಯ ಜೊತೆ ರಮೇಶ್ ಮಾತನಾಡಿದ್ದಾರೆ.
undefined
ದರ್ಶನ್ ಸರ್‌ನ ಅಣ್ಣನ ರೂಪದಲ್ಲಿ ಕಂಡೆ ಆದ್ರೆ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ: ಬಿಗ್ ಬಾಸ್ ಇಶಾನಿ ಪೋಸ್ಟ್ ವೈರಲ್
ಸಂಪೂರ್ಣ ಘಟನೆಯಲ್ಲಿ ದರ್ಶನ್ ಬಾಸ್. ಆತ ಪರ್ಫೆಕ್ಟ್ ನಿರ್ಧಾರ ತೆಗೆದುಕೊಂಡಿದ್ದರೆ ಇಲ್ಲಿವರೆಗೂ ನಡೆಯುತ್ತಿರಲಿಲ್ಲ. ಯಾರೋ ಒಬ್ಬರು ಪೋಸ್ಟ್ ಮಾಡುತ್ತಾರೆ ಅದನ್ನು ಗಮನಿಸಿ ಆತನನ್ನು ಕರೆಸಿ ಒಂದು ಕಪ್ಪಾಳಕ್ಕೆ ಹೊಡೆಸಿ ಕಾಲಿಗೆ ಬಿದ್ದು ಕ್ಷಮೆ ಕೇಳಿಸಿ ಡಿಲೀಟ್ ಮಾಡು ಎನ್ನಬೇಕು ಇಲ್ಲ ಪೊಲೀಸರಿಗೆ ತಿಳಿಸಬೇಕು. ಆತ ಮಾಡಿರುವ ತಪ್ಪಿಗಿಂತ ದೊಡ್ಡ ತಪ್ಪು ಮಾಡಿದ್ದಾರೆ. ಇಷ್ಟು ಮಾಡಿದ ಮೇಲೆ ಆ ನೋವಿಗೆ ಬೆಲೆ ಸಿಗಬೇಕು. ಆ ಗರ್ಭಿಣಿ ಅನುಭವಿಸುತ್ತಿರುವ ನೋವು ತುಂಬಾ ಎಂದು ರಮೇಶ್ ಹೇಳಿದ್ದಾರೆ.
ಮಗನಿಗೆ ಈ ನಟನ ಹೆಸರಿಡಲು ಮುಂದಾಗ ನಿರೂಪಕಿ; 2-3 ಹೆಂಡ್ತೀರ್ ಆಗ್ತಾರೆ ಅನ್ನೋ ಭಯ ಶುರುವಾಯ್ತಾ?
ಫ್ಯಾನ್ಸ್ ಎಷ್ಟರಲ್ಲಿ ಇರಬೇಕು ಅಷ್ಟರಲ್ಲಿ ಇರಬೇಕು. ದರ್ಶನ್ ಒಳಗಿದ್ದಾಗ ಹೊರಗಿರುವ ವ್ಯಕ್ತಿಗಳಿಗೆ ನೀವು ಬೆದರಿಕೆ ಹಾಕಿದರೆ ಮುಂದೆ ನರಳುವುದು ಯಾರು ಎಂದು ಯೋಚನೆ ಮಾಡಬೇಕು. ಈ ಘಟನೆಯಲ್ಲಿ ಒಬ್ಬ ವ್ಯಕ್ತಿ ತಂದೆಯನ್ನು ಕಳೆದುಕೊಂಡಿದ್ದಾರೆ. 17 ಜನರ ಜೀವನ ಕತಿ ಏನಾಗಬೇಕು. ಇಂಡಸ್ಟ್ರಿಗೆ ಕೆಟ್ಟ ಹೆಸರು ಬರುತ್ತಿದ್ದಂತೆ ಸಿನಿಮಾ ಆಫರ್‌ಗಳು ಕಡಿಮೆ ಆಗುತ್ತೆ ಸಿನಿಮಾ ನೋಡುವ ಜನರು ಕಡಿಮೆ ಆಗುತ್ತಾರೆ ಇದರಿಂದ ಅದೆಷ್ಟೋ ಜನರ ಹೊಟ್ಟೆ ಮೇಲೆ ಏಟು ಬೀಳುತ್ತದೆ ಎಂದಿದ್ದಾರೆ ರಮೇಶ್.