Madhagaja: ರಿಲೀಸ್‌ಗೂ ಮುನ್ನವೇ ರೋರಿಂಗ್ ಸ್ಟಾರ್ ಶ್ರೀಮುರಳಿ ಚಿತ್ರಕ್ಕೆ ಭಾರೀ ಡಿಮ್ಯಾಂಡ್

By Suvarna News  |  First Published Nov 29, 2021, 9:13 PM IST

ಮಹೇಶ್ ಕುಮಾರ್ ನಿರ್ದೇಶನದ ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಗೂ ಆಶಿಕಾ ರಂಗನಾಥ್ ಅಭಿನಯದ ಬಹು ನಿರೀಕ್ಷಿತ ಮದಗಜ ಚಿತ್ರದ ಟಿವಿ ರೈಟ್ಸ್ ಭರ್ಜರಿ ಮೊತ್ತಕ್ಕೆ ಸೇಲ್ ಆಗಿದೆ.


ಮಹೇಶ್ ಕುಮಾರ್ (Mahesh Kumar) ನಿರ್ದೇಶನದ ರೋರಿಂಗ್ ಸ್ಟಾರ್ ಶ್ರೀಮುರಳಿ (SriiMurali) ಅಭಿನಯದ ಬಹು ನಿರೀಕ್ಷಿತ 'ಮದಗಜ' (Madhagaja) ಚಿತ್ರ ಕನ್ನಡ ಚಿತ್ರರಂಗ ಅಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಖತ್​ ಸೌಂಡ್​ ಮಾಡುತ್ತಿದೆ. ಈಗಾಗಲೇ ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸ್‌ನ್ನು (Dubbing Rights) ಬಾಲಿವುಡ್ (Bollywood) ಪ್ರತಿಷ್ಠಿತ ಸಂಸ್ಥೆಯೊಂದು 8 ಕೋಟಿಗೆ ಖರೀದಿಸಿದ್ದು, ರಿಲೀಸ್​ಗೂ ಮುನ್ನವೇ ನಿರ್ಮಾಪಕ ಲಾಭ ಮಾಡಿಕೊಟ್ಟಿದೆ. ಇದೀಗ ಚಿತ್ರದ ಟಿವಿ ರೈಟ್ಸ್ (TV Rights)​ ಕೂಡಾ ಭರ್ಜರಿ ಮೊತ್ತಕ್ಕೆ ಸೇಲ್ ಆಗಿದೆ. ಈ ಬಗ್ಗೆ ಚಿತ್ರದ ನಿರ್ದೇಶಕ ಮಹೇಶ್ ಕುಮಾರ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಹೌದು! 'ಮದಗಜ' ಚಿತ್ರದ ಟಿವಿ ರೈಟ್ಸ್‌ನ್ನು 'ಕಲರ್ಸ್ ಕನ್ನಡ' (Colors Kannada) ವಾಹಿನಿ ಬರೋಬ್ಬರಿ 6 ಕೋಟಿಗೆ ಖರೀದಿಸಿದೆ. ಈ ಬಗ್ಗೆ ನಿರ್ದೇಶಕ ಮಹೇಶ್ ಇನ್‌ಸ್ಟಾಗ್ರಾಮ್‌ನಲ್ಲಿ (Instagram) 'ನಮ್ಮ 'ಮದಗಜ'ನನ್ನು ಮೆಚ್ಚಿ ಪ್ರೀತಿಯಿಂದ ದೊಡ್ಡ ಮೊತ್ತಕ್ಕೆ ಕೊಂಡುಕೊಂಡ 'ಕಲರ್ಸ್ ಕನ್ನಡ' ಚಾನಲ್‌ಗೆ ಶತಕೋಟಿ ಧನ್ಯವಾದಗಳು ಎಂದು ಬರೆದುಕೊಂಡು ಪೋಸ್ಟರನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಹಿಂದೆ 'ಶ್ರೀಮುರಳಿ ಅವರ ಅಭಿಮಾನಿಯೊಬ್ಬರು 'ಮದಗಜ' ಚಿತ್ರ ವೀಕ್ಷಿಸಲು ಒಂದು ದಿನ ಇಡೀ ಕಾಲೇಜಿಗೆ ರಜೆ ನೀಡುವಂತೆ ಪ್ರಾಂಶುಪಾಲರಿಗೆ ಪತ್ರ ಬರೆದಿದ್ದರು. ಮೈಸೂರಿನ ಜ್ಞಾನೋದಯ ಕಾಲೇಜಿನ ವಿದ್ಯಾರ್ಥಿ ತಮ್ಮ ಪ್ರಿನ್ಸಿಪಾಲ್​ಗೆ ಪತ್ರ ಬರೆದಿದ್ದು, ಚಿತ್ರ ಬಿಡುಗಡೆಯಾಗುವ ದಿನಾಂಕ ಡಿಸೆಂಬರ್. 3ರಂದು ಇಡೀ ಕಾಲೇಜಿಗೆ ರಜೆ ನೀಡುವಂತೆ ಪತ್ರದ ಮೂಲಕ ಮನವಿ ಮಾಡಿದ್ದರು. ಈ ಪತ್ರವನ್ನು (Letter) ಮಹೇಶ್ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದರು.

Tap to resize

Latest Videos

Madhagaja: ಶ್ರೀಮುರಳಿ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫೀಕೆಟ್‌

'ಮದಗಜ' (Madhagaja) ಚಿತ್ರದ ಟ್ರೇಲರ್ (Trailer) ಇತ್ತೀಚೆಗೆ ಬಿಡುಗಡೆಯಾಗಿ ಮಿಲಿಯನ್‌ಗಟ್ಟಲೇ ಸಿನಿಪ್ರಿಯರು ನೋಡಿ ಬಹುಪರಾಕ್ ಎಂದಿದ್ದರು. ಅಲ್ಲದೇ ಟ್ರೇಲರ್‌ನಲ್ಲಿ ಅತಿ ಹೆಚ್ಚು ಆ್ಯಕ್ಷನ್ ದೃಶ್ಯಗಳಿದ್ದು, ಬೃಹತ್​ ಸೆಟ್‌ಗಳು​ ಮತ್ತು ಅದ್ಧೂರಿ ಮೇಕಿಂಗ್‌ ಎದ್ದು ಕಾಣುತ್ತಿತ್ತು. ಜೊತೆಗೆ ಚಿತ್ರದ ಟೈಟಲ್ ಟ್ರ್ಯಾಕ್ 'ಯುದ್ಧ ಸಾರಿದ ಚಂಡಮಾರುತ'  (Title Track) ಹಾಗೂ ಟೈಟಲ್ ಟ್ರ್ಯಾಕ್ ಮೇಕಿಂಗ್ ವಿಡಿಯೋ ಕೂಡಾ ಬಿಡುಗಡೆಯಾಗಿ, ಶ್ರೀಮುರಳಿ ಮಾಸ್‌ ಲುಕ್‌ನಲ್ಲಿ ಅಬ್ಬರಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. 

ಭರ್ಜರಿ ಆ್ಯಕ್ಷನ್ ಜೊತೆಗೆ ತಾಯಿ ಸೆಂಟಿಮೆಂಟ್ ಹೊಂದಿರುವ ಈ ಚಿತ್ರವನ್ನು ಸೆನ್ಸಾರ್ ಮಂಡಳಿಯವರು ಇತ್ತೀಚೆಗೆ ವೀಕ್ಷಿಸಿ, ಉತ್ತಮವಾದ ಪ್ರಶಂಸೆಯನ್ನು ವ್ಯಕ್ತಪಡಿಸಿ 'ಯು/ಎ ಪ್ರಮಾಣ ಪತ್ರ'ವನ್ನು (U/A Certificate) ನೀಡಿದ್ದರು. ಇನ್ನು  ಮೊದಲ ಬಾರಿಗೆ ಶ್ರೀಮುರಳಿ ಎದುರಿಗೆ ನಾಯಕಿಯಾಗಿ ಆಶಿಕಾ ರಂಗನಾಥ್ (Ashika Ranganath) ನಟಿಸಿದ್ದು, ಚಿತ್ರದಲ್ಲಿ ಅವರು ಎರಡು ವಿಭಿನ್ನ ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಉಮಾಪತಿ ಶ್ರೀನಿವಾಸ್ ಗೌಡ (Umapathy Srinivas Gowda) ಚಿತ್ರಕ್ಕೆ  ಬಂಡವಾಳ ಹೂಡಿದ್ದು, 'ಮಫ್ತಿ' (Mufti) ಖ್ಯಾತಿಯ ನವೀನ್‌ ಕುಮಾರ್‌ ಚಿತ್ರಕ್ಕೆ ಸಿನಿಮಾಟೋಗ್ರಫಿ ಕೆಲಸ ಮಾಡಿದ್ದಾರೆ. 

Madhagaja Title Song: ರೋರಿಂಗ್ ಸ್ಟಾರ್ ಶ್ರೀಮುರಳಿ ಅಬ್ಬರ ಜೋರು

ಹರೀಶ್ ಕೊಮ್ಮೆಯವರ ಸಂಕಲನವಿರುವ ಈ ಚಿತ್ರದಲ್ಲಿ ಟಾಲಿವುಡ್​ನ ಖ್ಯಾತ ನಟ ಜಗಪತಿ ಬಾಬು (Jagapati Babu), 'ಕೆಜಿಎಫ್' ಚಿತ್ರದ ವಿಲನ್ ಗರುಡ ರಾಮ್, ತೆಲುಗು ನಟಿ ದೇವಯಾನಿ, ಚಿಕ್ಕಣ್ಣ, ಧರ್ಮಣ್ಣ, ಶಿವರಾಜ್ ಕೆ.ಆರ್. ಪೇಟೆ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರಕ್ಕಿದ್ದು, 'ಕೆಜಿಎಫ್‌' ಖ್ಯಾತಿಯ ರವಿ ಬಸ್ರೂರ್‌ (Ravi Basrur) ಸಂಗೀತ ಸಂಯೋಜನೆಯಿದೆ. 'ಮದಗಜ' ಚಿತ್ರವು ಡಿಸೆಂಬರ್  3ರಂದು ಕನ್ನಡ, ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ದೇಶದಾದ್ಯಂತ 1400 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ತೆರೆಮೇಲೆ ಶ್ರೀಮುರಳಿ ಯಾವ ರೀತಿ ಅಬ್ಬರಿಸಲಿದ್ದಾರೆ ಎಂಬದು ಸಾಕಷ್ಟು ಕೂತಹಲ ಹುಟ್ಟಿಸಿದೆ.
 

click me!