Happy Birthday Ramya: 39 ವರ್ಷ ಕಳೆದು ಹೋಗಿದ್ದಕ್ಕೆ ಖುಷಿಯಿದೆ ಎಂದ ಮೋಹಕ ತಾರೆ

Suvarna News   | Asianet News
Published : Nov 29, 2021, 06:12 PM IST
Happy Birthday Ramya: 39 ವರ್ಷ ಕಳೆದು ಹೋಗಿದ್ದಕ್ಕೆ ಖುಷಿಯಿದೆ ಎಂದ ಮೋಹಕ ತಾರೆ

ಸಾರಾಂಶ

ನನ್ನ ಹುಟ್ಟುಹಬ್ಬಕ್ಕೆ ಶುಭ ಕೋರಿದ ಎಲ್ಲರಿಗೂ ಧನ್ಯವಾದಗಳು. ಸದ್ಯ ಅಟ್ಲಾಂಟಿಕ್ ಸಾಗರದಲ್ಲೆಲ್ಲೋ ಇದ್ದೇನೆ. ತುಂಬಾ ಸುಸ್ತಾಗುತ್ತಿದೆ. ನಿದ್ರೆ ಬರುತ್ತಿದೆ. ಆದರೂ 39 ವರ್ಷ ಕಳೆದು ಹೋಗಿದ್ದಕ್ಕೆ ಖುಷಿಯಿದೆ. ಎಲ್ಲರೂ ಸುರಕ್ಷಿತವಾಗಿರಿ. ಮಾಸ್ಕ್ ಧರಿಸಿ ಎಂದು ರಮ್ಯಾ ಹೇಳಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಒಂದು ದಶಕಗಳ ಕಾಲ ಸ್ಯಾಂಡಲ್‌ವುಡ್ ಕ್ವೀನ್, ಮೋಹಕ ತಾರೆಯಾಗಿ ಬೆಳ್ಳಿತೆರೆ ಮೇಲೆ ವಿಜೃಂಭಿಸಿದ ನಟಿ ರಮ್ಯಾ (Ramya) ಅವರು ಸದ್ಯಕ್ಕೆ ನಟನೆಯಿಂದ ದೂರ ಉಳಿದುಕೊಂಡಿದ್ದಾರೆ. ಆದರೂ ಸಾಮಾಜಿಕ ಜಾಲತಾಣದಲ್ಲಿ ರಮ್ಯಾ ಸಖತ್ ಆಕ್ಟೀವ್ ಆಗಿದ್ದು, ತಮ್ಮ ದಿನಚರಿ ವಿಷಯಗಳ ಬಗ್ಗೆ ಮಾಹಿತಿಯನ್ನು ಅಭಿಮಾನಿಗಳ ಜತೆ  ಹಂಚಿಕೊಳ್ಳುತ್ತಿರುತ್ತಾರೆ. ಇಂದು ರಮ್ಯಾ ಅವರಿಗೆ ಬಹಳ ವಿಶೇಷ ದಿನ. ಹೌದು! ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇದೇ ಖುಷಿಯಲ್ಲಿ ಅವರು ತಮ್ಮ ಇನ್‌ಸ್ಟಾಗ್ರಾಮ್‌ (Instagram) ಖಾತೆಯಲ್ಲಿ ಸ್ಪೆಷಲ್ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

ಈ  ಬಗ್ಗೆ ರಮ್ಯಾ, 'ನನ್ನ ಹುಟ್ಟುಹಬ್ಬಕ್ಕೆ ಶುಭ ಕೋರಿದ ಎಲ್ಲರಿಗೂ ಧನ್ಯವಾದಗಳು. ಸದ್ಯ ಅಟ್ಲಾಂಟಿಕ್ ಸಾಗರದಲ್ಲೆಲ್ಲೋ ಇದ್ದೇನೆ. ತುಂಬಾ ಸುಸ್ತಾಗುತ್ತಿದೆ. ನಿದ್ರೆ ಬರುತ್ತಿದೆ. ಆದರೂ 39 ವರ್ಷ ಕಳೆದು ಹೋಗಿದ್ದಕ್ಕೆ ಖುಷಿಯಿದೆ'. ಎಲ್ಲರೂ ಸುರಕ್ಷಿತವಾಗಿರಿ. ಮಾಸ್ಕ್ ಧರಿಸಿ ಎಂದು ಕ್ಯಾಪ್ಷನ್‍ ಬರೆದು ಜೊತೆಗೆ ರಮ್ಯಾ ಮಾಸ್ಕ್ ಧರಿಸಿರುವ ಪೋಟೋವೊಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ಗೆ ಕನ್ನಡ ಚಿತ್ರರಂಗದ ನಟ-ನಟಿಯರು ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. 

Happy Birthday Ramya: 40ನೇ ವರ್ಷಕ್ಕೆ ಕಾಲಿಟ್ಟ ಸ್ಯಾಂಡಲ್‌ವುಡ್ ಕ್ವೀನ್

ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳಾದ ಆಶಿಕಾ ರಂಗನಾಥ್, ರಕ್ಷಿತಾ ಪ್ರೇಮ್, ಸಂಯುಕ್ತಾ ಹೊರನಾಡ್, ನಿಧಿ ಸುಬ್ಬಯ್ಯ, ಸೋನು ಗೌಡ, ಅನುಪಮಾ ಗೌಡ, ಶೀತಲ್ ಶೆಟ್ಟಿ, ಜೆನಿಫರ್ ಕೋತ್ವಾಲ್, ಕೆ.ಎಂ.ಚೈತನ್ಯ, ನವೀನ್ ಸಜ್ಜು, ರಾಜ್‌ವರ್ಧನ್ ಸೇರಿದಂತೆ ಹಲವಾರು ಅಭಿಮಾನಿಗಳು ಜನ್ಮದಿನದ ಶುಭಾಶಯಗಳು ಎಂದು ರಮ್ಯಾ ಅವರ ಪೋಸ್ಟ್‌ಗೆ ತರಹೇವಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಮುಖ್ಯವಾಗಿ ರಮ್ಯಾ ಅವರ ಮೂಲ ಹೆಸರು ದಿವ್ಯ ಸ್ಪಂದನ (Divya Spandana). ಈ ಹೆಸರನ್ನು ಡಾ.ರಾಜ್‌ಕುಮಾರ್ (Dr.Rajkumar) ಪತ್ನಿ ಪಾರ್ವತಮ್ಮ ರಾಜ್‌ಕುಮಾರ್ (Parvatamma Rajkumar) 'ಅಭಿ' ಚಿತ್ರದ ಸಂದರ್ಭದಲ್ಲಿ ರಮ್ಯಾ ಎಂದು ಬದಲಿಸಿದ್ದರು. ರಮ್ಯಾ ಅವರು ಪುನೀತ್ ರಾಜ್‌ಕುಮಾರ್ (Puneeth Rajkumar) ಜೊತೆ 'ಅಭಿ' (Abhi) ಚಿತ್ರದ ಮೂಲಕ ಮೊದಲ ಬಾರಿಗೆ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದರು.

'ಅಭಿ' ಚಿತ್ರದ ಯಶಸ್ಸಿನ ನಂತರ ರಮ್ಯಾ, 'ಎಕ್ಸ್‌ಕ್ಯೂಸ್​ ಮಿ', 'ಆಕಾಶ್', 'ಅರಸು', 'ರಂಗ ಎಸ್​​​ಎಸ್​ಎಲ್​​ಸಿ'.. ಹೀಗೆ ಹಲವಾರು​ ಚಿತ್ರಗಳ ಮೂಲಕ ಮೋಹಕ ತಾರೆ ಎಂದು ಕರೆಯಿಸಿಕೊಂಡರು. ರಮ್ಯಾ ಅವರು ಶಿವರಾಜ್ ಕುಮಾರ್, ಸುದೀಪ್, ದರ್ಶನ್, ಗಣೇಶ್, ಯಶ್ ಸೇರಿದಂತೆ ಎಲ್ಲಾ ಸ್ಟಾರ್ ನಟರ ಜೊತೆ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಇದರ ಜೊತೆಗೆ ಟಾಲಿವುಡ್ (Tollywood) ಹಾಗೂ ಕಾಲಿವುಡ್‌ (Kollywood) ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ರಮ್ಯಾ ಕನ್ನಡದಲ್ಲಿ ನಟಿಸಿದ ಕೊನೆಯ ಚಿತ್ರ 'ನಾಗರಹಾವು'. ಈ ಚಿತ್ರದ ನಂತರ ಅವರು ನಟನೆಯಿಂದ ದೂರವುಳಿದರು. 

ಸುದೀಪ್ ನಿಮಗೆ ವಯಸ್ಸೇ ಆಗೋಲ್ವಾ?ಕೋಟಿಗೊಬ್ಬ 3ಗೆ ರಮ್ಯಾ ಫಿದಾ!

ಇನ್ನು ರಮ್ಯಾ ರಾಜಕೀಯ ಕ್ಷೇತ್ರದಲ್ಲಿ ಕಾಂಗ್ರೆಸ್ (Congress) ಪಕ್ಷದ ಜೊತೆ ಗುರುತಿಸಿಕೊಂಡು, ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸಂಸದೆ ಕೂಡಾ ಆಗಿದ್ದರು. ಹಾಗೂ ಕೆಲ ತಿಂಗಳುಗಳ ಕಾಲ ಕಾಂಗ್ರೆಸ್ ಪಕ್ಷದ ಮುಖ್ಯ ಹುದ್ದೆಯನ್ನು ನಿಭಾಯಿಸಿದ್ದರು. ಅನಂತರ ಆ ಕೆಲಸಕ್ಕೂ ರಾಜೀನಾಮೆ ನೀಡಿ ಎಲ್ಲದರಿಂದ ಅಂತರ ಕಾಯ್ದುಕೊಂಡಿದ್ದಾರೆ. ವಿಶೇಷವಾಗಿ ರಮ್ಯಾ ಚಿತ್ರರಂಗಕ್ಕೆ ಪುನೀತ್​ ರಾಜ್​ಕುಮಾರ್​ ಜತೆಗಿನ ಸಿನಿಮಾ ಮೂಲಕವೇ ಕಮ್​ಬ್ಯಾಕ್​ ಮಾಡಲು ಬಯಸಿದ್ದರು. ಆ ಕುರಿತು ಅಪ್ಪು​ ಜತೆ ಮಾತುಕತೆ ಕೂಡ ನಡೆಯುತ್ತಿತ್ತು. ಅಷ್ಟರಲ್ಲಾಗಲೇ ಪುನೀತ್ ನಿಧನ ಹೊಂದಿದ್ದರು. ಈ ಬಗ್ಗೆ ಅಪ್ಪು ಅವರ ಅಂತಿಮ ದರ್ಶನಕ್ಕೆ ಬಂದಾಗ ರಮ್ಯಾ ಭಾವುಕರಾಗಿ ಮಾತನಾಡಿದ್ದರು.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್