ಸಕ್ಕರೆ ನಾಡು ಮಂಡ್ಯಕ್ಕೆ 'ಮದಗಜ' ಚಿತ್ರತಂಡ ಭೇಟಿ ನೀಡಿದ್ದು, ನಟ ಶ್ರೀಮುರಳಿ ಅವರು ಇತ್ತೀಚೆಗೆ ನಿಧನರಾದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಸಾಧನೆಯನ್ನು ಕನ್ನಡ ಪಠ್ಯ ಪುಸ್ತಕಕ್ಕೆ ಸೇರಿಸುವ ವಿಚಾರವಾಗಿ ಒತ್ತಾಯ ಮಾಡಿದರು.
ಮಂಡ್ಯ(ಡಿ.12): ಸ್ಯಾಂಡಲ್‌ವುಡ್‌ನ ರೋರಿಂಗ್ ಸ್ಟಾರ್ ಶ್ರೀಮುರಳಿ (SriiMurali) ಅಭಿನಯದ ಹಾಗೂ ಮಹೇಶ್ ಕುಮಾರ್ (Mahesh Kumar) ನಿರ್ದೇಶನದ 'ಮದಗಜ' (Madhagaja) ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಹಿನ್ನಲೆಯಲ್ಲಿ ಚಿತ್ರತಂಡ ವಿವಿಧ ಜಿಲ್ಲೆಗಳಲ್ಲಿ ವಿಜಯ ಯಾತ್ರೆಯನ್ನು ನಡೆಸುತ್ತಿದ್ದಾರೆ. ಇಂದು ಸಕ್ಕರೆ ನಾಡು ಮಂಡ್ಯಕ್ಕೆ 'ಮದಗಜ' ಚಿತ್ರತಂಡ ಭೇಟಿ ನೀಡಿದ್ದು, ನಟ ಶ್ರೀಮುರಳಿ ಅವರು ಇತ್ತೀಚೆಗೆ ನಿಧನರಾದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ (Puneeth Rajkumar) ಅವರ ಸಾಧನೆಯನ್ನು ಕನ್ನಡ ಪಠ್ಯ ಪುಸ್ತಕಕ್ಕೆ ಸೇರಿಸುವ ವಿಚಾರವಾಗಿ ಒತ್ತಾಯ ಮಾಡಿದರು.
ಕನ್ನಡ ಪಠ್ಯ ಪುಸ್ತಕದಲ್ಲಿ ಪುನೀತ್ ಅವರ ಸಾಧನೆ ಸೇರಿಸಬೇಕು. ಅಪ್ಪು ಅವರು ಸಾಧನೆ ಮಾಡಿದ್ದಾರೆ, ಅದನ್ನ ನಾವು ಗೌರವಿಸಬೇಕು. ಅಭಿಮಾನಿಗಳು ಹೇಳುತ್ತಿರುವುದು ನ್ಯಾಯವಾಗಿದೆ. ಅದನ್ನು ಗಮನಹರಿಸಿ ಮಾಡುವುದು ಒಳ್ಳೆಯದು. ಸರ್ಕಾರ ಇದರ ಬಗ್ಗೆ ಗಮನಹರಿಸಬೇಕು ಎಂದು ನಟ ಶ್ರೀಮುರಳಿ ಹೇಳಿದರು. ಮಂಡ್ಯದ ಸಂಜಯ್ ವೃತ್ತದಲ್ಲಿರುವ ಸಂಜಯ್ ಚಿತ್ರಮಂದಿರಕ್ಕೆ 'ಮದಗಜ' ಟೀಮ್ ಭೇಟಿ ಕೊಟ್ಟಿದ್ದು, ಅಭಿಮಾನಿಗಳಿಂದ ಅದ್ದೂರಿ ಸ್ವಾಗತ ಸಿಕ್ಕಿದೆ. ಸಂಜಯ್ ಚಿತ್ರಮಂದಿರದ ಬಳಿ ಪಟಾಕಿ ಸಿಡಿಸಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ.
undefined
Ashika Ranganath: ಮದಗಜ ಚಿತ್ರದ ಪಲ್ಲವಿ ಪಾತ್ರ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ
ನಟ ಶ್ರೀಮುರಳಿ, ಖಳನಾಯಕ ಗರುಡರಾಮ್, ನಿರ್ದೇಶಕ ಎಸ್. ಮಹೇಶ್‌ಕುಮಾರ್ ಅಭಿಮಾನಿಗಳ ಜೊತೆ ಚಿತ್ರಮಂದಿರದೊಳಗೆ ತೆರಳಿ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಬಳಿಕ ಶ್ರೀಮುರಳಿ ಬರುತ್ತಿದ್ದಂತೆ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದಾಗ ಪ್ರತಿಯೊಬ್ಬ ಅಭಿಮಾನಿಗೂ ಮುರಳಿ ಸೆಲ್ಫಿ ಕೊಟ್ಟಿದ್ದಾರೆ. ಈ ಮಧ್ಯೆ ನೆಚ್ಚಿನ ನಟ ಶ್ರೀಮುರಳಿಗೆ ಅಭಿಮಾನಿಗಳು ಜೈಕಾರ ಕೂಗಿ ಸಂಭ್ರಮಿಸಿದಾಗ ಅಭಿಮಾನಿಗಳೇ ದೇವರು ಎಂದು ಶ್ರೀಮುರಳಿ ಹೇಳಿದರು. ಜೊತೆಗೆ ಅಭಿಮಾನಿಗಳ ಖುಷಿಗೋಸ್ಕರ 'ಮದಗಜ' ಸಿನಿಮಾದ ಡೈಲಾಗ್ ಹೇಳಿದರು. ವಿಶೇಷವಾಗಿ 'ರಾಜಕುಮಾರ' ಚಿತ್ರದ ಬೊಂಬೆ ಹೇಳುತೈತೆ ಹಾಡನ್ನು ಹಾಡಿ, ಅಪ್ಪು ಅಪ್ಪು ಎಂದು ಕೂಗಿದರು. ಇದಕ್ಕೆ ಅಭಿಮಾನಿಗಳು ಧ್ವನಿಗೂಡಿಸಿದರು.
'ಮದಗಜ' ಚಿತ್ರ ಬಿಡುಗಡೆಯಾದ ಮೂರೇ ದಿನಕ್ಕೆ ಬರೋಬ್ಬರಿ 20 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಅಫೀಸ್‌ನಲ್ಲೂ ರೇಕಾರ್ಡ್ ಮಾಡಿದೆ. 'ಮದಗಜ' ಶ್ರೀಮುರಳಿ ಕೆರಿಯರ್‌ನಲ್ಲೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾವಾಗಿದ್ದು, ಒಂದು ಕಡೆ ಆಕ್ಷನ್ ಧಮಾಕ, ಮತ್ತೊಂದು ಕಡೆ ತಾಯಿ ಸೆಂಟಿಮೆಂಟ್ ಕಥೆಯನ್ನೊಳಗೊಂಡಿದೆ. ರತ್ನ ಪಾತ್ರದಲ್ಲಿ ತೆಲುಗಿನ ದೇವಯಾನಿ (Devayani), ಬಸವನಾಗಿ ರಂಗಾಯಣ ರಘು (Rangayana Raghu) ಹಾಗೂ ತಾಂಡವನ ಪಾತ್ರದಲ್ಲಿ ಗರುಡ ರಾಮ್ (Garuda Ram) ಚಿತ್ರದಲ್ಲಿ ಅಬ್ಬರಿಸಿದ್ದಾರೆ. ಮುಖ್ಯವಾಗಿ ಟಾಲಿವುಡ್ನ ಖ್ಯಾತ ನಟ ಜಗಪತಿ ಬಾಬು (Jagapati Babu) ಈ ಚಿತ್ರದ ಮುಖ್ಯ ಖಳನಾಯಕನಾಗಿದ್ದು ಅವರ ರಾ ಲುಕ್ ನೋಡುಗರ ಮೈಜುಮ್ಮೆನಿಸುತ್ತದೆ.
Madhagaja: ರೋರಿಂಗ್ ಸ್ಟಾರ್ ಶ್ರೀಮುರಳಿ ಚಿತ್ರದಲ್ಲಿ 3 ವಿಭಿನ್ನ ಪಾತ್ರಗಳು
ಇನ್ನು, 'ಮದಗಜ' ಚಿತ್ರದಲ್ಲಿ ಮೊದಲ ಬಾರಿಗೆ ಶ್ರೀಮುರಳಿ ಎದುರಿಗೆ ನಾಯಕಿಯಾಗಿ ಆಶಿಕಾ ರಂಗನಾಥ್ (Ashika Ranganath) ನಟಿಸಿದ್ದು, ಚಿತ್ರದಲ್ಲಿ ಅವರು ಎರಡು ವಿಭಿನ್ನ ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಉಮಾಪತಿ ಶ್ರೀನಿವಾಸ್ ಗೌಡ (Umapathy Srinivas Gowda) ಚಿತ್ರಕ್ಕೆ ಬಂಡವಾಳ ಹೂಡಿದ್ದು, 'ಮಫ್ತಿ' (Mufti) ಖ್ಯಾತಿಯ ನವೀನ್ ಕುಮಾರ್ ಚಿತ್ರಕ್ಕೆ ಸಿನಿಮಾಟೋಗ್ರಫಿ ಕೆಲಸ ಮಾಡಿದ್ದಾರೆ. ಹರೀಶ್ ಕೊಮ್ಮೆಯವರ ಸಂಕಲನವಿರುವ ಈ ಚಿತ್ರದಲ್ಲಿ ಚಿಕ್ಕಣ್ಣ, ಧರ್ಮಣ್ಣ, ಶಿವರಾಜ್ ಕೆ.ಆರ್. ಪೇಟೆ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರಕ್ಕಿದ್ದು, 'ಕೆಜಿಎಫ್' ಖ್ಯಾತಿಯ ರವಿ ಬಸ್ರೂರ್ (Ravi Basrur) ಸಂಗೀತ ಸಂಯೋಜಿಸಿದ್ದಾರೆ.