Alankar Vidyarthi: ಪ್ರಮೋದ್ ಹೊಸ ಚಿತ್ರಕ್ಕೆ ಡಾಲಿ ಧನಂಜಯ್ ಕ್ಲ್ಯಾಪ್

Suvarna News   | Asianet News
Published : Dec 12, 2021, 04:17 PM IST
Alankar Vidyarthi: ಪ್ರಮೋದ್ ಹೊಸ ಚಿತ್ರಕ್ಕೆ ಡಾಲಿ ಧನಂಜಯ್ ಕ್ಲ್ಯಾಪ್

ಸಾರಾಂಶ

ಡಾಲಿ ಧನಂಜಯ ಅಭಿನಯದ 'ರತ್ನನ್ ಪ್ರಪಂಚ' ಚಿತ್ರದಲ್ಲಿ ಉಡಾಳ್ ಬಾಬು ರಾವ್ ಆಗಿ ಕಾಣಿಸಿಕೊಂಡಿದ್ದ ಪ್ರಮೋದ್ ಇದೀಗ 'ಅಲಂಕಾರ್ ವಿದ್ಯಾರ್ಥಿ' ಎಂಬ ಹೊಸ ಚಿತ್ರದಲ್ಲಿ ನಟಿಸುತ್ತಿದ್ದು, 'ಮಾರ್ಕ್ಸ್ ಕಮ್ಮಿ, ಮಾರ್ಕ್ಸ್ ಕಾರ್ಡ್‌ ಜಾಸ್ತಿ' ಎಂಬ ಟ್ಯಾಗ್‌ಲೈನ್ ಚಿತ್ರಕ್ಕಿದೆ.

ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿ, 'ಗೀತಾ ಬ್ಯಾಂಗಲ್ ಸ್ಟೋರ್' ಚಿತ್ರದ ಮೂಲಕ ನಾಯಕ ನಟನಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟವರು ಪ್ರಮೋದ್ (Pramod). ನಂತರ ಪ್ರೀಮಿಯರ್ ಪದ್ಮಿನಿ, ಮತ್ತೆ ಉದ್ಭವ, ರತ್ನನ್ ಪ್ರಪಂಚ ಚಿತ್ರಗಳಲ್ಲಿ ನಟಿಸಿ ಗಮನಸೆಳೆದಿದ್ದ ಪ್ರಮೋದ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಮೋದ್ ನಟನೆಯ ಕೆಲವು ಚಿತ್ರಗಳು ಚಿತ್ರೀಕರಣದ ಹಂತದಲ್ಲಿವೆ. ಇದೀಗ ಅವರ ನಟನೆಯ ಹೊಸ ಚಿತ್ರದ ಟೈಟಲ್ ಹಾಗೂ ಆ ಚಿತ್ರದ ಫಸ್ಟ್ ಲುಕ್ ಅನಾವರಣಗೊಂಡಿದೆ. ಹೌದು! 'ಅಲಂಕಾರ್ ವಿದ್ಯಾರ್ಥಿ' (Alankar Vidyarthi) ಎಂಬ ವಿಭಿನ್ನ ಶೀರ್ಷಿಕೆಯ ಚಿತ್ರದಲ್ಲಿ ಪ್ರಮೋದ್ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಅನ್ನಪೂರ್ಣೇಶ್ವರಿ ನಗರದ ವಿನಾಯಕ ವೆಂಕಟೇಶ್ವರ ದೇವಾಲಯದಲ್ಲಿ, ಈ ಸಿನಿಮಾದ ಮುಹೂರ್ತ (Muhurta) ನೆರವೇರಿತು. ಈ ಚಿತ್ರಕ್ಕೆ ಡಾಲಿ ಧನಂಜಯ (Dolly Dhananjay) ಮುಖ್ಯ ಅತಿಥಿಯಾಗಿ ಬಂದು ಕ್ಲ್ಯಾಪ್ ಮಾಡುವ ಮೂಲಕ ಪ್ರಮೋದ್ ಹಾಗೂ ಚಿತ್ರತಂಡಕ್ಕೆ ಶುಭ ಕೋರಿದರು. ಡಾಲಿ ಧನಂಜಯ ಹಾಗೂ ಪ್ರಮೋದ್ ಈ ಹಿಂದೆ 'ರತ್ನನ್ ಪ್ರಪಂಚ' (Rathnan Prapancha) ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು.ಉಡಾಳ್ ಬಾಬು ರಾವ್ ಆಗಿ ಪ್ರಮೋದ್ ಹಾಗೂ ರತ್ನಾಕರನ ಪಾತ್ರದಲ್ಲಿ ಧನಂಜಯ್ ಕಾಣಿಸಿಕೊಂಡಿದ್ದರು. 'ಅಲಂಕಾರ್ ವಿದ್ಯಾರ್ಥಿ' ಚಿತ್ರವನ್ನು ಕೇಶವ್ ಎಸ್ ಇಂಡಲವಾಡಿ (Keshav S Indlavadi) ಅವರು ಕಥೆ ಹಾಗೂ ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ.

ಪುನೀತ್‌ ಸರ್‌ ಫೋನ್‌ ಮಾಡಿದ್ರು ಅಣ್ಣಾವ್ರೇ ಬೆನ್ನು ತಟ್ಟಿದಂತಾಯಿತು: ಪ್ರಮೋದ್

'ಅಲಂಕಾರ್ ವಿದ್ಯಾರ್ಥಿ' ಹೆಸರೇ ಹೇಳುವಂತೆ ಚಿತ್ರದಲ್ಲಿ ಕಾಲೇಜು ಜೀವನದ ಕುರಿತಂತಾಗಿದೆ. ಬ್ಯಾಕ್ ಬೆಂಚರ್ಸ್ ಸ್ಟೂಡೆಂಟ್‌ಗಳ ಕುರಿತ ಕಥೆ ಇದಾಗಿದೆ. ಅಲಂಕಾರಕ್ಕೆ ಕಾಲೇಜಿಗೆ ಬರುವವರು ಎಂದು ಬೈಯುತ್ತಾರಲ್ಲ ಅದೇ ಹೆಸರು ಇಟ್ಟುಕೊಂಡು ಕಥೆ ಮಾಡಲಾಗಿದೆ. 'ಮಾರ್ಕ್ಸ್ ಕಮ್ಮಿ, ಮಾರ್ಕ್ಸ್ ಕಾರ್ಡ್‌ ಜಾಸ್ತಿ' ಎಂಬುದು ಚಿತ್ರದ ಟ್ಯಾಗ್‌ಲೈನ್ ಆಗಿದೆ ಎಂದು ಪ್ರಮೋದ್ ಹೇಳಿದ್ದಾರೆ. ಶಾಲಾ ಕಾಲೇಜು ದಿನಗಳಿಂದಲೂ ಸ್ಕಿಟ್, ಶಾರ್ಟ್ ಫಿಲ್ಮ್‌ಗಳಲ್ಲಿ ತೊಡಗಿಸಿಕೊಂಡಿದ್ದ ನಿರ್ದೇಶಕ ಕೇಶವ್ 2015ರಲ್ಲಿ ದೊರೈ ಭಗವಾನ್ ಅವರ ಬಳಿ ನಿರ್ದೇಶನದ ಕೋರ್ಸು ಮುಗಿಸಿ, ನಂತರ ಸಿಂಪಲ್ ಸುನಿ ಅವರೊಂದಿಗೆ 'ಆಪರೇಷನ್ ಅಲಮೇಲಮ್ಮ' ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಕಳೆದ ಒಂದು ವರ್ಷದಿಂದ ಕೂತು ಕತೆ ಸಿದ್ಧಪಡಿಸಿ ಈಗ 'ಅಲಂಕಾರ್ ವಿದ್ಯಾರ್ಥಿ' ನಿರ್ದೇಶನ ಆರಂಭಿಸಿದ್ದಾರೆ.

'ಅಲಂಕಾರ್ ವಿದ್ಯಾರ್ಥಿ' ಇದು 70-80ರ ದಶಕದಲ್ಲಿ ಕೊನೆಯ ಬೆಂಚಿನ ವಿದ್ಯಾರ್ಥಿಗಳನ್ನು ಕರೆಯುತ್ತಿದ್ದ ರೀತಿ. ನಮ್ಮ ಸಿನಿಮಾದಲ್ಲಿ ಹೀರೋ ಕೂಡಾ ಹಾಗೇ. ಓದು ತಲೆಗೆ ಹತ್ತದಿದ್ದರೂ ಅಲಂಕಾರಕ್ಕಾಗಿ ಕಾಲೇಜಿಗೆ ಬರುತ್ತಿರುತ್ತಾನೆ. ಆದರೂ ಕಾಲೇಜಿನಲ್ಲಿ ಪಾಠ ಮಾಡುವ ಗುರುಗಳಿಂದ ಹಿಡಿದು ಎಲ್ಲರಿಗೂ ಇವನೆಂದರೆ ಒಂಥರಾ ಮುದ್ದು. ಲಾಸ್ಟ್ ಬೆಂಚಲ್ಲೇ ಓದಿಕೊಂಡಿದ್ದವನು ಕಾಲೇಜಿಗೆ ಹೇಗೆ ಸೇರುತ್ತಾನೆ? ಪ್ರಿನ್ಸಿಪಾಲ್ ಜೊತೆ ಆತನ ಕಮ್ಯುನಿಕೇಷನ್ ಯಾವ ರೀತಿ ಇರುತ್ತದೆ? ಅವನ ತಂದೆ ತಾಯಿ, ಅವನಿಗೆ ಸಿಗುವ ಸ್ನೇಹಿತರು, ಜೊತೆಯಾಗುವ ಹುಡುಗಿಯ ಸುತ್ತ ಕತೆ ತೆರೆದುಕೊಳ್ಳುತ್ತದೆ. ಪಾಸಾಗಿರುವ ಹುಡುಗನಿಗೆ ಬೇಸಿಗೆ ಕಾಲದಲ್ಲಿ ಮಾತ್ರ ರಜೆ ಸಿಗುತ್ತದೆ. ಅದೇ ಫೇಲಾಗಿ ಎರಡು ವರ್ಷ ಕಾಲ ಕಳೆದವನು ಬೇಸಿಗೆ, ಮಳೆ, ಚಳಿ ಮೂರೂ ಸೀಜನ್​ನಲ್ಲಿ ಮನೇಲೇ ಇರ್ತಾನೆ. ಇಂಥಾ ಹುಡುಗ ಮ್ಯಾನೇಜ್ ಮೆಂಟ್ ಸೀಟ್ ತಗೊಂಡು ಕಾಲೇಜಿಗೆ ಬರ್ತಾನೆ. ಈತನ ಬದುಕು ಹೇಗಿರುತ್ತದೆ ಅನ್ನೋದೇ 'ಅಲಂಕಾರ್ ವಿದ್ಯಾರ್ಥಿ' ಚಿತ್ರದ ಕಥೆ.

'ಬ್ಯಾಡ್‌ಮ್ಯಾನರ್ಸ್‌'ಗೆ ಪ್ರೀಮಿಯರ್‌ ಪದ್ಮಿನಿ ಪ್ರಮೋದ್‌ ವಿಲನ್‌!

ಇನ್ನು ಈ ಚಿತ್ರಕ್ಕೆ ಪ್ರಮೋದ್‌ಗೆ ನಾಯಕಿಯಾಗಿ ಅರ್ಚನಾ ಕೊಟ್ಟಿಗೆ (Archana Kottige) ಅಭಿನಯಿಸುತ್ತಿದ್ದು , ಈಗಾಗಲೇ ಹಲವಾರು ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. 'ಅಲಂಕಾರ್ ವಿದ್ಯಾರ್ಥಿ' ಚಿತ್ರಕ್ಕೆ ಯೋಗೇಶ್ ಶ್ರೀನಿವಾಸ್, ರೋಹಿತ್ ಗೌಡ ಹಾಗೂ ಮಧು ಆರಾಧ್ಯ ಬಂಡವಾಳ ಹೂಡಿದ್ದಾರೆ. ಬೆಂಗಳೂರಿನಲ್ಲಿ 45 ದಿನಗಳ ಚಿತ್ರೀಕರಣ ನಡೆಸಿ, ಹಾಡುಗಳಿಗೆ ಮಾತ್ರ ಚಿಕ್ಕಮಗಳೂರು ಸೇರಿದಂತೆ ಇತರೆ ಕಡೆಗೆ ಹೋಗಲಿದೆ ಚಿತ್ರತಂಡ. ಈ ಅಲಂಕಾರ್ ವಿದ್ಯಾರ್ಥಿಯ ತಂದೆ ತಾಯಿಯ ಪಾತ್ರದಲ್ಲಿ ಅಚ್ಯುತ್ ಕುಮಾರ್ ಮತ್ತು ಸುಧಾ ಬೆಳವಾಡಿ ಕಾಣಿಸಿಕೊಳುತ್ತಿದ್ದು, ಸ್ನೇಹಿತರಾಗಿ ರಜನೀಕಾಂತ್ ಮತ್ತು ನಿತಿನ್ ಅದ್ವಿ ಪಾತ್ರ ನಿರ್ವಹಿಸಲಿದ್ದಾರೆ. ಚಿತ್ರಕ್ಕೆ ರಘು ದೀಕ್ಷಿತ್ (Raghu Dixit) ಸಂಗೀತ ನೀಡುತ್ತಿದ್ದಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?